Ramachari Serial : ಸೀರಿಯಲ್ ಮಾಡ್ತಾ ಮಾಡ್ತಾ ರಾಮಾಚಾರಿ ಹಾಗೂ ಚಾರು ಪರಸ್ಪರ ಸಾಕಷ್ಟು ಅರ್ಥ ಮಾಡ್ಕೊಂಡಿದ್ದಾರೆ. ಫೋನ್ ಪಾಸ್ವರ್ಡ್ ಕೂಡ ಹಂಚಿಕೊಂಡಿದ್ದಾರೆ. ಅವರಿಬ್ಬರ ಹೊಂದಾಣಿಕೆ ನೋಡಿ, ಜನರಿಗೆ ಅನುಮಾನ ಶುರುವಾಗಿದೆ. 

ಕಲರ್ಸ್ ಕನ್ನಡ (Colors Kannada )ದಲ್ಲಿ ಪ್ರಸಾರ ಆಗ್ತಿರುವ ರಾಮಾಚಾರಿ (Ramachari) ಸೀರಿಯಲ್ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ ಎನ್ನುವ ಮಾತುಗಳು ಕೇಳಿ ಬರ್ತಿವೆ. ಸದ್ಯ ರಾಮಾಚಾರಿ ಹಾಗೂ ಯಜಮಾನ ಸೀರಿಯಲ್ ಮಿಲನವಾಗಿದ್ದು, ಸೀರಿಯಲ್ ಟೈಮ್ ಕೂಡ ಬದಲಿಸಲಾಗಿದೆ. ಸೋಮವಾರದಿಂದ ರಾಮಾಚಾರಿ ಹಾಗೂ ಯಜಮಾನ ಸೀರಿಯಲ್ ಮಿಲನ ಸಂಜೆ ಆರು ಗಂಟೆಗೆ ಪ್ರಸಾರ ಆಗಲಿದೆ. ರಾಮಾಚಾರಿ ಸೀರಿಯಲ್ ನಲ್ಲಿ ಸದ್ಯ ಚಾರು ಸೀಮಂತ ಅದ್ಧೂರಿಯಾಗಿ ನಡೆದಿದೆ. ನಿಜ ಜೀವನದಲ್ಲಿ ಮಾಡುವಂತೆ ಚಾರು ಸೀಮಂತವನ್ನು ಮಾಡಲಾಗಿದೆ. ಇದ್ರ ಫೋಟೋಗಳನ್ನು ಚಾರು ಅಲಿಯಾಸ್ ಮೌನಾ ಗುಡ್ಡೆಮನೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈಗ ಕಲರ್ಸ್ ಕನ್ನಡ ಜನಮೆಚ್ಚಿದ ಈ ಜೋಡಿಯ ವಿಡಿಯೋ ಒಂದನ್ನು ಪೋಸ್ಟ್ ಮಾಡಿದೆ. ಈಗಿನ ಕಾಲದಲ್ಲಿ ಗಂಡ – ಹೆಂಡ್ತಿನೇ ತಮ್ಮ ಮೊಬೈಲ್ ಪಾಸ್ವರ್ಡ್ ಶೇರ್ ಮಾಡೋದಿಲ್ಲ. ಅಂತದ್ರಲ್ಲಿ ಮೌನಾ ಗುಡ್ಡೆಮನೆ ಹಾಗೂ ರಾಮಾಚಾರಿ ಅಲಿಯಾಸ್ ರಿತ್ವಿಕ್ ಕ್ರುಪಕರ್ ಗೆ ಪರಸ್ಪರ ಮೊಬೈಲ್ ಪಾಸ್ವರ್ಡ್ ಗೊತ್ತು ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ರಾಮಾಚಾರಿ – ಚಾರುಗೆ ಗೊತ್ತು ಮೊಬೈಲ್ ಪಾಸ್ವರ್ಡ್ : ಸೀಮಂತ ಶಾಸ್ತ್ರದಲ್ಲಿ ರಾಮಾಚಾರಿ ಹಾಗೂ ಚಾರುಗೆ ಒಂದಿಷ್ಟು ಪ್ರಶ್ನೆಗಳನ್ನು ಕೇಳಲಾಗಿದೆ. ಈ ವೇಳೆ ರಾಮಾಚಾರಿ ಹಾಗೂ ಚಾರು ತಮಗಿಬ್ಬರಿಗೂ ಪರಸ್ಪರ ಮೊಬೈಲ್ ಪಾಸ್ವರ್ಡ್ ಗೊತ್ತು ಎಂದಿದ್ದಾನೆ. ರಾಮಾಚಾರಿಗೆ ಫೋನ್ ಬಂದ್ರೆ ನಾನು ರಿಸೀವ್ ಮಾಡ್ತೆನೆ. ನನಗೆ ಫೋಸ್ ಬಂದ್ರೆ ರಾಮಾಚಾರಿ ರಿಸೀವ್ ಮಾಡೋದಿಲ್ಲ. ಆದ್ರೆ ತುರ್ತು ಪರಿಸ್ಥಿತಿಯಲ್ಲಿ ರಿಸೀವ್ ಮಾಡ್ತಾರೆ ಅಂತ ಚಾರು ಹೇಳಿದ್ದಾರೆ.

Amruthadhaare Serial: ಮನೆಹಾಳಿ ಶಕುಂತಲಾ‌, ಜಯದೇವ್‌ಗೆ ಮುಂದೆ ಇದೆ ಗತಿ ಬರೋದು; ಸೂಚನೆ ಕೊಟ್ಟ ಡೈರೆಕ್ಟರ್!

ಮೊದಲು ಸಾರಿ ಕೇಳೋದ್ಯಾರು ? : ಕಲರ್ಸ್ ಕನ್ನಡ ಕೇಳಿದ ಇನ್ನಷ್ಟು ಪ್ರಶ್ನೆಗೆ ರಾಮಾಚಾರಿ ಹಾಗೂ ಚಾರು ಉತ್ತರ ನೀಡಿದ್ದಾರೆ. ಇಬ್ಬರಲ್ಲಿ ಯಾರು ಸಾರಿ ಕೇಳ್ತಿರಾ ಎನ್ನುವ ಪ್ರಶ್ನೆಗೆ ಚಾರು ಇಬ್ಬರೂ ಅಂತ ಉತ್ತರ ನೀಡಿದ್ದಾರೆ. ಚಾರುಗಿಂತ ರಾಮಾಚಾರಿ ಹೆಚ್ಚು ಸಾರಿ ಕೇಳ್ತಾರಂತೆ. ಸಾರಿ ಭರದಲ್ಲಿ ಗಲಾಟೆ ಆಗಿದ್ದೇನು ಅನ್ನೋದೇ ಇಬ್ರಿಗೂ ಮರೆತುಹೋಗುತ್ತಂತೆ.

ಯಾರ ಬಳಿ ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದಾರೆ ರಾಮಾಚಾರಿ? : ಸಂದರ್ಭಕ್ಕೆ ತಕ್ಕಂತೆ ಸುಳ್ಳು ಹೇಳಿದ್ದೇನೆ ಅಂತ ಚಾರು ಹೇಳಿದ್ರೆ, ರಾಮಾಚಾರಿ ಸುಳ್ಳು ಹೇಳಿ ಸಿಕ್ಕಿ ಬಿದ್ದಿದ್ದನ್ನು ಒಪ್ಪಿಕೊಂಡಿದ್ದಾರೆ. ಅಪ್ಪ – ಅಮ್ಮ ಮಾತ್ರ ಅಲ್ಲ ಚಾರು ಅಮ್ಮನ ಬಳಿಯೂ ಸುಳ್ಳು ಹೇಳಿ ಸಿಕ್ಕಿ ಬಿದ್ದಿದ್ದೇನೆ ಎಂದಿದ್ದಾರೆ. ಆದ್ರೆ ಚಾರು ಮತ್ತು ರಾಮಾಚಾರಿ ಪರಸ್ಪರ ಸುಳ್ಳು ಹೇಳೋದಿಲ್ವಂತೆ.

ಚಾರುಗೆ ಕಾಂಪ್ಲಿಮೆಂಟ್ ನೀಡ್ತಾರೆ ರಾಮಾಚಾರಿ : ರಾಮಾಚಾರಿಗೆ ಖುಷಿಯಾಗ್ಲಿ ಅಂತ ಸುಂದರವಾಗಿ ರೆಡಿ ಆಗುವ ಚಾರು ಸೌಂದರ್ಯವನ್ನು ರಾಮಾಚಾರಿ ಹೊಗಳಿದ್ದಿದೆ. ಆಗಾಗ ತುಂಬಾ ಸುಂದರವಾಗಿ ಕಾಣ್ತಿದ್ದೀರಿ ಅಂತ ರಾಮಾಚಾರಿ ಕಾಂಪ್ಲಿಮೆಂಟ್ ಕೊಡ್ತಾರಂತೆ.

Bramhagantu Serial Actress: ಬ್ಲ್ಯಾಕ್ & ವೈಟಲ್ಲೂ ಸಖತ್ ಸುಂದರಿ ಬ್ರಹ್ಮಗಂಟು ದೀಪಾ…. ದಿಯಾ ಪಾಲಕ್ಕಲ್

ಇಬ್ಬರೂ ಪ್ರೀತಿ ಮಾಡ್ತಾರೆ? : ರಾಮಾಚಾರಿ ಹಾಗೂ ಚಾರು ಇಬ್ಬರೂ ಪ್ರೀತಿ ಮಾಡ್ತಾರಂತೆ. ನಾವಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಕೊಡೋದಿಲ್ಲ ಅಂತ ಚಾರು ಹೇಳಿದ್ದಾರೆ.

ನಿಜವಾಗ್ಲೂ ಪ್ರೀತಿಯಲ್ಲಿ ಬಿದ್ದಿದ್ಯಾ ಜೋಡಿ? : ಸೀರಿಯಲ್ ಮಾಡ್ತಾ, ಆಕ್ಟಿಂಗ್ ಮಾಡ್ತಾ ಅನೇಕ ಕಲಾವಿದರು ಪರಸ್ಪರ ಒಬ್ಬರನ್ನೊಬ್ಬರು ಅರಿತುಕೊಂಡಿರ್ತಾರೆ. ಆಕ್ಟಿಂಗ್ ಮಧ್ಯೆ ಪ್ರೀತಿ ಚಿಗುರಿ ಮದುವೆ ಆಗಿದ್ದಿದೆ. ಕನ್ನಡ ಸಿನಿ ಉದ್ಯಮದಲ್ಲಿಯೇ ಇಂಥ ಜೋಡಿಗಳ ಸಂಖ್ಯೆ ಸಾಕಷ್ಟಿದೆ. ಈಗ ಚಾರು ಹಾಗೂ ರಾಮಾಚಾರಿ ರಿಯಾಕ್ಷನ್ ನೋಡಿ ಜನ, ಅದೇ ಅನುಮಾನ ವ್ಯಕ್ತಪಡಿಸಿದ್ದಾರೆ. ಇಬ್ಬರ ಮಧ್ಯೆ ಇರುವ ಹೊಂದಾಣಿಕೆ ನೋಡಿದ ಜನರು, ಇಬ್ಬರು ಖರೇ ಮದುವೆ ಆಗಿದ್ದೀರಾ ಅಂತ ಪ್ರಶ್ನೆ ಮಾಡಿದ್ದಾರೆ.