
ಯಾವ್ದೆ ಕೆಲ್ಸ ಮಾಡ್ತಿರುವ ಮಹಿಳೆ ಇರಲಿ, ಆಕೆ ತನಗಿಂತ ತನ್ನ ಕುಟುಂಬದ ಆರೋಗ್ಯ (health)ಕ್ಕೆ ಹೆಚ್ಚಿನ ಮಹತ್ವ ನೀಡ್ತಾಳೆ. ಅವಳ ಆರೋಗ್ಯ ನೋಡಿಕೊಳ್ಳೋಕೆ ಟೈಂ ಇರೋದೇ ಇಲ್ಲ. ಬೆಳಿಗ್ಗೆ ಎದ್ದ ತಕ್ಷಣ ಶುರುವಾಗುವ ಕೆಲ್ಸ ರಾತ್ರಿ ಮಲಗುವವರೆಗೂ ಇರುತ್ತೆ. ಇದ್ರಿಂದ ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಆರೋಗ್ಯ ಸಮಸ್ಯೆ (Health problem) ಆಕೆಯನ್ನು ಆವರಿಸುತ್ತೆ. ನೀವು ನಿಮ್ಮ ಆರೋಗ್ಯಕ್ಕಾಗಿ ಎರಡು – ಮೂರು ಗಂಟೆ ತೆಗೆದಿಡಬೇಕಾಗಿಲ್ಲ. ಪ್ರತಿ ದಿನ ಐದು ನಿಮಿಷ ನಿಮಗಾಗಿ ಮೀಸಲಿಡಿ. ಬೆಳಿಗ್ಗೆ ಎದ್ದ ತಕ್ಷಣ ಆರೋಗ್ಯಕರ ನೀರನ್ನು ಸೇವಿಸಿ. ಸತತ ಏಳು ದಿನ ಬೇರೆ ಬೇರೆ ಪದಾರ್ಥ ಬೆರೆಸಿದ ನೀರನ್ನು ನೀವು ಸತತ 30 ದಿನ ಕುಡಿತಾ ಬಂದ್ರೆ ನಿಮ್ಮ ಆರೋಗ್ಯ ಸುಧಾರಿಸುತ್ತದೆ, ಜೀರ್ಣಶಕ್ತಿ ಹೆಚ್ಚಾಗಿ, ಚರ್ಮ ಕಾಂತಿ ಪಡೆಯುತ್ತದೆ. ಅಲ್ಲದೆ ಹಾರ್ಮೋನ್ ಏರುಪೇರಿನ ಸಮಸ್ಯೆಯಿಂದ ನೀವು ಮುಕ್ತಿ ಪಡೆಯಬಹುದು.
ಸೋಮವಾರ : ಮೆಂತ್ಯ ನೀರು – ರಾತ್ರಿ 1 ಚಮಚ ಮೆಂತ್ಯೆ ಬೀಜವನ್ನು ನೀರಿನಲ್ಲಿ ನೆನೆಸಿ. ಬೆಳಿಗ್ಗೆ ಸ್ವಲ್ಪ ಬೆಚ್ಚಗೆ ಮಾಡಿ ಈ ನೀರನ್ನು ಕುಡಿಯಿರಿ. ಇದು ರಕ್ತದಲ್ಲಿನ ಸಕ್ಕರೆಯನ್ನು ಸಮತೋಲನಗೊಳಿಸುತ್ತದೆ. ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ. ಕರುಳಿನ ಆರೋಗ್ಯಕ್ಕೆ ಒಳ್ಳೆಯದು.
ಮಂಗಳವಾರ : ಕೊತ್ತಂಬರಿ ಬೀಜದ ನೀರು – ಒಂದು ಚಮಚ ಕೊತ್ತಂಬರಿ ಬೀಜವನ್ನು ರಾತ್ರಿ ನೆನೆಹಾಕಿ, ಬೆಳಿಗ್ಗೆ ಆ ನೀರನ್ನು ಸೇವಿಸಿ. ಇದು ದೇಹದಲ್ಲಿನ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ನಿಮ್ಮ ದೇಹವನ್ನು ತಂಪಾಗಿಸುತ್ತದೆ. ಹಾರ್ಮೋನುಗಳ ಸಮತೋಲನಕ್ಕೆ ಸಹಕಾರಿ.
ಬುಧವಾರ : ದಾಲ್ಚಿನ್ನಿ ನೀರು – ಒಂದು ದಾಲ್ಚಿನಿಯನ್ನು ನೀರಿನಲ್ಲಿ ನೆನೆಸಿ. ಬೆಳಿಗ್ಗೆ ಈ ನೀರನ್ನು ಕುದಿಸಿ ಕುಡಿಯಿರಿ. ಇದು ಚಯಾಪಚಯವನ್ನು ಹೆಚ್ಚಿಸುತ್ತದೆ. ಸ್ವಿಟ್ ಕ್ರೇವಿಂಗ್ ಕಡಿಮೆ ಮಾಡುತ್ತದೆ. ಇನ್ಸುಲಿನ್ ಪ್ರತಿಕ್ರಿಯೆಯನ್ನು ಸುಧಾರಿಸುತ್ತದೆ.
ಗುರುವಾರ : ಚಿಯಾ ಬೀಜದ ನೀರು – 30 ನಿಮಿಷ ಇದನ್ನು ನೀರಿನಲ್ಲಿ ನೆನೆಸಿ. ರಾತ್ರಿಪೂರ್ತಿ ನೀವು ನೆನೆಸಬಹುದು. ಆ ನೀರನ್ನು ಬೆಳಿಗ್ಗೆ ಸೇವನೆ ಮಾಡಬೇಕು. ಇದು ಫೈಬರ್ ಭರಿತ ಹೈಡ್ರೇಟರ್.
ಶುಕ್ರವಾರ : ಅಜ್ವೈನ್ ಮತ್ತು ಜೀರಿಗೆ ನೀರು – ಅರ್ಧ ಟೀ ಸ್ಪೂನ್ ಅಜ್ವೈನ ಮತ್ತು ಜೀರಿಗೆಯನ್ನು ನೀರಿನಲ್ಲಿ ಕುದಿಸಿ, ರಾತ್ರಿ ಪೂರ್ತಿ ನೆನೆಸಿಡಿ. ಬೆಳಿಗ್ಗೆ ಅದನ್ನು ಕುಡಿಯಿರಿ. ಅಜೀರ್ಣ, ಹೊಟ್ಟೆ ಉಬ್ಬುರ ಮತ್ತು ನಿಧಾನಗತಿ ಚಯಾಪಚಯವನ್ನು ಕಡಿಮೆ ಮಾಡುತ್ತದೆ.
ಶನಿವಾರ : ಮೆಂತ್ಯ ಮತ್ತು ಜೀರಿಗೆ ನೀರು - ತಲಾ ಅರ್ಧ ಟೀಸ್ಪೂನ್ ಮೆಂತ್ಯೆ ಹಾಗೂ ಜೀರಿಗೆಯನ್ನು ನೆನೆಸಿ, ಬೆಳಿಗ್ಗೆ ಕುದಿಸಿ ಕುಡಿಯಿರಿ. ಉರಿಯೂತವನ್ನು ಕಡಿಮೆ ಮಾಡುತ್ತದೆ. ನಿರ್ಜಲೀಕರಣ ಸಮಸ್ಯೆಗೆ ಮುಕ್ತಿ. ಕರುಳಿಗೆ ಒಳ್ಳೆಯದು.
ಭಾನುವಾರ : ಒಣದ್ರಾಕ್ಷಿ ನೀರು - 4–5 ಒಣದ್ರಾಕ್ಷಿಗಳನ್ನು ರಾತ್ರಿಯಿಡೀ ನೆನೆಸಿ. ನೀರನ್ನು ಬೆಚ್ಚಗಿನ ರೂಪದಲ್ಲಿ ಬೆಳಿಗ್ಗೆ ಕುಡಿಯಿರಿ. ಇದು ಆಯಾಸ ಮತ್ತು ಪಿಎಂಎಸ್ಗೆ ಸೌಮ್ಯವಾದ ಕಬ್ಬಿಣ ಒದಗಿಡುತ್ತದೆ. ಕರುಳಿಗೆ ಒಳ್ಳೆಯದು.
ಇದೆಲ್ಲ ನೆನಪಿರಲಿ :
• ಇದನ್ನು ನೀವು ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಹಾಗೆಯೇ ಆದಷ್ಟು ಬೆಚ್ಚಗಿನ ನೀರನ್ನು ಕುಡಿಯಿರಿ.
• ದೀರ್ಘಕಾಲದಿಂದ ಕರುಳಿನ ಸಮಸ್ಯೆ ಇರುವವರು ಉದಾಹರಣೆಗೆ IBS, IBD, ಹುಣ್ಣು ಇರುವವರು ಕುಡಿಯಬಾರದು. ಇನ್ಸುಲಿನ್ ಅಥವಾ ಥೈರಾಯ್ಡ್ ಔಷಧಿ ತೆಗೆದುಕೊಳ್ಳುತ್ತಿರುವರು, ಗರ್ಭಿಣಿ ಅಥವಾ ಈಗಷ್ಟೆ ಹೆರಿಗೆಯಾದ ಮಹಿಳೆಯರು ಇದರಿಂದ ದೂರ ಇರಿ. ವಿಶೇಷವಾಗಿ ದಾಲ್ಚಿನ್ನಿ, ಅಜ್ವೈನ್ ಮತ್ತು ಮೆಂತ್ಯದಿಂದ ದೂರ ಇರಬೇಕು.
• ಇಲ್ಲಿ ಹೇಳಿದ ವಿಧಾನವನ್ನೇ ಬಳಸಿ. ಎಲ್ಲ ಪದಾರ್ಥ ಒಟ್ಟಿಗೆ ಸೇರಿಸಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.