Rain: ಅಕಾಲಿಕ ಮಳೆಗೆ ಬೆಳೆನಾಶ, ಕೊಚ್ಚಿ ಹೋಯ್ತು ರೈತರ ಬದುಕು, ಸಾಕು ಮಾಡೋ ಮಳೆರಾಯ!
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಅಕಾಲಿಕ ಮಳೆಗಾಲ ಮುಂದುವರೆದಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯ ಆರ್ಭಟ ಮತ್ತಷ್ಟುಅನಾಹುತಗಳನ್ನು ಸೃಷ್ಟಿಸಿದೆ.
ಬೆಂಗಳೂರು (ನ. 19): ಬಂಗಾಳಕೊಲ್ಲಿಯಲ್ಲಿ (Bay of Bangal) ಉಂಟಾಗಿರುವ ವಾಯುಭಾರ ಕುಸಿತದಿಂದ (Depression) ಅಕಾಲಿಕ ಮಳೆಗಾಲ ಮುಂದುವರೆದಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯ ಆರ್ಭಟ ಮತ್ತಷ್ಟು ಅನಾಹುತಗಳನ್ನು ಸೃಷ್ಟಿಸಿದೆ.
Video: ಅತೀವ ಮಳೆಗೆ ಕಾರಣವಾಯ್ತಾ 580 ವರ್ಷಗಳ ನಂತರ ಸಂಭವಿಸಲಿರುವ ಚಂದ್ರಗ್ರಹಣ?
ಕೋಲಾರ ಜಿಲ್ಲೆಯಲ್ಲಿ ಶಾಲೆಯ ಕಟ್ಟಡ, ಮೈಸೂರಿನಲ್ಲಿ ಚಾಮುಂಡಿ ಬೆಟ್ಟದ ರಸ್ತೆ ಮತ್ತೆ ಕುಸಿದಿದೆ, ಅಲ್ಲದೆ ಹಳೆಯ ಕಟ್ಟಡ ನೆಲಕ್ಕುರುಳಿದೆ. ರಾಮನಗರ ಜಿಲ್ಲೆಯಲ್ಲಿ ಸೇತುವೆ ಹಾನಿಯಾಗಿದೆ. ಇನ್ನು ಕೊರಟಗೆರೆ ತಾಲೂಕಿನ ತುಂಬಾಡಿಯ ಹೊಸಕೆರೆ ಕೋಡಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಬಾಲಕಿಯರ ರಕ್ಷಣೆ ಮಾಡಲಾಗಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಕೆರೆ ತುಂಬಿ ಕೋಡಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ರಸ್ತೆಯನ್ನು ಬಂದ್ ಮಾಡಲಾಗಿದ್ದರೂ ಯುವಕನೊಬ್ಬ ಬೈಕಲ್ಲಿ ಕೋಡಿ ದಾಟಲು ಯತ್ನಿಸಿದ್ದಾನೆ. ಆದರೆ ಬೈಕ್ ಆಯತಪ್ಪಿ ಕೋಡಿಯಲ್ಲಿ ಬಿದ್ದು ಕೊಚ್ಚಿ ಹೋಗುತಿತ್ತು. ತಕ್ಷಣ ಗ್ರಾಮಸ್ಥರು ಬೈಕ್ ಸಮೇತ ಯುವಕನನ್ನು ಎಳೆದು ದಡ ಸೇರಿಸಿದ್ದಾರೆ.