ಕಾಮನ್ ಸೆನ್ಸ್ ಡಯಟ್: ಔಷಧಿ, ಜಿಮ್ ಇಲ್ಲದೆ 49 ಕೆಜಿ ತೂಕ ಇಳಿಸಿಕೊಂಡ ವ್ಯಕ್ತಿ
How to lose 49 kg naturally: ನಿಕ್ ಗಿಯೊಪ್ಪೊ ಎಂಬ ವ್ಯಕ್ತಿ ಯಾವುದೇ ಔಷಧಿ ಅಥವಾ ಕಠಿಣ ವ್ಯಾಯಾಮವಿಲ್ಲದೆ, 'ಕಾಮನ್ ಸೆನ್ಸ್ ಡಯಟ್' ಅನುಸರಿಸಿ 49 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಕಳೆದ 6 ವರ್ಷಗಳಿಂದ ತಮ್ಮ ತೂಕವನ್ನು ಸಮತೋಲನದಲ್ಲಿರಿಸಿಕೊಂಡಿದ್ದಾರೆ.

ತೂಕ ಇಳಿಕೆಯ ಫೋಟೋ
ಜನರು ತಮ್ಮ ಆಹಾರ ಕ್ರಮವನ್ನು ಬದಲಾಯಿಸುವ ಮೂಲಕ ತೂಕ ಇಳಿಸುವ ಔಷಧಿಗಳನ್ನು ತೆಗೆದುಕೊಳ್ಳುವ ಮೂಲಕ ಅಥವಾ ಜಿಮ್‌ನಲ್ಲಿ ಗಂಟೆಗಟ್ಟಲೆ ಕಳೆಯುವ ಮೂಲಕ ಬೇಗನೆ ತೂಕ ಇಳಿಸಿಕೊಳ್ಳುತ್ತಾರೆ. ವ್ಯಕ್ತಿಯೊಬ್ಬರು ಯಾವುದೇ ಔಷಧಿ ಸೇವನೆ ಮಾಡದೇ ಸರಳವಾಗಿ ತೂಕ ಇಳಿದ್ದಾರೆ. ತೂಕ ಇಳಿಕೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಕಾಮನ್ ಸೆನ್ಸ್ ಡಯಟ್
ಕಾಮನ್ ಸೆನ್ಸ್ ಡಯಟ್ ಸಹಾಯ ಪಡೆದುಕೊಂಡು ಬರೋಬ್ಬರಿ 49 ಕೆಜಿ ತೂಕವನ್ನು ಕಡಿಮೆ ಮಾಡಬಹುದಾಗಿದೆ. ಮನೆಯಲ್ಲಿಯೇ ತಯಾರಿಸಿದ ಆಹಾರ ಸೇವಿಸುವ ಈ ವ್ಯಕ್ತಿಯ ತೂಕ ಕಳೆದ 6 ವರ್ಷಗಳಿಂದ ಹೆಚ್ಚಾಗಿಲ್ಲ. ಸಮತೋಲನದ ತೂಕವನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ತೂಕ ಇಳಿಸಿಕೊಂಡ ವ್ಯಕ್ತಿಯ ಹೆಸರು ನಿಕ್ ಗಿಯೊಪ್ಪೊ
ಆಧ್ಯಾತ್ಮಿಕ ಪ್ರಯಾಣ
ತೂಕ ಇಳಿಸುವಲ್ಲಿ ಆಧ್ಯಾತ್ಮಿಕ ಪ್ರಯಾಣವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಿಕ್ ಗಿಯೊಪ್ಪೊ ಹೇಳುತ್ತಾರೆ. ನೀವು ಪ್ರತಿದಿನ ಧ್ಯಾನ ಮಾಡಬೇಕು. ಧ್ಯಾನದಿಂದ ಒತ್ತಡ ಮತ್ತು ಖಿನ್ನತೆ ನಿವಾರಣೆಯಾಗುತ್ತದೆ. ಆರೋಗ್ಯವಾಗಿರುವುದು ತ್ವರಿತ ತೂಕ ಹೆಚ್ಚಾಗುವುದನ್ನು ತಡೆಯುತ್ತದೆ. ಸರಳ ಆಹಾರ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಎಲ್ಲಾ ಅಭ್ಯಾಸಗಳನ್ನು ರೂಢಿಸಿಕೊಳ್ಳೋದರಿಂದ ನಿಮ್ಮ ತೂಕದಲ್ಲಿ ವ್ಯತ್ಯಾಸ ಕಾಣುತ್ತೀರಿ ಎಂದು ನಿಕ್ ಗಿಯೊಪ್ಪೊ ಹೇಳುತ್ತಾರೆ.
ಪೌಷ್ಟಿಕಾಂಶದಿಂದ ಸಮೃದ್ಧವಾಗಿರುವ ಆಹಾರ ಆಯ್ಕೆ
ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, "ಡಯಟ್" ಎಂಬ ಪದವನ್ನು ನಿಮ್ಮ ಮನಸ್ಸಿನಿಂದ ಹೊರಹಾಕಬೇಕು. ಈ ರೀತಿ ಮಾಡುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ. ಆಹಾರವನ್ನು ತಪ್ಪಿಸುವ ಬದಲು ಅಥವಾ ಕಡಿಮೆ ಸೇವನೆ ಮಾಡುವ ಬದಲು ಪೌಷ್ಟಿಕಾಂಶದಿಂದ ಸಮೃದ್ಧವಾಗಿರುವ ಆಹಾರ ಆಯ್ಕೆ ಮಾಡಿಕೊಳ್ಳಬೇಕು. ಇದನ್ನ ಕಾಮನ್ ಸನ್ಸ್ ಡಯಟ್ ಎಂದು ಕರೆಯಲಾಗುತ್ತದೆ. ಈ ರೀತಿಯ ಆಹಾರ ಆಯ್ಕೆ ತೂಕ ಇಳಿಕೆ ಮೇಲೆ ಕ್ಷಿಪ್ರವಾದ ಪರಿಣಾಮ ಬೀರುತ್ತದೆ ಎಂದು ನಿಗ್ ಗಿಯೊಪ್ಪೊ ಅವರ ಅನುಭವದ ಮಾತಾಗಿದೆ.
ಇದನ್ನೂ ಓದಿ: ಬ್ಯಾಚುಲರ್ಸ್ ರೆಸಿಪಿ: 15 ನಿಮಿಷದಲ್ಲಿ ಮಾಡ್ಕೊಳ್ಳಿ ಮೊಟ್ಟೆ ತೊಕ್ಕು, ಗೆಸ್ಟ್ ಬಂದಾಗ ಮಾಡಿದ್ರೆ ತಿಂದವರು ಫಿದಾ!
ಕಾಮನ್ ಸೆನ್ಸ್ ಡಯಟ್
ಕಾಮನ್ ಸೆನ್ಸ್ ಡಯಟ್ ಪ್ರಕಾರ, ದೈನಂದಿನ ಆಹಾರದಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಖನಿಜಗಳಂತಹ ಪೋಷಕಾಂಶಗಳನ್ನು ಸೇರಿಸಿಕೊಳ್ಳಬೇಕಾಗುತ್ತದೆ. ಹಬ್ಬ ಅಥವಾ ವಿಶೇಷ ಸಮಯದಲ್ಲಿ ನೀವು ನಿಮ್ಮ ನೆಚ್ಚಿನ ಆಹಾರವನ್ನು ಸೇವಿಸಬಹುದು. ಇದು ನಿಮ್ಮ ತೂಕ ಇಳಿಕೆ ಪ್ರಯಾಣದ ಮೇಲೆ ಯಾವುದೇ ಪರಿಣಾಮ ಬೀರಲ್ಲ.
ಇದನ್ನೂ ಓದಿ: ಅಧಿಕ ಯೂರಿಕ್ ಆಸಿಡ್ ಹೊಂದಿರುವ ಜನರು ತಿನ್ನಬಾರದ ಹಣ್ಣುಗಳು
ದೈನಂದಿನ ಕ್ಯಾಲೊರಿ ಬರ್ನ್
ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಕ್ಯಾಲೊರಿ ಬರ್ನ್ ಮಾಡೋದನ್ನು ಮರೆಯಬಾರದು ಎಂದು ನಿಕ್ ಗಿಯೊಪ್ಪೊ ಹೇಳುತ್ತಾರೆ. ನಿಮ್ಮ ನೆಚ್ಚಿನ ಚಟುವಟಿಕೆಗಳನ್ನು ಮಾಡಿ, ವಾಕಿಂಗ್ ಮಾಡುತ್ತೀರಿ. ಇದು ನಿಮ್ಮ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ದೇಹದಿಂದ ಬೆವರು ಹೊರಗೆ ಬರುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ತೂಕ ಕಡಿಮೆ ಮಾಡಬಹುದು.
ಇದನ್ನೂ ಓದಿ: ಆರು ಆಹಾರಗಳನ್ನು ಎಂದಿಗೂ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಇಡಬೇಡಿ
(Disclaimer: ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ)