ಹತ್ಯೆಗೂ ಮುನ್ನ ಹಮಾಸ್ ಮುಖ್ಯಸ್ಥ ಯಾಹ್ಯ ಸಿನ್ವರ್ ಕೊನೆಯ ಕ್ಷಣದ ವಿಡಿಯೋ ರಿಲೀಸ್!

By Chethan Kumar  |  First Published Oct 18, 2024, 6:48 PM IST

ಕಳೆದ ವರ್ಷ ಇಸ್ರೇಲ್‌ನಲ್ಲಿ ಮಾರಣಹೋಮ ನಡೆಸಿದ ಹಮಾಸ್ ಮುಖ್ಯಸ್ಥ ಯಾಹ್ಯ ಸಿನ್ವರ್‌ನನ್ನು ಇಸ್ರೇಲ್ ಸೇನೆ ಹೊಡೆದುರುಳಿಸಿದೆ. ಯಾಹ್ಯ ಕೊನೆಯ ಕ್ಷಣದ ವಿಡಿಯೋವನ್ನು ಇಸ್ರೇಲ್ ರಿಲೀಸ್ ಮಾಡಿದೆ. 


ಇಸ್ರೇಲ್(ಅ.18) ಇಸ್ರೇಲ್ ಮೇಲೆ ನಡೆದ ಅತೀ ದೊಡ್ಡ ದಾಳಿ ಪೈಕಿ ಕಳೆದ ವರ್ಷ ಅಕ್ಟೋಬರ್ 7ರಂದು ನಡೆದ ಮಾರಣಹೋಮ. ಹಮಾಸ್ ಉಗ್ರರು ಇಸ್ರೇಲ್‌ಗೆ ನುಗ್ಗಿ ತೊಟ್ಟಿಲಲ್ಲಿ ಮಲಗಿದ್ದ ಮಕ್ಕಳು, ಮಹಿಳೆಯರು ಸೇರಿ ಇಸ್ರೇಲಿಗರನ್ನು ಹುಡುಕಿ ಹುಡುಕಿ ಹತ್ಯೆ ಮಾಡಿತ್ತು. ಈ ದಾಳಿಯ ರೂವಾರಿ ಹಮಾಸ್ ಮುಖ್ಯಸ್ಥ ಯಾಹ್ಯ ಸಿನ್ವರ್. ಈ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಕಳೆದೊಂದು ವರ್ಷದಿಂದ ಪ್ರತಿ ದಾಳಿ ನಡೆಸುತ್ತಲೇ ಇದೆ. ಕೊನೆಗೂ ಯಾಹ್ಯ ಸಿನ್ವರ್ ಹತ್ಯೆ ಮಾಡಿದೆ. ಇಸ್ರೇಲ್ ಅಧಿಕೃತ ಪ್ರಕಟಣೆ ಹೊರಡಿಸಿದೆ. ಇಷ್ಟೇ ಅಲ್ಲ ಯಾಹ್ಯ ಸಿನ್ವರ್ ಹತ್ಯೆಯ ಕೊನೆಯ ಕ್ಷಣದ ವಿಡಿಯೋವನ್ನು ಇಸ್ರೇಲ್ ರಿಲೀಸ್ ಮಾಡಿದೆ. ರಣಧೀರನಂತೆ ತನ್ನ ಸದಸ್ಯರು, ತನ್ನ ಸಮುದಾಯಕ್ಕೆ ಸಂದೇಶ ನೀಡುತ್ತಿದ್ದ ಯಾಹ್ಯ ಸಿನ್ವರ್ ಕೊನೆಗೆ ರಣಹೇಡಿಯಂತೆ ಹತ್ಯೆಯಾಗಿದ್ದಾನೆ.

ಯಾಹ್ಯ ಸಿನ್ವರ್ ಹತ್ಯೆಯ ಡ್ರೋನ್ ವಿಡಿಯೋವನ್ನು ಇಸ್ರೇಲ್ ಸೇನೆ ಬಿಡುಗಡೆ ಮಾಡಿದೆ. ಗಾಜಾದಲ್ಲಿ ಹಮಾಸ್ ಉಗ್ರರ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಯಾಹ್ಯ ಸಿನ್ವರ್ ಹತ್ಯೆ ಮಾಡಲಾಗಿದೆ. ಗಾಜಾದಲ್ಲಿನ ಐಷಾರಾಮಿ ಬಂಗಲೆ ಮೇಲೆ ಇಸ್ರೇಲ್ ಸೇನೆ ದಾಳಿ ನಡೆಸಿದೆ. ಅಪಾರ್ಟ್‌ಮೆಂಟ್ ಮೇಲೆ ಮಿಸೈಲ್ ದಾಳಿ ಮೂಲಕ ಪುಡಿ ಪುಡಿ ಮಾಡಲಾಗಿದೆ. 

Latest Videos

undefined

ಇರಾನ್‌ ವಿರುದ್ಧ ಪ್ರತೀಕಾರ ತೀರಿಸಲು ಮುಂದಾದ ಇಸ್ರೇಲ್‌ಗೆ ಅಮೆರಿಕದ ಥಾಡ್ ರಕ್ಷಣೆ

ಬಳಿಕ ಇಸ್ರೇಲ್ ಡ್ರೋನ್ ಮೂಲಕ ಯಾಹ್ಯ ಅಪಾರ್ಟ್‌ಮೆಂಟ್ ವಿಡಿಯೋ ರೆಕಾರ್ಡ್ ಮಾಡಿದೆ. ಈ ವೇಳೆ ಮುಖಮುಚ್ಚಿಕೊಂಡಿದ್ದ ಯಾಹ್ಯ ಸಿನ್ವರ್ ಗಾಯಗೊಂಡಿದ್ದ. ಧೂಳು ತುಂಬಿದ ಹಾಗೂ ಎಲ್ಲಾ ಧ್ವಂಸಗೊಂಡಿದ್ದ ಮನೆಯೊಳಗಿನ ಸೋಫಾ ಮೇಲೆ ಕುಳಿತಿದ್ದ ಯಾಹ್ಯ ಸಿನ್ವರ್‌ನನ್ನು ಇಸ್ರೇಲ್ ಡ್ರೋನ್ ಪತ್ತೆ ಹಚ್ಚಿದೆ. ಡ್ರೋನ್ ನೋಡುತ್ತಿದ್ದಂತೆ ಯಾಹ್ಯ ಸಿನ್ವರ್ ಅಲರ್ಟ್ ಆಗಿದ್ದಾನೆ. ಏನು ಮಾಡುವ ಸ್ಥಿತಿಯಲ್ಲಿ ಯಾಹ್ಯ ಇರಲಿಲ್ಲ.

 

Raw footage of Yahya Sinwar’s last moments: pic.twitter.com/GJGDlu7bie

— LTC Nadav Shoshani (@LTC_Shoshani)

 

ಬಲಗೈ ಸಂಪೂರ್ಣವಾಗಿ ಗಾಯಗೊಡಿದೆ. ಇನ್ನು ದೇಹದ ಹಲವು ಭಾಗಗಳು ಗಾಯಗಳಾಗಿವೆ. ಹೀಗಾಗಿ ಸೋಫಾದಲ್ಲಿ ಕುಳಿತಿದ್ದ ಯಾಹ್ಯ ಸಿನ್ವರ್ ಎಡಗೈಯಲ್ಲಿ ಕೋಲೊಂದನ್ನು ತೆಗೆದು ಡ್ರೋನ್ ಮೇಲೆ ಎಸೆಯಲು ಮುಂದಾಗಿದ್ದಾನೆ. ಅಷ್ಟರಲ್ಲೇ ಇಸ್ರೇಲ್ ಡೋನ್ ಆಟೋಮೇಟನ್ ಗನ್ ಗುಂಡಿ ಸುರಿಮಳೆಗೈದಿದೆ. ಈ ಮೂಲಕ ಯಾಹ್ಯ ಸಿನ್ವರ್ ಅಂತ್ಯಕಂಡಿದ್ದಾನೆ.

ಯಾಹ್ಯ ಸಿನ್ವರ್ ಕೊನೆಯ ಕ್ಷಣವನ್ನು ಇಸ್ರೇಲ್ ರಿಲೀಸ್ ಮಾಡಿದೆ. ಈ ವಿಡಿಯೋ ಉದ್ದೇಶಪೂರ್ವಕವಾಗಿ ಇಸ್ರೇಲ್ ರಿಲೀಸ್ ಮಾಡಿದೆ. ಕಳೆದ ವರ್ಷ ಅಕ್ಟೋಬರ್ 7 ರಂದು ಹಮಾಸ್ ಉಗ್ರರು ನಡೆಸಿದ ಭೀಕರ ಕೃತ್ಯವನ್ನು ವಿಡಿಯೋ ಮಾಡಿ ಹರಿಬಿಟ್ಟಿತ್ತು. ಈ ಮೂಲಕ ಇಸ್ರೇಲ್ ನಾಗರೀಕರನ್ನು ಬೆಚ್ಚಿ ಬೀಳಿಸುವ ಪ್ರಯತ್ನ ಮಾಡಿತ್ತು. ಇದೀಗ ಅಟ್ಟಹಾಸ ಮೆರೆದ ಯಾಹ್ಯ ಸಿನ್ವರ್ ಅಂತ್ಯ ಹೇಗಾಯ್ತು ಅನ್ನೋದನ್ನು ಇಸ್ರೇಲ್ ರಿಲೀಸ್ ಮಾಡಿದೆ. ಈ ಮೂಲಕ ಹಮಾಸ್ ಹಾಗೂ ಇಸ್ರೇಲ್ ಮೇಲೆ ಮುಗಿಬಿದ್ದವರಿಗೆ ಇದೇ ಗತಿ ಅನ್ನೋದನ್ನು ಸೂಚ್ಯವಾಗಿ ಹೇಳಿದೆ.

ಯಾರು ಈ ಇಸ್ಮಾಯಿಲ್ ಖಾನಿ, ಅವನ ಮೇಲೆಕೆ ಅನುಮಾನ: ಇರಾನ್ ನಿದ್ದೆಗೆಡಿಸಿರೋ ಇಸ್ರೇಲ್ ಸ್ಪೈ ಯಾರು?
 

click me!