Belly Fat : ನಮಗೆ ಅರಿವಿಲ್ಲದೆ ಕೊಬ್ಬು ಹೆಚ್ಚಾಗಿರುತ್ತೆ, ಫ್ಲಾಟ್ ಇದ್ದ ಹೊಟ್ಟೆ ದೊಡ್ಡದಾಗಿರುತ್ತೆ. ಒಮ್ಮೆ ಏರಿದ ತೂಕ ಇಳಿಸೋದು ಸುಲಭ ಅಲ್ಲ. ಈ ಹೊಟ್ಟೆ ಇಳಿಸೋಕೆ ನೀವು ಬಾಯಿ ಕಟ್ಲೇಬೇಕು.
ತೂಕ ಹೆಚ್ಚಾದಾಗ ಮೊದಲು ಕಾಣಿಸೋದೇ ದೊಡ್ಡ ಹೊಟ್ಟೆ (Belly. )ಇಷ್ಟದ ಡ್ರೆಸ್ ಧರಿಸೋಕೆ ಹೊಟ್ಟೆ ಅಡ್ಡಿಯಾಗುತ್ತೆ. ಜಿಮ್ ಗೆ ಹೋಗಿ ವರ್ಕ್ ಔಟ್ ಮಾಡಿದ್ರೂ ಹೊಟ್ಟೆ ಕರಗೋದು ಕಷ್ಟ. ಅನೇಕರು ಹೊಟ್ಟೆ ಕಡಿಮೆ ಮಾಡ್ಕೊಳ್ಳೋಕೆ ಅಂತಾನೆ ಜಿಮ್, ಯೋಗ, ವಾಕಿಂಗ್ ಮೊರೆ ಹೋಗ್ತಾರೆ. ಏನೇ ಮಾಡಿದ್ರೂ ಹೊಟ್ಟೆ ಸೈಜ್ ಇದ್ದ ಹಾಗೆ ಇರುತ್ತೆ. ಇದಕ್ಕೆ ಕಾರಣ ನೀವು ತಿನ್ನೋ ಆಹಾರ. ನಾವು ತಿನ್ನೋ ಕೆಲ ಆಹಾರ (food) ನಮ್ಮ ಹೊಟ್ಟೆ ಕರಗಿಸಿದ್ರೆ ಮತ್ತೆ ಕೆಲ ಆಹಾರ ಹೊಟ್ಟೆಯ ಗಾತ್ರವನ್ನು ಹೆಚ್ಚು ಮಾಡ್ತಾ ಹೋಗುತ್ತೆ. ಹೊಟ್ಟೆ ಕರಗಬೇಕು ಅಂದ್ರೆ ಬೆವರಿಳಿಸಿದ್ರೆ ಸಾಕಾಗೋದಿಲ್ಲ. ನೀವು ಯಾವ ಆಹಾರ ತಿನ್ತೀರಿ ಎಂಬುದು ಮುಖ್ಯವಾಗುತ್ತೆ. ಹೊಟ್ಟೆ ಕಡಿಮೆ ಆಗ್ಬೇಕು ಅಂದ್ರೆ ಮೊದಲು ನಿಮ್ಮ ಅಡುಗೆ ಮನೆಯಿಂದಲೇ ಪ್ಲಾನ್ ಶುರು ಮಾಡಿ. ಕೆಲವೊಂದು ಆಹಾರವನ್ನು ಅಪ್ಪಿತಪ್ಪಿಯೂ ಟಚ್ ಮಾಡ್ಬೇಡಿ.
ಹೊಟ್ಟೆ ಕರಗಬೇಕು ಅಂದ್ರೆ ಈ ಆಹಾರವನ್ನು ತಿನ್ಬೇಡಿ :
ಶುಗರ್ ಡ್ರಿಂಕ್ : ಅನೇಕ ಡ್ರಿಂಕ್ಸ್ ನಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿರುತ್ತೆ. ಸೋಡಾ, ಎನರ್ಜಿ ಡ್ರಿಂಕ್ ನಲ್ಲಿರುವ ಸಕ್ಕರೆ ಇನ್ಸುಲಿನ್ ಹೆಚ್ಚಿಸುತ್ತೆ. ಇದ್ರಿಂದ ಕೊಬ್ಬು ಹೆಚ್ಚಾಗುತ್ತೆ. ಇದ್ರಲ್ಲಿ ಯಾವ್ದೇ ಪೋಷಕಾಂಶ ಇರೋದಿಲ್ಲ, ಇದು ಹೊಟ್ಟೆ ಉಬ್ಬಿಸೋದಲ್ದೆ ತೂಕ ಹೆಚ್ಚಿಸುತ್ತೆ.
Healthy Sweets: ಇವು ಆರೋಗ್ಯಯುತ ಸ್ವೀಟ್ಸ್… ಕ್ಯಾಲರಿ ಹೆಚ್ಚುತ್ತೆ ಎನ್ನುವ ಭಯ ಬಿಟ್ಟು ತಿನ್ನಿ
ವೈಟ್ ಬ್ರೆಡ್ ಮತ್ತು ಸಂಸ್ಕರಿಸಿದ ಧಾನ್ಯ : ಪೋಷಕಾಂಶ ಮತ್ತು ನಾರಿನಂಶವಿಲ್ಲದ, ಬಿಳಿ ಬ್ರೆಡ್ ಮತ್ತು ಸಂಸ್ಕರಿಸಿದ ಧಾನ್ಯಗಳು ರಕ್ತದಲ್ಲಿನ ಸಕ್ಕರೆಯನ್ನು ವೇಗವಾಗಿ ಹೆಚ್ಚಿಸುತ್ತವೆ. ಹಸಿವು ಹೆಚ್ಚು ಮಾಡುತ್ತದೆ. ಇದ್ರಿಂದ ಜನರು ಹೆಚ್ಚು ತಿನ್ನಲು ಇಷ್ಟಪಡ್ತಾರೆ. ನಿಮ್ಮ ಅತಿಯಾದ ತಿನ್ನುವಿಕೆ ಹೊಟ್ಟೆಯ ಸುತ್ತಲೂ ಕೊಬ್ಬನ್ನು ಹೆಚ್ಚಿಸುತ್ತದೆ.
ಫ್ರೈಡ್ ಫುಡ್ ನಿಂದ ದೂರ ಇರಿ : ಮಳೆಗಾಲ, ಚಳಿಗಾಲದಲ್ಲಿ ಬಿಸಿ ಬಿಸಿಯಾದ ಕರಿದ ಆಹಾರವನ್ನು ಬಾಯಿ, ಮನಸ್ಸು ಕೇಳುತ್ತದೆ. ಜನರು ಟೀ ಜೊತೆ ಬಜ್ಜಿ, ಬೋಂಡಾ ಸೇವನೆ ಹೆಚ್ಚು ಮಾಡ್ತಾರೆ. ಈ ಆಹಾರಗಳು ಅನಾರೋಗ್ಯಕರ ಟ್ರಾನ್ಸ್ ಕೊಬ್ಬುಗಳು ಮತ್ತು ಹೆಚ್ಚುವರಿ ಕ್ಯಾಲೋರಿಯಿಂದ ತುಂಬಿರುತ್ತವೆ. ಚಿಪ್ಸ್ ನಂತಹ ಆಹಾರ ಹೊಟ್ಟೆಯ ಕೊಬ್ಬು ಮತ್ತು ಉರಿಯೂತಕ್ಕೆ ನೇರವಾಗಿ ಕಾರಣವಾಗುತ್ತದೆ.
ಹೊಟ್ಟೆಯ ಕೊಬ್ಬಿಗೆ ಆಲ್ಕೋಹಾಲ್ ಶತ್ರು : ಆಲ್ಕೋಹಾಲ್ ನಮ್ಮ ದೇಹದ ಪ್ರತಿಯೊಂದು ಅಂಗಕ್ಕೂ ಹಾನಿಯುಂಟು ಮಾಡುತ್ತದೆ. ಕೊಬ್ಬಿನ ಹೆಚ್ಚಳಕ್ಕೂ ಇದು ಕಾರಣ. ನೀವು ಆಗಾಗಾ ಮದ್ಯಪಾನ ಮಾಡುವುದ್ರಿಂದ ಚಯಾಪಚಯ ನಿಧಾನಗೊಳ್ಳುತ್ತದೆ. ಇದು ಕೂಡ ಕ್ಯಾಲೋರಿ ಹೆಚ್ಚಿಸುವ ಜೊತೆಗೆ ಹಸಿವನ್ನು ಹೆಚ್ಚಿಸುತ್ತದೆ.
ಫ್ರೆಂಚ್ ಮಹಿಳೆಯರು ಚಾಕೊಲೇಟ್, ಬಟರ್ ತಿಂದ್ರೂ ದಪ್ಪಗಾಗೊಲ್ಲ ಏಕೆ? ಪ್ರಸಿದ್ಧ ಲೇಖಕಿ ರಿವೀಲ್
ಸಂಸ್ಕರಿಸಿದ ಮಾಂಸಗಳಿಂದ ದೂರ ಇರಿ : ಬೇಕನ್, ಸಾಸೇಜ್ಗಳು ಮತ್ತು ಡೆಲಿ ಕಟ್ಗಳಲ್ಲಿ ಸೋಡಿಯಂ ಮತ್ತು ಸ್ಯಾಚುರೇಟೆಡ್ ಕೊಬ್ಬಿನಾಂಶ ಅಧಿಕವಾಗಿರುತ್ತದೆ. ಇದು ಹೊಟ್ಟೆ ಉಬ್ಬಿಸುತ್ತದೆ. ಹೊಟ್ಟೆ ಒಳಭಾಗದ ಕೊಬ್ಬನ್ನು ಹೆಚ್ಚಿಸುತ್ತದೆ. ಹೃದಯ ಕಾಯಿಲೆಯಂತಹ ದೀರ್ಘಕಾಲೀನ ಆರೋಗ್ಯ ಅಪಾಯಗಳಿಗೆ ಕಾರಣವಾಗುತ್ತದೆ.
ಕೊಬ್ಬನ್ನು ಹೆಚ್ಚಿಸುತ್ತೆ ಪ್ಯಾಕ್ಡ್ ಫುಡ್ : ಈಗಿನ ದಿನಗಳಲ್ಲಿ ಪ್ಯಾಕ್ ಮಾಡಿದ ಆಹಾರಗಳ ಸಂಖ್ಯೆ ಹೆಚ್ಚಾಗಿದೆ. ಜನರು ಇದ್ರ ಖರೀದಿ ಹೆಚ್ಚು ಮಾಡಿದ್ದಾರೆ. ಕುಕೀಸ್, ಕ್ರ್ಯಾಕರ್ಗಳು ಮತ್ತು ಪೇಸ್ಟ್ರಿಗಳನ್ನು ಕ್ವಿಕ್ ಸ್ನ್ಯಾಕ್ಸ್ ಎನ್ನಲಾಗುತ್ತದೆ. ಇವುಗಳಲ್ಲಿ ಸಕ್ಕರೆ ಮತ್ತು ಹೈಡ್ರೋಜನೀಕರಿಸಿದ ಎಣ್ಣೆ ಇದೆ. ಇವು ಕ್ಯಾಲೋರಿ ಹೆಚ್ಚಿಸುತ್ತೆ. ಹೊಟ್ಟೆ ಸುತ್ತಲೂ ಕೊಬ್ಬನ್ನು ಹೆಚ್ಚು ಮಾಡುತ್ತದೆ.
