* ಲಸಿಕೆ ಕೊರತೆಗೆ ಪರಿಹಾರ ನೀಡುವಲ್ಲಿ ವಿಜ್ಞಾನಿಗಳ ಹೆಜ್ಜೆ
* ಮೊದಲನೆ ಡೋಸ್ ಒಂದು, ಎರಡನೇ ಡೋಸ್ ಇನ್ನೊಂದು
* ಲಸಿಕೆ ಮಿಕ್ಸ್ ಮ್ಯಾಚ್ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ಚರ್ಚೆ
* ಈಗಾಗಲೇ ಕ್ಲಿನಿಕಲ್ ಟ್ರಯಲ್ ಗೆ ಅನುಮತಿ ನೀಡಿದ ಕೆಲ ದೇಶಗಳು
ನವದೆಹಲಿ(ಜೂ. 06) ಭಾರತದಂತಹ ದೇಶದಲ್ಲಿ ಅನೇಕರು ಕೊರೋನಾ ಲಸಿಕೆ ಎರಡನೇ ಡೋಸ್ ನಿರೀಕ್ಷೆಯಲ್ಲಿ ಇದ್ದಾರೆ. ಇನ್ನೊಂದು ಕಡೆ ಮೂರನೇ ಬೂಸ್ಟರ್ ಡೋಸ್ ಬಗ್ಗೆಯೂ ಮಾತುಗಳು ಬಂದಿವೆ. ಇಂಥ ವಿಚಾರಕ್ಕೆ ಸಂಬಂಧಿಸಿ ನಡೆದ ಸ್ಟಡಿಯ ಕೆಲವು ಅಂಶಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
ಮಿಕ್ಸ್ ಮತ್ತು ಮ್ಯಾಚ್ ಮಾಡುವ ಸಂವಂಧ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ. ಎಲ್ಲ ಸ್ಟಡಿಗಳು ಆರಂಭಿಕ ಹಂತದಲ್ಲಿ ಇವೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ನೀಡಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಮತ್ತು ಫಿಜರ್-ಬಯೋಟೆಕ್ ಲಸಿಕೆಗಳನ್ನು "ಬೆರೆಸುವುದು" ಸುರಕ್ಷಿತವಾಗಿವೆ ಎಂದಿದೆ. ತೀವ್ರವಾದ, ತಾತ್ಕಾಲಿಕ, ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು ಎಂಬ ಎಚ್ಚರಿಕೆಯೂ ಜತೆಗಿದೆ.
undefined
ಮಕ್ಕಳಿಗೆ ಲಸಿಕೆ; ದೆಹಲಿ ಏಮ್ಸ್ ಟ್ರಯಲ್ ಶುರು
ಈ ಬಗ್ಗೆ ಮಾತನಾಡಿರುವ ಖ್ಯಾತ ರೋಗನಿರೋಧಕ ತಜ್ಞ ಡಾ.ಸತ್ಯಜಿತ್ ರಾಥ್, ಲಸಿಕೆ ಎಂದರೆ ಔಷಧಿಗಳಲ್ಲ, ಬದಲಿಗೆ ಅವು ದೇಹದಿಂದ ಪ್ರತಿಕಾಯ ಸೃಷ್ಟಿಗೆ ಕಾರಣವಾಗುತ್ತವೆ. ಲಸಿಕೆ ಸಂಯೋಜನೆ ಮಾಡುವುದರಿಂದ ಯಾವುದೇ ಹಾನಿ ಇಲ್ಲ ಎಂದಿದ್ದಾರೆ. ಈ ಬಗ್ಗೆ ಸರಿಯಾದ ಕ್ಲಿನಿಕಲ್ ಟ್ರಯಲ್ ಇಲ್ಲ ಎಂದಿರುವ ಭಾರತೀಯ ತಜ್ಞರು ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಕೆಲವು ದೇಶಗಳು ಕೊರೋನಾ ಲಸಿಕೆ ಮಿಕ್ಸ್ ಮತ್ತು ಮ್ಯಾಚ್ ಗೆ ಅವಕಾಶ ಮಾಡಿಕೊಟ್ಟಿವೆ. ಯುಎಸ್‌ಎ ಜೂನ್ 1 ರಂದು ಕ್ಲಿನಿಕಲ್ ಟ್ರಯಲ್ ಗೆ ಅನುಮತಿ ನೀಡಿದ್ದು ವರದಿ ನಂತರ ಹೆಜ್ಜೆ ಇಡಲಿದೆ. ಇನ್ನೊಂದು ಕಡೆ ಕೆನಡಾ National Advisory Committee on Immunization (NACI) ಅಸ್ಟ್ರಾ ಝನಕಾ ಮೊದಲ ಡೋಸ್ ಪಡೆದುಕೊಂಡವರು ಪೈಜರ್ ಅಥವಾ ಮೊಡೆರ್ನಾ ಎರಡನೇ ಡೋಸ್ ಪಡೆದುಕೊಳ್ಳಬಹುದು ಎಂದಿದೆ. ಬ್ರಿಟನ್, ಬಹರೇನ್ , ಯುಎಇ, ಸ್ಪೇನ್ ಸಹ ಲಸಿಕೆ ಮಿಕ್ಸ್ ಮ್ಯಾಚ್ ತೊಂದರೆ ಇಲ್ಲ ಎಂದಿವೆ.
ಭಾರತ ಮಾತ್ರ ಮಿಕ್ಸ್ ಮ್ಯಾಚ್ ನ್ನು ಶಿಫಾರಸು ಮಾಡಿಲ್ಲ. ಸರಿಯಾದ ಕ್ಲಿನಿಕಲ್ ಟ್ರಯಲ್ ಇಲ್ಲದೆ, ಡೇಟಾ ಇಲ್ಲದೆ ಮಿಕ್ಸ್ ಮ್ಯಾಚ್ ಮಾಡಲು ಸಾಧ್ಯವಿಲ್ಲ ಎಂದಿದೆ. ಒಟ್ಟಿನಲ್ಲಿ ಈ ಎಲ್ಲ ಚರ್ಚೆಗಳು ಆರಂಭಿಕ ಹಂತದಲ್ಲಿ ಇದ್ದು ಸಂಶೊಧಕರ ವರದಿ ನಂತರ ಸ್ಪಷ್ಟ ಚಿತ್ರಣ ತಿಳಿಯಲಿದೆ.