ಒಂದು ಆಹಾರ ತ್ಯಜಿಸಿ 6 ತಿಂಗಳಲ್ಲಿ 30 ಕೆಜಿ ತೂಕ ಇಳಿಸಿದ ದಂತವೈದ್ಯೆ
Weight Loss Journey: ದಂತವೈದ್ಯೆಯೊಬ್ಬರು ಕೇವಲ 6 ತಿಂಗಳಲ್ಲಿ 30 ಕೆಜಿ ತೂಕ ಇಳಿಸಿಕೊಂಡ ತಮ್ಮ ಯಶೋಗಾಥೆಯನ್ನು ಹಂಚಿಕೊಂಡಿದ್ದಾರೆ. ತೂಕ ಇಳಿಕೆಯ ಜೊತೆಗೆ ಡಬಲ್ ಚಿನ್ ಮತ್ತು ಆಕ್ನೋಥೊಸಿಸ್ ನಿಗ್ರಿಕನ್ಸ್‌ನಂತಹ ಸಮಸ್ಯೆಗಳನ್ನೂ ನಿವಾರಿಸಿದೆ.

30 ಕೆಜಿ ತೂಕ ಕಡಿ
ತೂಕ ಇಳಿಸಲು ಮುಂದಾಗಿದ್ದರೆ ಈ ಸುದ್ದಿಯನ್ನು ಓದಲೇಬೇಕು. ದಂತವೈದ್ಯೆಯೊಬ್ಬರು ಕೇವಲ 6 ತಿಂಗಳಲ್ಲಿ ಬರೋಬ್ಬರಿ 30 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಈ ಬದಲಾವಣೆಯಾಗಿ ದಂತವೈದ್ಯೆ ಒಂದು ಆಹಾರಕ್ಕೆ ಸಂಪೂರ್ಣವಾಗಿ ಕೊಕ್ ನೀಡಿದ್ದರು.
ವೇಟ್ ಲಾಸ್ ಜರ್ನಿ
ಸೆಪ್ಟೆಂಬರ್ 2ರಂದು ಡಾ.ಫಿಟ್ ಫೈಲ್ಸ್ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲೊಂದು ವಿಡಿಯೋ ಪೋಸ್ಟ್ ಮಾಡಲಾಗಿದೆ. ತನ್ನನ್ನು ಫಿಟ್ನೆಸ್ ಇನ್‌ಫ್ಲುಯೆನ್ಸರ್ ಮತ್ತು ಡೆಂಟಿಸ್ಟ್ ಎಂದು ಹೇಳಿಕೊಳ್ಳುವ ಮಹಿಳೆ ತಮ್ಮ ವೇಟ್ ಲಾಸ್ ಜರ್ನಿ ಬಗ್ಗೆ ಮಾತನಾಡಿದ್ದಾರೆ. 97 ಕೆಜಿಯಿಂದ 67 ಕೆಜಿಯವರೆಗಿನ ತೂಕ ಇಳಿಕೆಯ ಬಗ್ಗೆ ಮಾತನಾಡಿದ್ದಾರೆ.
ದೇಹದಲ್ಲಿ ಬದಲಾವಣೆ
ಈ ವಿಡಿಯೋಗೆ POV: you quit sugar for 6 months. Transition alert!' ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಆಹಾರದಿಂದ ಸಕ್ಕರೆ ತ್ಯಾಗ ಮಾಡಿದ್ರೆ ನಿಮ್ಮ ದೇಹದಲ್ಲಿ ಬದಲಾವಣೆ ಕಾಣುತ್ತೀರಿ ಎಂದು ಹೇಳಲಾಗಿದೆ. ಮಹಿಳೆ ತೂಕ ಇಳಿಕೆ ಮುನ್ನ ಮತ್ತು ನಂತರದ ಫೋಟೋಗಳನ್ನು ನೋಡುಗರೊಂದಿಗೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಈ ಲಕ್ಷಣಗಳು ಕಾಣಿಸ್ತಿದ್ದರೆ ದೇಹದಲ್ಲಿ ಏನಾಗ್ತಿದೆ ತಿಳಿಯೋದು ಸುಲಭ: ಫುಲ್ ಡಿಟೇಲ್ಸ್ ಇಲ್ಲಿದೆ…
ಸಮಸ್ಯೆಗಳು ನಿವಾರಣೆ
ಆರು ತಿಂಗಳ ಹಿಂದೆ ದಂತವೈದ್ಯೆ ಡಬಲ್ ಚಿನ್ (Double Chin) ಮತ್ತು ಆಕ್ನೋಥೊಸಿಸ್ ನಿಗ್ರಿಕನ್ಸ್ (Acanthosis Nigricans) ಮತ್ತು ಮುಖದ ಮೇಲಿನ ಪಿಗ್ಮೆಂಟೇಶನ್ ಸಮಸ್ಯೆಯಿಂದ ಬಳಲುತ್ತಿದ್ದರು. ಸಕ್ಕರೆ ತ್ಯಾಗ ಮಾಡಿದ್ರಿಂದಾಗಿ ದೇಹದ ತೂಕ ಇಳಿಕೆಯಾಗಿದ್ದು, ಇದರ ಜೊತೆ ಇತರೆ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಿವೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಚಳಿಗಾಲದಲ್ಲಿ ಸುಲಭವಾಗಿ ತೂಕ ಇಳಿಸಬಹುದು; ಸುಂದರ & ಆಕರ್ಷಕ ದೇಹಕ್ಕಾಗಿ ಮಾಡಬೇಕಿರೋದಿಷ್ಟು!
ಮಧುಮೇಹದ ಲಕ್ಷಣ
ಆಕ್ನೋಥೊಸಿಸ್ ನಿಗ್ರಿಕನ್ಸ್ ಅನ್ನೋದು ಕತ್ತಿನ ಹಿಂಭಾಗದಲ್ಲಿ ಕಪ್ಪು ಕಲೆ ಕಾಣಿಸಿಕೊಳ್ಳೋದು. ಆಕ್ನೋಥೊಸಿಸ್ ನಿಗ್ರಿಕನ್ಸ್ ಅಂದ್ರೆ ಸಮಸ್ಯೆಯಲ್ಲ. ಅದು ಮಧುಮೇಹದ ಲಕ್ಷಣವಾಗಿದೆ. ನಾನು ಯಾವುದೇ ಕ್ರೀಂ ಬಳಕೆ ಮಾಡಿಲ್ಲ. ಸಕ್ಕರೆ ಸೇವನೆ ಬಿಟ್ಟಿದ್ದರಿಂದ ಸಮಸ್ಯೆ ಪರಿಹಾರವಾಗಿದೆ ಎಂದು ದಂತ ವೈದ್ಯೆ ಹೇಳಿಕೊಂಡಿದ್ದಾರೆ. Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.