ಸಾಕು ಪ್ರಾಣಿಗಳನ್ನು ಇಷ್ಟಪಡುವವರು ಅವುಗಳಿಗಾಗಿ ಪ್ರಾಣ ಬಿಡಲೂ ಸಿದ್ಧವಿರ್ತಾರೆ. ಮನೆಯಲ್ಲಿರುವ ಮುದ್ದು ಪ್ರಾಣಿಗಳಿಗಾಗಿ ವಿಶೇಷ ವ್ಯವಸ್ಥೆ ಮಾಡಿರುತ್ತಾರೆ. ಸದಾ ಅವರ ಬಗ್ಗೆ ಆಲೋಚನೆ ಮಾಡುವ ಜನರು ಚಿತ್ರವಿಚಿತ್ರ ಕೆಲಸಕ್ಕೆ ಕೈ ಹಾಕ್ತಾರೆ.
ಸಾಕು ಪ್ರಾಣಿ (Pet) ಗಳು ಎಂದಾಗ ಜನರು ತಟ್ಟನೆ ಹೇಳೋದು ನಾಯಿ (Dog), ಬೆಕ್ಕಿ (Cat) ನ ಹೆಸರನ್ನು. ನಾಯಿ ಪ್ರೇಮಿಗಳ ಸಂಖ್ಯೆ ಹೆಚ್ಚಿದೆ. ಅನೇಕರು ನಾಲ್ಕೈದು ಬೆಕ್ಕುಗಳನ್ನು ಮನೆಯಲ್ಲಿ ಸಾಕ್ತಾರೆ. ಇನ್ನು ಕೆಲವರು ನಾಯಿ, ಬೆಕ್ಕಿನ ಹೊರತಾಗಿ ಕುರಿ (Sheep), ಕೋಳಿ (Chicken) ಯನ್ನು ಸಾಕ್ತಾರೆ. ಸಾಕು ಪ್ರಾಣಿಗಳಾದ ನಾಯಿ,ಬೆಕ್ಕು ಸತ್ತಾಗ ನೋವು ಅನುಭವಿಸುವ ಜನರು ಕೋಳಿಗಳನ್ನು ಆಹಾರಕ್ಕಾಗಿಯೇ ಸಾಕಿರುತ್ತಾರೆ. ಕೆಲವೇ ಕೆಲವು ಮಂದಿ ಮಾತ್ರ ಸಾಕು ಕೋಳಿಯನ್ನು ಕಡಿಯುವುದಿಲ್ಲ. ಮನೆಯಲ್ಲಿ ಸಾಕಿದ ಕೋಳಿಯನ್ನು ಪ್ರೀತಿ (Love) ಯಿಂದ ಸಾಕ್ತಾರೆ. ಸಾಕು ಪ್ರಾಣಿಗಳ ಮೇಲೆ ಪ್ರೀತಿ ಹೊಂದಿರುವವರು ಪ್ರಾಣಿಗಳನ್ನು ಕುಟುಂಬಸ್ಥರಲ್ಲಿ ಒಬ್ಬರಂತೆ ನೋಡ್ತಾರೆ. ಅದಕ್ಕೆ ಬಗೆ ಬಗೆ ಆಹಾರ (Food) ನೀಡುವ ಜೊತೆಗೆ ಅದ್ರ ಜೊತೆ ಆಟವಾಡ್ತಾ ಕಾಲ ಕಳೆಯುತ್ತಾರೆ. ಸಾಕು ಪ್ರಾಣಿಗಳು ಒತ್ತಡ ಕಡಿಮೆ ಮಾಡುತ್ತವೆ ಎಂದು ಸಂಶೋಧನೆಗಳಲ್ಲೂ ಹೇಳಲಾಗಿದೆ. ಒಂಟಿಯಾಗಿರುವ ಜನರು ಪ್ರಾಣಿಗಳನ್ನು ಸಾಕಲು ಹೆಚ್ಚು ಇಷ್ಟಪಡ್ತಾರೆ. ನಾಯಿ,ಬೆಕ್ಕಿನ ಫ್ಯಾಷನ್ ಶೋ,ಅನೇಕ ಸ್ಪರ್ಧೆಗಳು ನಡೆಯುವುದನ್ನು ನಾವು ಕೇಳಿದ್ದೇವೆ. ಟಗರಿನ ಗುದ್ದಾಟಗಳೂ ಆಗಾಗ ನಡೆಯುತ್ತಿರುತ್ತವೆ. ಆದ್ರೆ ಕೋಳಿ ವಿಷ್ಯದಲ್ಲಿ ಇದು ತುಂಬಾ ಅಪರೂಪ. ಯಾವುದೇ ಸ್ಪರ್ಧೆಯಾಗ್ಲಿ,ಅತಿ ಪ್ರೀತಿಯಾಗ್ಲಿ ಕಾಣಸಿಗುವುದಿಲ್ಲ. ಆದ್ರೆ ಮಹಿಳೆಯೊಬ್ಬಳು ಕೋಳಿ ಮೇಲಿರುವ ತನ್ನ ಪ್ರೀತಿಯನ್ನು ಭಿನ್ನವಾಗಿ ತೋಡಿಕೊಂಡಿದ್ದಾಳೆ.
ಕೋಳಿಗೆ ಪೆಡಿಕ್ಯೂರ್ : ಚೀನಾ (China) ದ ಶಾಂಘೈನಲ್ಲಿ ವಾಸಿಸುತ್ತಿರುವ ಯಿ ಯಿ (Yi Yi) ಹೆಸರಿನ ಮಹಿಳೆ ಕೋಳಿಗೆ ಪೆಡಿಕ್ಯೂರ್ ಮಾಡಿದ್ದಾಳೆ. ಆಕೆಯ ಕೋಳಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡ್ತಿವೆ. ಯಿ ಯಿ ಕೋಳಿ ಪೆಡಿಕ್ಯೂರ್ ಗೆ ಗಂಟೆಗಟ್ಟಲೆ ಸಮಯ ತೆಗೆದುಕೊಂಡಿದ್ದಾರಂತೆ. ನಂತ್ರ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
undefined
ಸಮಾಜಕ್ಕೆ ಸೂರ್ತಿಯಾಗಿರುವ ಆಸಿಡ್ ದಾಳಿಯಿಂದ ಬದುಕುಳಿದವರು!
ಕೋಳಿ ಉಗುರಿಗೆ ನೇಲ್ ಪಾಲಿಶ್ : ಪೆಡಿಕ್ಯೂರ್ ಮಹಿಳೆಯರ ಫೇ್ವರೆಟ್. ಅನೇಕರು ಬ್ಯೂಟಿಪಾರ್ಲರ್ ಮೊರೆ ಹೋಗ್ತಾರೆ. ಮಹಿಳೆ ಕೂಡ ಕೋಳಿ ಹಿಡಿದು ಬ್ಯೂಟಿಪಾರ್ಲರ್ ಗೆ ಹೋಗಿದ್ದರಂತೆ. ಆದ್ರೆ ಅಲ್ಲಿನ ಸಿಬ್ಬಂದಿ ಕೋಳಿಗೆ ಪೆಡಿಕ್ಯೂರ್ ಮಾಡಲು ನಿರಾಕರಿಸಿದ್ದಾರಂತೆ. ಕೋಳಿಗೆ ಪೆಡಿಕ್ಯೂರ್ ಮಾಡಲು ಶುರು ಮಾಡಿದ್ರೆ ಗ್ರಾಹಕರು ಕೋಪಗೊಳ್ಳಬಹುದು. ಕೋಳಿ ನೋಡಿ ಗಾಬರಿಯಾಗ್ಬಹುದು. ಗ್ರಾಹಕರನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲವೆಂದು ಯಿ ಯಿಯನ್ನು ವಾಪಸ್ ಕಳುಹಿಸಿದ್ದಾರಂತೆ. ಪೆಡಿಕ್ಯೂರ್ ಮಾಡ್ಲೇಬೇಕು ಎಂದು ಪಣತೊಟ್ಟ ಯಿ ಯಿ ತಾನೇ ಶುರು ಮಾಡಿದ್ದಾರೆ. ಮೊದಲು ಪೆಡಿಕ್ಯೂರ್ ಮಾಡಿ ನಂತ್ರ ಕೋಳಿ ಉಗುರುಗಳಿಗೆ ನೇಲ್ ಪಾಲಿಶ್ ಹಚ್ಚಿದ್ದಾರೆ. ನಂತ್ರ ವಿಭಿನ್ನ ಡಿಸೈನ್ ಕೂಡ ಮಾಡಿದ್ದಾರೆ.
ಕೋಳಿಗೆ ಉಡುಗೊರೆ : ಕೋಳಿ ಕಾಲಿಗೆ ಪೆಡಿಕ್ಯೂರ್ ಮಾಡಿ,ಉಗುರಿಗೆ ಬಣ್ಣ ಹಚ್ಚುವ ಮೂಲಕ ಕೋಳಿಗೆ ಗಿಫ್ಟ್ ನೀಡಿದ್ದೇನೆಂದು ಯಿ ಯಿ ಹೇಳಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋಳಿ ಯಿ ಯಿ ಜೊತೆಗಿದೆಯಂತೆ. ನನ್ನ ಕೆಟ್ಟ ಸಮಯದಲ್ಲಿ ಕೋಳಿ ನನ್ನ ಜೊತೆಗಿತ್ತು. ಅದ್ರಿಂದ ನನಗೆ ಸಾಕಷ್ಟು ಖುಷಿ, ನೆಮ್ಮದಿ ಸಿಕ್ಕಿದೆ. ಹಾಗಾಗಿ ಅದಕ್ಕೆ ಈ ರೀತಿ ಗಿಫ್ಟ್ ನೀಡ್ತಿದ್ದೇನೆಂದು ಯಿ ಯಿ ಹೇಳಿದ್ದಾರೆ.
Holi Festival : ಓಕುಳಿ ನಂತ್ರ ಮನೆಯ ಸ್ವಚ್ಛತೆ ಹೀಗಿರಲಿ
ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಪ್ರತಿಕ್ರಿಯೆ : ಯಿ ಯಿ, ಕೋಳಿಯ ಕಾಲಿನ ಫೋಟೋಗಳನ್ನು ಹಾಕ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ಯಿ ಯಿ ಕೆಲಸವನ್ನು ಕೆಲವರು ಮೆಚ್ಚಿಕೊಂಡಿದ್ದಾರೆ. ಮತ್ತೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಯಿ ಯಿ, ಪೆಡಿಕ್ಯೂರ್ ನೆಪದಲ್ಲಿ ಕೋಳಿಗೆ ಹಿಂಸೆ ನೀಡಿದ್ದಾರೆ ಎಂದಿದ್ದಾರೆ. ಆದ್ರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಯಿ ಯಿ, ಇಲ್ಲ. ಕೋಳಿಗೆ ಯಾವುದೇ ತೊಂದರೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.