11:21 PM (IST) Jun 24

Karnataka News Live:ಲೀಡ್ಸ್‌ ಟೆಸ್ಟ್‌ನಲ್ಲಿ ಅವಮಾನಕರ ಸೋಲು ಕಂಡ ಟೀಮ್‌ ಇಂಡಿಯಾ!

ಹೆಡಿಂಗ್ಲೆಯಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಭಾರತ ಐದು ಶತಕ ಬಾರಿಸಿದರೂ ಸೋಲು ಕಂಡಿದೆ. ಇಂಗ್ಲೆಂಡ್‌ ಐದು ವಿಕೆಟ್‌ಗಳ ಜಯ ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಡಕೆಟ್‌ ಅವರ ಶತಕ ಇಂಗ್ಲೆಂಡ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
Read Full Story
10:30 PM (IST) Jun 24

Karnataka News Live:ಭಾಷಾ ಉತ್ತೇಜನಕ್ಕೆ ಕೇಂದ್ರದ ನಿಧಿ - ಸಂಸ್ಕೃತಕ್ಕೆ ಸಿಂಹಪಾಲು, ಕನ್ನಡಕ್ಕೆ ಚೂರುಪಾರು!

ಕೇಂದ್ರ ಸರ್ಕಾರವು ಇತರ ಐದು ಶಾಸ್ತ್ರೀಯ ಭಾರತೀಯ ಭಾಷೆಗಳಿಗೆ ಒಟ್ಟು ಖರ್ಚಿನ 17 ಪಟ್ಟು ಖರ್ಚು ಮಾಡಿದೆ.

Read Full Story
10:15 PM (IST) Jun 24

Karnataka News Live:ಬೆಂಗಳೂರಿನ ರಾಮ್​, ಪುಣೆಯ ಶ್ಯಾಮ್​ - ಮೊದಲ ನೋಟದಲ್ಲೇ ಲವ್! ಮನೆಯವರಿಂದ ಅದ್ದೂರಿ ಮದುವೆ

ಪ್ರತಿಬಾರಿಯೂ ಒಂದು ಗಂಡಿಗೆ, ಒಂದು ಹೆಣ್ಣು ಎನ್ನುವ ನಿಯಮ ಆಗಲೇಬೇಕೆಂದೇನಿಲ್ಲ. ಗಂಡಿಗೆ ಗಂಡು, ಹೆಣ್ಣಿಗೆ ಹೆಣ್ಣು ಎನ್ನುವ ನಿಯಮವೂ ಅನ್ವಯ ಆಗಿಬಿಡುತ್ತದೆ. ಅಂಥದ್ದೇ ಒಂದು ಕುತೂಹಲದ ಲವ್​ಸ್ಟೋರಿ ಇಲ್ಲಿದೆ...

Read Full Story
10:04 PM (IST) Jun 24

Karnataka News Live:IPO ಇಳಿಯುವ ಮುನ್ನ ಸ್ಟಾರ್ಟ್‌ಅಪ್‌ ಕಂಪನಿಯಲ್ಲಿ 250 ಕೋಟಿ ಹೂಡಿಕೆ ಮಾಡಿದ ಕಾಮತ್‌ ಬ್ರದರ್ಸ್‌!

ಜೆರೋಧಾ ಸಂಸ್ಥಾಪಕರಾದ ನಿಖಿಲ್ ಮತ್ತು ನಿತಿನ್ ಕಾಮತ್ ಇನ್‌ಕ್ರೆಡ್ ಹೋಲ್ಡಿಂಗ್ಸ್‌ನಲ್ಲಿ ₹250 ಕೋಟಿ ಹೂಡಿಕೆ ಮಾಡಿದ್ದಾರೆ, ಇದು ಭಾರತದ ವೇಗವಾಗಿ ವಿಕಸನಗೊಳ್ಳುತ್ತಿರುವ ಡಿಜಿಟಲ್ ಸಾಲ ಕ್ಷೇತ್ರದಲ್ಲಿ ಅವರ ನಂಬಿಕೆಯನ್ನು ಸೂಚಿಸುತ್ತದೆ.

Read Full Story
10:00 PM (IST) Jun 24

Karnataka News Live:ಕಾಡುಗೋಡಿಯಲ್ಲಿ ₹4,000 ಕೋಟಿ ಮೌಲ್ಯದ ಭೂಮಿ ವಶ, ಇದು ಅತೀ ದೊಡ್ಡ ಒತ್ತುವರಿ ತೆರವು

ಬೆಂಗಳೂರಿನ ಕಾಡುಗೋಡಿಯಲ್ಲಿ ಅತಿಕ್ರಮಣಗೊಂಡಿದ್ದ ₹4,000 ಕೋಟಿ ಮೌಲ್ಯದ 120 ಎಕರೆ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಒಟ್ಟಾರೆಯಾಗಿ 248 ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ₹8,000 ಕೋಟಿ ಎಂದು ಅಂದಾಜಿಸಲಾಗಿದೆ. ಅತಿಕ್ರಮಣ ತಡೆಗಟ್ಟಲು ಬೇಲಿ ಹಾಕಿ ಗಿಡ ನೆಡಲಾಗುವುದು.
Read Full Story
09:16 PM (IST) Jun 24

Karnataka News Live:ಸೋರುತಿಹುದು ವಂದೇ ಭಾರತ್‌ ಮಾಳಿಗಿ..ಐಷಾರಾಮಿ ರೈಲಿನ ವಾಟರ್‌ಫಾಲ್‌ ಕಂಡು ಬೆಚ್ಚಿಬಿದ್ದ ಜನ!

ದೆಹಲಿಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರತೀಯ ರೈಲ್ವೆಯನ್ನು ಟೀಕಿಸಲಾಗಿದೆ.

Read Full Story
08:31 PM (IST) Jun 24

Karnataka News Live:ಕಿರಿಕ್‌ ಪಾರ್ಟಿ 'ಸಾನ್ವಿ' ಸ್ಟೈಲ್‌ ಡೆತ್‌, ಕುಡಿದು ಕಟ್ಟಡದಿಂದ ಕೆಳಗೆ ಬಿದ್ದು ಸಾವು!

ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಯುವತಿ ಸಾವನ್ನಪ್ಪಿದ್ದಾರೆ. ಲವ್ ಫೇಲ್ಯೂರ್ ಆಗಿದ್ದ ನಂದಿನಿ, ಸ್ನೇಹಿತರೊಂದಿಗೆ ಕಟ್ಟಡದ ಮೇಲೆ ಮದ್ಯಪಾನ ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
Read Full Story
08:07 PM (IST) Jun 24

Karnataka News Live:ಜೀರಿಗೆ ಖರೀದಿಸಿದಾತನಿಗೆ ಆನ್‌ಲೈನ್ ವಂಚನೆ - ₹24,000 ಕಳೆದುಕೊಂಡ ಉಡುಪಿ ವ್ಯಕ್ತಿ!

ಇಂಡಿಯಾಮಾರ್ಟ್ ಮೂಲಕ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವ ಯತ್ನದಲ್ಲಿ ಕಾಪು ತಾಲ್ಲೂಕಿನ ಬೆಳಪು ಗ್ರಾಮದ ನಿವಾಸಿ ₹24,000 ಕಳೆದುಕೊಂಡಿದ್ದಾರೆ. ಮುಂಗಡ ಪಾವತಿ ಮಾಡಿದ ನಂತರ, ಆರೋಪಿಯು ಸರಕುಗಳನ್ನು ಕಳುಹಿಸದೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ.
Read Full Story
08:00 PM (IST) Jun 24

Karnataka News Live:ಸಾವು ಹೀಗೂ ಬರುತ್ತೆ - 11 ವರ್ಷದ ಬಾಲಕನಿಗೆ ನೇಣು ಕುಣಿಕೆಯಾದ ಶರ್ಟ್ ಕಾಲರ್‌

ಕೇರಳದ ಮಲ್ಲಪುರಂನಲ್ಲಿ ಮನೆಯ ಗೋಡೆಯ ಮೊಳೆಗೆ ಶರ್ಟ್ ಕಾಲರ್ ಸಿಲುಕಿ 11 ವರ್ಷದ ಬಾಲಕ ಉಸಿರುಗಟ್ಟಿ ಸಾವಿಗೀಡಾಗಿದ ಆಘಾತಕಾರಿ ಘಟನೆ ನಡೆದಿದೆ. 

Read Full Story
07:49 PM (IST) Jun 24

Karnataka News Live:18 ಕೋಟಿ ಮೌಲ್ಯದ 92 ಲಕ್ಷ ಸಿಗರೇಟ್‌ ಸೀಜ್‌ ಮಾಡಿದ ವಿಮಾನ ನಿಲ್ದಾಣ ಸಿಬ್ಬಂದಿ!

ಚೆನ್ನೈನಲ್ಲಿ ರೂ. 18.2 ಕೋಟಿ ಮೌಲ್ಯದ 92 ಲಕ್ಷಕ್ಕೂ ಹೆಚ್ಚು ಅಕ್ರಮವಾಗಿ ಕಳ್ಳಸಾಗಣೆ ಮಾಡಲಾದ ವಿದೇಶಿ ಮೂಲದ ಸಿಗರೇಟ್‌ಗಳನ್ನು ಡಿಆರ್‌ಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Read Full Story
07:49 PM (IST) Jun 24

Karnataka News Live:ಅಡುಗೆ ಸಿಬ್ಬಂದಿ ದಲಿತೆ ಎಂಬ ಕಾರಣಕ್ಕೆ ಶಾಲೆಗೆ ಬಾರದ ಮಕ್ಕಳು, ಒಬ್ಬ ವಿದ್ಯಾರ್ಥಿಗೆ ಇಬ್ಬರು ಶಿಕ್ಷಕರು!

ಚಾಮರಾಜನಗರದ ಹೊಮ್ಮ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಿಬ್ಬಂದಿ ದಲಿತ ಮಹಿಳೆ ಎಂಬ ಕಾರಣಕ್ಕೆ ಪೋಷಕರು ಮಕ್ಕಳನ್ನು ಕಳುಹಿಸುತ್ತಿಲ್ಲ. ಟಿಸಿ ಪಡೆದು ಬೇರೆಡೆ ಸೇರಿಸುತ್ತಿದ್ದು, ಒಬ್ಬನೇ ವಿದ್ಯಾರ್ಥಿ ಉಳಿದಿದ್ದಾನೆ. ಶಾಲೆ ಮುಚ್ಚುವ ಹಂತದಲ್ಲಿದೆ.
Read Full Story
07:29 PM (IST) Jun 24

Karnataka News Live:ಮಾನ್ಸೂನ್‌ ಸೇಲ್‌ ಘೋಷಿಸಿದ ಇಂಡಿಗೋ, 6 ದಿನದ ಆಫರ್‌ನಲ್ಲಿ ಕೇವಲ 1499 ರೂಪಾಯಿಗೆ ಸಿಗಲಿದೆ ವಿಮಾನ ಟಿಕೆಟ್‌!

ಜೂನ್ 24 ರಿಂದ ಜೂನ್ 29 ರ ನಡುವೆ ಮಾಡಿದ ಬುಕಿಂಗ್‌ಗಳಿಗೆ ಈ ಆಫರ್‌ ಮಾನ್ಯವಾಗಿರುತ್ತದೆ. ಜುಲೈ 1 ರಿಂದ ಸೆಪ್ಟೆಂಬರ್ 21ರ ನಡುವೆ ಪ್ರಯಾಣ ಮಾಡಬಹುದು ಎಂದು ಇಂಡಿಗೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Read Full Story
07:16 PM (IST) Jun 24

Karnataka News Live:ಒನ್‌ಸೈಡ್ ಲವ್‌, ಯುವಕನ ವಿರುದ್ಧ ಸೇಡಿಗೆ ಹುಸಿ ಬಾಂಬ್ ಸಂದೇಶ - ಸಣ್ಣ ತಪ್ಪು ಮಾಡಿ ಸಿಕ್ಕಿಬಿದ್ದ ಮಹಿಳಾ ಟೆಕ್ಕಿ

ಪ್ರೀತಿ ನಿರಾಕರಿಸಿದ ಸಹೋದ್ಯೋಗಿಯ ಮೇಲೆ ಸೇಡು ತೀರಿಸಿಕೊಳ್ಳಲು ಯುವತಿಯೊಬ್ಬಳು 11 ರಾಜ್ಯಗಳಿಗೆ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿದ್ದಾಳೆ.

Read Full Story
07:06 PM (IST) Jun 24

Karnataka News Live:ಶಾಲೆಯಲ್ಲಿ ಆಟವಾಡುತ್ತಿದ್ದ 9ನೇ ತರಗತಿ ಬಾಲಕಿಗೆ ಹಾರ್ಟ್ ಅಟ್ಯಾಕ್; ಆಸ್ಪತ್ರೆ ತಲುಪುವ ಮುನ್ನ ಸಾವು!

ಅಥಣಿ ತಾಲೂಕಿನ ಚಮಕೇರಿ ಗ್ರಾಮದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಆಟವಾಡುವಾಗ ಹೃದಯಾಘಾತದಿಂದಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದ ಬಾಲಕಿ ರೇಣುಕಾಳ ಸಾವು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.

Read Full Story
07:04 PM (IST) Jun 24

Karnataka News Live:ಸಂದರ್ಶನಕ್ಕೂ ಎಂಟ್ರಿ ಕೊಟ್ಟ ಎಐ, ಟೆಕ್ ಸಂದರ್ಶನಗಳಲ್ಲಿ AI ಕೋಡಿಂಗ್ ಬಳಕೆ!

ಕಂಪೆನಿಗಳು ಈಗ ಎಐ ಸಹಾಯದಿಂದ ಕೋಡಿಂಗ್ ಸಂದರ್ಶನಗಳನ್ನು ನಡೆಸುತ್ತಿವೆ. Canva ಮತ್ತು Mastercard ನಂತಹ ಕಂಪನಿಗಳು ಈಗಾಗಲೇ ಈ ಹೊಸ ವಿಧಾನವನ್ನು ಅಳವಡಿಸಿಕೊಂಡಿವೆ. ಈ ಬದಲಾವಣೆಯು ಅಭ್ಯರ್ಥಿಗಳ ಕೋಡಿಂಗ್ ಜ್ಞಾನ ಮತ್ತು ಎಐ ಬಳಕೆಯ ಕೌಶಲ್ಯ ಎರಡನ್ನೂ ಪರೀಕ್ಷಿಸುತ್ತದೆ.
Read Full Story
06:45 PM (IST) Jun 24

Karnataka News Live:ಆಂಧ್ರ ಇಲ್ದಿದ್ರೇನು.. ಕೇಂದ್ರದಿಂದ ಮಾವು ಬೆಳೆಗಾರರಿಗೆ ಹಣ ಕೊಡಿಸಿದ ಕುಮಾರಸ್ವಾಮಿ!

ಮಾವಿನ ಹಣ್ಣಿನ ಬೆಲೆ ಕುಸಿತದಿಂದ ಸಂಕಷ್ಟದಲ್ಲಿದ್ದ ರೈತರಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ನೆರವಿಗೆ ಬಂದಿದ್ದಾರೆ.. ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದ ಕುಮಾರಸ್ವಾಮಿ ಅವರ ಮನವಿಗೆ ಸ್ಪಂದಿಸಿ ಕೇಂದ್ರ ಸರ್ಕಾರ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯಡಿ ಬೆಂಬಲ ಬೆಲೆ ಘೋಷಿಸಿದೆ.

Read Full Story
06:44 PM (IST) Jun 24

Karnataka News Live:ಕೋರ್ಟ್ ಕಟಕಟೆಯಲ್ಲಿ ಬೈಕ್ ಟ್ಯಾಕ್ಸಿ ಸಂಚಾರ ಹೊಯ್ದಾಟ; ನಾಳೆಗೆ ವಿಚಾರಣೆ ಮುಂದೂಡಿದ ಹೈಕೋರ್ಟ್!

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ಕೋರಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಾಳೆಗೆ ಮುಂದೂಡಿದೆ. ಬೈಕ್ ಟ್ಯಾಕ್ಸಿ ಅಗ್ರಿಗೇಟರ್‌ಗಳು ಮತ್ತು ಸರ್ಕಾರದ ನಡುವಿನ ವಾದ-ಪ್ರತಿವಾದಗಳು ಮುಂದುವರೆದಿವೆ.
Read Full Story
06:21 PM (IST) Jun 24

Karnataka News Live:ಸೌಂದರ್ಯ ರಿಜೆಕ್ಟ್ ಮಾಡಿದ ಸಿನಿಮಾದಿಂದಲೇ ಲೈಫ್ ಸೆಟಲ್ ಮಾಡಿಕೊಂಡ ಮತ್ತೊಬ್ಬ ಸ್ಟಾರ್ ನಟಿ!

ಒಂದು ಕಾಲದ ಸ್ಟಾರ್ ನಟಿ ಸೌಂದರ್ಯ ರಿಜೆಕ್ಟ್ ಮಾಡಿದ ಸಿನಿಮಾದಿಂದ ಇನ್ನೊಬ್ಬ ಸ್ಟಾರ್ ನಟಿಗೆ ಲೈಫೇ ಸೆಟ್ ಆಗಿದೆ. ಯಾರದು ಅಂತ ಗೊತ್ತಾ?

Read Full Story
06:12 PM (IST) Jun 24

Karnataka News Live:ಇನ್ನು 72 ಗಂಟೆಯಲ್ಲೇ ನಿಮ್ಮ ಪಿಎಫ್‌ ಖಾತೆಯಿಂದ ಬರಲಿದೆ 5 ಲಕ್ಷ ಹಣ, ಬದಲಾವಣೆ ತಂದ ಕೇಂದ್ರ ಸರ್ಕಾರ!

ತುರ್ತು ಪರಿಸ್ಥಿತಿಯಲ್ಲಿ 72 ಗಂಟೆಗಳ ಒಳಗೆ ನಿಮ್ಮ ಪಿಎಫ್ ಖಾತೆಯಿಂದ ₹5 ಲಕ್ಷದವರೆಗೆ ಹಣವನ್ನು ಹಿಂಪಡೆಯಬಹುದು. ಆಟೋ ಸೆಟ್ಲ್‌ಮೆಂಟ್ ಮೂಲಕ 3-4 ದಿನಗಳಲ್ಲಿ ಹಣ ಪಡೆಯಿರಿ. UPI-ATM ಮೂಲಕವೂ ಶೀಘ್ರದಲ್ಲೇ ಹಣ ಹಿಂಪಡೆಯುವ ಸೌಲಭ್ಯ ಲಭ್ಯ.
Read Full Story
06:11 PM (IST) Jun 24

Karnataka News Live:ಈ ರಾಜ್ಯದ ಹೆಣ್ಮಕ್ಕಳು ಬಹಳ ಬೇಗ ಸಾಯ್ತಾರೆ!

ಭಾರತದ ಈ ರಾಜ್ಯದಲ್ಲಿ ಮಹಿಳೆಯರ ಸರಾಸರಿ ಜೀವಿತಾವಧಿ ತುಂಬಾನೆ ಕಡಿಮೆ ಇದೆಯಂತೆ. ಆ ರಾಜ್ಯ ಯಾವುದು? ಅಲ್ಲಿ ಮಹಿಳೆಯರ ಜೀವಿತಾವಧಿ ಎಷ್ಟಿದೆ ಅನ್ನೋದನ್ನು ನೋಡೋಣ.

Read Full Story