ತುಳಸಿ ನೀರು ಬಳಸಿ, ಆರೋಗ್ಯ ಸುಧಾರಿಸೋದು ಮಾತ್ರವಲ್ಲ, ಲಕ್ಕನ್ನೇ ಬದಲಿಸುತ್ತೆ!
ವಾಸ್ತು ಶಾಸ್ತ್ರದಲ್ಲಿ ತುಳಸಿಗೆ ಹೆಚ್ಚಿನ ಮಹತ್ವವಿದೆ. ತುಳಸಿಗೆ ಸಂಬಂಧಿಸಿದ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ಒಬ್ಬ ವ್ಯಕ್ತಿ ಪ್ರತಿಯೊಂದು ಸಮಸ್ಯೆಯನ್ನು ತೊಡೆದುಹಾಕಬಹುದು ಎಂದು ಶಾಸ್ತ್ರಗಳಲ್ಲಿ ತಿಳಿಸಿದೆ. ಇದಲ್ಲದೆ ತುಳಸಿ ಗಿಡವು ಹಸಿರು ಬಣ್ಣದಿಂದ ಕೂಡಿರುತ್ತೆ. ಹಾಗಾಗಿ ಅಲ್ಲಿ ಯಾವಾಗಲೂ ಸಂತೋಷ (Happiness) ಮತ್ತು ಸಮೃದ್ಧಿ (Prosperity) ಇರುತ್ತೆ ಎಂದರ್ಥ.
ಹಿಂದೂ ಧರ್ಮದಲ್ಲಿ ತುಳಸಿ (Tulasi) ಗಿಡಕ್ಕೆ ವಿಶೇಷ ಮಹತ್ವವಿದೆ. ತುಳಸಿ ಸಸ್ಯವಿರುವ ಮನೆಯಲ್ಲಿ, ತಾಯಿ ಲಕ್ಷ್ಮಿಯೊಂದಿಗೆ ವಿಷ್ಣುವಿನ ಅಪಾರ ಅನುಗ್ರಹವಿರುತ್ತೆ. ಹಾಗಾಗಿ, ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ತುಳಸಿ ಸಸ್ಯ ಹೊಂದಿರೋದು ಹೆಚ್ಚು ಸಕಾರಾತ್ಮಕ (Negative) ಶಕ್ತಿಯನ್ನು ಉತ್ಪಾದಿಸುತ್ತೆ, ಇದು ವ್ಯಕ್ತಿಯ ಉತ್ತಮ ಆರೋಗ್ಯದೊಂದಿಗೆ ಪ್ರಗತಿಗೆ ದಾರಿಯನ್ನು ತೆರೆಯುತ್ತೆ. ಈ ಕಾರಣಕ್ಕಾಗಿಯೇ ತುಳಸಿ ಸಸ್ಯವನ್ನು ಪ್ರತಿದಿನ ಪೂಜಿಸೋದು ಶುಭ.
ತುಳಸಿಗೆ ಸಂಬಂಧಿಸಿದ ಅನೇಕ ಪರಿಹಾರಗಳ ಬಗ್ಗೆ ನೀವು ಕೇಳಿರಬಹುದು. ಈ ಕ್ರಮಗಳಲ್ಲಿ ತುಳಸಿ ನೀರಿನ (Tulasi water) ಬಳಕೆಯೂ ಒಂದು. ತುಳಸಿ ನೀರನ್ನು ಬಳಸುವ ಮೂಲಕ ನೀವು ಸಂತೋಷ ಮತ್ತು ಸಮೃದ್ಧಿಯನ್ನು ಹೇಗೆ ಪಡೆಯಬಹುದು? ಇದನ್ನು ಯಾವ ರೀತಿ ಬಳಸಬಹುದು ಅನ್ನೋದನ್ನು ತಿಳಿಯೋಣ.
ತಾಮ್ರ ಅಥವಾ ಹಿತ್ತಾಳೆ ಲೋಟದಲ್ಲಿ ಕೆಲವು ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿಡಿ. ಇದನ್ನು ಮಾಡೋದರಿಂದ, ನೀರು ಶುದ್ಧ ಮತ್ತು ಪರಿಶುದ್ಧವಾಗುತ್ತೆ. ಇದರೊಂದಿಗೆ, ತಾಯಿ ಲಕ್ಷ್ಮಿ(Goddess Lakshmi) ಕೂಡ ಸಂತೋಷವಾಗುತ್ತಾಳೆ. ಇದನ್ನು ಪ್ರತಿದಿನ ದೇವರ ಮುಂದೆ ಇಡೋದು ಉತ್ತಮ ಎಂದು ಹೇಳಲಾಗುತ್ತೆ.
ಮನೆಯಾದ್ಯಂತ ಸಿಂಪಡಿಸಿ
ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ತುಳಸಿಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ನಂತರ ಬೆಳಗ್ಗೆ, ಈ ಶುದ್ಧ ನೀರನ್ನು ಇಡೀ ಮನೆಯ ಮೂಲೆಗಳಲ್ಲಿ, ಪೂಜೆ ಮನೆ ಇತ್ಯಾದಿಗಳಲ್ಲಿ ಚಿಮುಕಿಸಿ, ಇದನ್ನು ಮಾಡೋದರಿಂದ, ಮನೆಯ ನಕಾರಾತ್ಮಕ ಶಕ್ತಿಯು ಕೊನೆಗೊಳ್ಳುತ್ತೆ .ಹಾಗೆ ಸಕಾರಾತ್ಮಕ ಶಕ್ತಿ ಹೆಚ್ಚುತ್ತೆ.
ಬಾಲ ಗೋಪಾಲನ್ನನ್ನು(Bala Krishna) ಸ್ನಾನ ಮಾಡಿಸಿ
ಭಗವಾನ್ ವಿಷ್ಣುವಿನ ರೂಪವಾದ ಶ್ರೀಕೃಷ್ಣನಿಗೆ ತುಳಸಿ ತುಂಬಾ ಪ್ರಿಯವಾದದ್ದು. ಹಾಗಾಗಿ, ತಾಮ್ರ (Copper) ಅಥವಾ ಹಿತ್ತಾಳೆ (Brass) ಲೋಟದಲ್ಲಿ ಸ್ವಲ್ಪ ನೀರಿನೊಂದಿಗೆ ತುಳಸಿ ಹಾಕಿ. ನಂತರ, ಬಾಲಗೋಪಾಲನನ್ನು ಈ ನೀರಿನಿಂದ ಸ್ನಾನ ಮಾಡಿಸಿ. ಇದನ್ನು ಮಾಡುವ ಮೂಲಕ, ಬಾಲ ಗೋಪಾಲ ಸಂತೋಷವಾಗುತ್ತಾನೆ ಎಂದು ನಂಬಲಾಗಿದೆ.
ಪ್ರಗತಿಗಾಗಿ
ವ್ಯಾಪಾರ ಮತ್ತು ಉದ್ಯೋಗದಲ್ಲಿ ಅಪಾರ ಯಶಸ್ಸನ್ನು(Success) ಪಡೆಯಲು ಬಯಸಿದರೆ, ತುಳಸಿ ನೀರನ್ನು ಬಳಸಬಹುದು. ಇದಕ್ಕಾಗಿ, ತುಳಸಿಯನ್ನು ನೀರಿಗೆ ಸೇರಿಸಿ ಮತ್ತು 2-3 ದಿನಗಳವರೆಗೆ ಬಿಡಿ. ನಂತರ, ಈ ನೀರನ್ನು ನಿಮ್ಮ ಮೇಲೆ ಚಿಮುಕಿಸಿ ಮತ್ತು ಅದನ್ನು ಕಾರ್ಖಾನೆ, ಅಂಗಡಿ, ವ್ಯಾಪಾರ, ಕೆಲಸದ ಸ್ಥಳ ಇತ್ಯಾದಿಗಳಲ್ಲಿ ಚಿಮುಕಿಸಿ. ಇದನ್ನು ಮಾಡೋದರಿಂದ, ಅಲ್ಲಿ ಇರುವ ನಕಾರಾತ್ಮಕ ಶಕ್ತಿ ನಶಿಸಿ ಹೋಗುತ್ತೆ.
ಉತ್ತಮ ಆರೋಗ್ಯಕ್ಕಾಗಿ(Health)
ತುಳಸಿ ನೀರನ್ನು ಆರೋಗ್ಯವಾಗಿರಲು ಸಹ ಬಳಸಬಹುದು. ಮನೆಯ ಒಬ್ಬ ಸದಸ್ಯನು ಹೆಚ್ಚಾಗಿ ಅನಾರೋಗ್ಯದಿಂದ ಬಳಲುತ್ತಿದ್ದರೆ, ಬೆಳಗ್ಗೆ ಮತ್ತು ಸಂಜೆ ಪೂಜೆ ನಂತರ ಅವನ ಮೇಲೆ ತುಳಸಿ ನೀರನ್ನು ಚಿಮುಕಿಸಿ. ಇದರೊಂದಿಗೆ, ತುಳಸಿ ನೀರನ್ನು ಕುದಿಸಿ ಮತ್ತು ಅದನ್ನು ಆ ವ್ಯಕ್ತಿಗೆ ಕುಡಿಯಲು ನೀಡಿ. ವ್ಯಕ್ತಿ ಬೇಗ ಗುಣಮುಖನಾಗುತ್ತಾನೆ.