
ನವದೆಹಲಿ(ಜು.24): ಕೊರೋನಾ ವೈರಸ್ ನಿಯಂತ್ರಣಕ್ಕೆ ಭಾರತ 2 ತಿಂಗಳ ಲಾಕ್‌ಡೌನ್ ಹೇರಿತ್ತು. ಇತರ ರಾಷ್ಟ್ರಗಳು ಇದಕ್ಕೆ ಹೊರತಾಗಿರಲಿಲ್ಲ. ವೈರಸ್ ನಿಯಂತ್ರಣಕ್ಕೆ ತಜ್ಞರು ನೀಡಿದ ಸಲಹೆಯಂತೆ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಹೇರಿತ್ತು. ಲಾಕ್‌ಡೌನ್‌ನಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದರು ನಿಜ. ಆದರೆ ಪಕೃತಿ ನಳನಳಸಿತ್ತು. ಇದೇ ಲಾಕ್‌ಡೌನ‌್‌ನಿಂದ ಭೂಮಿ ಕಂಪಿಸುವ ಪ್ರಮಾಣ ಶೇಕಡಾ 50 ರಷ್ಟು ಕಡಿಮೆಯಾಗಿದೆ ಎಂದು ಅಧ್ಯಯನ ವರದಿ ಹೇಳುತ್ತಿದೆ.
ಕೊರೋನಾ, ಚಂಡಮಾರುತದ ನಂತರ ಮತ್ತೊಂದು ಆಘಾತ, ಮುಂಬೈನಲ್ಲಿ ಭೂಕಂಪನ
ಭೂಕಂಪನ, ಜ್ವಾಲಾಮುಖಿ ಸೇರಿದಂತೆ ಹಲವು ಕಾರಣಗಳಿಗೆ ಭೂಮಿ ಕಂಪನದ ಮೂಲಕ ಸೂಚನೆ ನೀಡುತ್ತದೆ. ಲಾಕ್‌ಡೌನ್‌ನಿಂದ ಅನಾಹುತಕ್ಕೆ ಭೂಮಿ ನೀಡುವ ಕಂಪನ ಸೂಚನೆ ಪ್ರಮಾಣ ಕಡಿಮೆಯಾಗಿದೆ ಎಂದು ಅಧ್ಯಯನ ವರದಿ ಹೇಳುತ್ತಿದೆ. ಅಂತಾರಾಷ್ಟ್ರೀಯ ಸೆಸ್ಮೆೋಮೀಟರ್ ನೆಟ್‌ವರ್ಕ್ ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ಭೂಕಂಪನವಾದಾಗ ಏನು ಮಾಡಬೇಕು; ಇಲ್ಲಿದೆ ವಿಪತ್ತು ನಿರ್ವಹಣೆಯ ಸರಳ ಸೂತ್ರ !
ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಭೂಮಿ ಕಂಪಿಸುವ ಪ್ರಮಾಣ ಕಡಿಮೆಯಾಗಿದೆ. ಭೂಮಿ ಪ್ರತಿ ದಿನವೂ ಕಂಪಿಸುತ್ತದೆ. ಇದು ಸಹಜ. ಆದರೆ ಕೆಲವು ಕಂಪನಗಳ ತೀವ್ರ ಹೆಚ್ಚಾದರೆ ಅನಾಹುತ ಸಂಭವಿಸಲಿದೆ. ಸದ್ಯ ಭೂಮಿ ಉತ್ತಮ ಕಂಪನ ನೀಡುತ್ತಿದೆ. ಇದರಿಂದ ಯಾವುದೇ ಅನಾಹುತವಿಲ್ಲ ಎಂದು ಅಧ್ಯಯನ ವರದಿ ಹೇಳುತ್ತಿದೆ.
117 ದೇಶಗಳ 268 ಸ್ಟೇಶನ್‌ಗಳಿಂದ ಮಾಹಿತಿ ಸಂಗ್ರಹಿಸಿ ಅಧ್ಯನಯ ನಡೆಸಲಾಗಿದೆ. ಲಾಕ್‌ಡೌನ್ ಆರಂಭಿಸಿದ ಚೀನಾದಿಂದ ಆರಂಭಗೊಂಡ ಅಧ್ಯಯನ, ಯೂರೋಪ್ ಸೇರಿದಂತೆ 117 ರಾಷ್ಟ್ರಗಳಲ್ಲಿ ಅಧ್ಯಯನ ನಡೆಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ