ಆನೆ, ಡುಮ್ಮ ಅಂತಿದ್ದವರಿಗೆ ಒಂದೇ ವರ್ಷದಲ್ಲಿ 50 ಕೆಜಿ ತೂಕ ಇಳಿಸಿ ಶಾಕ್ ಕೊಟ್ಟ ಯುವಕ
120 ಕೆಜಿ ತೂಕವಿದ್ದು, 'ಆನೆ', 'ಡುಮ್ಮ' ಎಂದು ಅವಮಾನಕ್ಕೊಳಗಾಗಿದ್ದ ಆದರ್ಶ್ ಸಿಂಗ್ ಎಂಬ ಯುವಕ, ಕೇವಲ ಒಂದೇ ವರ್ಷದಲ್ಲಿ 50 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಆರೋಗ್ಯ ತಜ್ಞರ ಸಲಹೆಯಂತೆ ಪರಿಶ್ರಮದಿಂದ ಕರಗಿಸಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ.

Weight Loss
16-17ನೇ ವಯಸ್ಸಿನವರು ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಆದರೆ ಆದರ್ಶ್ ಸಿಂಗ್ ಎಂಬ ಯುವಕ 120 ಕೆಜಿ ತೂಕದಿಂದ ಎಲ್ಲರಿಂದ ಆನೆ, ಡುಮ್ಮ, ಬಲೂನ್ ಎಂದು ಕರೆಸಿಕೊಂಡು ಅವಮಾನಕ್ಕೊಳಗಾಗಿದ್ದರು. ಇದರಿಂದ ತೂಕ ಇಳಿಸಿಕೊಳ್ಳಲು ಮುಂದಾದ ಆದರ್ಶ್ ಸಿಂಗ್ ಒಂದೇ ವರ್ಷದಲ್ಲಿ ಬರೋಬ್ಬರಿ 50 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಎಂದು ಎನ್‌ಬಿಟಿ ವರದಿ ಮಾಡಿದೆ.
ಆರೋಗ್ಯ ತಜ್ಞರ ಸಲಹೆ
ಆರಂಭದಲ್ಲಿ ಯಾರಿಗೂ ತಿಳಿಯದಂತೆ ತೂಕ ಇಳಿಸಿಕೊಳ್ಳಲು ಮುಂದಾಗಿದ್ದರು. ಆದ್ರೆ ಇದರಿಂದ ಯಾವುದೇ ಲಾಭ ಕಾಣದಿದ್ದಾಗ ಜಿಮ್ ಸೇರಿಕೊಳ್ಳುತ್ತಾರೆ. ನುರಿತ ಆರೋಗ್ಯ ತಜ್ಞರ ಸಲಹೆಯಿಂದ 50 ಕೆಜಿ ತೂಕ ಇಳಿಸಿಕೊಳ್ಳುವಲ್ಲಿ ಯಶಸ್ಸು ಕಂಡಿದ್ದಾರೆ.
ತೂಕ ಹೆಚ್ಚಳಕ್ಕೆ ಕಾರಣ ಏನು?
ಆದರ್ಶ್ ಸಿಂಗ್ ಹೇಳುವ ಪ್ರಕಾರ, ಬಾಲ್ಯದಿಂದಲೂ ಯಾವುದೇ ದೈಹಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರಲಿಲ್ಲ. 5ನೇ ಕ್ಲಾಸ್‌ನಿಂದಲೇ ಬೊಜ್ಜು ಹೆಚ್ಚಾಗಲು ಶುರುವಾಯ್ತು. ವಿಡಿಯೋ ಗೇಮ್ ಆಡುತ್ತಿರೋದರಿಂದ ಹೊರಗಡೆ ಹೋಗುತ್ತಿರಲಿಲ್ಲ. ಮೊಬೈಲ್ ಬಳಕೆ, ಸಾಲು ಸಾಲು ವೆಬ್ ಸಿರೀಸ್ ನೋಡುತ್ತಾ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ.
ಆಹಾರ
ಮನೆಯಲ್ಲಿ ಮಾಡಿದ ಆಹಾರ ಸೇವಿಸುತ್ತಿರಲಿಲ್ಲ. ಯಾವಾಗಲೂ ಪಿಜ್ಜಾ, ಬರ್ಗರ್, ಮಸಾಲೆಯುಕ್ತ ಆಹಾರವನ್ನುಆನ್‌ಲೈನ್‌ನಿಂದ ಆರ್ಡರ್ ಮಾಡಿಕೊಳ್ಳುತ್ತಿದ್ದೆ. ನೀರಿನ ಬಾಟೆಲ್ ಕೈಗೆ ತಾಗದಿದ್ದರಿಂದ ನಾನು ನೀರು ಸಹ ಕುಡಿಯುತ್ತಿರಲಿಲ್ಲ. ರಾತ್ರಿ 1-2ರವರೆಗೆ ವೆಬ್ ಸಿರೀಸ್ ನೋಡುತ್ತಿದ್ದೆ. ಟಿವಿ ನೋಡುತ್ತಿದ್ರೆ ಹಾಗೆ ತಿನ್ನೋದು ಸಹ ನಡೆಯುತ್ತಿತ್ತು. ಮೆಟ್ಟಿಲು ಸಹ ಹತ್ತೋದಕ್ಕೆ ನನ್ನಿಂದ ಸಾಧ್ಯವಾಗದಿದ್ದಾಗ ತೂಕ ಇಳಿಸುವ ನಿರ್ಧಾರಕ್ಕೆ ಬಂದೆ ಎಂದು ಆದರ್ಶ್ ಸಿಂಗ್ ಹೇಳುತ್ತಾರೆ.
ವೇಟ್ ಲಾಸ್ ಜರ್ನಿ
ಒಂದೇ ದಿನ ಆಥವಾ ಕೆಲವೇ ತಿಂಗಳಲ್ಲಿ ತೂಕ ಕಡಿಮೆಯಾಗಲ್ಲ ಎಂಬ ಸತ್ಯವನ್ನು ತಿಳಿದುಕೊಂಡು ಜಿಮ್ ಸೇರಿದೆ. ಆರು ತಿಂಗಳು ಮಾಡಿದ್ರೆ ತೂಕ ಕಡಿಮೆಯಾಗಿರೋದನ್ನು ಕುಟುಂಬಸ್ಥರು, ಆಪ್ತರು ಮಾತ್ರ ಗಮನಿಸುತ್ತಾರೆ. ಅದೇ ಒಂದು ವರ್ಷ ಪ್ರಯತ್ನಿಸಿದ್ರೆ ಇಡೀ ಜಗತ್ತು ನನ್ನನ್ನು ನೋಡುತ್ತೆ ಎಂದು ಪರಿಶ್ರಮ ಹಾಕಿದೆ. ವೇಟ್ ಲಾಸ್ ಜರ್ನಿಯಲ್ಲಿ ನನ್ನ ನೆಚ್ಚಿನ ಆಹಾರಗಳೆಲ್ಲಾ ಕಣ್ಮುಂದೆ ಬರುತ್ತಿತ್ತು ಎಂದು ಹೇಳಿದ್ದಾರೆ ಆದರ್ಶ್ ಸಿಂಗ್.
ಆರೋಗ್ಯಕರ ಆಹಾರ ಪದ್ಧತಿ
ಎಲ್ಲರೂ ನನ್ನ ದೇಹವನ್ನು ಗುರಿಯಾಗಿಸಿ ಟೀಕಿಸುತ್ತಿದ್ದಾಗ ತುಂಬಾ ನೋವು ಆಗುತ್ತಿತ್ತು. ಇಂದು ಆ ಎಲ್ಲಾ ಟೀಕೆಗಳಿಂದಲೇ ತೂಕ ಇಳಿಸಿಕೊಂಡಿದ್ದೇನೆ. ಹಾಗಾಗಿ ನನ್ನನ್ನು ಟೀಕಿಸಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಅವರಿಂದಲೇ ವರ್ಕೌಟ್ ಮಾಡಲು ಆರಂಭಿಸಿ, ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇನೆ ಎಂದಿದ್ದಾರೆ.