ಈ ಫೋಟೋದಲ್ಲಿ ಇರುವ ಕನ್ನಡದ ಸ್ಟಾರ್ ನಟಿಯ ಮಗಳು ಯಾರೆದು ಗೆಸ್ ಮಾಡಿ!
ಸಿಂಪಲ್ ಆಂಡ್ ಕ್ಯೂಟ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿರುವ ಈ ಹುಡುಗಿ ಯಾರು?

ಕನ್ನಡ ಚಿತ್ರರಂಗದಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿ ಈಗ ಕನ್ನಡ ಕಿರುತೆರೆಯಲ್ಲಿ ಚಾಪು ಮೂಡಿಸುತ್ತಿರುವ ನಟಿ ಶ್ರುತಿ ಕೃಷ್ಣ ಅವರ ಮುದ್ದಿನ ಮಗಳು ಈಕೆ.
ಶ್ರುತಿ ಕೃಷ್ಣ ಅವರ ಏಕೈಕಾ ಪುತ್ರಿ ಗೌರಿ ಶ್ರುತಿ. ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಗೌರಿ ಅಪ್ಲೋಡ್ ಮಾಡಿರುವ ಈ ಫೋಟೋ ವೈರಲ್ ಆಗುತ್ತಿದೆ.
ವೈಟ್ ಬಣ್ಣದ ಆಫ್ ಶೋಲ್ಡರ್ ಟಾಪ್‌ಗೆ ಕಪ್ಪು ಬಣ್ಣದ ಮ್ಯಾಕ್ಸಿ ಧರಿಸಿದ್ದಾರೆ. ಫಿಶ್ ಬ್ರೇಡ್ ಹೇರ್ ಸ್ಟೈಲ್ ಮಾಡಿಕೊಂಡಿದ್ದು ಕೊರಳಿಗೆ ಪಚ್ಚೆ ಕಲ್ಲಿನ ಸರ ಧರಿಸಿದ್ದಾರೆ.
'The goal is to have a beautiful soul' ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಫೋಟೋಗೆ ಸಾವಿರಾರೂ ಕಾಮೆಂಟ್ ಮತ್ತು ಲೈಕ್ಸ್ ಬಂದಿದೆ.
ಸಂಗೀತಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ತೋರುವ ಗೌರಿ ಆಗಾಗ ಸಿನಿಮಾ ಹಾಡುಗಳು, ದೇವರ ಭಜನೆ ಮಾಡಿ ವಿಡಿಯೋ ಅಪ್ಲೋಡ್ ಮಾಡುತ್ತಾರೆ. ಇದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ನಟನೆ ಕ್ಷೇತ್ರದಲ್ಲೂ ಆಸಕ್ತಿ ಹೊಂದಿರುವ ಗೌರಿಗೆ ಈಗಾಗಲೆ ಆಫರ್‌ಗಳು ಹರಿದು ಬರುತ್ತಿದೆ. ತಾಯಿ ಶ್ರುತಿ ಕಥೆ ಕೇಳುತ್ತಿದ್ದಾರೆ. ಸೂಕ್ತವಾದ ಕತೆ ಮತ್ತು ಸಮಯಕ್ಕೆ ಮಗಳನ್ನು ಲಾಂಚ್ ಮಾಡುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.