ಗೂಗೂಲ್ ಸಿಇಒ, ಭಾರತೀಯ ಮೂಲದ ಸುಂದರ್ ಪಿಚೈ ಇದೀಗ ಕಂಪನಿಯ ಮಂದಿನ ಸಿಇಒ ಯಾರು ಅನ್ನೋ ಪ್ರಶ್ನಗೆ ಉತ್ತರಿಸಿದ್ದಾರೆ.
Karnataka News Live: ಗೂಗಲ್ ಮುಂದಿನ CEO ಯಾರು? ಸುಂದರ್ ಪಿಚೈ ಉತ್ತರ

ಬೆಂಗಳೂರು (ಜೂ.8) : ಆರ್ಸಿಬಿ ವಿಜಯೋತ್ಸವ ಸಮಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೃತರಾದ ಎಲ್ಲಾ 11 ಮಂದಿ ಕುಟುಂಬದವರಿಗೆ ಸರ್ಕಾರ ಪರಿಹಾರ ಧನ 25 ಲಕ್ಷ ರೂ.ಗೆ ಹೆಚ್ಚಿಸಿದೆ. ಇದೀಗ ಮೃತ ಕುಟುಂಬಗಳಿಗೆ ಒಟ್ಟು 40 ಲಕ್ಷ ರು. ಪರಿಹಾರ ಸಿಗಲಿದೆ.
ಕಾಲ್ತುಳಿತ ದುರ್ಘಟನೆ ನಡೆದ ದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃತರ ಕುಟುಂಬದವರಿಗೆ ತಲಾ 10 ಲಕ್ಷ ರು. ಪರಿಹಾರ ಘೋಷಿಸಿದ್ದರು. ಇದೀಗ ಈ ಪರಿಹಾರ ಮೊತ್ತವನ್ನು ತಲಾ 25 ಲಕ್ಷ ರು.ಗಳಿಗೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಆದೇಶಿಸಿದ್ದಾರೆ.
ಸರ್ಕಾರದ ಜೊತೆಗೆ ಮೃತರ ಕುಟುಂಬಗಳಿಗೆ ಈಗಾಗಲೇ ಆರ್ಸಿಬಿ ಪ್ರಾಂಚೈಸಿ ತಲಾ 10 ಲಕ್ಷ ರು. ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ನವರು ತಲಾ 5 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ. ಜೊತೆಗೆ ಆರ್ಸಿಬಿ ಫ್ರಾಂಚೈಸಿಯಿಂದ 10 ಲಕ್ಷ ರು. ಪರಿಹಾರ ಘೋಷಣೆ ಮಾಡಲಾಗಿದೆ. ಇದೀಗ ಸರ್ಕಾರ 25 ಲಕ್ಷ ಕೊಟ್ಟರೆ ಮೃತ ಕುಟುಂಬಗಳಿಗೆ ಒಟ್ಟು 40 ಲಕ್ಷ ರು. ಪರಿಹಾರ ಸಿಕ್ಕಂತಾಗಲಿದೆ.
Karnataka News Live:ಬಿಳಿ ಗೌನ್‌ನಲ್ಲಿ ಮಿಂಚಿದ ಮೋನಾಲಿಸಾ, ಫೋಟೋಗೆ ಭಾರಿ ಮೆಚ್ಚುಗೆ
Karnataka News Live:ಪಾಪ ಪುಣ್ಯದ ಮಾತೇ ಇಲ್ಲ, ಲೈಂಗಿಕ ಅಪರಾಧಿಗಳಿಗೆ ಪುರುಷತ್ವ ಹರಣ, ಯುಕೆ ಸರ್ಕಾರದ ಹೊಸ ಪ್ಲಾನ್
ಕರುಣೆ, ಮೂಲಭೂತ ಹಕ್ಕು ಸೇರಿದಂತೆ ಬೊಗಳೇ ಮಾತುಗಳಿಗೆ ಅವಕಾಶವಿಲ್ಲ. ಲೈಂಗಿಕ ಅಪರಾಧಿಗಳ ಪುರುಷತ್ವ ಹರಣ ಇಂಜೆಕ್ಷನ್ ನೀಡಲು ಯುಕೆ ಸರ್ಕಾರ ಹೊಸ ಪ್ಲಾನ್ ಮಾಡಿದೆ.
Karnataka News Live:ಕಾಂಗ್ರೆಸ್‌ನಿಂದ ಮತಬ್ಯಾಂಕ್ ರಾಜಕಾರಣ - ಮಾಜಿ ಸಚಿವ ಸಿ.ಟಿ.ರವಿ
ಸಮಾಜದಲ್ಲಿ ಅಶಾಂತಿಗೆ ಗೋಹತ್ಯೆ, ಗೋ ಕಳ್ಳತನ, ಅಕ್ರಮ ಗೋ ಸಾಗಾಟ, ಲವ್ ಜಿಹಾದ್ ಮಾತ್ರವಲ್ಲ ಮತೀಯವಾದ ಬಿತ್ತುವ ಪರಕೀಯ ಮತಗ್ರಂಥಗಳೂ ಕಾರಣವಾಗಿವೆ. ಈ ಬಗ್ಗೆ ಸಮಾಜದಲ್ಲಿ ವ್ಯಾಪಕ ಚರ್ಚೆ ನಡೆಯಬೇಕು.
Karnataka News Live:ಜಮೀನು ಕಳೆದುಕೊಂಡಿರುವ ಸಂತ್ರಸ್ತರ ಮಕ್ಕಳಿಗೆ ಶೇ.50 ಉದ್ಯೋಗ ಮೀಸಲಿಡಿ - ಸಚಿವ ಶಿವಾನಂದ ಪಾಟೀಲ್
ಎನ್‌ಟಿಪಿಸಿ ವಿದ್ಯುತ್ ಘಟಕ ಸ್ಥಾಪನೆಗೆ ಸಾವಿರಾರು ಎಕರೆ ಜಮೀನು ಕಳೆದುಕೊಂಡಿರುವ ಸಂತ್ರಸ್ತರ ಮಕ್ಕಳಿಗೆ ಇಲ್ಲಿ ಡಿ ದರ್ಜೆಯ ಶೇ.50 ರಷ್ಟು ಹುದ್ದೆ ಮೀಸಲಿಡಿ ಎಂದು ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿದರು.
Karnataka News Live:ಜಿ7 ಶೃಂಗಸಭೆ ತೆರಳಲಿರುವ ಮೋದಿ ಮೇಲೆ ಖಲಿಸ್ತಾನಿ ಉಗ್ರರ ದಾಳಿ ಪ್ಲಾನ್ ಬಿಚ್ಚಿಟ್ಟ ಕೆನಡಾ ಪತ್ರಕರ್ತ
ಜಿ7 ಶೃಂಗಸಭೆಗೆ ಕೆನಡಾ ಪ್ರಧಾನಿ, ಮೋದಿಗೆ ಆಹ್ವಾನ ನೀಡಿರುವುದು ಖಲಿಸ್ತಾನಿ ಉಗ್ರರ ಕಣ್ಣು ಕೆಂಪಾಗಿಸಿದೆ. ತೀವ್ರ ಆಕ್ರೋಶ ಹೊರಹಾಕಿರುವ ಖಲಿಸ್ತಾನಿ ಉಗ್ರರು ಇದೀಗ ಪ್ರಧಾನಿ ಮೋದಿ ಮೇಲೆ ದಾಳಿಗೆ ಸಂಚು ರೂಪಿಸಿರುವುದಾಗಿ ಕೆನಡಾ ಪತ್ರಕರ್ತ ಬಹಿರಂಗಪಡಿಸಿದ್ದಾರೆ.
Karnataka News Live:ನಷ್ಟದಲ್ಲಿದ್ದ ಏರ್ ಇಂಡಿಯಾಗೆ ಮರು ಜೀವ ಕೊಟ್ಟ ಟಾಟಾ, FY2025ರಲ್ಲಿ ಶೇ.11ರಷ್ಟು ಆದಾಯ ಹೆಚ್ಚಳ
ಸರ್ಕಾರಿ ಒಡೆತನದಲ್ಲಿದ್ದಾಗ ಏರ್ ಇಂಡಿಯಾ ಪ್ರತಿ ವರ್ಷ ನಷ್ಟದಲ್ಲೇ ಸಾಗುತ್ತಿತ್ತು. ಅತೀವ ನಷ್ಟದಲ್ಲಿದ್ದ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ ಮರಳಿ ಪಡೆದಿತ್ತು. ಬಳಿಕ ಮಹತ್ತರ ಬದಲಾವಣೆಯೊಂದಿಗೆ ಸೇವೆ ಆರಂಭಿಸಿತ್ತು. ಇದರ ಪರಿಣಾಮ ಈ ವರ್ಷ ಏರ್ ಇಂಡಿಯಾ ಆದಾಯದಲ್ಲಿ ಶೇಕಡಾ 11ರಷ್ಟು ಏರಿಕೆಯಾಗಿದೆ.
Karnataka News Live:ದೇಶದ ಪ್ರಗತಿಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ - ಶಾಸಕ ಲಕ್ಷ್ಮಣ ಸವದಿ
ಸಹಕಾರ ಚಳುವಳಿಗೆ ಸುಮಾರು 120 ವರ್ಷಗಳ ಇತಿಹಾಸವಿದ್ದು, ಈ ಸಹಕಾರಿ ಕ್ಷೇತ್ರ ದೇಶದ ಆರ್ಥಿಕ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಿದೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.
Karnataka News Live:ಜೈನ ಸಮಾಜಕ್ಕೆ ಹೆಚ್ಚಿನ ಆದ್ಯತೆ ನೀಡಿದ ಬಿಜೆಪಿ ಸರ್ಕಾರ - ಸಂಸದ ಜಗದೀಶ ಶೆಟ್ಟರ್
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಜೈನ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿತ್ತು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಅವುಗಳನ್ನು ತಡೆ ಹಿಡಿದು, ಜೈನ ಸಮಾಜಕ್ಕೆ ಅನ್ಯಾಯ ಮಾಡಿದೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
Karnataka News Live:ಯೋಜನೆಗಳನ್ನು ನೀಡುವ ಸರ್ಕಾರ ರೈತರ ಬಗ್ಗೆಯೂ ಯೋಚಿಸಬೇಕು - ಬಸವರಾಜ ಹೊರಟ್ಟಿ
ಜನರಿಗೆ ಅನುಕೂಲ ಆಗುವಂತಹ ಯೋಜನೆ ನೀಡುವ ಸರ್ಕಾರ ರೈತರ ಬಗ್ಗೆಯೂ ಯೋಚಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಬಸವರಾಜ ಹೊರಟ್ಟಿ ತಿಳಿಸಿದರು.
Karnataka News Live:ಅಹಾರ ಅರಸಿ ಗುಂಡಿಗೆ ಬಿದ್ದ ಹುಲಿ, ಪಕ್ಕದಲ್ಲೇ ನಾಯಿ ಇದ್ದರೂ ತಿನ್ನದೇ ರಕ್ಷಣೆಗೆ ಕೂಗಿದ ಮೃಗ
ಹುಲಿ ಆಹಾರ ಹುಡುಕಿ ಬಂದಾಗ ನಾಯಿ ಕಣ್ಣಿಗೆ ಬಿದ್ದಿದೆ. ಇನ್ನೇನು ನಾಯಿಯನ್ನು ಹಿಡಿಯಬೇಕು ಎನ್ನುವಷ್ಟರಲ್ಲಿ ಎರಡೂ ಪ್ರಾಣಿಗಳು ಗುಂಡಿಗೆ ಬಿದ್ದಿದೆ. ಗುಂಡಿಗೆ ಬಿದ್ದ ಬೆನ್ನಲ್ಲೇ ಪಕ್ಕದಲ್ಲೇ ನಾಯಿ ಇದ್ದರೂ ಹುಲಿ ತಿಂದಿಲ್ಲ. ಬದಲು ರಕ್ಷಣೆಗಾಗಿ ನಾಯಿ ಹಾಗೂ ಹುಲಿ ಕೂಗಿಕೊಂಡ ಘಟನೆ ನಡೆದಿದೆ.
Karnataka News Live:ಗೌತಮ್ ಅದಾನಿ ಸ್ಯಾಲರಿ ಎಷ್ಟು? ತನ್ನ ಕಂಪನಿಯ ಉದ್ಯೋಗಿಗಿಂತ ಮಾಲೀಕನ ವೇತನ ಕಡಿಮೆ
ಅದಾನಿ ಗ್ರೂಪ್ ಮಾಲೀಕ ಗೌತಮ್ ಅದಾನಿ ಭಾರತದ 2ನೇ ಶ್ರೀಮಂತ ವ್ಯಕ್ತಿ. ಆದರೆ ಗೌತಮ್ ಅದಾನಿ ಸ್ಯಾಲರಿ ಅಚ್ಚರಿಗೆ ಕಾರಣವಾಗಿದೆ. ಅದಾನಿ ಗ್ರೂಪ್ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಇಒ ಸೇರಿದಂತೆ ಇತರ ಪ್ರಮುಖ ಅಧಿಕಾರಿಗಳ ವೇತನಕ್ಕಿಂತ ಗೌತಮ್ ಅದಾನಿ ವೇತನ ಕಡಿಮೆ. ಗೌತಮ್ ಅದಾನಿ ಸ್ಯಾಲರಿ ಎಷ್ಟು?
Karnataka News Live:ಮಣಿಪುರದಲ್ಲಿ ಮತ್ತೆ ಹಿಂಸಾಚಾರ - ಕರ್ಫ್ಯೂ, ಇಂಟರ್‌ನೆಟ್ ಬಂದ್, ಪಿಎಂ ವಿರುದ್ಧ ಪ್ರಿಯಾಂಕ ಕಿಡಿ
ಮಣಿಪುರದಲ್ಲಿ ಅರಾಂಬಾಯಿ ತೆಂಗೋಲ್ ಸಂಘಟನೆಯ ಪ್ರಮುಖ ನಾಯಕನ ಬಂಧನದ ನಂತರ ಹಿಂಸಾಚಾರ ಭುಗಿಲೆದ್ದಿದೆ. ಕರ್ಫ್ಯೂ ಜಾರಿ ಮತ್ತು ಇಂಟರ್ನೆಟ್ ಸ್ಥಗಿತಗೊಂಡಿದ್ದು, ಪ್ರತಿಭಟನೆಗಳು ಹಿಂಸಾತ್ಮಕವಾಗಿ ತಿರುಗಿವೆ. ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
Karnataka News Live:ಬಿಗ್ ಬಾಸ್ ಖ್ಯಾತಿ ಸನಾ ಆರೋಗ್ಯದಲ್ಲಿ ದಿಢೀರ್ ಏರುಪೇರು, ಆಸ್ಪತ್ರೆ ದಾಖಲು
ಬಿಗ್‌ಬಾಸ್ ಖ್ಯಾತಿ ಸನಾ ಮಕ್ಬುಲ್ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿದ್ದರೆ. ಸನಾ ಆತ್ಮೀಯ ಸ್ನೇಹಿತೆ ಸನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಬಹಿರಂಗಪಡಿಸಿದ್ದಾರೆ. ಈ ಮಾಹಿತಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳು ಶೀಘ್ರ ಚೇತರಿಕೆಗೆ ಪಾರ್ಥಿಸಿದ್ದಾರೆ.
Karnataka News Live:ಕಾವೇರಿ ಆರತಿಗೆ 100 ಕೋಟಿ ಖರ್ಚು ನಿರರ್ಥಕ - ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಕಾವೇರಿ ಆರತಿಗೆ ರಾಜ್ಯಸರ್ಕಾರ 100 ಕೋಟಿ ರು. ಖರ್ಚು ಮಾಡುವುದಕ್ಕೆ ನನ್ನ ವಿರೋಧವಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
Karnataka News Live:Chamarajanagar - ಬಂಡೀಪುರದಲ್ಲಿ ಸಿದ್ದವಾಯ್ತು ಟೈಗರ್ ರಿಸರ್ಚ್ ಮಾನಿಟರಿಂಗ್ ಸೆಲ್!
ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳನ್ನ ಹೊಂದಿರುವ ಬಂಡೀಪುರದ ಪ್ರಾಕೃತಿಕ ಸೌಂಧರ್ಯಕ್ಕೆ ಮನ ಸೋಲದವರೇ ಇಲ್ಲ.
Karnataka News Live:ಮಳೆಯಿಂದ ಹಾನಿ - ಚಿಕ್ಕಮಗಳೂರಿಗೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ
ಕಳೆದ ಪೂರ್ವ ಮುಂಗಾರಿನಲ್ಲಿ ಬಿದ್ದ ಭಾರೀ ಮಳೆಗೆ ಜಿಲ್ಲೆಯಲ್ಲಿ ಹಾನಿಯಾಗಿರುವ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸೀತಾಳಯ್ಯನಗಿರಿ, ಬಾಬಾಬುಡನ್‌ಗಿರಿ ಮಾಲ್ ಸೇರಿದಂತೆ ಗಿರಿ ಪ್ರದೇಶಕ್ಕೆ ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ ರಸ್ತೆಗಳನ್ನು ಪರಿಶೀಲಿಸಿದರು.
Karnataka News Live:ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯಸರ್ಕಾರ ಅಸಹಕಾರ - ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ರಾಜ್ಯದಲ್ಲಿ ಕೈಗಾರಿಕೆಗಳು ಹಾಗೂ ದೊಡ್ಡ ದೊಡ್ಡ ಕಾರ್ಖಾನೆಗಳನ್ನು ತರಬೇಕೆಂಬ ನನ್ನ ಆಶಯಕ್ಕೆ ರಾಜ್ಯಸರ್ಕಾರ ಅಸಹಕಾರ ತೋರುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
Karnataka News Live:ಭಾರತ-ಇಂಗ್ಲೆಂಡ್ ಟೆಸ್ಟ್ - ಮೊದಲ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ ಪ್ರಕಟ!
Karnataka News Live:ಮಂಗಳೂರು ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಿದ ಕೇಂದ್ರ ಸರ್ಕಾರ
ಮಂಗಳೂರಿಲ್ಲಿ ಇತ್ತೀಚೆಗೆ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಕೇಂದ್ರ ಸರ್ಕಾರ ಎನ್ಐಎ ತನಿಖೆಗೆ ಒಪ್ಪಿಸಿದೆ. ಈ ಮೂಲಕ ಹಿಂದೂ ಸಂಘಟನೆಗಳು, ಬಿಜೆಪಿ ನಾಯಕರ ಹೋರಾಟಕ್ಕೆ ಫಲ ಸಿಕ್ಕಿದೆ.