- Home
- Life
- Food
- ಬ್ಯಾಚುಲರ್ಸ್ ರೆಸಿಪಿ: 15 ನಿಮಿಷದಲ್ಲಿ ಮಾಡ್ಕೊಳ್ಳಿ ಮೊಟ್ಟೆ ತೊಕ್ಕು, ಗೆಸ್ಟ್ ಬಂದಾಗ ಮಾಡಿದ್ರೆ ತಿಂದವರು ಫಿದಾ!
ಬ್ಯಾಚುಲರ್ಸ್ ರೆಸಿಪಿ: 15 ನಿಮಿಷದಲ್ಲಿ ಮಾಡ್ಕೊಳ್ಳಿ ಮೊಟ್ಟೆ ತೊಕ್ಕು, ಗೆಸ್ಟ್ ಬಂದಾಗ ಮಾಡಿದ್ರೆ ತಿಂದವರು ಫಿದಾ!
ಬ್ಯಾಚುಲರ್ಸ್‌ಗಾಗಿ ಕೇವಲ 15 ನಿಮಿಷದಲ್ಲಿ ತಯಾರಿಸಬಹುದಾದ ರುಚಿಕರವಾದ ಮೊಟ್ಟೆ ತೊಕ್ಕು ರೆಸಿಪಿ ಇಲ್ಲಿದೆ. ಚಪಾತಿ, ಅನ್ನ ಅಥವಾ ದೋಸೆಯೊಂದಿಗೆ ಸವಿಯಲು ಇದು ಅತ್ಯುತ್ತಮ ಕಾಂಬಿನೇಷನ್ ಆಗಿದೆ. ಸರಳ ಸಾಮಾಗ್ರಿಗಳೊಂದಿಗೆ ಇದನ್ನು ಸುಲಭವಾಗಿ ಮಾಡಬಹುದು.

ಬ್ಯಾಚುಲರ್ಸ್ ಮಾಡಿಕೊಳ್ಳುವ ಅಡುಗೆ
ಬ್ಯಾಚುಲರ್ಸ್ ಮಾಡಿಕೊಳ್ಳುವ ಅಡುಗೆಗಳು ತುಂಬಾ ಸರಳ ಮತ್ತು ಸಖತ್ ಟೇಸ್ಟಿಯಾಗಿರುತ್ತದೆ. ಒಂದೇ ರೀತಿ ಅಡುಗೆ ತಿಂದು ಬೇಸರವಾಗಿದ್ರೆ, ನಾಲಿಗೆ ಹೊಸ ರುಚಿ ಕೇಳುತ್ತಿದ್ದರೆ 15 ನಿಮಿಷದಲ್ಲಿ ಈ ಮೊಟ್ಟೆ ತೊಕ್ಕು ಮಾಡಿಕೊಳ್ಳಿ. ಚಪಾತಿ, ರೈಸ್, ದೋಸೆಗೆ ಇದು ಒಳ್ಳೆಯ ಕಾಂಬಿನೇಷನ್ ಆಗುತ್ತದೆ.
ಬೇಕಾಗುವ ಸಾಮಾಗ್ರಿಗಳು
ಮೊಟ್ಟೆ: 5, ಈರುಳ್ಳಿ: ದೊಡ್ಡ ಗಾತ್ರದ್ದು ಒಂದು, ಟೊಮೆಟೋ: 2, ಬೆಳ್ಳುಳ್ಳಿ-ಶುಂಠಿ ಪೇಸ್ಟ್: 1 ಟೀ ಸ್ಪೂನ್, ಚಿಕನ್ ಮಸಾಲೆ: 1/2 ಟೀ ಸ್ಪೂನ್, ಕೋತಂಬರಿ ಸೊಪ್ಪು, ಹಸಿಮೆಣಸಿನಕಾಯಿ: ಎರಡು, ಎಣ್ಣೆ: 2 ಟೀ ಸ್ಪೂನ್, ಅಚ್ಚ ಖಾರದ ಪುಡಿ: 1 ಟೀ ಸ್ಪೂನ್, ಅರಿಶಿನ ಪುಡಿ: 1/2 ಟೀ ಸ್ಪೂನ್, ಉಪ್ಪು: ರುಚಿಗೆ ತಕ್ಕಷ್ಟು, ಜೀರಿಗೆ-ಸಾಸವೆ: ಅರ್ಧ ಟೀ ಸ್ಪೂನ್.
ಮೊಟ್ಟೆ ತೊಕ್ಕು ಮಾಡುವ ವಿಧಾನ
ಮೊದಲಿಗೆ ಐದು ಮೊಟ್ಟೆಗಳನ್ನು ಬೇಯಿಸಿಕೊಂಡು ನಂತರ ಹಳದಿ ಭಾಗವನ್ನು ಬೇರ್ಪಡಿಸಿಕೊಳ್ಳಿ. ನಂತರ ಬಿಳಿ ಭಾಗವನ್ನು ಚಿಕ್ಕ ಚಿಕ್ಕದಾಗಿ ನಿಮಗೆ ಬೇಕಾದ ಶೇಪ್‌ನಲ್ಲಿ ಕತ್ತರಿಸಿಕೊಂಡು ಎತ್ತಿಟ್ಟುಕೊಳ್ಳಿ. ಈಗ ಈರುಳ್ಳಿ, ಟೊಮೆಟೋ, ಕೋತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು.
ಮೊಟ್ಟೆ ತೊಕ್ಕು
ಈಗ ಒಲೆ ಆನ್ ಮಾಡ್ಕೊಂಡು ಪ್ಯಾನ್ ಇರಿಸಿಕೊಂಡು ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗ್ತಿದ್ದಂತೆ ಸಾಸವೆ ಹಾಕಿಕೊಳ್ಳಿ. ನಂತರ ಜೀರಿಗೆ ಹಾಕಿಕೊಳ್ಳಬೇಕು. ಆ ಬಳಿಕ ಈರುಳ್ಳಿ ಸೇರಿಸಿಕೊಂಡು ಹಸಿ ವಾಸನೆ ಹೋಗುವರೆಗೂ ಬೇಯಿಸಿಕೊಂಡು ಟೊಮೆಟೋ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಹಸಿಮೆಣಸಿನಕಾಯಿ ಸೇರಿಸಿಕೊಳ್ಳಿ.
ಗರಂ ಮಸಾಲೆ
ಟೊಮೆಟೋ-ಈರುಳ್ಳಿ ಸಾಫ್ಟ್ ಆಗ್ತಿದ್ದಂತೆ ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ತದನಂತರ ಚಿಕನ್ ಅಥವಾ ಎಗ್ ಮಸಾಲೆ, ಗರಂ ಮಸಾಲೆ, ಅರಿಶಿನ, ಅಚ್ಚ ಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು. ಈಗ ಒಂದು ಕಪ್ ನೀರು ಸೇರಿಸಿಕೊಂಡು ಮೂರರಿಂದ ನಾಲ್ಕು ನಿಮಿಷ ಬೇಯಿಸಿಕೊಳ್ಳಿ.
ಇದನ್ನೂ ಓದಿ: 15 ನಿಮಿಷದಲ್ಲಿ ತಯಾರಾಗುವ ಬ್ಯಾಚುಲರ್ ಮೊಟ್ಟೆ ಬಿರಿಯಾನಿ; ಫೈವ್ ಸ್ಟಾರ್ ಹೋಟೆಲ್‌ನಲ್ಲಿಯೂ ಸಿಗಲ್ಲ!
ಮೊಟ್ಟೆ ಹಳದಿ ಭಾಗ ಸೇರಿಸಿ ಬೇಯಿಸಿಕೊಳ್ಳಿ
ಇದೀಗ ಬೇಯಿಸಿ ಕತ್ತರಿಸಿಟ್ಟುಕೊಂಡಿರುವ ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ ಮತ್ತೆ ಮೂರರಿಂದ ನಾಲ್ಕು ನಿಮಿಷ ಬೇಯಿಸಿಕೊಳ್ಳಬೇಕು. ಈಗ ಕೋತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಕೊನೆಯದಾಗಿ ಮೊಟ್ಟೆ ಹಳದಿ ಭಾಗ ಸೇರಿಸಿ ಮುಚ್ಚಳ ಮುಚ್ಚಿ ಮೂರು ನಿಮಿಷ ಬೇಯಿಸಿಕೊಂಡ್ರೆ ರುಚಿಯಾದ ಮೊಟ್ಟೆ ತೊಕ್ಕು ಸವಿಯಲು ಸಿದ್ಧವಾಗುತ್ತದೆ.
ಇದನ್ನೂ ಓದಿ: Multi-Grain Adai Dosa Recipe: ರುಚಿಕರ, ಆರೋಗ್ಯಕರವಾದ ಹಳ್ಳಿ ಶೈಲಿಯ ಅಡೆ ದೋಸೆ ಮಾಡುವ ವಿಧಾನ