Exclusive: ಡ್ರಗ್ ಪೆಡ್ಲರ್ ಜೊತೆ ನಂಟು; ಸಿರಿಯಲ್ ನಟ-ನಟಿಯರಿಗೆ ಶುರು ಟೆನ್ಷನ್ ಟೆನ್ಷನ್!

ಸ್ಯಾಂಡಲ್‌ವುಡ್ ಆಯ್ತು ಕಿರುತೆರೆ ನಟ-ನಟಿಯರಿಗೆ ಡ್ರಗ್ ಉರುಳು ಸುತ್ತಿಕೊಳ್ಳುತ್ತಿದೆ. ಡ್ರಗ್ ಜಾಲದ ಪ್ರಮುಖ ಆರೋಪಿ ವೈಭವ್ ಜೈನ್ ಜೊತೆ ಸೀರಿಯಲ್ ನಟ-ನಟಿಯರು ಗ್ರೂಪ್ ಫೋಟೋ ತೆಗೆಸಿಕೊಂಡಿರುವುದು ಚರ್ಚೆ ಹುಟ್ಟು ಹಾಕಿದೆ. 

First Published Sep 13, 2020, 5:06 PM IST | Last Updated Sep 13, 2020, 5:29 PM IST

ಬೆಂಗಳೂರು (ಸೆ. 13): ಸ್ಯಾಂಡಲ್‌ವುಡ್ ಆಯ್ತು ಕಿರುತೆರೆ ನಟ-ನಟಿಯರಿಗೆ ಡ್ರಗ್ ಉರುಳು ಸುತ್ತಿಕೊಳ್ಳುತ್ತಿದೆ. ಡ್ರಗ್ ಜಾಲದ ಪ್ರಮುಖ ಆರೋಪಿ ವೈಭವ್ ಜೈನ್ ಜೊತೆ ಸೀರಿಯಲ್ ನಟ-ನಟಿಯರು ಗ್ರೂಪ್ ಫೋಟೋ ತೆಗೆಸಿಕೊಂಡಿರುವುದು ಚರ್ಚೆ ಹುಟ್ಟು ಹಾಕಿದೆ. 

ವೈಭವ್ ಜೈನ್ ಜೊತೆ ಸಿರೀಯಲ್ ನಟ-ನಟಿಯರ್ ಸಂಪರ್ಕ ಇಟ್ಟುಕೊಂಡಿದ್ದಾರೆ. ಆಗಾಗ ಪಾರ್ಟಿಗಳಲ್ಲಿಯೂ ಸಹ ಕಾಣಿಸಿಕೊಳ್ಳುತ್ತಿದ್ದರು ಎಂಬ ಅನುಮಾನ ಹುಟ್ಟುಹಾಕಿದೆ. ಇವರ ಜೊತೆಗೆ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಕೂಡಾ ಕಾಣಿಸಿಕೊಂಡಿದ್ದಾರೆ. ಒಬ್ಬರಿಂದ ಒಬ್ಬರಿಗೆ ಡ್ರಗ್ ಉರುಳು ಸುತ್ತಿಕೊಳ್ಳುತ್ತಲೇ ಇದೆ.