06:46 PM (IST) Aug 03

India latest news live 3rd Agust 2025 7 ತಿಂಗಳ ಗರ್ಭಿಣಿಯ ಕತೆ ಮುಗಿಸಿದ ಪತಿ - ಜೈಲಿಂದ ಹೊರಬಂದು ರೇ*ಪ್ ಸಂತ್ರಸ್ತೆಗೆ ಗುಂಡಿಕ್ಕಿದ ಆರೋಪಿ

ಉತ್ತರ ಪ್ರದೇಶದಲ್ಲಿ ಪತಿಯೋರ್ವ ತನ್ನ ಗರ್ಭಿಣಿ ಪತ್ನಿಯನ್ನೇ ಅಮಾನುಷವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ಹಾಗೆಯೇ ಮತ್ತೊಂದು ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದ ಅತ್ಯಾ*ಚಾರ ಆರೋಪಿಯೋರ್ವ ಸಂತ್ರಸ್ತೆಯ ಎದೆಗೆ ಗುಂಡಿಕ್ಕಿದಂತಹ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

Read Full Story
05:03 PM (IST) Aug 03

India latest news live 3rd Agust 2025 ಪತ್ನಿಗೆ ಅನೈತಿಕ ಸಂಬಂಧ - ಇಬ್ಬರು ಪುಟ್ಟ ಮಕ್ಕಳಿಗೆ ವಿಷವುಣಿಸಿ ತಾನು ಸಾವಿಗೆ ಶರಣಾದ ಶಿಕ್ಷಕ

ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ನೊಂದ ಪತಿಯೊಬ್ಬ ತನ್ನ ಇಬ್ಬರು ಪುಟ್ಟ ಮಕ್ಕಳಿಗೆ ವಿಷವಿಕ್ಕಿ ಕೊಂದು ಬಳಿಕ ಡೆತ್‌ನೋಟ್ ಬರೆದಿಟ್ಟು ತಾನು ಸಾವಿಗೆ ಶರಣಾಗಿದ್ದಾನೆ. ಗುಜರಾತ್‌ನ ಸೂರತ್ ನಗರದ ದಿಂಡೋಲಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

Read Full Story
02:56 PM (IST) Aug 03

India latest news live 3rd Agust 2025 ಹೆಂಡ್ತಿ ಜೊತೆ ಮಾತಾಡಿದ್ದಕ್ಕೆ ಗುಜುರಿ ವ್ಯಾಪಾರಿಯ ಕತೆ ಮುಗಿಸಿದ ಲೀವ್ ಇನ್ ಪಾರ್ಟನರ್‌

ಗುರುಗ್ರಾಮದಲ್ಲಿ ಹೆಂಡತಿ ಜೊತೆ ಮಾತನಾಡಿದ್ದಕ್ಕೆ ಲೀವ್ ಇನ್ ಪಾರ್ಟನರ್ ಚಾಕುವಿನಿಂದ ಇರಿದು ಗುಜರಿ ವ್ಯಾಪಾರಿಯನ್ನು ಕೊಲೆ ಮಾಡಿದ್ದಾಳೆ. ಈ ಘಟನೆ ಡಿಎಲ್‌ಎಫ್‌ ಫೇಸ್-3 ಪ್ರದೇಶದಲ್ಲಿ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Read Full Story
01:24 PM (IST) Aug 03

India latest news live 3rd Agust 2025 ಮೈಮೇಲೆ ಹಾವು ಎಸೆದ ಹಾವಾಡಿಗ - ಜೀವ ಭಯದಿಂದ ಓಡಿದ ಮಹಿಳಾ ಪೊಲೀಸ್

ಕಾನ್ಪುರದಲ್ಲಿ ಕುಡಿದ ಮತ್ತಿನಲ್ಲಿ ಹಾವಾಡಿಗನೊಬ್ಬ ಮಹಿಳಾ ಪೊಲೀಸ್ ಮೇಲೆ ಹಾವು ಎಸೆದ ಘಟನೆ ನಡೆದಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story
01:12 PM (IST) Aug 03

India latest news live 3rd Agust 2025 ನಾಯಿ ತಿಂದುಳಿದ ಆಹಾರ ಮಕ್ಕಳಿಗೆ ತಿನ್ನಿಸಿದ ಸರ್ಕಾರಿ ಶಾಲೆ! 78 ವಿದ್ಯಾರ್ಥಿಗಳಿಗೆ ರೇಬಿಸ್ ವಿರೋಧಿ ಚುಚ್ಚುಮದ್ದು!

ಛತ್ತೀಸ್‌ಗಢದ ಶಾಲೆಯೊಂದರಲ್ಲಿ ಮಕ್ಕಳಿಗೆ ನಾಯಿ ತಿಂದು ಉಳಿದ ಆಹಾರವನ್ನು ಮಧ್ಯಾಹ್ನದ ಊಟದಲ್ಲಿ ಬಡಿಸಿದ ಆರೋಪ. 78 ವಿದ್ಯಾರ್ಥಿಗಳಿಗೆ ರೇಬೀಸ್ ಚುಚ್ಚುಮದ್ದು ನೀಡಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ.
Read Full Story
10:33 AM (IST) Aug 03

India latest news live 3rd Agust 2025 ಚರಂಡಿಯ ಕಬ್ಬಿಣದ ಮುಚ್ಚಳವನ್ನು ಬಿಡದ ಕಳ್ಳರು - ಪೆಟ್ರೋಲ್ ತುಂಬಿ ಹಣ ಕೊಡದೇ ಎಸ್ಕೇಪ್ ಆದ ಕಾರು ಚಾಲಕ

ಗಾಜಿಯಾಬಾದ್‌ನಲ್ಲಿ ಚರಂಡಿ ಮುಚ್ಚಳವನ್ನು ಕಳ್ಳರು ಕದ್ದಿದ್ದಾರೆ ಮತ್ತೊಂದೆಡೆ ಹತ್ರಾಸ್‌ನಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಹಣ ಕೊಡದೆ ಪರಾರಿಯಾದ ಚಾಲಕ ಪೆಟ್ರೋಲ್ ಪೈಪನ್ನೇ ಕಿತ್ತುಕೊಂಡು ಹೋಗಿರುವ ಘಟನೆಗಳು ನಡೆದಿವೆ. ಈ ಎರಡು ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.

Read Full Story
10:22 AM (IST) Aug 03

India latest news live 3rd Agust 2025 Mir Yar Baloch - ತೈಲ ಬಲೂಚಿಸ್ತಾನದಲ್ಲಿದೆ, ಪಾಕಿಸ್ತಾನ ಅಲ್ಲ; ಟ್ರಂಪ್‌ಗೆ ಮೀರ್ ಯಾರ್ ಬಲೂಚ್ ಖಡಕ್ ಎಚ್ಚರಿಕೆ!

ಬಲೂಚಿಸ್ತಾನದ ತೈಲ ಸಂಪನ್ಮೂಲಗಳ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಪಾಕಿಸ್ತಾನ ತಪ್ಪು ಮಾಹಿತಿ ನೀಡಿದೆ ಎಂದು ಬಲೂಚ್ ನಾಯಕ ಮೀರ್ ಯಾರ್ ಬಲೂಚ್ ಆರೋಪಿಸಿದ್ದಾರೆ. ಬಲೂಚಿಸ್ತಾನದ ನೆಲ ಮಾರಾಟಕ್ಕಿಲ್ಲ, ಸಂಪನ್ಮೂಲಗಳ ಶೋಷಣೆಗೆ ಅವಕಾಶವಿಲ್ಲ ಎಂದು ಎಚ್ಚರಿಸಿದ್ದಾರೆ. 

Read Full Story
09:01 AM (IST) Aug 03

India latest news live 3rd Agust 2025 No Helmet No Petrol ನಿಯಮವನ್ನೇ ಬ್ಯುಸಿನೆಸ್ ಮಾಡ್ಕೊಂಡ ಕಿಲಾಡಿ - ವೈರಲ್ ವೀಡಿಯೋ ನೋಡಿ

ಹೆಲ್ಮೆಟ್ ಇಲ್ಲದವರಿಗೆ ಪೆಟ್ರೋಲ್ ನೀಡದ ನಿಯಮ ಜಾರಿಯಲ್ಲಿದ್ದರೂ, ಜನರು ಹೆಲ್ಮೆಟ್ ಬಾಡಿಗೆ ಪಡೆದು ಪೆಟ್ರೋಲ್ ತುಂಬಿಸಿಕೊಳ್ಳುತ್ತಿದ್ದಾರೆ. ಈ ಹೊಸ ಉದ್ಯಮ ಇಂದೋರ್‌ನಲ್ಲಿ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. 

Read Full Story
08:16 AM (IST) Aug 03

India latest news live 3rd Agust 2025 Russia India Oil Trade - ಭಾರತ ರಷ್ಯಾದಿಂದ ತೈಲ ಖರೀದಿಸಿದರೆ ಅಮೆರಿಕ ಏಕೆ ವಿರೋಧಿಸುತ್ತೆ ಗೊತ್ತಾ? ಇಲ್ಲಿದೆ ನೋಡಿ ಕಾರಣ!

ರಷ್ಯಾದಿಂದ ಅಗ್ಗದ ತೈಲ ಖರೀದಿಸುತ್ತಿರುವ ಭಾರತದ ವಿರುದ್ಧ ಅಮೆರಿಕ ಆಕ್ಷೇಪ ವ್ಯಕ್ತಪಡಿಸಿದೆ. ಭಾರತ ತನ್ನ ಇಂಧನ ಅಗತ್ಯಗಳನ್ನು ಪೂರೈಸಲು ರಷ್ಯಾದ ಮೇಲೆ ಅವಲಂಬಿತವಾಗಿದೆ ಮತ್ತು ಬಾಹ್ಯ ಒತ್ತಡಗಳಿಗೆ ಮಣಿಯುವುದಿಲ್ಲ ಎಂದು ಹೇಳಿದೆ. ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿದರೆ ಏನಾಗುತ್ತೆ?

Read Full Story