ಕೋಲಾರ: ಬೋರ್‌ವೆಲ್‌ಗಳಲ್ಲಿ ಕಲುಷಿತ ನೀರು ಸೇರಿರುವ ಅನುಮಾನ, ನಿವಾಸಿಗಳಿಗೆ ಆತಂಕ!

 ಬರದ ನಾಡು ಎಂದೇ ಹೆಸರು ಪಡೆದ ಕೋಲಾರಕ್ಕೆ ಕೆಸಿ ವ್ಯಾಲಿ ಜೀವನಾಡಿಯಾಗಿದೆ. ಇಲ್ಲಿನ ಕೆರೆಗಳು ತುಂಬಿದೆ. ಬೆಂಗಳೂರಿನ ಕಲುಷಿತ ನೀರನ್ನು ಎರಡು ಬಾರಿ ಶುದ್ಧೀಕರಿಸಿ, ಅಂತರ್ಜಲ ಮಟ್ಟ ಹೆಚ್ಚಾಗಲು ಮಾತ್ರ ಬಳಸಬೇಕು. ಯಾರೂ ಕೃಷಿಗೆ ಬಳಸಬಾರದು ಎಂದು ಸೂಚಿಸಲಾಗಿದೆ.

Suvarna News  | Updated: Oct 14, 2021, 6:57 PM IST

ಕೋಲಾರ (ಅ. 14): ಬರದ ನಾಡು ಎಂದೇ ಹೆಸರು ಪಡೆದ ಕೋಲಾರಕ್ಕೆ ಕೆಸಿ ವ್ಯಾಲಿ ಜೀವನಾಡಿಯಾಗಿದೆ. ಇಲ್ಲಿನ ಕೆರೆಗಳು ತುಂಬಿದೆ. ಬೆಂಗಳೂರಿನ ಕಲುಷಿತ ನೀರನ್ನು ಎರಡು ಬಾರಿ ಶುದ್ಧೀಕರಿಸಿ, ಅಂತರ್ಜಲ ಮಟ್ಟ ಹೆಚ್ಚಾಗಲು ಮಾತ್ರ ಬಳಸಬೇಕು. ಯಾರೂ ಕೃಷಿಗೆ ಬಳಸಬಾರದು ಎಂದು ಸೂಚಿಸಲಾಗಿದೆ.

ಕೋಲಾರ : ಮಕ್ಕಳಲ್ಲಿ ವೈರಲ್ ಜ್ವರ ಹೆಚ್ಚಳ

ಕೆಸಿ ವ್ಯಾಲಿಯ ನೀರಿನಿಂದ ಕೆರೆಗಳು ಭರ್ತಿಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಆದರೆ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಕೆಸರು ನೀರು ಕೆಸಿ ವ್ಯಾಲಿಗೆ ಸೇರುತ್ತಿದೆ. ಈ ನೀರು ಬೋರ್‌ವೆಲ್‌ಗಳಲ್ಲೂ ಸೇರಿರುವ ಅನುಮಾನ ವ್ಯಕ್ತವಾಗಿದೆ. ಇದೇ ನೀರನ್ನು ನಗರದ ನಿವಾಸಿಗಳಿಗೆ ಸರಬರಾಜು ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದರಿಂದ ನಿವಾಸಿಗಳ ಆರೋಗ್ಯದಲ್ಲಿ ಹೆಚ್ಚು ಕಡಿಮೆಯಾದರೆ ಯಾರು ಹೊಣೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ನಗರ ಪೌರಾಯುಕ್ತರನ್ನು ಕೇಳಿದರೆ ಅವರು ಹೇಳುವುದು ಹೀಗೆ.