46 ವರ್ಷಗಳ ಹಿಂದೆ ತಿರುಮಲದ ಗರ್ಭಗುಡಿಯಲ್ಲಿ ನಡೆದ ಘಟನೆಗೆ ಇಂದಿಗೂ ಸಿಕ್ಕಿಲ್ಲ ಉತ್ತರ
Lord Balaji unsolved mysteries: 1979ರ ನವೆಂಬರ್ 1 ರಂದು, ತಿರುಪತಿ ದೇವಸ್ಥಾನದ ಬಾಗಿಲು ಮುಚ್ಚಿದ್ದಾಗ ಅಚ್ಚರಿಯ ಘಟನೆಯೊಂದು ನಡೆದಿತ್ತು. ಆದರೆ ಬೆಳಗ್ಗೆ ಬಾಗಿಲು ತೆರೆದಾಗ ಅರ್ಚಕರು ಮತ್ತು ದೇಗುಲದ ಆಡಳಿತ ಸಿಬ್ಬಂದಿ ಆಶ್ಚರ್ಯಚಕಿತರಾಗಿದ್ದರು.

ತಿರುಪತಿಯ ಬಾಲಾಜಿ
ತಿರುಪತಿಯ ಶ್ರೀ ಬಾಲಾಜಿಯ ಒಂದು ಕ್ಷಣದ ದರ್ಶನಕ್ಕಾಗಿ ಭಕ್ತರು ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಕಾಯತ್ತಾರೆ. ಇಲ್ಲಿಗೆ ಬಂದ್ರೆ ಒಳ್ಳೆಯದಾಗುತ್ತೆ ಎಂಬುವುದು ಭಕ್ತರ ಅಚಲವಾದ ನಂಬಿಕೆಯಾಗಿದೆ. ಹಾಗಾಗಿ ಪ್ರತಿದಿನ ಲಕ್ಷಾಂತರ ಭಕ್ತರು ತಿರುಪತಿಗೆ ಬರುತ್ತಾರೆ.
1979ರ ಘಟನೆ
46 ವರ್ಷಗಳ ಹಿಂದೆ ಅಂದ್ರೆ 1979ರಲ್ಲಿ ತಿರುಪತಿಯ ಗರ್ಭಗುಡಿಯಲ್ಲಿ ನಡೆದ ಘಟನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಅದು ತಡರಾತ್ರಿ ನಡೆದ ಘಟನೆಯಾಗಿದ್ದರಿಂದ ಗರ್ಭಗುಡಿ ಒಳಗೆ ಹೋಗಲು ಯಾರಿಗೂ ಅವಕಾಶವಿರಲಿಲ್ಲ. ಹಾಗಾಗಿ ಅಂದಿನಿಂದ ಇಂದಿನವರೆಗೂ ಇದು ಅಚ್ಚರಿಯ ಘಟನೆಯಾಗಿದೆ. ಆ ಘಟನೆ ಏನು ಎಂದು ನೋಡೋಣ ಬನ್ನಿ.
ಏನಿದು ಅಚ್ಚರಿಯ ಘಟನೆ?
ಅದು 1 ನವೆಂಬರ್ 1979ರ ಘಟನೆ. ಅದು ಇದ್ದಕ್ಕಿದ್ದಂತೆ ರಾತ್ರಿ ಶ್ರೀನಿವಾಸ ಸ್ವಾಮಿಯ ದೇವಸ್ಥಾನದಲ್ಲಿನ ಘಂಟೆಗಳು ಮೊಳಗಲು ಆರಂಭಿಸಿದವು. ತಿರುಮಲದಲ್ಲಿ ರಾತ್ರಿ ಮುಚ್ಚಿದ ಬಾಗಿಲನ್ನು ಬೆಳಗ್ಗೆಯೇ ತೆರೆಯಲಾಗುತ್ತದೆ. ಇದು ಇಲ್ಲಿಯ ನಿಯಮ. ಆ ರಾತ್ರಿ ದೇವಾಲಯದೊಳಗೆ ಬಾರಿಸಲು ಶುರುವಾದ ಘಂಟೆ ಸದ್ದು, ತುಂಬಾ ದೂರದವರೆಗೆ ಕೇಳಿಸಿತು ಎಂದು ಭಕ್ತಾದಿಗಳು ಹೇಳುತ್ತಾರೆ. ಬಾಗಿಲು ಹಾಕಿದ್ದರಿಂದ ದೇವಾಸ್ಥಾನದೊಳಗೆ ಯಾರಿಗೂ ಪ್ರವೇಶವಿರಲಿಲ್ಲ
ತಿರುಮಲದ ಪವಾಡ
ಬೆಳಗ್ಗೆ ಬಂದು ದೇವಾಲಯದ ಬಾಗಿಲು ತೆಗೆದಾಗ ಭಕ್ತರಿಗೆ ಅತಿದೊಡ್ಡ ಅಚ್ಚರಿಯೊಂದು ಕಾದಿತ್ತು. ಅದು ಏನಂದ್ರೆ ದೇವಾಲಯದೊಳಗೆ ಯಾರು ಇರಲಿಲ್ಲ. ಆದ್ರೂ ಘಂಟೆಗಳ ಸದ್ದು ದೂರದವರೆಗೆ ಕೇಳಿಸಿತ್ತು. ಅಂದಿನಿಂದ ಈ ಘಟನೆಯನ್ನು ತಿರುಮಲದ ಪವಾಡ ಎಂದು ನಂಬಲಾಗಿದೆ. ಬಾಲಾಜಿ ಚಮತ್ಕಾರ ಎಂದು ಭಕ್ತರು ನಂಬುತ್ತಾರೆ.
ಇದನ್ನೂ ಓದಿ: ತಿರುಮಲದ ಮಹಿಳಾ ಭಕ್ತರಿಗೆ ಸ್ಪಂದಿಸಿದ ರಾಜ್ಯ ಸರ್ಕಾರ; ಶೀಘ್ರದಲ್ಲಿಯೇ ಅಧಿಕೃತ ಪ್ರಕಟಣೆ
ಈ ಪವಾಡದ ಅರ್ಥ ಏನು?
ಅರ್ಚಕರು ಮತ್ತು ದೇವಾಲಯದ ಆಡಳಿತ ಮಂಡಳಿ ಸದಸ್ಯರಿಗೂ ಇದು ಅಚ್ಚರಿಯ ಘಟನೆಯಾಗಿತ್ತು. ದೇವರು ತನ್ನ ಭಕ್ತರ ಮುಂದೆ ಕಾಣಿಸಿಕೊಳ್ಳಲು ಅಥವಾ ತನ್ನ ಇರುವಿಕೆಯನ್ನು ಸೂಚಿಸುವ ಮಾರ್ಗಗಳಲ್ಲಿ ಇದು ಒಂದಾಗಿದೆ ಎಂದು ನಂಬಲಾಗಿದೆ. ಇದೇ ರೀತಿಯ ಹಲವು ಕಥೆಗಳನ್ನು ಇಲ್ಲಿಯ ಭಕ್ತರು ಹೇಳುತ್ತಾರೆ. ದೇವಾಲಯದಲ್ಲಿ ನಡೆದಿದೆ ಎನ್ನಲಾದ ಹಲವು ಪವಾಡಗಳಲ್ಲಿ ಇದು ಒಂದಾಗಿದೆ.
ವಿಜ್ಞಾನ ಏನು ಹೇಳುತ್ತದೆ?
ದೇವಾಲಯದಲ್ಲಿ ನಡೆದಿರುವ ಘಟನೆ ಹಲವು ಅಚ್ಚರಿಗಳನ್ನ ವಿಜ್ಞಾನದಿಂದಲೂ ಸಹ ಪರಿಹರಿಸಲು ಆಗಿಲ್ಲ. ಆದ್ರೆ ಘಂಟೆ ಮೊಳಗಿದ್ದಕ್ಕೆ ವಿಜ್ಞಾನದಿಂದ ಒಂದು ಉತ್ತರ ಬಂದಿದೆ. ಗಾಳಿಯ ಒತ್ತಡ ಮತ್ತು ದೇವಾಲಯದ ರಚನೆಯಿಂದ ಉಂಟಾದ ಒತ್ತಡದಿಂದ ಘಂಟೆಗಳ ಕಂಪನವಾಗಿರು ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ಈ ಸುಳ್ಳು ಸುದ್ದಿ ನಂಬ್ಕೊಂಡು ತಿರುಪತಿಗೆ ಹೋದ್ರೆ ಸಮಸ್ಯೆಗೆ ಸಿಲುಕೋದು ಗ್ಯಾರಂಟಿ