ಮೆಟ್‌ಗಾಲಾದಲ್ಲಿ ಬರೋಬ್ಬರಿ 83 ಕೋಟಿಯ ಡ್ರೆಸ್ ಧರಿಸಿದ ಭಾರತದ ಯುವತಿ; ಇಶಾ ಅಂಬಾನಿ, ಆಲಿಯಾ ಭಟ್ ಅಲ್ಲ!

By Vinutha PerlaFirst Published May 7, 2024, 12:47 PM IST
Highlights

ಫೇಮಸ್‌ ಸ್ಟಾರ್-ಸ್ಟನ್ಡ್ ಈವೆಂಟ್ ಮೆಟ್ ಗಾಲಾ 2024 ಅದ್ಧೂರಿಯಾಗಿ ನಡೀತಿದೆ ದೇಶ-ವಿದೇಶದ ಸೆಲೆಬ್ರಿಟಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಮೆಟ್ ಗಾಲಾ ಪ್ರತಿ ಬಾರಿಯೂ ಅತ್ಯಂತ ದುಬಾರಿ ಹಾಗೂ ಸ್ಟೈಲಿಶ್‌ ಡ್ರೆಸ್‌ಗಳ ಕಲೆಕ್ಷನ್ ಹೊಂದಿರುತ್ತದೆ. ಈ ಬಾರಿ ಭಾರತದ ಈ ಯುವತಿ ಭರ್ತಿ 83 ಕೋಟಿಯ ಡ್ರೆಸ್‌ನ್ನು ಸಮಾರಂಭಕ್ಕಾಗಿ ಧರಿಸಿದ್ದರು. ಯಾರಾಕೆ?

ಫೇಮಸ್‌ ಸ್ಟಾರ್-ಸ್ಟನ್ಡ್ ಈವೆಂಟ್ ಮೆಟ್ ಗಾಲಾ 2024 ಮೇ 06ರಿಂದ ಅದ್ಧೂರಿಯಾಗಿ ನಡೀತಿದೆ ನ್ಯೂಯಾರ್ಕ್‌ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ಈ ಭವ್ಯ ಕಾರ್ಯಕ್ರಮ ನಡೆಯುತ್ತಿದ್ದು, ದೇಶ-ವಿದೇಶದ ಸೆಲೆಬ್ರಿಟಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಇದುವರೆಗೂ ಮೆಟ್‌ ಗಾಲಾದ ರೆಡ್‌ ಕಾರ್ಪೆಟ್‌ ಮೇಲೆ ಹಲವು ಭಾರತೀಯರು ಹೆಜ್ಜೆ ಹಾಕಿದ್ದಾರೆ. ಮೆಟ್ ಗಾಲಾ ಪ್ರತಿ ಬಾರಿಯೂ ಅತ್ಯಂತ ದುಬಾರಿ ಹಾಗೂ ಸ್ಟೈಲಿಶ್‌ ಡ್ರೆಸ್‌ಗಳ ಕಲೆಕ್ಷನ್ ಹೊಂದಿರುತ್ತದೆ. ಈ ವರ್ಷವೂ ಬಾಲಿವುಡ್ ಟಾಪ್ ನಟಿ ಆಲಿಯಾ ಭಟ್‌, ವಿಶ್ವದ ಶ್ರೀಮಂತ ವ್ಯಕ್ತಿ ಬಿಲಿಯನೇರ್ ಮುಕೇಶ್ ಅಂಬಾನಿ ಮಗಳು ಮೆಟ್‌ ಗಾಲಾದಲ್ಲಿ ಭಾಗವಹಿಸಿದ್ದರು.

ಆದರೆ ಇದರಲ್ಲಿ ಭಾರತದ ಈ ಕಿರಿಯ ಉದ್ಯಮಿ ಅತೀ ದುಬಾರಿ ಬಟ್ಟೆಯನ್ನು ಧರಿಸಿದ್ದರು.  ಭರ್ತಿ 10 ಮಿಲಿಯನ್ ಡಾಲರ್ ಅಂದರೆ 83 ಕೋಟಿ ರೂ.ವನ್ನು ಮೆಟ್‌ಗಾಲಾ ಲುಕ್‌ಗಾಗಿ ಈ ಯುವತಿ ವ್ಯಯಿಸಿದ್ದಾರೆ. ಯಾರದು?

165 ಕುಶಲಕರ್ಮಿಗಳು, 1905 ಗಂಟೆಗಳು.. ಮೆಟ್ ಗಾಲಾಕ್ಕಾಗಿ ಆಲಿಯಾ ಭಟ್ ಸೀರೆ ತಯಾರಾಗಿದ್ದು ಹೀಗೆ..

ಮೆಟ್ ಗಾಲಾಗೆ 83 ಕೋಟಿ ರೂ.ಗಳ ಡ್ರೆಸ್‌ ಧರಿಸಿದ ಮಹಿಳಾ ಉದ್ಯಮಿ 
ಉದ್ಯಮಿ ಮತ್ತು ಬಿಲಿಯನೇರ್‌ ಸುಧಾ ರೆಡ್ಡಿ, ಮೆಟ್ ಗಾಲಾದಲ್ಲಿ ಎರಡನೇ ಬಾರಿಗೆ ಕಾಣಿಸಿಕೊಂಡಿದ್ದಾರೆ. ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನ ಮಿಷನ್‌ನೊಂದಿಗೆ ಕೈಜೋಡಿಸಿದ ಸುಧಾ ರೆಡ್ಡಿ, ತರುಣ್ ತಹ್ಲಿಯಾನಿ ಡಿಸೈನ್ ಮಾಡಿದ ಬಟ್ಟೆಯನ್ನು ಧರಿಸಿದ್ದಾರೆ. ಜೊತೆಗೆ 180 ಕ್ಯಾರೆಟ್‌ಗಳ 30 ಸಾಲಿಟೇರ್‌ಗಳನ್ನು ಒಳಗೊಂಡಿರುವ ನೆಕ್ಲೇಸ್ ಧರಿಸಿ ಗ್ರ್ಯಾಂಡ್‌ ಲುಕ್‌ನಲ್ಲಿ ಮಿಂಚಿದ್ದಾರೆ. ಸುಧಾ ರೈಡಿ ಕೈಯಲ್ಲಿ ಹಿಡಿದುಕೊಂಡಿದ್ದ ವಿಂಟೇಜ್ ಚಾನೆಲ್ ಬ್ಯಾಗ್‌ ಬರೋಬ್ಬರಿ 33 ಲಕ್ಷ ಬೆಲೆಯದ್ದು. ಸುಧಾ ರೆಡ್ಡಿಯ ಸಂಪೂರ್ಣ ಲುಕ್‌ಗೆ ಸರಿಸುಮಾರು 10 ಮಿಲಿಯನ್ ಅಂದರೆ 83 ಕೋಟಿ ಖರ್ಚು ಮಾಡಲಾಗಿದೆ ಎಂದು ಮೂಲಗಳು ಹೇಳುತ್ತವೆ.

ಸುಧಾ ರೆಡ್ಡಿ ಯಾರು?
ಸುಧಾ ರೆಡ್ಡಿ, ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ನಿರ್ದೇಶಕಿ. ಸುಧಾ ರೆಡ್ಡಿ ಫೌಂಡೇಶನ್, ಯುನಿಸೆಫ್, ಗ್ಲೋಬಲ್ ಗಿಫ್ಟ್ ಫೌಂಡೇಶನ್, ಸ್ತನ ಕ್ಯಾನ್ಸರ್ ಸಂಶೋಧನಾ ಪ್ರತಿಷ್ಠಾನ, ಫೈಟ್ ಹಂಗರ್ ಫೌಂಡೇಶನ್ ಮೊದಲಾದ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ವರ್ಷ ಮೆಟ್ ಗಾಲಾದಲ್ಲಿ ಭಾಗವಹಿಸಿದ ಕೆಲವೇ ಭಾರತೀಯರಲ್ಲಿ ಸುಧಾ ರೆಡ್ಡಿ ಸಹ ಒಬ್ಬರು. ಅವರು 2021ರಲ್ಲಿ ಫ್ಯಾಶನ್‌ನ ಅತಿದೊಡ್ಡ ವೇದಿಕೆ ಮೆಟ್‌ ಗಾಲಾದಲ್ಲಿ ಮೊದಲ ಬಾರಿಗೆ ಭಾಗವಹಿಸಿದರು.

ಮೆಟ್‌ ಗಾಲಾದಲ್ಲಿ ಇಶಾ ಅಂಬಾನಿ ಧರಿಸಿದ ಈ ಬಟ್ಟೆ ತಯಾರಿಸೋಕೆ ಬರೋಬ್ಬರಿ 10 ಸಾವಿರ ಗಂಟೆ ಬೇಕಾಯ್ತಂತೆ!

ಮೆಟ್ ಗಾಲಾ ಎಂದರೇನು?
ಮೆಟ್ ವಿಶ್ವದ ಅತಿದೊಡ್ಡ ಮತ್ತು ಜನರು ಹೆಚ್ಚು ಭೇಟಿ ನೀಡಿದ ವಸ್ತು ಸಂಗ್ರಹಾಲಯವಾಗಿದೆ. ಸಾರ್ವಜನಿಕರ ಶಿಕ್ಷಣ ಮತ್ತು ಆನಂದಕ್ಕಾಗಿ ಅತ್ಯುತ್ತಮ ಕಲಾಕೃತಿಗಳನ್ನು ಸಂಗ್ರಹಿಸುವುದು, ಸಂರಕ್ಷಿಸುವುದು ಮತ್ತು ಪ್ರಸ್ತುತಪಡಿಸುವುದು ಇದರ ಉದ್ದೇಶವಾಗಿದೆ. ಮೆಟ್ ಗಾಲಾ ವಸ್ತುಸಂಗ್ರಹಾಲಯಕ್ಕಾಗಿ ಹಣವನ್ನು ಸಂಗ್ರಹಿಸಲು ಅದರ ಕಾಸ್ಟ್ಯೂಮ್ ಇನ್ಸ್ಟಿಟ್ಯೂಟ್‌ನ ಉಪಕ್ರಮದ ಭಾಗವಾಗಿದೆ.

click me!