Grandma Radhamani: ವಯಸ್ಸು 71, ಕೈಯಲ್ಲಿದೆ 11 ರೀತಿಯ ಗಾಡಿ ಓಡಿಸೋ ಲೈಸೆನ್ಸ್ !

Suvarna News   | Asianet News
Published : Mar 12, 2022, 09:13 PM IST
Grandma Radhamani: ವಯಸ್ಸು 71, ಕೈಯಲ್ಲಿದೆ 11 ರೀತಿಯ ಗಾಡಿ ಓಡಿಸೋ ಲೈಸೆನ್ಸ್ !

ಸಾರಾಂಶ

ವಯಸ್ಸು 71. ಹಾಗಂತ ಅವ್ರು ಮಂಡಿನೋವು, ಬೆನ್ನು ನೋವು ಅಂತ ಮನೇಲಿ ಗೊತ್ತಿಲ್ಲ. ಊರೆಲ್ಲಾ ಗಾಡಿ (Vehicle) ಓಡಿಸ್ತಾರೆ. ಇವ್ರ ಕೈಯಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 11 ರೀತಿಯ ಗಾಡಿಗಳನ್ನು ಓಡಿಸೋ ಲೈಸೆನ್ಸ್‌ (License) ಇದೆ. ಯಾರವರು ? ಬನ್ನಿ ನಾವ್ ಪರಿಚಯ ಮಾಡಿಕೊಡ್ತೀವಿ.

ಸಾಧನೆ (Achievement)ಗೆ ವಯಸ್ಸಿನ ಹಂಗಿಲ್ಲ ಎನ್ನುತ್ತಾರೆ. ಅದಕ್ಕೆ ಈ ವೃದ್ಧೆ ಜ್ವಲಂತ ಉದಾಹರಣೆ. ಮನಸ್ಸಿದ್ದರೆ ಮಾರ್ಗವಿದೆ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ವಯಸ್ಸಾದಾಗ ಎಲ್ಲರೂ ಟ್ಯಾಬ್ಲೆಟ್ ತಿನ್ನುತ್ತಾ ಮನೆಯ ಮೂಲೆಯಲ್ಲಿ ಕೂತಿದ್ದರೆ ಕೇರಳ (Kerala)ದ ರಾಧಾಮಣಿ ಅಮ್ಮ ಬೃಹತ್ ಗಾಡಿಗಳನ್ನು ಓಡಿಸುತ್ತಾರೆ. ಡ್ರೈವಿಂಗ್ ಸ್ಕೂಲ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ರಾಧಾಮಣಿ ಅಮ್ಮ ಕೇರಳದ ತೊಪ್ಪುಂಪಾಡಿಯವರು. 71 ವರ್ಷದ ವೃದ್ಧೆ. ಮಹಿಳೆಯರಿಗಿಂತ ಪುರುಷರು ಉತ್ತಮ ಚಾಲಕರು ಎಂಬ ಮಾತಿಗೆ ಸವಾಲೊಡ್ಡಿ ನಿಂತಿದ್ದಾರೆ. ರಾಧಾಮಣಿ ಅಮ್ಮನ ಬಳಿ 11 ತರದ ವಾಹನ (Vehicle)ಗಳನ್ನು ಓಡಿಸಲು ಲೈಸೆನ್ಸ್ (License) ಇದೆ. 

ವರದಿಯ ಪ್ರಕಾರ, ರಾಧಾಮಣಿ ಅವರ ಚಾಲನಾ ಪರವಾನಗಿಯು ಸಾರಿಗೆ ಮತ್ತು ಸಾರಿಗೆಯೇತರ ವಾಹನಗಳನ್ನು ಓಡಿಸಲು ಅನುಮತಿ ನೀಡುತ್ತದೆ. ಲಘು ಮೋಟಾರು ವಾಹನಗಳೊಂದಿಗೆ ಟ್ರಕ್‌ಗಳು, ಬಸ್‌ಗಳು ಮತ್ತು ಲಾರಿಗಳಂತಹ ಭಾರೀ ಮೋಟಾರು ವಾಹನಗಳನ್ನು ಓಡಿಸಲು ಆಕೆಗೆ ಅನುಮತಿಸಲಾಗಿದೆ. ಆಕೆಯ ಪರವಾನಗಿಯು ಅಗೆಯುವ ಯಂತ್ರಗಳು, ಕ್ರೇನ್‌ಗಳು ಮತ್ತು ರೋಡ್ ರೋಲರ್‌ಗಳಂತಹ ವಾಹನಗಳನ್ನು ಓಡಿಸಲು ಸಹ ಅನುಮತಿ ನೀಡಿದೆ. ತಮ್ಮ 30ನೇ ವರ್ಷದಿಂದ ಡ್ರೈವಿಂಗ್ ಮಾಡುತ್ತಿರುವ ರಾಧಾಮಣಿಯವರು ಸದ್ಯ ಬಸ್, ಟ್ರಕ್, ಲಾರಿ, ಟ್ರಾಕ್ಟರ್, ಫೋರ್ಕ್‌ಲಿಫ್ಟ್, ಅಗೆಯುವ ಯಂತ್ರ, ಕ್ರೇನ್, ಕಂಟೈನರ್ ಟ್ರೈಲರ್ ಟ್ರಕ್, ರೋಡ್ ರೋಲರ್ ಮತ್ತು ಇತರ ಹಲವು ವಾಹನಗಳನ್ನು ನಿರ್ವಹಿಸಲು ರಾಧಾಮಣಿ ಅಮ್ಮ ಪರವಾನಗಿಗಳನ್ನು ಹೊಂದಿದ್ದಾರೆ.

Women Rights : ಪ್ರತಿಯೊಬ್ಬ ಮಹಿಳೆಗೂ ತಿಳಿದಿರಬೇಕು ಈ ಕಾನೂನು

ಮೊದಲ ಬಾರಿಗೆ ಪತಿ ಒತ್ತಾಯಿಸಿದ ಕಾರಣ ಕಾರು ಡ್ರೈವಿಂಗ್ (Car Driving) ಕಲಿತೆ. ಅಲ್ಲಿಂದ ಡ್ರೈವಿಂಗ್ ಕುರಿತಾದ ಕ್ರೇಜ್ ಹೆಚ್ಚುತ್ತಾ ಹೋಯಿತು. ನಂತರದ ದಿನಗಳಲ್ಲಿ ಎಲ್ಲಾ ರೀತಿಯ ವಾಹನಗಳ ಡ್ರೈವಿಂಗ್ ಕಲಿಯಲು ಶುರು ಮಾಡಿಕೊಂಡೆ ಎಂದು ರಾಧಾಮಣಿಯವರು ತಿಳಿಸುತ್ತಾರೆ. ,

1970ರ ದಶಕದಲ್ಲಿ ಅವರ ಪತಿ ಕೇರಳದ ಕೊಚ್ಚಿ ಪ್ರದೇಶದಲ್ಲಿ AZ ಡ್ರೈವಿಂಗ್ ಸ್ಕೂಲ್ ಅನ್ನು ತೆರೆದರು. ಆದರೆ ಅವರು 2004ರಲ್ಲಿ ಅಪಘಾತದಲ್ಲಿ ನಿಧನರಾದರು. 1988ರಲ್ಲಿ, ರಾಧಾಮಣಿ ಅವರು ಲಾರಿ ಮತ್ತು ಬಸ್ ಎರಡಕ್ಕೂ ಮೊದಲ ಚಾಲನಾ ಪರವಾನಗಿಯನ್ನು ಪಡೆದರು. ನಂತರ ಅವರು ತೋಪ್ಪುಂಪಾಡಿ ಚೆರ್ತಾಲಾದಿಂದ ಬಸ್ ಓಡಿಸಿದರು. ರಾಧಾಮಣಿ ಅವರು ಭಾರೀ ವಾಹನ ಪರವಾನಗಿಯನ್ನು ಪಡೆದ ಕೇರಳ ರಾಜ್ಯದ ಮೊದಲ ಮಹಿಳೆಯಾಗಿದ್ದಾರೆ ಮತ್ತು 2021ರಲ್ಲಿ ಅವರಿಗೆ ಅಪಾಯಕಾರಿ ಸರಕುಗಳನ್ನು ಸಾಗಿಸಲು ಪರವಾನಗಿಯನ್ನು ಒದಗಿಸಲಾಯಿತು.

Nykaa ಸ್ಥಾಪಕಿ ಫಲ್ಗುಣಿ ನಾಯರ್: ಬಿಲಿಯನೇರ್ ಉದ್ಯಮಿಯ ಯಶೋಗಾಥೆ

ಹಲವು ರೀತಿಯ ವಾಹನಗಳಿಗೆ ಪರವಾನಗಿ ಹೊಂದಿರುವ ರಾಧಾಮಣಿ ತಮ್ಮ ದ್ವಿಚಕ್ರ ವಾಹನದ ಪರವಾನಗಿಯನ್ನು ಪಡೆದಿದ್ದು, ತುಂಬಾ ತಡವಾಗಿ. 1993ರಲ್ಲಿ ರಾಧಾಮಣಿ ಟೂವೀಲರ್ ಲೈಸೆನ್ಸ್ ಪಡೆದುಕೊಂಡರು. ಗಂಡ ಖರೀದಿಸಿ ನೀಡಿದ ಟೂವೀಲರ್ ಎಂಬ ಕಾರಣಕ್ಕೆ ರಾಧಾಮಣಿ ಎಲ್ಲೆಡೆ ಅದನ್ನೇ ಕೊಂಡೊಯ್ಯುತ್ತಾರೆ. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಕಾರನ್ನು ಬಳಸುತ್ತಾರೆ.

ರಾಧಾಮಣಿಯವರು ಈಗ ತಮ್ಮ 2 ಗಂಡು ಮಕ್ಕಳು, ಸೊಸೆ ಮತ್ತು ಮೊಮ್ಮಗನೊಂದಿಗೆ ಪತಿಯ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದಾರೆ. ಆದರೆ ಅವರೀಗ ಡ್ರೈವಿಂಗ್ ಕಲಿಸುವುದಿಲ್ಲ. ಆದರೆ ಶಾಲೆಯಲ್ಲಿ ಕಂಪ್ಯೂಟರ್ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಾರೆ. ರಾಧಾಮಣಿ ಡ್ರೈವಿಂಗ್ ಸ್ಕೂಲ್‌ನಲ್ಲಿ ಕೆಲಸ ಮಾಡುವುದರ ಜೊತೆಗೆ, ಎರ್ನಾಕುಲಂ ಜಿಲ್ಲೆಯ ಕಲಮಸೇರಿ ಪಾಲಿಟೆಕ್ನಿಕ್‌ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಕೋರ್ಸ್ ಅನ್ನು ಸಹ ಓದುತ್ತಿದ್ದಾರೆ. ಜೀವನದ ಇಳಿ ವಯಸ್ಸಿನಲ್ಲಿ ರಾಧಾಮಣಿ ಇನ್ನೂ ಹೊಸ ವಿಷಯಗಳನ್ನು ಕಲಿಯುವುದರಲ್ಲಿ ನಿರತರಾಗಿದ್ದಾರೆ. ಕ್ರೇನ್ ಲೈಸೆನ್ಸ್ ಪಡೆಯುವುದು ಇವರ ಮುಂದಿನ ಗುರಿಯೆಂದು ಹೆಮ್ಮೆಯಿಂದ ಹೇಳುತ್ತಾರೆ.

ಸಾಧನೆ ಮಾಡುವ ಮನಸ್ಸಿದ್ದರೆ ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದಕ್ಕೆ ರಾಧಾಮಣಿ ಉತ್ತಮ ಉದಾಹರಣೆ. ಈ ವಯಸ್ಸಿನಲ್ಲೂ ತನ್ನನ್ನು ಸಾಧನೆಯಲ್ಲಿ ತೊಡಗಿಸಿಕೊಳ್ಳುವ ರಾಧಾಮಣಿ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!