'ಶಾಲೆ ಪುನಾರಂಭಕ್ಕೆ ಸುರೇಶ್ ಕುಮಾರ್ ಆತುರಪಡೋದು ಸರಿಯಲ್ಲ, ಮತ್ತೊಮ್ಮೆ ಚರ್ಚೆ ನಡೆಯಲಿ'
ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸದ್ಯಕ್ಕೆ ಶಾಲೆ-ಕಾಲೇಜುಗಳನ್ನು ಪ್ರಾರಂಭ ಮಾಡುವ ಯೋಚನೆಯು ಸರ್ಕಾರದ ಮುಂದೆ ಇಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು (ಸೆ. 29): ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸದ್ಯಕ್ಕೆ ಶಾಲೆ-ಕಾಲೇಜುಗಳನ್ನು ಪ್ರಾರಂಭ ಮಾಡುವ ಯೋಚನೆಯು ಸರ್ಕಾರದ ಮುಂದೆ ಇಲ್ಲ.ಈ ಕುರಿತು ಶಾಸಕರ ಮತ್ತು ಸಂಸದರ ಹಾಗೂ ಇತರೆ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಆಹ್ವಾನಿಸುತ್ತಿದ್ದೇನೆ. ಇದರ ಜೊತೆಗೆ ಶಿಕ್ಷಕ ಸಂಘಟನೆಗಳೊಂದಿಗೆ ಹಾಗೂ ಶಿಕ್ಷಣ ತಜ್ಞರೊಂದಿಗೆ ಸಂವಾದ ನಡೆಸುತ್ತಿದ್ದೇನೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಶಾಲೆ ಪುನಾರಂಭಕ್ಕೆ ಚಿಂತನೆ; ಶಿಕ್ಷಣ ತಜ್ಞರು, ಶಾಸಕರು, ಸಂಸದರ ಅಭಿಪ್ರಾಯಕ್ಕೆ ಆಹ್ವಾನ
ಶಿಕ್ಷಣದ ವಿಚಾರವನ್ನು ಸುರೇಶ್ ಕುಮಾರ್ ಬಹಳ ಚೆನ್ನಾಗಿಯೇ ನಿಭಾಯಿಸಿದ್ಧಾರೆ. ಇದೀಗ ಯಾಕೆ ಆತುರಪಡುತ್ತಿದ್ದಾರೋ ಗೊತ್ತಾಗ್ತಾ ಇಲ್ಲ. ಮೊದಲು ಜೀವ ಉಳಿಸಿಕೊಳ್ಳೋಣ. ಆಮೇಲೆ ಜೀವನದ ಬಗ್ಗೆ ಯೋಚಿಸೋಣ. ನಾನು ಪೋಷಕರ, ಸಂಘ ಸಂಸ್ಥೆಗಳ ಮುಖ್ಯಸ್ಥರು, ಶಾಲಾ ಆಡಳಿತ ಮಂಡಳಿಯವರ ಮೀಟಿಂಗ್ ಕರೆದಿದ್ದೇನೆ. ಅವರ ಅಭಿಪ್ರಾಯವನ್ನೂ ಸಂಗ್ರಹಿಸುತ್ತೇನೆ' ಎಂದು ಜೆಡಿಎಸ್ ಎಂಎಲ್‌ಎ ಶಿವಲಿಂಗೇ ಗೌಡ ಹೇಳಿದ್ಧಾರೆ.