ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅಮೆರಿಕ ಪ್ರವಾಸದಲ್ಲಿದ್ದು, ತಮ್ಮ ರೀಲ್ಸ್‌ಗಳಿಂದ ಸದಾ ಸುದ್ದಿಯಲ್ಲಿದ್ದಾರೆ. ಇದೀಗ ಫ್ಲೋರಿಡಾದ ಪಬ್ ಒಂದರಲ್ಲಿ 'ನನ್ನ ಜೊತೆ ಕೆಟ್ಟದಾಗಿ ಮಾತನಾಡು' ಎಂಬ ಬರಹವನ್ನು ತೋರಿಸಿ ವಿಡಿಯೋ ಮಾಡಿದ್ದು, ಇದು ನೆಟ್ಟಿಗರ ಟೀಕೆಗೆ ಗುರಿಯಾಗಿದೆ.
Bigg Boss fame ನಿವೇದಿತಾ ಗೌಡ ದಿನಕ್ಕೊಂದರಂತೆ ವಿಡಿಯೋ ಹಾಕಿ ಎಲ್ಲರ ಹುಬ್ಬೇರಿಸುತ್ತಿದ್ದಾರೆ. ಈಕೆ ತೊಡುವ ಡ್ರೆಸ್ಗಳು ದಿನದಿಂದ ದಿನಕ್ಕೆ ಚಿಕ್ಕದಾಗುತ್ತಾ ಬಂದಿರುವ ಕಾರಣ ಇನ್ನಿಲ್ಲದಂತೆ ಟ್ರೋಲ್ ಕೂಡ ಮಾಡಲಾಗುತ್ತಿದೆ. ಈಕೆಯ ಜೊತೆ ಯಾರೇ ಕಾಣಿಸಿಕೊಂಡರೂ ಅವರ ಜೊತೆ ನಟಿಗೆ ಲಿಂಕ್ ಮಾಡುವ ಪರಿಪಾಠವೂ ಹೆಚ್ಚಾಗಿದೆ. ಯಾರೇ ಕೆಟ್ಟ ಕಮೆಂಟ್ ಮಾಡಲಿ, ಏನೇ ಹೇಳಲಿ ಅವುಗಳಿಗೆ ನಿವೇದಿತಾ ಡೋಂಟ್ ಕೇರ್. ಇದೀಗ ಲಂಡನ್, ಅಮೆರಿಕ ಎಂದೆಲ್ಲಾ ಫಾರಿನ್ ಟೂರ್ ಮಾಡುತ್ತಿದ್ದಾರೆ. ಕೆಲ ದಿನಗಳಿಂದ ಅಮೆರಿಕದ ಫ್ಲೋರಿಡಾದಲ್ಲಿ ಎಂಜಾಯ್ ಮಾಡುತ್ತಿದ್ದು ಅದರ ಭಿನ್ನ ಭಿನ್ನ ವಿಡಿಯೋ ಶೇರ್ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನ್ಯೂಯಾರ್ಕ್ನಲ್ಲಿ ಕಾಣಿಸಿಕೊಂಡಿದ್ದ ನಿವ್ವಿ , ನ್ಯೂಯಾರ್ಕ್ ಬೀದಿಯಲ್ಲಿ ಅವರು ಕನ್ನಡದ ಹಾಡಿಗೆ ರೀಲ್ಸ್ ಮಾಡಿ ಕನ್ನಡಿಗರ ಮನಸ್ಸನ್ನು ಗೆದ್ದಿದ್ದರು.
ನನ್ನ ಜೊತೆ ಕೆಟ್ಟದಾಗಿ ಮಾತನಾಡು' ಎನ್ನುವ ಬರಹ
ಅಷ್ಟಕ್ಕೂ ಇಂದಿನ ಹಲವು ಕನ್ನಡ ಹಾಡುಗಳು ಅದು ಕನ್ನಡ ಎಂದು ತಿಳಿಯಬೇಕಿದ್ದರೆ ಹಲವರು ಕಷ್ಟಪಡುವ ಸ್ಥಿತಿ ಇದೆ ಅನ್ನಿ. ಕನ್ನಡದಲ್ಲಿಯೂ rampಗಳು ಜಾಸ್ತಿಯಾಗಿದ್ದರಿಂದ ಅದು ಯಾವ ಭಾಷೆ ಎಂದು ತಿಳಿಯುವುದಕ್ಕೆ ಹಳಬರಿಗೆ ಸ್ವಲ್ಪ ಕಷ್ಟನೇ ಆಗುತ್ತದೆ. ಆದರೆ ನಿವೇದಿತಾ ಮಾತ್ರ ವಿದೇಶದಲ್ಲಿಯೂ ಕನ್ನಡದ ಹಾಡನ್ನು ಸಂಭ್ರಮಿಸಿ, ಅಲ್ಲಿದ್ದವರನ್ನೂ ಕುಣಿಸಿದ್ದರಿಂದ ಕನ್ನಡಿಗರು ಖುಷಿ ಪಟ್ಟುಕೊಂಡಿದ್ದರು. ಇದೀಗ ಫ್ಲೋರಿಡಾದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇಲ್ಲಿ ಗಮನ ಸೆಳೆದದ್ದು ಒಂದೆಡೆ ಇರುವ ಬರಹ. ಅಲ್ಲಿ 'ನನ್ನ ಜೊತೆ ಕೆಟ್ಟದಾಗಿ ಮಾತನಾಡು' (Talk dirty to me) ಎಂದು ಬರೆದಿದೆ. ಅದನ್ನೇ ವಿಡಿಯೋದಲ್ಲಿ ತೋರಿಸುವ ಮೂಲಕ ನಿವೇದಿತಾ ಎಲ್ಲರನ್ನೂ ಕೈಸನ್ನೆಯಲ್ಲಿ ಕರೆದು ಒಳಗೆ ಹೋಗಿದ್ದಾರೆ.
ಇದನ್ನೂ ಓದಿ; Nivedita Gowda: ಅದೂ ಇದೂ ನೋಡ್ಬೇಡಿ... ನ್ಯೂಯಾರ್ಕ್ನಲ್ಲಿ ನನ್ನ ಕನ್ನಡ ಪ್ರೇಮನೂ ನೋಡಿ ಸ್ವಲ್ಪ!
ಜೂಜು ಅಡ್ಡೆ, ಪಬ್ನಲ್ಲಿ ತಿರುಗಾಟ
ಹಾಗೆ ನೋಡಿದರೆ ಅದೊಂದು ಪಬ್ ರೀತಿಯಲ್ಲಿ ಕಾಣಿಸುತ್ತದೆ. ಅಲ್ಲಿ ಎಲ್ಲರೂ ಇವರ ಹಾಗೆಯೇ ತುಂಡುಡುಗೆಯಲ್ಲಿ ಕುಣಿಯುತ್ತಿರುವುದನ್ನು ನೋಡಬಹುದು. ಅಲ್ಲಿಯ ಫುಲ್ ದೃಶ್ಯವನ್ನು ನಿವೇದಿತಾ ತೋರಿಸಿಲ್ಲ. ಇದಾಗಲೇ ಶ್ರೀಲಂಕದ ಜೂಜು ಅಡ್ಡೆಗೂ ಹೋಗಿ ಬಂದಿರೋ ನಿವೇದಿತಾ ಪಬ್, ಬಾರ್ ಎಂದೇ ಸುತ್ತುತ್ತಿರುವಂತೆ ಕಾಣಿಸುತ್ತಿದೆ. ಅಷ್ಟಕ್ಕೂ ಚಂದನ್ ಶೆಟ್ಟಿ ಅವರ ಜೊತೆಗೆ ಇರುವಾಗಲೂ ನಿವೇದಿತಾ ರೀಲ್ಸ್ ಮಾಡುತ್ತಿರಲಿಲ್ಲ ಎಂದೇನಲ್ಲ. ಆದರೆ ಡಿವೋರ್ಸ್ ಆದ್ಮೇಲೆ ರೀಲ್ಸ್ ಹೆಚ್ಚಾಗಿದೆ. ನೀವು ಮುಖ ತೋರಿಸಲು ರೀಲ್ಸ್ ಮಾಡ್ತಿರೋ, ಇನ್ನೇನು ತೋರಿಸಲೋ ಎನ್ನುವಷ್ಟರ ಮಟ್ಟಿಗೆ ಈಕೆಯ ರೀಲ್ಸ್ ಕೆಟ್ಟ ಕಮೆಂಟುಗಳಿಂದಲೇ ಈಗಲೂ ತುಂಬಿ ಹೋಗುವುದೇ ಇದೆ.
ಹೆಚ್ಚುತ್ತಿದೆ ತುಂಡುಡುಗೆ ರೀಲ್ಸ್
ಹೊಸ ವರ್ಷದ ಸಂದರ್ಭದಲ್ಲಿ ನ್ಯೂಯಾರ್ಕ್ನಲ್ಲೇ ಇದ್ದ ನಟಿ ಅಲ್ಲಿಯ ವಿಡಿಯೋ ಶೇರ್ ಮಾಡಿ, ಈ ವಿಡಿಯೋ ಅನ್ನು ಜೈ ಮದ್ದಳೇನ ಎನ್ನುವವರಿಗೆ ನಿವೇದಿತಾ ಟ್ಯಾಗ್ ಮಾಡಿದ್ದರು. ಕ್ರಿಸ್ಮಸ್ ಆಚರಿಸುತ್ತಿರುವುದಾಗಿ ನಿವೇದಿತಾ ಹೇಳಿಕೊಂಡಿರುವ ಹಿನ್ನೆಲೆಯಲ್ಲಿ ಮತಾಂತರಗೊಂಡ್ರಾ ಎಂದು ನೆಟ್ಟಿಗರು ತಮಾಷೆ ಮಾಡಿದ್ದರು. ಸಾಲದು ಎನ್ನುವುದಕ್ಕೆ ಈ ಹೊಸ ಹುಡುಗ ಯಾರು ಎನ್ನುವ ಬಗ್ಗೆ ಇನ್ನೂ ತಡಕಾಟ ನಡೆಸಿದ್ದರು. ಇದೀಗ ಕನ್ನಡದ ಪ್ರೇಮಕ್ಕೆ ಸಲಾಂ ಎಂದಿದ್ದಾರೆ.
ಇದನ್ನೂ ಓದಿ; ವರ್ತೂರ್ ಜೊತೆ ನಾನು ಮದ್ವೆ ಆಗ್ತೇನಂತಾ ಹೇಳಿದ್ನಾ? ತನಿಷಾ ಕುಪ್ಪಂಡ ಇಷ್ಟು ಗರಂ ಆಗಿದ್ಯಾಕೆ?
