MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • Ugadi 2022 Wishes: ಹಬ್ಬದ ಶುಭಾಶಯಗಳನ್ನು ಹೀಗೆ ಹೇಳಿ..

Ugadi 2022 Wishes: ಹಬ್ಬದ ಶುಭಾಶಯಗಳನ್ನು ಹೀಗೆ ಹೇಳಿ..

ಹಿಂದೂ ಹೊಸ ವರ್ಷವೆಂದರೆ, ಪುರಾಣ ಕತೆಗಳ ಪ್ರಕಾರ ಬ್ರಹ್ಮ ಈ ವಿಶ್ವವನ್ನು ಸೃಷ್ಟಿಸಿದ ದಿನ. ವಿಜ್ಞಾನಿಗಳು ಕೂಡಾ ಭೂಮಿಯು ಯುಗಾದಿಯಿಂದ ಯುಗಾದಿಗೆ ಒಂದು ಸುತ್ತು ಮುಗಿಸುವುದನ್ನು ಒಪ್ಪಿಕೊಂಡಿದ್ದಾರೆ. ಬ್ರಹ್ಮನಿಗೆ ಹೊಸ ಬೆಳಗೊಂದು ಆರಂಭವಾಗುವ ಈ ದಿನ ನಮಗೆ ಹೊಸ ವರ್ಷವೇ ಆಗಿದೆ. ಯುಗಾದಿ ಎಂದರೆ ಬೇವು ಬೆಲ್ಲ ಸವಿಯುತ್ತಾ ವರ್ಷದ ಸಿಹಿ ಕಹಿಗಳೆರಡನ್ನೂ ಸಮಚಿತ್ತದಿಂದ ನೋಡುವ ಧನಾತ್ಮಕ ಮನಸ್ಥಿತಿಯೊಂದಿಗೆ ಹಬ್ಬವನ್ನು ಸ್ವಾಗತಿಸುತ್ತೇವೆ. ಈ ದಿನ ಆಪ್ತರಿಗೆ ಬೇವು ಬೆಲ್ಲ ಹಂಚಿ, ಹಬ್ಬದ ಶುಭಾಶಯ ಹೇಳಲಾಗುತ್ತದೆ. ವಾಟ್ಸಾಪ್, ಫೇಸ್‌ಬುಕ್ ಎಲ್ಲೆಡೆ ಯುಗಾದಿ ಶುಭಾಶಯಗಳ ಹೊಳೆಯೇ ಹರಿಯುತ್ತದೆ. ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಹೀಗೆ ಎಲ್ಲರೂ ವಿಶ್ ಮಾಡುತ್ತಾರೆ. ಸ್ವಲ್ಪ ವಿಭಿನ್ನವಾಗಿ ಆದರೆ ಅಚ್ಚಕನ್ನಡದಲ್ಲಿ ಹಬ್ಬದ ಅಭಿನಂದನೆ ಹೇಳಲು ಐಡಿಯಾಗಳು ಇಲ್ಲಿವೆ.  

1 Min read
Author : Suvarna News
| Updated : Apr 02 2022, 11:00 AM IST
Share this Photo Gallery
  • FB
  • TW
  • Linkdin
  • Whatsapp
110

ದೇವರು ನಿಮಗೆ ಆಯುರಾರೋಗ್ಯ, ಸಂಪತ್ತು, ಶಾಂತಿ, ಸಮೃದ್ಧಿ ಕರುಣಿಸಲಿ. ಈ ವರ್ಷ ಸಂತೋಷದ ಹೊನಲಾಗಲಿ, ಯುಗಾದಿಯ ಶುಭಕಾಮನೆಗಳು.
 

210

ಎಲ್ಲ ಮನಸ್ತಾಪ, ಬೇಸರ, ಕಹಿಗಳನ್ನು ಮರೆತು ಸುಂದರವಾದ ಹೊಸ ವರ್ಷವನ್ನು ಎದುರು ನೋಡೋಣ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.

310

ನಮ್ಮ ಸಂತೋಷದಲ್ಲಿ ಸದಾ ಭಾಗಿಯಾಗುವ, ನೋವಿನಲ್ಲಿ ಸ್ಪಂದಿಸುವ ನಿಮಗೆ ಈ ಯುಗಾದಿಯು ಸರ್ವ ಸಂತೋಷಗಳನ್ನೂ ಹೊತ್ತು ತರಲಿ. ಹಬ್ಬದ ಶುಭಾಶಯಗಳು. 

410

ನಿಮಗೂ, ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಶುಭಾಶಯಗಳು. ದೇವರು ನಿಮಗೆ ಬಯಸಿದ್ದೆಲ್ಲವನ್ನೂ ಕರುಣಿಸಲಿ. ಶುಭಕೃತ್ ನಾಮ ಸಂವತ್ಸರದ ಶುಭಾಶಯಗಳು.

510
Ugadi Wsihes

Ugadi Wsihes

ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಹೊಸ ಭರವಸೆ, ಹೊಸ ಹುರುಪಿನೊಂದಿಗೆ ಜೀವನ ಆರಂಭಿಸೋಣ. ನಿಮಗೂ, ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಶುಭಾಶಯಗಳು.

610
Ugadi

Ugadi

ಈ ಯುಗಾದಿಯು ನಿಮ್ಮ ಜೀವನದಲ್ಲಿ ಬೆಲ್ಲವನ್ನೇ ಉಣ ಬಡಿಸಲಿ. ಬೇವು ಕಡಿಮೆ ಇರಲಿ. ನಿಮ್ಮೆಲ್ಲ ಕನಸುಗಳು ನನಸಾಗಲಿ. ಹ್ಯಾಪಿ ಯುಗಾದಿ
 

710
Here are the six ingredients used during the preparation of Bevu-Bella

Here are the six ingredients used during the preparation of Bevu-Bella

ಈ ಹೊಸ ವರ್ಷ ಎಲ್ಲರಿಗೂ ಮಂಗಳವನ್ನು ಆರೋಗ್ಯ, ನಿರ್ಭಯತೆ, ಸಂತಸವನ್ನು ನೀಡಲಿ. ಬೇವು ಬೆಲ್ಲ ಸವಿಯುತ ಕಹಿ ನೆನಪು ಮರೆಯಾಗಲಿ, ಸಿಹಿನೆನಪಿ ಚಿರವಾಗಿಲಿ.. ನಿಮ್ಮೆಲ್ಲ ಕನಸುಗಳು ನನಸಾಗಲಿ.. ಶುಭಕೃತು ನಾಮ ಸಂವತ್ಸರದ ಶುಭಾಶಯಗಳು. 

810

ಹೊಸ ಚಿಗುರು, ಹೊಸ ನಗು, ಹೊಸ ದಿನ, ಹೊಸ ಜೀವನ.. ಹೊಸ ವರ್ಷ ನಿಮ್ಮ ಜೀವನದಲ್ಲಿ ಹೊಸತನ ತರಲಿ..ದೇವರ ಆಶೀರ್ವಾದ ಸದಾ ಇರಲಿ. ಹಬ್ಬದ ಶುಭಾಶಯಗಳು. 
 

910

ಸೃಷ್ಟಿಯ ಮೊದಲ ದಿನ, ಹಸಿರೆಲೆಗಳು ಚಿಗುರೊಡೆವನ ದಿನ, ಬದುಕಲ್ಲಿ ಹೊಸ ಸಂತಸದ ಪುಟಗಳು ತೆರೆಯಲಿ. ಯುಗಾದಿ ಹಬ್ಬದ ಶುಭಕಾಮನೆಗಳು.

1010

ಜೀವನಕ್ಕೆ ಹಲವು ರುಚಿಗಳಿರುತ್ತವೆ ಎಂಬುದನ್ನು ಯುಗಾದಿ ನಮಗೆ ಕಲಿಸುತ್ತದೆ. ಎಲ್ಲವನ್ನೂ ಆಸ್ವಾದಿಸುವುದನ್ನು ಅಭ್ಯಾಸ ಮಾಡಿಕೊಳ್ಳೋಣ. ಸಿಹಿ ಇದ್ದಾಗ ಹಿಗ್ಗದೆ, ಕಹಿ ಬಂದಾಗ ಕುಗ್ಗದೆ ಮುಂದುವರಿಯೋಣ. ಶುಭಕೃತ್ ಸಂವತ್ಸರದ ಶುಭಾಶಯಗಳು. 

About the Author

SN
Suvarna News
ಯುಗಾದಿ ಹಬ್ಬ

Latest Videos
Recommended Stories
Recommended image1
ನಾಳೆ ಜನವರಿ 20 ದ್ವಿಪುಷ್ಕರ ಯೋಗ, ಈ 5 ರಾಶಿಗೆ ಅದೃಷ್ಟ, ಯಶಸ್ಸು
Recommended image2
ನಾಳೆ ಗ್ರಹಗಳ ದ್ವಿ ಸಂಚಾರ, ಜನವರಿ 20 ರಿಂದ, ಈ 4 ರಾಶಿಗೆ ಹೊಸ ಮನೆ, ಕಾರು, ಅದೃಷ್ಟ
Recommended image3
ಕೇತುವಿನ ಪ್ರಭಾವದಿಂದಾಗಿ 3 ರಾಶಿಗೆ ಕಠಿಣ ಸಮಯ, ಕಷ್ಟ-ನಷ್ಟ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved