MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಚಳಿಗಾಲದಲ್ಲಿ ಸುಲಭವಾಗಿ ತೂಕ ಇಳಿಸಬಹುದು; ಸುಂದರ & ಆಕರ್ಷಕ ದೇಹಕ್ಕಾಗಿ ಮಾಡಬೇಕಿರೋದಿಷ್ಟು!

ಚಳಿಗಾಲದಲ್ಲಿ ಸುಲಭವಾಗಿ ತೂಕ ಇಳಿಸಬಹುದು; ಸುಂದರ & ಆಕರ್ಷಕ ದೇಹಕ್ಕಾಗಿ ಮಾಡಬೇಕಿರೋದಿಷ್ಟು!

ಚಳಿಗಾಲದಲ್ಲಿ ಸೋಮಾರಿತನ ಹೆಚ್ಚಾದರೂ, ತೂಕ ಇಳಿಸಿಕೊಳ್ಳಲು ಸೂಕ್ತ ಸಮಯ. ಸರಿಯಾದ ಆಹಾರ, ವ್ಯಾಯಾಮ ಮತ್ತು ಜೀವನಶೈಲಿಯ ಬದಲಾವಣೆಗಳಿಂದ ತೂಕ ನಿಯಂತ್ರಿಸಬಹುದು. ಬೆಚ್ಚಗಿನ ಪಾನೀಯಗಳ ಬದಲು ತಣ್ಣೀರು ಕುಡಿಯುವುದು ಮತ್ತು ನಿಯಮಿತ ದೈಹಿಕ ಚಟುವಟಿಕೆಗಳು ತೂಕ ಇಳಿಕೆಗೆ ಸಹಕಾರಿ.

2 Min read
Author : Mahmad Rafik
Published : Sep 15 2025, 02:59 PM IST
Share this Photo Gallery
  • FB
  • TW
  • Linkdin
  • Whatsapp
16
ತೂಕ ಇಳಿಕೆಗೆ ಚಳಿಗಾಲ ಸೂಕ್ತ ಸಮಯ
Image Credit : Getty

ತೂಕ ಇಳಿಕೆಗೆ ಚಳಿಗಾಲ ಸೂಕ್ತ ಸಮಯ

ಚಳಿಗಾಲ ಬಂದ್ರೆ ಸಾಕು ಬಹುತೇಕರು ಸ್ವಲ್ಪ ಸೋಮಾರಿಗಳಾಗುತ್ತಾರೆ. ಯಾರು ಒಪ್ಪಿಕೊಂಡ್ರು ಒಪ್ಪಿಕೊಳ್ಳದಿದ್ರೂ ಇದು ನಿಜ. ಚಳಿಯನ್ನು ತಡೆದುಕೊಳ್ಳಲಾರದೇ ಬೆಳಗ್ಗೆ ಬೇಗ ಏಳಲು ಹಿಂದೇಟು ಹಾಕುತ್ತವೆ. ಚಳಿ ಅಂತಾ ಹೊದಿಕೆ ಹೊದ್ದಿಕೊಂಡು ಮಲಗುತ್ತವೆ. ಹಾಗೆ ವರ್ಕೌಟ್ ಮಾಡೋದು ಸ್ಪಲ್ಪ ಕಡಿಮೆಯಾಗಿ ಶಾರೀರಿಕ ಚಟುವಟಿಕೆಗಳು ಕಡಿಮೆಯಾಗುತ್ತವೆ. ಚಳಿಗಾಲದ ಸೋಮಾರಿತನದಿಂದ ದೇಹದ ತೂಕ ಹೆಚ್ಚಳವಾಗುತ್ತದೆ.ಆದ್ರೆ ಚಳಿಗಾಲದಲ್ಲಿ ಸ್ವಲ್ಪ ಬುದ್ಧಿವಂತಿಕೆಯಿಂದ ಯೋಚಿಸಿದರೆ, ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

26
ವಾಕಿಂಗ್ ಮತ್ತು ವರ್ಕೌಟ್
Image Credit : freepik

ವಾಕಿಂಗ್ ಮತ್ತು ವರ್ಕೌಟ್

ಬೆಳಗ್ಗೆ ಚಳಿ ಬಹುತೇಕ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ವಾಕಿಂಗ್ ಮತ್ತು ವರ್ಕೌಟ್ ಮಾಡೋದು ಸ್ವಲ್ಪ ಕಷ್ಟವಾಗುತ್ತದೆ. ಹಾಗಾಗಿ ಚಳಿ ಕಡಿಮೆಯಾದ್ಮೇಲೆ ಅಥವಾ ಸಂಜೆ ವರ್ಕೌಟ್ ಮಾಡಬಹುದು. ಈ ಚಳಿಗಾಲದಲ್ಲಿಯೇ ತೂಕ ಕಡಿಮೆ ಮಾಡಿಕೊಳ್ಳುವ ಅವಕಾಶಗಳು ಅಧಿಕವಾಗಿರುತ್ತವೆ. ಈ ಸಮಯದಲ್ಲಿ ಕ್ಯಾಲೋರಿಯನ್ನು ಸರಳವಾಗಿ ಬರ್ನ್ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.

Related Articles

Related image1
ದಿನಕ್ಕೆ 7000 ಹೆಜ್ಜೆ ನಡಿಗೆ: ತೂಕ ಇಳಿಕೆ, ಶುಗರ್ ನಿಯಂತ್ರಣಕ್ಕೆ ಸೂಪರ್
Related image2
Ozempic Vulva: ತೂಕ ಇಳಿಕೆಗೆ ಪ್ರಸಿದ್ಧಿ ಪಡೆದಿರುವ ಓಜೆಂಪಿಕ್‌ ಔಷಧಿ ಎಷ್ಟು ಅಪಾಯಕಾರಿ
36
ಆಹಾರ ಹೇಗಿರಬೇಕು?
Image Credit : FREEPIK

ಆಹಾರ ಹೇಗಿರಬೇಕು?

ಚಳಿಗಾಲದ ಸಮಯ ನಿಮ್ಮನ್ನು ಹೆಚ್ಚು ತಿನ್ನಲು ಪ್ರೇರೇಪಿಸುತ್ತದೆ. ತಂಪಾದ ವಾತಾವರಣದಲ್ಲಿ ದೇಹವನ್ನು ಬೆಚ್ಚಗಿಡಲು ದೈನಂದಿನ ಕ್ಯಾಲೋರಿ ನಿಮ್ಮ ಅಗತ್ಯತೆಯನ್ನು ಪೂರೈಸುತ್ತದೆ. ಹಸಿವಿನ ಕ್ರೇವಿಂಗ್‌ನಿಂದಾಗಿ ಕ್ಯಾಲೋರಿ ಬರ್ನ್ ಆಗುತ್ತಿರುತ್ತದೆ. ಹಾಗಾಗಿ ಸ್ವಲ್ಪ ವರ್ಕೌಟ್ ಮಾಡಿದ್ರೂ ತೂಕ ಇಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ಈ ಸಮಯದಲ್ಲಿ ನಾರಿನಂಶವಿರೋ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಇದರಲ್ಲಿನ ಫೈಬರ್ ನಿಮಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದರಿಂದಾಗಿ ಅನಾರೋಗ್ಯಕರ ಆಹಾರ ಸೇವನೆಯಿಂದ ದೂರವಿರಬಹುದು.

46
ಟೀ ಆಂಡ್ ಕಾಫಿ
Image Credit : istock

ಟೀ ಆಂಡ್ ಕಾಫಿ

ಚಳಿಗಾಲದಲ್ಲಿ ಬಿಸಿಯಾದ ಚಹಾ ಮತ್ತು ಕಾಫಿಯನ್ನು ಒಂದು ಕಪ್ ಹೆಚ್ಚಾಗಿ ಕುಡಿಯುತ್ತಾರೆ. ಆದ್ರೆ ಹಾಲು ಮತ್ತು ಸಕ್ಕರೆ ಹಾಕದಿರುವ ಬ್ಲಾಕ್ ಟೀ ಆಂಡ್ ಕಾಫಿ ಕುಡಿಯಿರಿ. ಇದರಲ್ಲಿ ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ಉರಿಯೂತ ನಿವಾರಕ ಗುಣಗಳನ್ನು ಹೊಂದಿವೆ. ಈ ಪಾನೀಯಗಳು ನಿಮ್ಮ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸೋದರ ಜೊತೆ ಕೊಬ್ಬು ಕರಗಿಸಲು ಸಹಾಯ ಮಾಡುತ್ತವೆ.

ಇದನ್ನೂ ಓದಿ: ಈ ಲಕ್ಷಣಗಳು ಕಾಣಿಸ್ತಿದ್ದರೆ ದೇಹದಲ್ಲಿ ಏನಾಗ್ತಿದೆ ತಿಳಿಯೋದು ಸುಲಭ: ಫುಲ್​ ಡಿಟೇಲ್ಸ್​ ಇಲ್ಲಿದೆ

56
ನೀರು
Image Credit : Getty

ನೀರು

ಚಳಿಗಾಲದಲ್ಲಿ ಬಹುತೇಕರು ಬಿಸಿನೀರು ಕುಡಿಯುತ್ತಾರೆ. ಈ ಸಮಯದಲ್ಲಿ ತೂಕ ಇಳಿಸಿಕೊಳ್ಳಬೇಕಂದ್ರೆ ತಣ್ಣೀರು ಕುಡಿಯುವಂತೆ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಈ ಪ್ರಕ್ರಿಯೆಯು ಕೆಜಿ ತೂಕ ಇಳಿಸಿಕೊಳ್ಳಲು ಅಗತ್ಯವಾದ ಹಲವು ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ಅತಿ ತಣ್ಣನೆ ನೀರು ಆಗದಿದ್ದರೂ ಸಾಮಾನ್ಯ ತಾಪಮಾನದಲ್ಲಿರುವ ನೀರು ಕುಡಿಯಬೇಕು.

ಇದನ್ನೂ ಓದಿ: 50 ಕೆಜಿ ತೂಕ ಇಳಿಸಿಕೊಂಡ ವೈದ್ಯರು ಕೊಟ್ಟ ಗೋಲ್ಡನ್ ಟಿಪ್ಸ್! ಈ 6 ನಿಯಮ ಪಾಲಿಸಿದರೆ 30 ದಿನಗಳಲ್ಲೇ ಅದರ ಪರಿಣಾಮ ಗೋಚರಿಸುತ್ತೆ!

66
ಅರ್ಧ ಗಂಟೆಗೊಮ್ಮೆ ವಾಕ್
Image Credit : Getty

ಅರ್ಧ ಗಂಟೆಗೊಮ್ಮೆ ವಾಕ್

ಚಳಿಯಿಂದಾಗಿ ವರ್ಕೌಟ್ ಮಾಡಲು ಹೊರಗೆ ಹೋಗಲು ಆಗದಿದ್ದರೆ ಮನೆಯೊಳಗೆ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು. ಕ್ಲೀನಿಂಗ್, ತೊಳೆಯುವುದು, ಒರೆಸುವುದು, ತೋಟಗಾರಿಕೆ ಮತ್ತು ಇತರ ಮನೆಗೆಲಸಗಳನ್ನು ಮಾಡುವುದರಿಂದ ನೈಸರ್ಗಿಕವಾಗಿ ಕೊಬ್ಬನ್ನು ಕರಗಿಸಬಹುದು. ಪ್ರತಿ 30 ನಿಮಿಷಗಳಿಗೊಮ್ಮೆ ಎದ್ದು ಓಡಾಡಬೇಕು. ಆಫಿಸ್‌ನಲ್ಲಿ ಒಂದೇ ಕಡೆ ಕುಳಿತು ಕೆಲಸ ಮಾಡುತ್ತಿದ್ರೆ ಪ್ರತಿ ಅರ್ಧ ಗಂಟೆಗೊಮ್ಮೆ ಎದ್ದು ಓಡಾಡಬೇಕು. ಈ ಪ್ರಕ್ರಿಯೆ ತೂಕ ಇಳಿಕೆಗೆ ಕಾರಣವಾಗುತ್ತದೆ.

ಇದನ್ನೂ ಓದಿ: ಮಧ್ಯಾಹ್ನದ ಊಟಕ್ಕೆ ಅನ್ನದ ಬದಲು ಈ ಆಹಾರ ಸೇವಿಸಿದರೆ ತೂಕ ಇಳಿಸೋದು ಸುಲಭ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ತೂಕ ಇಳಿಕೆ
ಚಳಿಗಾಲ
ಆಹಾರ
ಆರೋಗ್ಯ
ಆರೋಗ್ಯಕರ ಆಹಾರಗಳು

Latest Videos
Recommended Stories
Recommended image1
ಮನೆಮುಂದೆ ಕಾಡಿನಂತೆ 'ತುಳಸಿ ಗಿಡ' ಬೆಳೆಸಲು ಉಪ್ಪು ಹಾಕಿ ತಪ್ಪು ಮಾಡಬೇಡಿ!
Recommended image2
Confession Box: ಗೆಳತಿಯ ಸಂಗಕ್ಕಾಗಿ ಗಂಡನನ್ನು ಬಿಟ್ಟೆ, ಪಶ್ಚಾತ್ತಾಪವಿಲ್ಲ!
Recommended image3
ರಶ್ಮಿಕಾ-ವಿಜಯ್​ ಮದುವೆಯಲ್ಲಿ ವಜ್ರ ಯಾಕೆ ಬ್ಯಾನ್​? ಇದರ ಹಿಂದಿದೆ ಇಂಟರೆಸ್ಟಿಂಗ್ ವೈಜ್ಞಾನಿಕ​ ಕಾರಣ
Related Stories
Recommended image1
ದಿನಕ್ಕೆ 7000 ಹೆಜ್ಜೆ ನಡಿಗೆ: ತೂಕ ಇಳಿಕೆ, ಶುಗರ್ ನಿಯಂತ್ರಣಕ್ಕೆ ಸೂಪರ್
Recommended image2
Ozempic Vulva: ತೂಕ ಇಳಿಕೆಗೆ ಪ್ರಸಿದ್ಧಿ ಪಡೆದಿರುವ ಓಜೆಂಪಿಕ್‌ ಔಷಧಿ ಎಷ್ಟು ಅಪಾಯಕಾರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved