ಸರಿಯಾದ ವ್ಯಕ್ತಿ ಜೊತೆಗಿದ್ದರೆ ಸಿಗೋ ಪ್ರೀತಿ ಆಶೀರ್ವಾದನೇ: ಅದತಿ ಪ್ರಭುದೇವ
ಸರಳವಾಗಿ ಸೀಮಂತ ಮಾಡಿಕೊಂಡ ನಟಿ ಅದಿತಿ ಪ್ರಭುದೇವ. ಪತಿ ಜೊತೆಗಿರುವ ಫೋಟೋ ವೈರಲ್....

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಅದಿತಿ ಪ್ರಭುದೇವ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಶೀಘ್ರದಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ.
ಇತ್ತೀಚಿಗೆ ತಮ್ಮ ನಿವಾಸದಲ್ಲಿ ಅದಿತಿ ಸರಳವಾಗಿ ಸೀಮಂತ ಮಾಡಿಕೊಂಡರು. ಸಿನಿಮಾ ತರೆಯರು ಮತ್ತು ಕುಟುಂಬಸ್ಥರು ಭಾಗಿಯಾಗಿದ್ದರು.
ಹಸಿರು-ಕೆಂಪು ಕಾಂಬಿನೇಷನ್ ಸೀರೆಯಲ್ಲಿ ಅದಿತಿ ಪ್ರಭುದೇವ ಮಿಂಚಿದ್ದಾರೆ. ಕ್ರೀಮ್ ಬಣ್ಣದ ಶೇರ್ವಾನಿಯಲ್ಲಿ ಪತಿ ಯಶಸ್ ಕಾಣಿಸಿಕೊಂಡಿದ್ದಾರೆ.
'With the right person, LOVE is a BLESSING' ಎಂದು ಅದಿತಿ ಪ್ರಭುದೇವ ಬರೆದುಕೊಂಡಿದ್ದಾರೆ. ಇದಕ್ಕೆ ಪತಿ ಯಶಸ್‌ರನ್ನು ಟ್ಯಾಗ್ ಮಾಡಿದ್ದಾರೆ.
ಯಶಸ್ ಕೂಡ ಒಂದು ಸ್ಪೆಷಲ್ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. 'ನೀ ಹೇಗೆ ಇದ್ದರೂ ಏನೇ ಮಾಡಿದರೂ ಚಂದ' ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಪುಟ್ಟ ಮಗುವಿನಂತೆ ಪತಿಯ ಮುಂದೆ ನಿಂತು ಅದಿತಿ ಏನೋ ಹೇಳುತ್ತಿರುತ್ತಾರೆ. ಹಾಗೆ ಮಾತನಾಡುತ್ತಾ ತಿರುಗಿ ನೋಡಿದಾಗ ಕ್ಯಾಮೆರಾ ಫೋಕಸ್ ಕಂಡು ಇಬ್ಬರು ನಾಚುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.