ಕೃಷ್ಣ ಕಂಸನ ಕೈಯಿಂದ ತಪ್ಪಿಸಿಕೊಂಡಿದ್ಹೇಗೆ..?
ಹುಟ್ಟು ಪಡೆದ ದೇಹಕ್ಕೆ ಸಾವು ಅಂಟಿಕೊಂಡೇ ಬರುತ್ತದೆ ನಿಜ. ಆದರೆ ನೀನು ನಿನ್ನ ಸ್ವಂತ ತಂಗಿಯನ್ನೇ ಸಾಯಿಸಲು ಹೊರಟಿದ್ದೀಯಲ್ಲ, ಸರೀನಾ ಇದು? ನೀನು ದೀನ ವತ್ಸಲ. ಈ ರೀತಿ ಮಾಡಬೇಡಯ್ಯಾ ಎಂದು ವಸುದೇವ ಪರಿಪರಿಯಾಗಿ ಕಂಸನನ್ನು ಕೇಳಿಕೊಳ್ಳುತ್ತಾನೆ. ಆದರೆ ಕಂಸನ ಮನಸ್ಸು ಕರಗಲಿಲ್ಲ.
ಹುಟ್ಟು ಪಡೆದ ದೇಹಕ್ಕೆ ಸಾವು ಅಂಟಿಕೊಂಡೇ ಬರುತ್ತದೆ ನಿಜ. ಆದರೆ ನೀನು ನಿನ್ನ ಸ್ವಂತ ತಂಗಿಯನ್ನೇ ಸಾಯಿಸಲು ಹೊರಟಿದ್ದೀಯಲ್ಲ, ಸರೀನಾ ಇದು? ನೀನು ದೀನ ವತ್ಸಲ. ಈ ರೀತಿ ಮಾಡಬೇಡಯ್ಯಾ ಎಂದು ವಸುದೇವ ಪರಿಪರಿಯಾಗಿ ಕಂಸನನ್ನು ಕೇಳಿಕೊಳ್ಳುತ್ತಾನೆ. ಆದರೆ ಕಂಸನ ಮನಸ್ಸು ಕರಗಲಿಲ್ಲ. ಕೊನೆಗೆ ವಸುದೇವ ಯೋಚನೆ ಮಾಡಿ, ಕಂಸನನ್ನು ಹೊಗಳಲು ಶುರು ಮಾಡುತ್ತಾನೆ. ನಮಗೆ ಹುಟ್ಟುವ ಮಕ್ಕಳನ್ನು ನಿನಗೆ ಅರ್ಪಿಸುತ್ತೇವೆ ಎಂದು ಮಾತು ಕೊಡುತ್ತಾನೆ. ಕಂಸ ಒಪ್ಪಿ ಕಳುಹಿಸುತ್ತಾನೆ. ಮುಂದೆ 8 ನೇ ಮಗುವಾಗಿ ಕೃಷ್ಣ ಹುಟ್ಟುತ್ತಾನೆ. ಆತ ಕಂಸನಿಂದ ಹೇಗೆ ತಪ್ಪಿಸಿಕೊಳ್ಳುತ್ತಾನೆ? ಕೇಳೋಣ ಭಾಗವತದಲ್ಲಿ...