ದಿನಾ ಒಂದು ನೆಲ್ಲಿಕಾಯಿ ತಿಂದ್ರೆ ನಿಮ್ಮ ದೇಹದಲ್ಲಾಗುವ ಬದಲಾವಣೆಗಳಿವು
Gooseberry Health Benefits: ನೆಲ್ಲಿಕಾಯಿಯನ್ನು ವಿವಿಧ ರೀತಿಯಲ್ಲಿ ಸೇವಿಸಲಾಗುತ್ತದೆ. ನೀವದನ್ನ ಹೇಗೆ ತಿಂದರೂ ಅದರ ಪೌಷ್ಟಿಕಾಂಶದ ಮೌಲ್ಯವು ಹಾಗೆಯೇ ಉಳಿದಿರುತ್ತದೆ ಎಂದು ತಿಳಿಸಿದ್ದಾರೆ ಎಕ್ಸ್‌ಪರ್ಟ್ಸ್. ಇದು ಅನೇಕ ಪೋಷಕಾಂಶಗಳು ಮತ್ತು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ.

ಔಷಧೀಯ ಗುಣಗಳಿಂದ ಸಮೃದ್ಧ
ಕಾರ್ತಿಕ ಮಾಸ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಇದರೊಂದಿಗೆ ನೆಲ್ಲಿಕಾಯಿಯ ಮಾರಾಟ ಜೋರಾಗಲಿದೆ. ನೆಲ್ಲಿಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಇದು ಅನೇಕ ಪೋಷಕಾಂಶಗಳು ಮತ್ತು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ.
ವಿವಿಧ ರೀತಿಯಲ್ಲಿ ಸೇವನೆ
ಇದನ್ನು ಪ್ರತಿದಿನ ಸೇವಿಸುವುದರಿಂದ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತವೆ ಎಂದು ತಜ್ಞರು ಹೇಳುತ್ತಾರೆ. ನೆಲ್ಲಿಕಾಯಿಯನ್ನು ವಿವಿಧ ರೀತಿಯಲ್ಲಿ ಸೇವಿಸಲಾಗುತ್ತದೆ. ನೀವು ಅದರ ಜ್ಯುಸ್ ಮಾಡಿ ಕುಡಿದರೂ, ಒಣಗಿಸಿ ತಿಂದರೂ, ಮುರಬ್ಬ ಮಾಡಿದರೂ, ರೊಟ್ಟಿ ಚಟ್ನಿ ಮಾಡಿದರೂ ಅಥವಾ ಯಾವುದೇ ಇತರ ರೆಸಿಪಿ ಮಾಡಿದರೂ ಅದರ ಪೌಷ್ಟಿಕಾಂಶದ ಮೌಲ್ಯವು ಹಾಗೆಯೇ ಉಳಿದಿರುತ್ತದೆ ಎಂದು ತಿಳಿಸಿದ್ದಾರೆ ಎಕ್ಸ್‌ಪರ್ಟ್ಸ್.
ನೆಲ್ಲಿಕಾಯಿಯಲ್ಲಿರುವ ಜೀವಸತ್ವಗಳು ಹಾಗೂ ಖನಿಜಗಳು
ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಕ್ಯಾರೋಟಿನ್, ಬಿ-ಕಾಂಪ್ಲೆಕ್ಸ್ ಮತ್ತು ಇತರ ಜೀವಸತ್ವಗಳು ಹಾಗೂ ಖನಿಜಗಳು ಸಮೃದ್ಧವಾಗಿವೆ. ವಿಶೇಷವಾಗಿ ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಬಹಳ ಸಹಾಯಕವಾಗಿದ್ದು, ಚರ್ಮದಲ್ಲಿ ಕಾಲಜನ್ ರಚನೆಯಲ್ಲಿಯೂ ಇದು ಉಪಯುಕ್ತವಾಗಿದೆ ಎಂದು ಸಹ ಹೇಳಲಾಗುತ್ತದೆ.
ಹೃದಯದ ಆರೋಗ್ಯಕ್ಕೆ ಒಳಿತು
ನೆಲ್ಲಿಕಾಯಿಯಲ್ಲಿರುವ ಪೋಷಕಾಂಶಗಳು ಕೊಲೆಸ್ಟ್ರಾಲ್ ಮಟ್ಟ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಹಾಗಾಗಿ ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು.
ಮಧುಮೇಹವನ್ನು ನಿಯಂತ್ರಣದಲ್ಲಿಡಲು
ಇದಲ್ಲದೆ, ಮಧುಮೇಹವನ್ನು ನಿಯಂತ್ರಣದಲ್ಲಿಡಲು ನೆಲ್ಲಿಕಾಯಿ ಒಂದು ದೈವಿಕ ಔಷಧವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿರುವ ಕ್ರೋಮಿಯಂ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಕ್ರೋಮಿಯಂ ಹೃದಯ ಕವಾಟಗಳು ಮುಚ್ಚುವುದನ್ನೂ ತಡೆಯುತ್ತದೆ ಎಂದು ಹೇಳಲಾಗುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಸಹ ಕಡಿಮೆ ಮಾಡುತ್ತದೆ ಎಂದು ತಜ್ಞರು ವಿವರಿಸುತ್ತಾರೆ.