- Home
- Life
- Health
- ನಾಟಿ ಮೊಟ್ಟೆ ಬೆಸ್ಟ್ ನಿಜನಾ? ಇದು ನಾನ್ವೆಜ್ಜಾ? ಇಂಜೆಕ್ಷನ್ ಹಾಕಿದ್ರೆ ತೊಂದ್ರೆನಾ? ಉತ್ತರ ಕೊಟ್ಟ ಖ್ಯಾತ ವೈದ್ಯ
ನಾಟಿ ಮೊಟ್ಟೆ ಬೆಸ್ಟ್ ನಿಜನಾ? ಇದು ನಾನ್ವೆಜ್ಜಾ? ಇಂಜೆಕ್ಷನ್ ಹಾಕಿದ್ರೆ ತೊಂದ್ರೆನಾ? ಉತ್ತರ ಕೊಟ್ಟ ಖ್ಯಾತ ವೈದ್ಯ
ಮೊಟ್ಟೆ ವೆಜ್ಜಾ, ನಾನ್ವೆಜ್ಜಾ? ಫಾರ್ಮ್ ಕೋಳಿ ಮೊಟ್ಟೆಯಲ್ಲಿ ಇಂಜೆಕ್ಷನ್ ಇರುತ್ತಾ? ಯಾವ ರೀತಿ ಮೊಟ್ಟೆ ತಿನ್ನಬೇಕು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಖ್ಯಾತ ವೈದ್ಯ ಡಾ.ಆಂಜನಪ್ಪ.

ಮೊಟ್ಟೆಯ ವಿಷಯ ಗುಟ್ಟು
ಮೊಟ್ಟೆಯ ವಿಷಯವಾಗಿ ಹಲವಾರು ವರ್ಷಗಳಿಂದ ಪರ-ವಿರೋಧ ನಿಲುವು ವ್ಯಕ್ತವಾಗುತ್ತಲೇ ಇದೆ. ಇದು ವೆಜ್ಜು ಎನ್ನುವವರೂ ಇದ್ದಾರೆ, ಅಷ್ಟೇ ಪ್ರಮಾಣದಲ್ಲಿ ಇದು ನಾನ್ವೆಜ್ಜು ಎನ್ನುವವರೂ ಇದ್ದಾರೆ. ವೆಜ್ ಎನ್ನಲು ಕೆಲವರು ತಮ್ಮದೇ ಆದ ಉದಾಹರಣೆ ಕೊಟ್ಟರೆ, ಇದಕ್ಕೆ ಕಾವು ಕೊಟ್ಟಾಗ ಮರಿ ಆಗುವ ಕಾರಣ, ಅದು ಕೂಡ ಕೋಳಿ, ಆದ್ದರಿಂದ ಅದು ನಾನ್ವೆಜ್ ಎನ್ನುವ ವಾದವೂ ಇದೆ.
ವೆಜ್ಜೊ, ನಾನ್ ವೆಜ್ಜೊ?
ಕೋಳಿ ಮೊದಲೋ, ಮೊಟ್ಟೆ ಮೊದಲೋ ಎನ್ನುವುದಕ್ಕಿಂತಲೂ ಮುಖ್ಯವಾಗಿ Veg and Non Veg ಗಲಾಟೆನೇ ಹೆಚ್ಚು. ಇದೇ ಕಾರಣಕ್ಕೆ ಸರ್ಕಾರ ಮಕ್ಕಳಿಗೆ ಮೊಟ್ಟೆ ನೀಡುವ ಘೋಷಣೆ ಮಾಡಿದಾಗ ಹಲವರು ತರಕಾರು ತೆಗೆದಿದ್ದರು. ಮತ್ತೆ ಕೆಲವರು ತರಕಾರು ತೆಗೆದವರ ವಿರುದ್ಧ ಕಿಡಿ ಕಾರಿದ್ದರು.
ನಾಟಿ ಕೋಳಿನೇ ಬೆಸ್ಟಾ?
ಅದೇ ಇನ್ನೊಂದೆಡೆ, ನಾಟಿ ಕೋಳಿಯ ಮೊಟ್ಟೆ ಬೆಸ್ಟ್ ಎನ್ನುವ ಮಾತಿದೆ. ಇದಕ್ಕೆ ಕಾರಣ, ಫಾರ್ಮ್ ಕೋಳಿಗಳು ಬೇಗ ದಪ್ಪ ಆಗಲಿ ಎನ್ನುವ ಕಾರಣಕ್ಕೆ ಇಂಜೆಕ್ಷನ್ ಕೊಡುತ್ತಾರೆ. ಇದು ಮೊಟ್ಟೆಯ ಮೇಲೆಯೂ ಪರಿಣಾಮ ಬೀರುತ್ತದೆ. ಆದ್ದರಿಂದ ಮೊಟ್ಟೆ ತಿಂದರೆ ಇಂಜೆಕ್ಷನ್ ಪರಿಣಾಮ ಇಲ್ಲಸಲ್ಲದ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.
ಮೊಟ್ಟೆ ಹೇಗೆ ತಿನ್ನಬೇಕು?
ಅದೇ ರೀತಿ ಮೊಟ್ಟೆ ತಿನ್ನುವವರು ಹೇಗೆ ತಿಂದರೆ ಬೆಸ್ಟ್ ಎಂದು ಪ್ರಶ್ನಿಸುತ್ತಾರೆ. ಕೆಲವರು ಬಿಳಿ ಭಾಗ ತಿನ್ನಿ ಎಂದರೆ, ಮತ್ತೆ ಕೆಲವರು ಹಳದಿ ಭಾಗ ಎನ್ನುತ್ತಾರೆ. ಹಾಗಿದ್ದರೆ ಹೇಗೆ ತಿನ್ನಬೇಕು? ಬೇಯಿಸಿಯೋ, ಹಸಿಯೋ, ಆಮ್ಲೇಟ್ ಮಾಡಿಯೋ, ಹಳದಿ-ಬಿಳಿ ಭಾಗವೋ ಎನ್ನುವ ಡೌಟ್ ಕೂಡ ಇದೆ.
ವಿವರಣೆ ನೀಡಿರುವ ವೈದ್ಯ
ಇದೀಗ ಈ ಎಲ್ಲಾ ವಿಷಯಗಳಿಗೆ ತಮ್ಮದೇ ಆದ ರೀತಿಯಲ್ಲಿ ವಿವರಣೆ ನೀಡಿದ್ದಾರೆ ಖ್ಯಾತ ವೈದ್ಯರಾಗಿರುವ ಡಾ.ಆಂಜನಪ್ಪ ಅವರು. ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. ಮೊದಲನೆಯದ್ದಾಗಿ ಅವರ ಪ್ರಕಾರ, ಮೊಟ್ಟೆ ನಾನ್ವೆಜ್ ಅಲ್ಲ. ಅದರಲ್ಲಿಯೂ ಶಾಲೆಗಳಿಗೆ ನೀಡುವ ಮೊಟ್ಟೆಗಳಿಗೆ ಕಾವು ಕೊಟ್ಟರೆ ಅವು ಮರಿಯಾಗುವುದಿಲ್ಲ. ಆದ್ದರಿಂದ ಅವು ನಾನ್ವೆಜ್ ಅಲ್ಲ. ಎಲ್ಲರೂ ಮಕ್ಕಳಿಗೆ ಕೊಡಬೇಕು ಎನ್ನುವುದು ಅವರ ಮಾತು.
ಎಲ್ಲಾ ಮೊಟ್ಟೆಗಳೂ ಬೆಸ್ಟ್
ಅದೇ ರೀತಿ, ನಾಟಿ ಮೊಟ್ಟೆಯೇ ಬೆಸ್ಟ್ ಎನ್ನುವುದು ತಪ್ಪು ಕಲ್ಪನೆ ಎನ್ನುತ್ತಾರೆ ಡಾ. ಆಂಜನಪ್ಪ. ಕೋಳಿಗೆ ಇಂಜೆಕ್ಷನ್ ಕೊಟ್ಟರು ಕೂಡ ಅದು ಮೊಟ್ಟೆಯ ಮೇಲೆ ಪರಿಣಾಮ ಬೀರುವುದಿಲ್ಲ. ಆದ್ದರಿಂದ ಪ್ರತಿದಿನವೂ ಮೊಟ್ಟೆ ತಿನ್ನಬೇಕು, ಇದು ತುಂಬಾ ಒಳ್ಳೆಯದು ಎನ್ನುವುದು ಅವರ ಮಾತು.
ವಿಟಮಿನ್ B 12 ಸಮಸ್ಯೆ ಪರಿಹಾರ
ಇಂದು ವಿಟಮಿನ್ ಡಿ, ಬಿ 12 (Vitamine B 12) ಸಮಸ್ಯೆಯಿಂದ ಹಲವರು ಬಳಲುತ್ತಿದ್ದಾರೆ. ಅವರೆಲ್ಲರೂ ಪ್ರತಿದಿನವೂ ಬೇಯಿಸಿದ ಒಂದು ಮೊಟ್ಟೆ ತಿನ್ನಲೇಬೇಕು. ಇದರಿಂದ ಈ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ ಎನ್ನುವುದು ಅವರ ಮಾತು. ಇದರಿಂದ ಹೃದಯ ಸಮಸ್ಯೆ ಬರುತ್ತದೆ ಎನ್ನುವುದು ಕೂಡ ಸುಳ್ಳು. ಹೃದಯ ಸಮಸ್ಯೆ ದೂರವಾಗುತ್ತದೆ, ಕೊಲೆಸ್ಟ್ರಾಲ್ ಸಮಸ್ಯೆ ಇದ್ದರೂ ಅದು ಪರಿಹಾರ ಆಗುತ್ತದೆ ಎನ್ನುತ್ತಾರೆ ವೈದ್ಯರು.
ಸಂಪೂರ್ಣ ಮೊಟ್ಟೆ ತಿನ್ನಲು ಸಲಹೆ
ಹಳದಿ, ಬಿಳಿ ಎನ್ನುವುದನ್ನೆಲ್ಲಾ ಬಿಟ್ಟು ಸಂಪೂರ್ಣ ಮೊಟ್ಟೆ ತಿನ್ನಿ. ಹಸಿಯಾಗಿ ತಿಂದರೆ ಅದು ಡೇಂಜರ್. ಆಮ್ಲೇಟ್ ಮಾಡಿ ತಿನ್ನುವುದಕ್ಕಿಂತಲೂ ಬೇಯಿಸಿದ ಮೊಟ್ಟೆ ಪ್ರತಿದಿನವೂ ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವುದು ಅವರ ಮಾತು.