ಮೀಸಲಾತಿ ಹೋರಾಟಕ್ಕೆ ಮತ್ತೊಂದು ವೇದಿಕೆ ಸಿದ್ಧ: ಡಿಸಿಎಂ ಮನೆಯಲ್ಲೇ ಆಯ್ತು ರೂಪುರೇಷೆ..!
ರಾಜ್ಯದಲ್ಲಿ ಪ್ರಸ್ತುತ ವಿವಿಧ ಸಮುದಾಯಗಳು ಮೀಸಲಾತಿ ಬೇಡಿಕೆ ಹೋರಾಟಗಳ ಮಾಡುತ್ತಿವೆ. STಗಾಗಿ ಕುರುಬರು, 2Aಗಾಗಿ ಪಂಚಮಸಾಲಿ, ಮೀಸಲಾತಿ ಹೆಚ್ಚಳಕ್ಕೆ ವಾಲ್ಮೀಕಿ ಸಮುದಾಯಗಳು ಬೇಡಿಕೆ ಇಟ್ಟಿವೆ. ಇದರ ಮಧ್ಯೆ ರಾಜ್ಯದಲ್ಲಿ ಮತ್ತೊಂದು ಮೀಸಲಾತಿ ಹೋರಾಟಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಅದು ಡಿಸಿಎಂ ಮನೆಯಲ್ಲೇ ಹೋರಾಟದ ರೂಪುರೇಷೆ ಸಿದ್ಧವಾಗಿದೆ.
ನ್ಯಾ.ಸದಾಶಿವ ಆಯೋಗ ಜಾರಿಗೆ ತರುವಂತೆ ಹೋರಾಟ ಮಾಡಲು ದಲಿತ ಎಡಗೈ ಸಮುದಾಯ ಮುಂದಾಗಿದೆ.
ಒಳ ಮೀಸಲಾತಿಗಾಗಿ ಹೋರಾಟದ ವೇದಿಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಡಿಸಿಎಂ ಕಾರಜೋಳ ನಿವಾಸದಲ್ಲಿ ನಡೆದ ಮೀಸಲಾತಿ ಹೋರಾಟದ ಪೂರ್ವಭಾವಿ ಸಭೆ....
ಸಭೆಯಲ್ಲಿ ಸಂಸದ ನಾರಾಯಣಸ್ವಾಮಿ, ಮಾಜಿ ಶಾಸಕ ಸಂಪಂಗಿ ಸೇರಿ ದಲಿತ ಸಂಘಟನೆ ಮುಖಂಡರು ಭಾಗಿ....
ಡಿಸಿಎಂ ಕಾರಜೋಳ ನಿವಾಸದಲ್ಲಿ ನಡೆದ ಮೀಸಲಾತಿ ಹೋರಾಟದ ಪೂರ್ವಭಾವಿ ಸಭೆ ನಡೆದಿದ್ದು, ಶನಿವಾರ ಹೋರಾಟದ ರೂಪರೇಷೆ ಬಗ್ಗೆ ಗಂಭೀರ ಚರ್ಚೆ....
ನೀವು ಹೋರಾಟ ಆರಂಭಿಸಿ. ನಿಮ್ಮ ಜೊತೆ ನಾನಿದ್ದೇನೆ ಎಂದು ಡಿಸಿಎಂ ಹೇಳಿದ್ದು, ಆದರೆ ಡಿಸಿಎಂ ಆಗಿರುವುದರಿಂದ ಬಹಿರಂಗವಾಗಿ ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ. ಬದಲಾಗಿ ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಿ ಮೀಸಲಾತಿ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದುಬಂದಿದೆ.