ಉನ್ನತ ಶಿಕ್ಷಣ ಸಚಿವರಿಗೆ ಸನ್ಮಾನ ಸಲ್ಲಿಸಿದ ದುಬೈ ಕನ್ನಡಿಗರು

By Suvarna NewsFirst Published Oct 16, 2021, 8:17 AM IST
Highlights
  • ದುಬೈ ಎಕ್ಸ್ ಪೋ-2020’ರಲ್ಲಿ ಕರ್ನಾಟಕ ಸರಕಾರದ ಪರವಾಗಿ ಭಾಗವಹಿಸಲು ದುಬೈಗೆ ಆಗಮಿಸಿರುವ ಉನ್ನತ ಶಿಕ್ಷಣ ಸಚಿವ
  • ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರನ್ನು ಸನ್ಮಾನಿಸಿದ ಸಂಯುಕ್ತ ಅರಬ್ ಸಂಸ್ಥಾನದ ಅನಿವಾಸಿ ಕನ್ನಡಿಗರ ವೇದಿಕೆ

ದುಬೈ (ಅ.16): `ದುಬೈ ಎಕ್ಸ್ ಪೋ-2020’ರಲ್ಲಿ (Dubai expo) ಕರ್ನಾಟಕ (Karnataka) ಸರಕಾರದ ಪರವಾಗಿ ಭಾಗವಹಿಸಲು ಇಲ್ಲಿಗೆ ಆಗಮಿಸಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ (Dr CN Ashwath narayan) ಅವರನ್ನು ಇಲ್ಲಿರುವ ಸಂಯುಕ್ತ ಅರಬ್ ಸಂಸ್ಥಾನದ ಅನಿವಾಸಿ ಕನ್ನಡಿಗರ ವೇದಿಕೆಯ (NRI) ವತಿಯಿಂದ ಶುಕ್ರವಾರ ಆತ್ಮೀಯವಾಗಿ ಸನ್ಮಾನಿಸಲಾಯಿತು.

ದುಬೈನ 2ನೇ ಅತೀ ದೊಡ್ಡ ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮಿದ ಭಾರತ!

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವರು, ``ಅನಿವಾಸಿ ಕನ್ನಡಿಗರು ನೀಡಿದ ಈ ಸನ್ಮಾನದಿಂದ ಹೃದಯ ತುಂಬಿ ಬಂದಿದೆ. ಇಲ್ಲಿರುವ ಕನ್ನಡಿಗರೆಲ್ಲರೂ ಕರ್ನಾಟಕದ ರಾಯಭಾರಿಗಳಿದ್ದಂತೆ,’’ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರ ಸಂಘದ ಪದಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ (Praveen Kumar shetty), ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ದುಬೈನಲ್ಲಿ ಕನ್ನಡ ಕಲಿಗೆ ಕ್ಲಾಸ್

ದು​ಬೈ​ನಲ್ಲಿ (Dubai) ಕ​ನ್ನಡ ಸಂಘದ (Kannada Sangha) ವ​ತಿ​ಯಿಂದ ನ​ಡೆ​ಯು​ತ್ತಿ​ರುವ ಉ​ಚಿತ ಕ​ನ್ನಡ ಕ​ಲಿಕಾ ಶಾ​ಲೆಗಳಿಗೆ (Kannada Lerning School) ದಾಖಲಾತಿ ಆರಂಭವಾಗಿದೆ.

ದು​ಬೈನ ಖಾ​ಸಗಿ ಹೊ​ಟೇಲ್‌​ನ​ಲ್ಲಿ (Private Hotel) ನ​ಡೆದ ಸ​ರಳ ಸ​ಮಾ​ರಂಭ​ದಲ್ಲಿ ಶಾ​ಲೆಯ ಮ​ಹಾ​ಪೋ​ಷಕ ಪ್ರ​ವೀಣ್‌​ಕು​ಮಾರ್‌ಶೆಟ್ಟಿ (Praveen Kumar shetty), ಉ​ಪಾ​ಧ್ಯಕ್ಷ ಮೋ​ಹನ್‌ ಅ​ವರು ಪ್ರ​ಸಕ್ತ ಶೈ​ಕ್ಷ​ಣಿಕ ಸಾ​ಲಿನ ಆನ್‌ಲೈನ್‌ ದಾ​ಖ​ಲಾತಿ (Online Admission) ಪ್ರ​ಕ್ರಿ​ಯೆಗೆ ಚಾ​ಲನೆ ನೀ​ಡಿ​ದರು.

ದುಬೈ ಕನ್ನಡಿಗರ ಮಕ್ಕಳಿಗೆ ‘ಮಾತೃಭಾಷಾ ಸಾಕ್ಷರತೆ ಪ್ರತಿಯೊಬ್ಬ ಕನ್ನಡ ಕಂದಮ್ಮನ ಹಕ್ಕು’ ಘೋಷಣೆಯೊಂದಿಗೆ ಕನ್ನಡ ಮಿತ್ರರು ಸಂಘಟನೆ 2014ರಲ್ಲಿ 40 ಮಕ್ಕಳೊಂದಿಗೆ ಶಾಲೆ ಆರಂಭಿಸಿತು. ಶಾಲೆಯಲ್ಲಿ (School) ವಾರಂತ್ಯದಲ್ಲಿ ಮಾತ್ರ ಕನ್ನಡ ಕಲಿಸಲಾಗುತ್ತದೆ.

ಇನ್ನು ಕನ್ನಡದಲ್ಲೇ ಬರೆಯಬಹುದು ಬ್ಯಾಂಕಿಂಗ್ ಪರೀಕ್ಷೆ

ಕನ್ನಡ ವರ್ಣಮಾಲೆಯಿಂದ ಮೊದಲುಗೊಂಡು ಕನ್ನಡ ವಾಕ್ಯ ರಚನೆವರೆಗೂ ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಎಂಬ ವಿವಿಧ ತರಗತಿಗಳಲ್ಲಿ ಮಕ್ಕಳ ಕಲಿಕಾ ಮಟ್ಟಕ್ಕೆ ಅನುಸಾರವಾಗಿ ಕನ್ನಡ ಕಲಿಸಲಾಗುತ್ತಿದೆ. ವಾರದ ಒಂದು ರಜಾ ದಿನವನ್ನು ಉಚಿತವಾಗಿ ಕನ್ನಡ ಕಲಿಸಲು ಮುಡಿಪಿಟ್ಟಿರುವ ನಮ್ಮ ಕನ್ನಡತಿಯರೇ ಇಲ್ಲಿನ ಶಿಕ್ಷಕಿಯರು ಎಂಬುದು ಹೆಮ್ಮೆಯ ವಿಷಯ ಎಂದು ಮ​ಹಾ​ಪೋ​ಷಕ ಪ್ರ​ವೀಣ್‌ ಶೆಟ್ಟಿತಿ​ಳಿಸಿದ್ದಾರೆ.

ಶೈ​ಕ್ಷ​ಣಿಕ ಚ​ಟು​ವ​ಟಿ​ಕೆಯ ನೇ​ತೃತ್ವ ವ​ಹಿ​ಸಿ​ರುವ ರೂಪ ಶ​ಶಿ​ಧರ್‌ ಮಾ​ತ​ನಾಡಿ, ಈ ಬಾರಿಯ ಆನ್‌ ಲೈನ್‌ ತರಗತಿಗಳಿಗೆ ನಡೆಸಿರುವ ತಯಾರಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರದ ಬಗ್ಗೆ ತಿ​ಳಿ​ಸಿ​ಕೊ​ಟ್ಟರು.

click me!