ನವದೆಹಲಿಯಲ್ಲಿ ಪ್ರಧಾನಿ ನಿವಾಸದ ಎದುರು ಹಲವು ಬಾರಿ ಪ್ರಯಾಣ ಮಾಡಿದ್ದೇನೆ. ಅಲ್ಲಿ ಯಾವುದೇ ರಸ್ತೆ ಗುಂಡಿಗಳು ನಮಗೆ ಕಾಣಲಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಸಂಸದ ಡಾ.ಸಿ.ಎನ್.ಮಂಜುನಾಥ್ ಟಾಂಗ್ ನೀಡಿದರು.
- Home
- News
- State
- karnataka news live: ಪ್ರಧಾನಿ ನಿವಾಸದ ಎದುರು ನಾವೆಂದೂ ಗುಂಡಿಗಳನ್ನು ನೋಡಿಲ್ಲ - ಡಿಕೆಶಿಗೆ ಸಂಸದ ಡಾ.ಮಂಜುನಾಥ್ ಟಾಂಗ್
karnataka news live: ಪ್ರಧಾನಿ ನಿವಾಸದ ಎದುರು ನಾವೆಂದೂ ಗುಂಡಿಗಳನ್ನು ನೋಡಿಲ್ಲ - ಡಿಕೆಶಿಗೆ ಸಂಸದ ಡಾ.ಮಂಜುನಾಥ್ ಟಾಂಗ್

ಮಂಗಳೂರು/ನವದೆಹಲಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಬುರುಡೆ ಟೀಂ ತಾನು ಸುಪ್ರೀಂಕೋರ್ಟ್ನಲ್ಲಿ ಭೀಮಾರಿ ಹಾಕಿಸಿಕೊಂಡಿದ್ದ ವಿಚಾರವನ್ನು ಮುಚ್ಚಿಟ್ಟು ಸರ್ಕಾರವನ್ನು ಏಮಾರಿಸಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸುಪ್ರೀಂಕೋರ್ಡ್ನಲ್ಲಿ ತಮಗಾಗಿದ್ದ ಮುಖಭಂಗ ಮುಚ್ಚಿಟ್ಟು, ಈ ಟೀಂ ದೂರು ಕೊಟ್ಟಿತ್ತು. ಈ ದೂರು ಆಧರಿಸಿ, ಸರ್ಕಾರ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. ದೂರುದಾರರ ಹೇಳಿಕೆ ಆಧರಿಸಿ, ಧರ್ಮಸ್ಥಳ ಗ್ರಾಮದಲ್ಲಿ ಉತ್ಪನನ ಕೂಡ ನಡೆಸಿದೆ. ಬುರುಡೆ ಪ್ರಕರಣದ ಎಫ್ಐಆರ್ ದಾಖಲಿಸುವುದಕ್ಕೂ ಮೊದಲೇ ಸುಪ್ರೀಂಕೋರ್ಟ್ಗೆ ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಧರ್ಮಸ್ಥಳದಲ್ಲಿ ಹಲವು ಶವಗ ಳನ್ನು ಅಕ್ರಮವಾಗಿ ಹೂಳಲಾಗಿದೆ ಎಂಬ ವಿಚಾರದ ಕುರಿತು ಸುಪ್ರೀಂಕೋರ್ಟ್ಗೆ ಸಾರ್ವ ಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿತ್ತು. ಸುಪ್ರೀಂಕೋರ್ಟ್ ವಕೀಲ ಕೆ.ವಿ. ಧನಂಜಯ್ ಅವರು ಬುರುಡೆ ಟೀಂ ಪರವಾಗಿ ಅರ್ಜಿ ಸಲ್ಲಿಸಿ, ವಾದ ಮಂಡಿಸಿದ್ದರು. ಮೇ 5 ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಅರ್ಜಿಯನ್ನು ವಜಾಗೊಳಿಸಿತ್ತು. ಇದು ನಿಜವಾದ ಅರ್ಥದಲ್ಲಿ 'ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್' ಅಲ್ಲ, ಬದಲಾಗಿ 'ಪೈಸಾ ಇಂಟರೆಸ್ಟ್ ಲಿಟಿಗೇಶನ್' ಎಂದು ಭೀಮಾರಿ ಹಾಕಿತ್ತು ಎಂಬ ಸಂಗತಿ ಬಯಲಾಗಿದೆ.
karnataka news liveಪ್ರಧಾನಿ ನಿವಾಸದ ಎದುರು ನಾವೆಂದೂ ಗುಂಡಿಗಳನ್ನು ನೋಡಿಲ್ಲ - ಡಿಕೆಶಿಗೆ ಸಂಸದ ಡಾ.ಮಂಜುನಾಥ್ ಟಾಂಗ್
karnataka news liveಜಿಎಸ್‌ಟಿ ಲಾಭ ಜನತೆಗೆ ತಲುಪಿಸಿ - ವಿಶೇಷ ಜಾಗೃತಿ ಅಭಿಯಾನ ಆರಂಭಿಸಿದ ಸಂಸದ ಡಾ.ಸುಧಾಕರ್
ಜಿಎಸ್‌ಟಿ ಸುಧಾರಣೆಗಳು ಸೆ. 22 ರಿಂದ ಜಾರಿಯಾಗಿವೆ. ಈ ಸುಧಾರಣೆಗಳ ಲಾಭ ಜನರಿಗೆ ನೇರವಾಗಿ ತಲುಪುವಂತೆ ಮಾಡಲು ಸಂಸದ ಡಾ.ಕೆ.ಸುಧಾಕರ್, ಚಿಕ್ಕಬಳ್ಳಾಪುರ ನಗರದ ಅಂಗಡಿ, ಮುಂಗಟ್ಟು ಮತ್ತು ವಿಮಾ ಕಚೇರಿಗಳಲ್ಲಿ ವಿಶೇಷ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ.
karnataka news liveಭಾರತವನ್ನು 2047ಕ್ಕೆ ಶ್ರೇಷ್ಠ ಆರ್ಥಿಕ ಶಕ್ತಿ ಮಾಡೋಣ - ಸಂಸದ ಬಸವರಾಜ ಬೊಮ್ಮಾಯಿ
ಉಪಾಧ್ಯಾಯ ಒಬ್ಬ ಮಾನವತಾವಾದಿ, ದೇಶದ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತುವ ಮೂಲಕ ಅವರ ಅಂತ್ಯೋದಯದ ವಿಚಾರಗಳನ್ನು ಕಾರ್ಯರೂಪಕ್ಕೆ ತಂದಿರುವ ಶ್ರೇಯಸ್ಸು ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
karnataka news liveಜಾತಿಗಣತಿ ಮಾಡುವುದಕ್ಕೆ ರಾಜ್ಯ ಸರ್ಕಾರಕ್ಕೆ ಅಧಿಕಾರವೇ ಇಲ್ಲ - ಶಾಸಕ ಯತ್ನಾಳ
ರಾಜ್ಯ ಸರ್ಕಾರದ ಜಾತಿಗಣತಿಗೆ ನಮ್ಮ ವಿರೋಧವಿದೆ. ಸರ್ಕಾರ ಇನ್ನಾದರೂ ಜಾತಿಗಣತಿ ಹಿಂಪಡೆಯಲಿ ಎಂದು ಒತ್ತಾಯಿಸಿದರು. ಲಿಂಗಾಯತ ಧರ್ಮ ಎನ್ನುವುದು ಅನುಮೋದನೆಯೇ ಆಗಿಲ್ಲ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪಿಸಿದರು.
karnataka news liveಮೊಬೈಲ್‌ಗೆ ಅಂಟಿಕೊಂಡು ಸಂಬಂಧಗಳ ಕೊಂಡಿಗಳು ಕಳಚುತ್ತಿವೆ - ನಿರ್ದೇಶಕ ಟಿ.ಎಸ್.ನಾಗಾಭರಣ
ಸಂಬಂಧಗಳನ್ನು ಗಟ್ಟಿಗೊಳಿಸಲು ಹಬ್ಬಗಳ ಆಚರಣೆ ಮಾಡಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಮೊಬೈಲ್‌ಗೆ ಅಂಟಿಕೊಂಡಿದ್ದರಿಂದ ಸಂಬಂಧಗಳ ಕೊಂಡಿಗಳು ಕಳಚಿಕೊಳ್ಳುತ್ತಿವೆ ಎಂದು ಹಿರಿಯ ನಟ ಹಾಗೂ ನಿರ್ದೇಶಕ ಟಿ.ಎಸ್.ನಾಗಾಭರಣ ಬೇಸರ ವ್ಯಕ್ತಪಡಿಸಿದರು.
karnataka news liveಬೆಂಗಳೂರು ರಸ್ತೆ ಗುಂಡಿ ವಿವಾದ, ಬಿಜೆಪಿ ಅವಧಿಯಲ್ಲಿ ಲಕ್ಷಗಟ್ಟಲೇ ಗುಂಡಿ ಇತ್ತು - ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರಿನ ರಸ್ತೆ ಗುಂಡಿ ಸಮಸ್ಯೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಪ್ರತಿಭಟಿಸಿ ಗುಂಡಿ ಮುಚ್ಚಿದರೆ, ಸಚಿವ ರಾಮಲಿಂಗಾರೆಡ್ಡಿ ಹಿಂದಿನ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಿ, ತಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
karnataka news liveಕಾವೇರಿ ಕನ್ನಡಿಗರ ಭಾಗ್ಯ ದೇವತೆ, ರೈತರ ಜೀವನಾಡಿ.. ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಡಿಕೆಶಿ ಹೇಳಿದ್ದೇನು?
ಇದೊಂದು ಐತಿಹಾಸಿಕ ಕಾರ್ಯಕ್ರಮ. ಕಾವೇರಿ ಆರತಿಯನ್ನು ಧಾರ್ಮಿಕ ಕಾರ್ಯಕ್ರಮ ಎಂದು ರೂಪಿಸಲಿಲ್ಲ. ಮನುಷ್ಯನಿಗೆ ಸೂರ್ಯ, ಚಂದ್ರ, ಗಾಳಿ, ನೀರು ಇಲ್ಲದೇ ಬದುಕಿಲ್ಲ ಎಂದು ಕಾವೇರಿ ಆರತಿಯ ವೇದಿಕೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
karnataka news liveಬಿಜೆಪಿ ಅವಧಿಯಲ್ಲಿ 24 ದೇವಾಲಯ ಸೇವಾ ಶುಲ್ಕ ಪರಿಷ್ಕರಣೆ - ಸಚಿವ ರಾಮಲಿಂಗಾರೆಡ್ಡಿ
2019ರಿಂದ 2023ರವರೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 24 ದೇವಸ್ಥಾನಗಳ ಸೇವಾ ಶುಲ್ಕ ಪರಿಷ್ಕರಿಸಲಾಗಿತ್ತು. ಈಗ ಬಿಜೆಪಿ ನಾಯಕರು ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ಧಾರ್ಮಿಕ ದತ್ತಿ ಹಾಗೂ ಸಾರಿಗೆ ಸಚಿವ ಬಿ.ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
karnataka news liveಅಕ್ಟೋಬರ್‌ನಲ್ಲಿ ಬ್ಯಾಂಕ್ ನೌಕರರಿಗೆ ರಜೆಯೋ ರಜೆ - ದಸರಾ, ದೀಪಾವಳಿ ಸೇರಿ 21 ದಿನ ಬ್ಯಾಂಕ್ ಕ್ಲೋಸ್!
October 2025 Bank Holidays: 11 Days Holiday in Karnataka; Full List ಅಕ್ಟೋಬರ್ 2025 ಹಬ್ಬಗಳ ತಿಂಗಳಾಗಿದ್ದು, ದಸರಾ ಮತ್ತು ದೀಪಾವಳಿಯಂತಹ ಹಬ್ಬಗಳಿಂದಾಗಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆಗಳಿವೆ.
karnataka news liveಆರೋಗ್ಯ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಮಹತ್ವದ ಘೋಷಣೆ, ದಿನೇಶ್ ಗುಂಡೂರಾವ್ ಪತ್ರಿಕಾಗೋಷ್ಠಿ
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಗುರಿ ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ, ತಾಲೂಕು ಆಸ್ಪತ್ರೆಗಳಲ್ಲಿ 24/7 ಸೇವೆ, ತಜ್ಞ ವೈದ್ಯರ ನೇಮಕಾತಿ, ಗರ್ಭಿಣಿಯರಿಗೆ ವಿಶೇಷ ಆರೈಕೆ ಒದಗಿಸುವಂತಹ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ.
karnataka news liveರಾಜ್ಯದ ಜನರ ಮೇಲೆ ಮತ್ತೊಂದು ಸೆಸ್ ಭಾರ; ಸಿನಿಮಾ ಟಿಕೆಟ್, ಟಿವಿ ಚಾನೆಲ್‌ಗಳ ಮೇಲೆ ಶೇ. 2ರಷ್ಟು ಸೆಸ್
Karnataka Govt Proposes New 2% Cess on Cinema Tickets and TV Channels ಕರ್ನಾಟಕ ಸರ್ಕಾರವು ಚಲನಚಿತ್ರ ಕಾರ್ಮಿಕರ ಕಲ್ಯಾಣ ನಿಧಿಗಾಗಿ ಸಿನಿಮಾ ಟಿಕೆಟ್‌ಗಳು ಮತ್ತು ಟಿವಿ ಚಾನೆಲ್‌ಗಳ ಮೇಲೆ ಶೇ. 2ರಷ್ಟು ಸೆಸ್ ವಿಧಿಸಲು ಪ್ರಸ್ತಾಪಿಸಿದೆ.
karnataka news liveಕ್ಲೀನ್ ಗರ್ಲ್ ಮೇಕಪ್ ಟ್ರೆಂಡ್ - ಸಹಜ ಚೆಲುವೇ ಬೆಸ್ಟ್ ಎನ್ನುವ ಸಾಯಿ ಪಲ್ಲವಿ, ದೀಪಿಕಾ ಪಡುಕೋಣೆ
ಮೇಕಪ್ ಮಾಡ್ಕೊಳ್ಬೇಕು, ಆದರೆ ಮೇಕಪ್ ಮಾಡಿದ ಹಾಗಿರಬಾರದು ಅನ್ನುವುದು ಈ ಹೊಸ ಟ್ರೆಂಡಿನ ಧ್ಯೇಯ ವಾಕ್ಯ. ಇದಕ್ಕೆ ಕಾರಣ ಕ್ಲೀನ್ ಗರ್ಲ್ ಮೇಕಪ್ ಟ್ರೆಂಡ್. ಈ ಟ್ರೆಂಡಿಗೆ ಬ್ರಾಂಡ್ ಅಂಬಾಸಿಡರ್ ಅಂತ ಫ್ಯಾಶನ್ ಪ್ರಿಯರು ಜೋಕ್ ಮಾಡುತ್ತಿದ್ದಾರೆ.
karnataka news liveತಾಂತ್ರಿಕ ದೋಷ ಮಂಗಳೂರಿನಿಂದ ದುಬೈಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು!
ಮಂಗಳೂರಿನಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ತಾಂತ್ರಿಕ ದೋಷದ ಕಾರಣದಿಂದ ಕೊನೆಯ ಕ್ಷಣದಲ್ಲಿ ರದ್ದಾಗಿದೆ. ದಿನವಿಡೀ ಯಾವುದೇ ಸೌಲಭ್ಯವಿಲ್ಲದೆ ಕಾದು ಕುಳಿತ ನೂರಾರು ಪ್ರಯಾಣಿಕರು, ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
karnataka news liveKipi Keerthi ಖಾಸಗಿ ವಿಡಿಯೋ ಲೀಕ್ - ಡ್ರಿಂಕ್ಸ್ನಲ್ಲಿ ಏನೋ ಮಿಕ್ಸ್ ಮಾಡಿ ಕೊಟ್ರು ಎಂದು ಘಟನೆ ನೆನೆದು ಕಣ್ಣೀರು
'ಹೇಳಿ ಜನರೇ' ಮೂಲಕ ಖ್ಯಾತರಾದ ಸೋಷಿಯಲ್ ಮೀಡಿಯಾ ತಾರೆ ಕಿಪ್ಪಿ ಕೀರ್ತಿ, ತಮ್ಮ ಗೆಳೆಯ ಮುತ್ತು ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತಂಪು ಪಾನೀಯದಲ್ಲಿ ಮತ್ತೇನನ್ನೋ ಬೆರೆಸಿ ಖಾಸಗಿ ಫೋಟೋ ತೆಗೆದು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
karnataka news liveಭಾರತದ ಪ್ರಭಾವಿ ಸೆಲೆಬ್ರಿಟಿ ಬ್ರಾಂಡ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತೆ ಟಾಪ್; ರಶ್ಮಿಕಾಗೆ ಎಷ್ಟನೇ ಸ್ಥಾನ?
ವಿರಾಟ್ ಕೊಹ್ಲಿ ಮೂರನೇ ಬಾರಿ ನಿರಂತರವಾಗಿ ಭಾರತದಲ್ಲಿ ಅತ್ಯಂತ ಶಕ್ತಿಯುತ ಸೆಲೆಬ್ರಿಟಿ ಬ್ರಾಂಡ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ತನ್ನ ಪಥದಲ್ಲಿ ಬಾಲಿವುಡ್‌ನ ತಾರೆಗಳಾದ ಶಾರುಖ್ ಖಾನ್, ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಅವರನ್ನು ಹಿಂದಿಕ್ಕಿದ್ದಾರೆ.
karnataka news liveಸಮಾಜದಲ್ಲಿ ಎಲ್ಲರೂ ಸಮಾನರು, ಜೀವನವೇ 'ಕುಂಟೆಬಿಲ್ಲೆ' - ನಿರ್ದೇಶಕ ಸಿದ್ದೇಗೌಡ
ನಾನು ಸಿನಿಮಾ ರಂಗಕ್ಕೆ ಬಂದು 30 ವರ್ಷಗಳಾಗಿವೆ. ಆರಂಭದಲ್ಲಿ ಕಿರುತೆರೆಯಲ್ಲಿದ್ದೆ. ಆ ಬಳಿಕ ಹಿರಿತೆರೆಗೆ ಬಂದೆ. ಹಳ್ಳಿ ಸೊಗಡಿನ ಒಂದೊಳ್ಳೆ ಕಥೆ ಹೇಳುವ ಉದ್ದೇಶದಿಂದ ಈ ಸಿನಿಮಾ ಮಾಡಿದ್ದೇನೆ ಎಂದರು ನಿರ್ದೇಶಕ ಸಿದ್ದೇಗೌಡ.
karnataka news liveಆನ್ಲೈನ್ನಲ್ಲಿಯೇ ಜನನ ಪ್ರಮಾಣ ಪತ್ರ ಪಡೆಯುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾಹಿತಿ
ಜನನ ಪ್ರಮಾಣ ಪತ್ರವು ಪ್ರತಿಯೊಬ್ಬರಿಗೂ ಅತ್ಯಗತ್ಯ ದಾಖಲೆಯಾಗಿದ್ದು, ಇದನ್ನು ಕರ್ನಾಟಕದಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಪಡೆಯಬಹುದು. ಸೇವಾ ಸಿಂಧು ಪೋರ್ಟಲ್ ಬಳಸಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹಂತ-ಹಂತದ ಪ್ರಕ್ರಿಯೆ, ವಿಳಂಬವಾದರೆ ಅನುಸರಿಸಬೇಕಾದ ನಿಯಮ ವಿವರಿಸಲಾಗಿದೆ.
karnataka news liveಶಿವಮೊಗ್ಗದಲ್ಲಿ ಯಶಸ್ವಿಯಾಗಿ ಅಖಿಲ ಭಾರತ ತೆರಿಗೆ ವಿನಾಯಿತಿ ಸಮ್ಮೇಳನ - CBDT ಹಿರಿಯ ಅಧಿಕಾರಿಗಳ ಭಾಗಿ
All India Income Tax Exemptions Conference Held in Shivamogga ಆದಾಯ ತೆರಿಗೆ ಇಲಾಖೆಯ ವಿನಾಯಿತಿ ವಿಭಾಗವು ಶಿವಮೊಗ್ಗದಲ್ಲಿ ಅಖಿಲ ಭಾರತ ವಿನಾಯಿತಿಗಳ ಸಮ್ಮೇಳನ ಮತ್ತು ಪಾಲುದಾರರ ಸಮಾಲೋಚನೆಯನ್ನು ಯಶಸ್ವಿಯಾಗಿ ಆಯೋಜಿಸಿತು.
karnataka news liveAmruthadhaare - ಅಪ್ಪ- ಮಗ ಒಂದಾಗುವ ಹೊತ್ತಲ್ಲೇ ಆಕಾಶ್ ಕಿಡ್ನ್ಯಾಪ್? ಮುಂದೇನಾಗತ್ತೆ?
karnataka news liveರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ, ಗಂಟೆಗೆ 30ರಿಂದ 40ಕಿ.ಮೀ ವೇಗದಲ್ಲಿ ಗಾಳಿ, ಹವಾಮಾನ ಇಲಾಖೆಯಿಂದ ಯೆಲ್ಲೋ ಅಲರ್ಟ್
ರಾಜ್ಯದಲ್ಲಿ ಮತ್ತೆ ಮಳೆ ಚುರುಕುಗೊಂಡಿದ್ದು, ಮುಂದಿನ ಎರಡು ದಿನಗಳ ಕಾಲ ಉತ್ತರ, ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ, ಹವಾಮಾನ ಇಲಾಖೆಯು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.