ಮಧುಮೇಹ, ಹೈ ಬಿಪಿ, ಜೀರ್ಣ ಸಮಸ್ಯೆ ಎಲ್ಲವೂ ಹೆಚ್ಚಾಗಿರುವ ಈ ದಿನಗಳಲ್ಲಿ ಏನು ಮಾಡಿದ್ರೂ ಈ ಸಮಸ್ಯೆ ಹೋಗುತ್ತಿಲ್ಲವಾದರೆ ಈ ಜ್ಯೂಸ್ ಕುಡಿದು ನೋಡಿ ಎಂದಿದ್ದಾರೆ ಖ್ಯಾತ ವೈದ್ಯೆ. ಅವರು ಹೇಳಿದ್ದೇನು ಕೇಳಿ...
ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಯಲ್ಲಿಯೂ ಬಿಪಿ, ಶುಗರ್ ಇರುವ ಒಬ್ಬರಲ್ಲ ಒಬ್ಬರು ವ್ಯಕ್ತಿ ಇದ್ದೇ ಇರುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇವು ಬರಲು ಹಲವು ಕಾರಣಗಳನ್ನು ನೀಡಲಾಗುತ್ತದೆ. ನಮ್ಮ ದೇಹಕ್ಕೆ ಸಕ್ಕರೆಯ ಅಂಶ ಅಗತ್ಯವಿದ್ದದ್ದೇ. ಒಬ್ಬೊಬ್ಬರ ದೇಹದ ರಚನೆ ಒಂದೊಂದು ರೀತಿಯದ್ದಾಗಿರುವ ಕಾರಣ, ಪ್ರತಿಯೊಬ್ಬರ ದೇಹದಲ್ಲಿಯೂ ಇಂತಿಷ್ಟೇ ಸಕ್ಕರೆ ಅಂಶ ಇರಬೇಕು ಎಂದು ಹೇಳುವುದು ತಪ್ಪು ಎನ್ನುತ್ತದೆ ಹೋಮಿಯೋಪಥಿ ವೈದ್ಯಕೀಯ. ಆದರೆ, ಸಾಮಾನ್ಯವಾಗಿ ಶುಗರ್ ಲೆವೆಲ್ ಪ್ರತಿಯೊಬ್ಬರಲ್ಲಿಯೂ ಇಷ್ಟೇ ಇರಬೇಕು ಎನ್ನುತ್ತದೆ ಅಲೋಪಥಿ. ಅದೇನೇ ಆದರೂ, ಅತಿಯಾದರೆ ಅಮೃತವೂ ವಿಷ ಎನ್ನುವಂತೆ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಕ್ಕರೆ ಅಂಶ ಸೇರಿದರೆ ಅದು ಯಾವ ರೀತಿಯ ಗಂಭೀರ ಪರಿಣಾಮ ಬೀರುತ್ತದೆ ಎನ್ನುವುದು ಎಲ್ಲರಿಗೂ ತಿಳಿದೇ ಇದೆ ಹಿಂದೆಲ್ಲಾ ಒಂದಷ್ಟು ವಯಸ್ಸಾದ ಮೇಲೆ ಬರುತ್ತಿದ್ದ ಈ ಸಮಸ್ಯೆಗಖು, ಇತ್ತೀಚಿನ ದಿನಗಳಲ್ಲಿ ಚಿಕ್ಕಮಕ್ಕಳನ್ನೂ ಆವರಿಸಿಕೊಂಡು ಬಿಟ್ಟಿದೆ.
ಇದನ್ನೂ ಓದಿ: Sugar Level Control: ಶುಗರ್ ನಿಯಂತ್ರಣಕ್ಕೆ ಊಟದ ಬಳಿಕ ಎರಡೇ ನಿಮಿಷ ಹೀಗೆ ಮಾಡಿ, ಮ್ಯಾಜಿಕ್ ನೋಡಿ...
ಈ ಸಮಸ್ಯೆಗಳಿಗೆ ಆನುವಂಶೀಯತೆ ಕಾರಣ ಎನ್ನುವುದು ಒಂದೆಡೆಯಾದರೆ, ಇಂದಿನ ಆಹಾರ ಪದ್ಧತಿ, ಪರಿಸರ ಎಲ್ಲವೂ ಇದಕ್ಕೆ ಕೊಡುಗೆ ನೀಡುತ್ತಿವೆ. ದೈಹಿಕ ವ್ಯಾಯಾಮ ಇಲ್ಲದೇ ಇರುವುದು ಕೂಡ ಇದಕ್ಕೆ ದೊಡ್ಡ ಕಾರಣವಾಗಿದೆ. ಯಾರನ್ನು ಕೇಳಿದರೂ ಟೈಮ್ ಇಲ್ಲ ಎನ್ನುವ ಮಾತು. ಆದರೆ ಸಕ್ಕರೆಯ ಮಟ್ಟ ಹೆಚ್ಚಾದರೆ, ಹೈ ಬಿಪಿಯಾದರೆ ಕೊನೆಗೆ ಸಂಪೂರ್ಣವಾಗಿ ಹಾಸಿಗೆಯ ಮೇಲೆಯೇ ಇರಬೇಕಾದ ಪ್ರಸಂಗವನ್ನು ಹಲವರು ತಂದಿಟ್ಟುಕೊಂಡಿದ್ದಾರೆ. ಆದ್ದರಿಂದ ದೈಹಿಕ ವ್ಯಾಯಾಮ ಅತ್ಯಗತ್ಯ ಎಂದೇ ವೈದ್ಯರು ಹೇಳುತ್ತಾರೆ. ಮಧುಮೇಹ ಮತ್ತು ಬಿಪಿಗೆ ಸಂಬಂಧಿಸಿದಂತೆ ಹಲವು ಅಧ್ಯಯನಗಳು ನಡೆಯುತ್ತಲೇ ಇರುತ್ತವೆ. ಆದರೆ ಅದೇ ವೇಳೆ ಆಯುರ್ವೇದದಲ್ಲಿ ಕೆಲವೊಂದು ಗಿಡ ಮೂಲಿಕೆಗಳಿಂದಲೇ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎನ್ನುವುದೂ ಅಷ್ಟೇ ನಿಜ.
ಸೀಬೆ ಎಲೆ- ನೆಲ್ಲಿಕಾಯಿ ಜ್ಯೂಸ್: (Home Remedy for Bp, Sugar ect)
ಇದೀಗ ವೈದ್ಯೆಯಾಗಿರುವ ಡಾ.ಸೌಮ್ಯಾ ಅವರು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ತಿಳಿಸಿದ್ದಾರೆ. ಪೇರಲೆ (ಸೀಬೆ ಹಣ್ಣು) ಹಣ್ಣಿನ ಎಲೆಗಳು ಮತ್ತು ನೆಲ್ಲಿಕಾಯಿಯ ಜ್ಯೂಸ್ ಬಗ್ಗೆ ಅವರು ತಿಳಿಸಿದ್ದಾರೆ. ಇದು ಮಧುಮೇಹ (diabities), ಹೈ ಬಿಪಿ, ಅಧಿಕ ಯೂರಿಕ್ ಆಮ್ಲ, ಜೀರ್ಣಕಾರಿ ಸಮಸ್ಯೆಗಳಿಗೆ ಮತ್ತು ಕೊಬ್ಬಿನ ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ. ಇದನ್ನು ಹೇಗೆ ಸೇವನೆ ಮಾಡಬೇಕು ಎಂದು ತಿಳಿಸಿರುವ ವೈದ್ಯೆ ಆರೇಳು ಸೀಬೆ ಹಣ್ಣಿನ ಚಿಗುರೆಲೆಗಳು ಹಾಗೂ 3-4 ನೆಲ್ಲಿಕಾಯಿಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ ಅದರ ಜ್ಯೂಸ್ ಅನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾ ಬನ್ನಿ ಎಂದು ಅವರು ಹೇಳಿದ್ದಾರೆ. ಇನ್ಸುಲಿನ್, ಟ್ಯಾಬ್ಲೆಟ್ಸ್ ಏನು ತೆಗೆದುಕೊಂಡರೂ ಪ್ರಯೋಜನ ಆಗಿಲ್ಲ ಎಂದರೂ ಈ ಜ್ಯೂಸ್ ವರ್ಕ್ಔಟ್ ಆಗುತ್ತದೆ ಎನ್ನುವುದು ಅವರ ಮಾತು.
ಇದನ್ನೂ ಓದಿ: ಕಿಚನ್- ಬಾತ್ರೂಮ್ನಿಂದ ಈ 6 ವಸ್ತು ಬದಲಾದರೆ ಆರೋಗ್ಯ ಜಿಂಗಾಲಾಲಾ- ವೈದ್ಯರ ಮಾತು ಕೇಳಿ...
ಇತ್ತೀಚೆಗೆ ನಡೆದಿರುವ ಅಧ್ಯಯನ ಪ್ರಕಾರ, ಆಹಾರ ಸೇವನೆಯ ನಂತರ ಶುಗರ್ ಲೆವೆಲ್ ಹೆಚ್ಚುವುದನ್ನು ತಡೆಯುವುದಕ್ಕಾಗಿ ಕೊನೆಯ ಪಕ್ಷ ಊಟ ಮಾಡಿದ ನಂತರ ಎದ್ದು ನಡೆಯುವುದು ಅತ್ಯಗತ್ಯ ಎನ್ನಲಾಗಿದೆ. ಕನಿಷ್ಠ ಎರಡು ನಿಮಿಷಗಳಾದರೂ ವಾಕ್ ಮಾಡಿ. ಅದೂ ಸಾಧ್ಯವಿಲ್ಲದಿದ್ದರೆ, ಎರಡು ನಿಮಿಷ ಅಲ್ಲಿಯೇ ನಿಂತುಕೊಳ್ಳಿ. ಇದನ್ನು ಪ್ರತಿಬಾರಿಯೂ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದಿದೆ ಈ ಅಧ್ಯಯನ.
