ವಿಚ್ಛೇದನ ಬಯಸೋದ್ರಲ್ಲಿ ಮಹಿಳೆಯರೇ ಮುಂದು!

Suvarna News   | Asianet News
Published : Mar 15, 2022, 04:16 PM IST
ವಿಚ್ಛೇದನ ಬಯಸೋದ್ರಲ್ಲಿ ಮಹಿಳೆಯರೇ ಮುಂದು!

ಸಾರಾಂಶ

ಇತ್ತೀಚಿನ ದಿನಗಳಲ್ಲಿ ವಿಚ್ಛೇದನಗಳ ಸಂಖ್ಯೆ ಹೆಚ್ಚಾಗ್ತಿದೆ. ಮದುವೆಯಾಗಿ ಒಂದು ತಿಂಗಳಿಗೆ ಡೈವaರ್ಸ್ ಪಡೆದುಕೊಳ್ಳುವವರಿದ್ದಾರೆ. ಮದುವೆಯಾಗಿ 20 ವರ್ಷದ ನಂತ್ರ ಬೇರೆಯಾಗುವವರಿದ್ದಾರೆ. ಬದಲಾದ ಸಮಾಜದಲ್ಲಿ ಮಹಿಳೆ ಕೂಡ ಬದಲಾಗಿದ್ದು, ವಿಚ್ಛೇದನ ಪಡೆಯುವುದ್ರಲ್ಲೂ ಆಕೆ ಹಿಂದೆಬಿದ್ದಿಲ್ಲ.  

ವಿಚ್ಛೇದನ (Divorce) ಎಂಬ ವಿಷ್ಯ ಬಂದಾಗ ಮೊದಲು ಪತಿ (Husband) ಯ ಮೇಲೆ ಕಣ್ಣು ಹೊರಳುತ್ತದೆ. ವಿಚ್ಛೇದನಕ್ಕೆ ಕಾರಣ ಅಥವಾ ವಿಚ್ಛೇದನ ಬಯಸುವುದು ಬಹುತೇಕ ಪುರುಷ (Male )ರು ಎಂಬ ಭಾವನೆ ನಮ್ಮಲ್ಲಿದೆ. ಮಹಿಳೆ (woman)ಯರು ವಿಚ್ಛೇದನ ಕೇಳುವುದು ಅಪರೂಪ ಎಂಬ ಮಾತೂ ಇದೆ. ಸುಮಾರು ಮೂರನೇ ಎರಡರಷ್ಟು ಪ್ರೇಮ ವಿವಾಹಗಳು ಹೆಂಡತಿಯ ಇಚ್ಛೆಯೊಂದಿಗೆ ಕೊನೆಗೊಳ್ಳುತ್ತವೆ ಎಂಬುದು ನಿಮಗೆ ತಿಳಿದಿರಲಿ. ಸಂಶೋಧನೆಯ ಪ್ರಕಾರ, ಒಂಟಿ ಪುರುಷರಿಗಿಂತ ಒಂಟಿ ಮಹಿಳೆಯರು ಮದುವೆಯಾಗುವ ಇಚ್ಛೆಯನ್ನು ಹೆಚ್ಚು ಹೊಂದಿರುತ್ತಾರೆ. ಹಾಗೆಯೇ ಬೇಗ ಮದುವೆ ಕೂಡ ಆಗ್ತಾರೆ. ಮದುವೆಯಾದ್ಮೇಲೆ ದಾಂಪತ್ಯದಲ್ಲಿ ಬೇಗ ಅತೃಪ್ತಿ ಹೊಂದುವುದು ಕೂಡ ಮಹಿಳೆಯರೇ. ಹಾಗೆ ಅವರೇ ಮೊದಲ ಬಾರಿ ವಿಚ್ಛೇದನ ಪಡೆದು, ಸಂಬಂಧದಿಂದ ಹೊರಬರಲು ಬಯಸ್ತಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ವಿಚ್ಛೇದನ ಪಡೆಯಲು ಅನೇಕ ಕಾರಣಗಳಿವೆ.

ನಿಮಗೆ ಇದು ವಿಚಿತ್ರವೆನ್ನಿಸಬಹುದು, ಆದ್ರೆ ಸತ್ಯ. ಬಹುತೇಕ ಮಹಿಳೆಯರು ವಿವಾಹೇತರ ಸಂಬಂಧವನ್ನು ಮುರಿದುಕೊಳ್ಳಲು  ಇಚ್ಛಿಸುವುದಿಲ್ಲ. ವಿವಾಹೇತರ ಸಂಬಂಧಕ್ಕಾಗಿ ಅವರು ವಿಚ್ಛೇದನ ನೀಡಲು ಸಿದ್ಧರಾಗ್ತಾರೆ. 

ಸಾಮಾನ್ಯವಾಗಿ ವಿಚ್ಛೇದನವನ್ನು ಮಹಿಳೆಯರ ವಿನಾಶವೆನ್ನುವವರಿದ್ದಾರೆ. ವಿಚ್ಛೇದನ ಮಹಿಳೆಯರ ಪಾಲಿಗೆ ದೊಡ್ಡ ದುಃಖ. ಮುಂದೆ ಅವಳ ಜೀವನ ಹೇಗೆ? ಎಂಬೆಲ್ಲ ಪ್ರಶ್ನೆ ಏಳುತ್ತದೆ. ವಿಚ್ಛೇದನ ಕಾನೂನು ಪ್ರಕ್ರಿಯೆಯಾಗಿದ್ದು, ವಿಚ್ಛೇದನ ಪಡೆದ ನಂತ್ರ ಮಹಿಳೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಆರ್ಥಿಕವಾಗಿ ಸದೃಢವಾಗುವುದು ಮುಖ್ಯ. ಒಂಟಿಯಾಗಿ ಮಕ್ಕಳನ್ನು ನೋಡಿಕೊಳ್ಳಬೇಕು. ಅವರ ಶಿಕ್ಷಣದ ಹೊಣೆ ಆಕೆ ಮೇಲಿರುತ್ತದೆ. ಇದಲ್ಲದ, ಸಮಾಜದಲ್ಲಿ ಅನೇಕ ಸವಾಲುಗಳು ಆಕೆಗೆ ಎದುರಾಗುತ್ತವೆ. ಪತಿಯಿಂದ ಆರ್ಥಿಕ ನೆರವು ಲಭ್ಯವಾದ್ರೂ ಅದ್ರಿಂದ ಜೀವನ ನಡೆಸುವುದು ಅನೇಕ ಬಾರಿ ಕಷ್ಟವಾಗುತ್ತದೆ.

ಆದ್ರೆ ಇಷ್ಟು ಸಮಸ್ಯೆ ಮಧ್ಯೆಯೂ ಮಹಿಳೆಯರು ಏಕೆ ವಿಚ್ಛೇದನ ತೆಗೆದುಕೊಳ್ತಾರೆ ಎನ್ನುವ ಬಗ್ಗೆ ಇತ್ತೀಚಿಗೆ ಹೊಸ ಅಧ್ಯಯನ ನಡೆದಿದೆ. ಅದ್ರ ಪ್ರಕಾರ,ಇತ್ತೀಚಿನ ದಿನಗಳಲ್ಲಿ ಮಾಡರ್ನ್ ಆಗ್ತಿರುವ ಸಮಾಜ ಹಾಗೂ ಅದ್ರಲ್ಲಿ ಸಿಗ್ತಿರುವ ಅವಕಾಶಗಳೇ ವಿಚ್ಛೇದನಕ್ಕೆ ಮೂಲ ಕಾರಣವಾಗ್ತಿದೆ ಎಂಬುದು ಗೊತ್ತಾಗಿದೆ. 

ಸಮಾಜದಲ್ಲಿ ಮನ್ನಣೆ : ಇಂದಿನ ಮಹಿಳೆಯರು ತಮ್ಮ ಬೆಳವಣಿಗೆ,ವೃತ್ತಿ ಬಗ್ಗೆ ಚಿಂತಿಸುತ್ತಾರೆ. ಇದೇ ಕಾರಣಕ್ಕೆ ಅವರು ಯಾರ ಕೈಕೆಳಗೆ ಬದುಕಲು ಇಚ್ಛಿಸುವುದಿಲ್ಲ. ಹುಡುಗಿಯರು ಈಗ ಎಲ್ಲ ಕ್ಷೇತ್ರಗಳಲ್ಲಿದ್ದಾರೆ. ಅವರಿಗೆ ಸಮಾಜದಲ್ಲಿ ಸಮಾನ ಹಕ್ಕಿದೆ. ವೃತ್ತಿಯಲ್ಲಿ ಒಳ್ಳೆ ಸ್ಥಾನದಲ್ಲಿರುವ ಮಹಿಳೆಯರಿಗೆ ಸಂಬಂಧದಲ್ಲಿ ಸೂಕ್ತ ಗೌರವ,ಪ್ರೀತಿ ಸಿಗದೆ ಹೋದಾಗ ಅವರು ಈ ಸಂಬಂಧದಿಂದ ಹೊರಬರಲು ಮುಂದಾಗ್ತಾರೆ. ಕುಟುಂಬದಲ್ಲಿ ಕೂಡ ಲಿಂಗತಾರತಮ್ಯ ಕಡಿಮೆಯಾಗಿದೆ. ಗಂಡು ಮಕ್ಕಳಿಗೆ ಸಿಗುವ ಸಮಾನ ಗೌರವ ಹೆಣ್ಣು ಮಕ್ಕಳಿಗೆ ಸಿಗ್ತಿದೆ. ಬಾಲ್ಯದಿಂದಲೇ ಸ್ವಾಭಿಮಾನಿಯಾಗಿ ಬೆಳೆಯುವ ಹುಡುಗಿಯರು ದಾಂಪತ್ಯದಲ್ಲಿ ಸಣ್ಣ ಬಿರುಕು ಮೂಡಿದ್ರೂ ಸಹಿಸುವುದಿಲ್ಲ.

ವಿಚ್ಛೇದನಕ್ಕೆ ಮುಂದಾಗಿದ್ದ ಅಪ್ಪ ಅಮ್ಮನನ್ನು ಒಂದು ಮಾಡಿದ ಮಗ

ಹಣಕ್ಕಿಂತ ಪ್ರೀತಿ ಅಗತ್ಯ : ಇಂದಿನ ಕಾಲದ ಮಹಿಳೆಯರಿಗೆ ಆರ್ಥಿಕ ಭದ್ರತೆ, ಸೌಲಭ್ಯಗಳನ್ನು ನೀಡುವ ಸಂಗಾತಿ ಬೇಕಾಗಿಲ್ಲ. ಇವೆಲ್ಲವನ್ನೂ ಅವರೇ ಪಡೆಯಬಲ್ಲಷ್ಟು ಸಮರ್ಥರಾಗಿರ್ತಾರೆ. ಮದುವೆ ನಂತ್ರ ಪ್ರೀತಿ ನೀಡುವ ಸಂಗಾತಿ ಅವಶ್ಯಕತೆಯಿರುತ್ತದೆ. ಬೆಳಿಗ್ಗೆ ಬೆಡ್ ಟೀನಿಂದ ಹಿಡಿದು ರಾತ್ರಿ ಊಟದವರೆಗೆ ಪತ್ನಿ ಜೊತೆ ನೆರವಾಗುವ ಪತಿಯ ಅಗತ್ಯವಿರುತ್ತದೆ. ಸಾಮಾನ್ಯವಾಗಿ ಮದುವೆಯಾದ್ಮೇಲೆ ಗಂಡು ಮಕ್ಕಳಿಗೆ ಸಾಕಷ್ಟು ಲಾಭವಾಗುತ್ತದೆ. ಪತ್ನಿಯಾದವಳು ಮನೆಯ ಎಲ್ಲ ಕೆಲಸ ನಿಭಾಯಿಸಬೇಕೆಂದು ಪುರುಷರು ಬಯಸ್ತಾರೆ. ಆದ್ರೆ ಹಿಂದಿನ ಕಾಲದಂತೆ ಮಹಿಳೆ ಸದಾ ಮನೆ ಕೆಲಸ ಮಾಡ್ತಾ,ಪತಿ ಸೇವೆ ಮಾಡ್ತಿರಲು ಇಚ್ಛಿಸುವುದಿಲ್ಲ. ಆಕೆ ಸಮಾನತೆ ಬಯಸ್ತಾಳೆ. ಅದು ಸಿಗದೆ ಹೋದಾಗ ಸಂಬಂಧ ಮುರಿದುಕೊಳ್ಳುವ ನಿರ್ಧಾರಕ್ಕೆ ಬರ್ತಾಳೆ.  

Homesick After Marriage: ಯಾವಾಗ್ಲೂ ತವರು ಮನೆ ನೆನಪಾಗುತ್ತೆ, ಏನ್ಮಾಡ್ಲಿ ?

ಎಲ್ಲವೂ ಇದ್ಮೇಲೆ ಪತಿ ಏಕೆ? : ಅರೇ ಇದೆಂಥ ಮಾತು ಅಂತಾ ನೀವು ಕೇಳಬಹುದು. ಮನೆ,ಮಕ್ಕಳು,ಕೆಲಸ,ಸ್ನೇಹಿತರು,ಬಂಧುಗಳು ಎಲ್ಲವನ್ನೂ ಮಹಿಳೆ ನೋಡಿಕೊಳ್ಳಲು ಸಮರ್ಥಳಾಗಿದ್ದರೆ ಆಕೆಗೆ ಪತಿಯ ಅವಶ್ಯಕತೆಯೇ ಇರುವುದಿಲ್ಲ. ಪತಿ ಕೇವಲ ಲೇಬಲ್ ಆಗಿದ್ದರೆ ಪ್ರಯೋಜನವೇನು?. ಆಗ ಸಹಜವಾಗಿಯೇ ಮಹಿಳೆ ಸಂಬಂಧದಿಂದ ಹೊರ ಬರ್ತಾಳೆ. ಇದಲ್ಲದೆ ಕಾನೂನಿನ ನೆರವು,ಸೆಕ್ಸ್ ನಲ್ಲಿ ಜನರ ಬದಲಾಗ್ತಿರುವ ಚಿಂತನೆ ಎಲ್ಲವೂ ವಿಚ್ಛೇದನಕ್ಕೆ ಕಾರಣವಾಗುತ್ತಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!