ಬೆಳಗ್ಗೆ ಎದ್ದಾಗ ಕಂಡುಬರುವ ಈ 2 ಲಕ್ಷಣಗಳು ಕಿಡ್ನಿ ಹಾಳಾಗಿದೆಯೆಂದು ಸೂಚಿಸುತ್ತವೆ
ಈ ಅಪಾಯವನ್ನು ಸಮಯಕ್ಕೆ ಸರಿಯಾಗಿ ಪರಿಶೀಲಿಸದಿದ್ದರೆ ಕಿಡ್ನಿ ಫೇಲ್ಯೂರ್ ಆಗಬಹುದು. ಆದ್ದರಿಂದ ಈ ಅಂಗದ ಕ್ಷೀಣತೆಯ ಆರಂಭದಲ್ಲಿ ಕಾಣಿಸಿಕೊಳ್ಳುವ ಕೆಲವು ಚಿಹ್ನೆಗಳನ್ನು ನಿರ್ಲಕ್ಷಿಸಬಾರದು.

ಮೂತ್ರಪಿಂಡ(Kidney)ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿವೆ. ಈ ಕಾಯಿಲೆ ಬಂದಾಗ ದೇಹದಲ್ಲಿ ವಿಷಕಾರಿ ವಸ್ತುಗಳು ಸಂಗ್ರಹವಾಗಲು ಪ್ರಾರಂಭಿಸುತ್ತವೆ. ಈ ವಿಷಕಾರಿ ವಸ್ತುಗಳು ಹೃದಯ, ಮೆದುಳು, ಯಕೃತ್ತು ಸೇರಿದಂತೆ ಎಲ್ಲಾ ಅಂಗಗಳಿಗೆ ಹಾನಿ ಮಾಡಲು ಪ್ರಾರಂಭಿಸುತ್ತವೆ. ಆದ್ದರಿಂದ ಮೂತ್ರಪಿಂಡಗಳು ಸರಿಯಾಗಿ ಕೆಲಸ ಮಾಡುವುದು ಮುಖ್ಯ. ಅದು ಸರಿಯಾಗಿ ಕೆಲಸ ಮಾಡಿದರೆ ಮಾತ್ರ ತ್ಯಾಜ್ಯ ವಸ್ತುಗಳು ದೇಹದಿಂದ ಹೊರಬರುತ್ತಲೇ ಇರುತ್ತವೆ.
ಸಾಮಾನ್ಯವಾಗಿ ಮೂತ್ರಪಿಂಡ ಸಂಬಂಧಿ ಕಾಯಿಲೆಗಳು ನಾವು ನಮ್ಮ ಲೈಫ್‌ಸ್ಟೈಲ್ ಸರಿಯಾಗಿಟ್ಟುಕೊಳ್ಳದಿದ್ದರೆ ಬರುತ್ತದೆ. ವಿಶೇಷವಾಗಿ ಕಳಪೆ ಜೀವನಶೈಲಿ ಕಿಡ್ನಿ ಮೇಲೆ ಪರಿಣಾಮ ಬೀರಿದಾಗ ವಿಷ ಮತ್ತು ಬ್ಯಾಕ್ಟೀರಿಯಾಗಳು ಅವುಗಳೊಳಗೆ ತುಂಬಿಕೊಳ್ಳಬಹುದು. ಇದು ಸೋಂಕಿಗೆ ಕಾರಣವಾಗಬಹುದು. ಈ ಅಪಾಯವನ್ನು ಸಮಯಕ್ಕೆ ಸರಿಯಾಗಿ ಪರಿಶೀಲಿಸದಿದ್ದರೆ ಕಿಡ್ನಿ ಫೇಲ್ಯೂರ್ ಆಗಬಹುದು. ಆದ್ದರಿಂದ ಈ ಅಂಗದ ಕ್ಷೀಣತೆಯ ಆರಂಭದಲ್ಲಿ ಕಾಣಿಸಿಕೊಳ್ಳುವ ಕೆಲವು ಚಿಹ್ನೆಗಳನ್ನು ನಿರ್ಲಕ್ಷಿಸಬಾರದು.
ಮೂತ್ರಪಿಂಡದ ಕಾಯಿಲೆ ಬಗ್ಗೆ ವಿಶೇಷವಾಗಿ ನಾವು ಬೆಳಗ್ಗೆ ಸುಲಭವಾಗಿ ತಿಳಿದುಕೊಳ್ಳಬಹುದು. ಏಕೆಂದರೆ ಹಗಲಿನಲ್ಲಿ ದೇಹದ ಕೊಳಕು ಸರಿಯಾಗಿ ಹೊರಬರಲು ಸಾಧ್ಯವಾಗದಿದ್ದರೆ, ರಾತ್ರಿ ಮೂತ್ರ ವಿಸರ್ಜಿಸಲು ಸಾಧ್ಯವಾಗದ ಕಾರಣ ಅದರ ಮಟ್ಟವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ನೀವು ಬೆಳಗ್ಗೆ ಎದ್ದ ತಕ್ಷಣ ದೇಹದಲ್ಲಿನ ಕೆಲವು ಬದಲಾವಣೆಗಳು ನಿಮ್ಮನ್ನು ಎಚ್ಚರಿಸಬಹುದು.
ರಾತ್ರಿಯಿಡೀ ಮೂತ್ರಕೋಶದಲ್ಲಿ ಮೂತ್ರ ಸಂಗ್ರಹವಾದಾಗ ಅದರಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚಾಗುತ್ತದೆ. ಮೂತ್ರಪಿಂಡಗಳು ತಮ್ಮ ಕೆಲಸವನ್ನು ಮಾಡಲು ಸಾಧ್ಯವಾಗದಿದ್ದಾಗ ಇದು ಸಂಭವಿಸುತ್ತದೆ. ಕ್ಲೀವ್ಲ್ಯಾಂಡ್ ಕ್ಲಿನಿಕ್ ಪ್ರಕಾರ, ಇದು ಮೂತ್ರ ವಿಸರ್ಜಿಸುವಾಗ ದೊಡ್ಡ ನೊರೆಗಳನ್ನು ರೂಪಿಸುತ್ತದೆ, ಅದು ಸುಲಭವಾಗಿ ಮಾಯವಾಗುವುದಿಲ್ಲ.
ಕೆಲವು ಜನರ ಮುಖಗಳು ಬೆಳಗ್ಗೆ ಎದ್ದಾಗ ಊದಿಕೊಂಡಂತೆ ಕಾಣುತ್ತವೆ. ಕೆಲವೊಮ್ಮೆ ಇದು ಮೌನ ಮೂತ್ರಪಿಂಡ ಕಾಯಿಲೆಯ ಸಂಕೇತವಾಗಿರಬಹುದು. ಮೂತ್ರಪಿಂಡಗಳು ದೇಹದಲ್ಲಿ ನೀರಿನ ಮಟ್ಟವನ್ನು ಕಾಪಾಡಿಕೊಳ್ಳಲು ಸಾಧ್ಯವಾಗದಿದ್ದಾಗ, ಅದು ಮುಖದಲ್ಲಿ ಊತವನ್ನು ಉಂಟುಮಾಡುತ್ತದೆ. ಇದು ಕಣಕಾಲುಗಳ ಊತಕ್ಕೆ ಕಾರಣವಾಗಿದ್ದು, ಇದನ್ನು ಎಡಿಮಾ ಎಂದು ಕರೆಯಲಾಗುತ್ತದೆ.
ನಿದ್ರೆಯಿಂದ ಎದ್ದ ತಕ್ಷಣ ಈ ಮೇಲಿನ ಎರಡು ಲಕ್ಷಣಗಳು ಮೂತ್ರಪಿಂಡದ ಸಮಸ್ಯೆಗಳನ್ನು ಸೂಚಿಸಬಹುದು . ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ವಿಷಕಾರಿ ಅಂಶಗಳು ಹೆಚ್ಚಾಗಬಹುದು ಮತ್ತು ಕೆಂಪು ರಕ್ತ ಕಣಗಳು ಕಡಿಮೆಯಾಗಬಹುದು. ಇದು ಆಯಾಸಕ್ಕೆ ಕಾರಣವಾಗಬಹುದು. ಅದೇ ಸಮಯದಲ್ಲಿ, ದೇಹದಲ್ಲಿನ ಎಲೆಕ್ಟ್ರೋಲೈಟ್ ಅಸಮತೋಲನ ಮತ್ತು ವಿಷಕಾರಿ ಅಂಶಗಳು ಸಹ ತಲೆನೋವಿಗೆ ಕಾರಣವಾಗಬಹುದು.
2019 ರ ಅಧ್ಯಯನದ ಪ್ರಕಾರ, ಒಣದ್ರಾಕ್ಷಿ ಮತ್ತು ಕೆಂಪು ದ್ರಾಕ್ಷಿ ರಸವು ಮೂತ್ರಪಿಂಡಗಳನ್ನು ಹಾನಿಯಿಂದ ರಕ್ಷಿಸುತ್ತದೆ. ಇದರೊಂದಿಗೆ, ಕ್ರ್ಯಾನ್‌ಬೆರಿಗಳು, ಮತ್ತು ಕ್ಯಾಲ್ಸಿಯಂ-ಭರಿತ ಆಹಾರಗಳನ್ನು ಸೇವಿಸಿ. ಕ್ಯಾಲ್ಸಿಯಂ ತೆಗೆದುಕೊಳ್ಳುವುದರಿಂದ ಕಲ್ಲುಗಳ ಅಪಾಯ ಕಡಿಮೆಯಾಗುತ್ತದೆ. ದಿನವಿಡೀ ಸಾಕಷ್ಟು ನೀರು ಕುಡಿಯಿರಿ.