
ಹುಡುಗಿಯರು ಉದ್ದ ಕೂದಲು ಬಿಟ್ಕೊಳ್ಳೋದು, ಹುಡುಗರು ಗಡ್ಡ ಬಿಟ್ಕೊಳ್ಳೋದು ಕಾಮನ್. ಆದ್ರೆ ಈಗೆಲ್ಲಾ ಹಾಗಿಲ್ಲ ಹುಡುಗರು ಸಹ ಸ್ಟೈಲಿಶ್ ಆಗಿ ಉದ್ದ ಕೂದಲು ಬಿಟ್ಕೊಳ್ತಾರೆ. ಆದ್ರೆ ಸಾಮಾನ್ಯವಾಗಿ ಹುಡುಗಿಯರು (Girls) ಗಡ್ಡ ಬಿಟ್ಕೊಳ್ಳಲ್ಲ. ಆದ್ರೆ ಕೆಲ ಹುಡುಗಿಯರಿಗೆ ಗಡ್ಡದ ಕೂದಲು (Hair) ಬರುತ್ತೆ. ಇದನ್ನು ವ್ಯಾಕ್ಸಿಂಗ್‌ನಲ್ಲಿ ತೆಗೆಸಿಕೊಳ್ತಾರೆ. ನಮ್ಮ ಹಿರಿಯರು ಹುಡುಗೀಯರು ಗದ್ದಕ್ಕೆ ಬ್ಲೇಡ್ ತಾಗಿಸಬಾರದು ಕೂದಲು ಬರುತ್ತೆ ಅನ್ನೋದನ್ನು ಕೇಳಿರಬಹುದು. ಅದು ಎಷ್ಟರಮಟ್ಟಿಗೆ ನಿಜ ಅಥವಾ ಮೌಢ್ಯವೋ ಗೊತ್ತಿಲ್ಲ. ಆದ್ರೆ ಇಲ್ಲೊಬ್ಬಳು ಯುವತಿ ದಿನಕ್ಕೆ ಎರಡು ಬಾರಿ ಶೇವ್ ಮಾಡಲು ಆರಂಭಿಸಿದ ನಂತರ ಕ್ರಮೇಣ ಹೆಚ್ಚು ಗಡ್ಡದ (Beard) ಕೂದಲು ಬೆಳೆಯುವ ಸಮಸ್ಯೆಯನ್ನು ಎದುರಿಸಿದ್ದಾಳೆ.
13 ವರ್ಷದಿಂದಲೇ ಮಹಿಳೆಯ ಮುಖದ ಮೇಲೆ ಅಸಹಜ ಕೂದಲಿನ ಬೆಳವಣಿಗೆ
30 ವರ್ಷದ ಡಕೋಟಾ ಕುಕ್, 13ನೇ ವಯಸ್ಸಿನಲ್ಲಿ ತನ್ನ ಮುಖದ ಮೇಲೆ ಅಸಹಜ ಕೂದಲು ಬೆಳವಣಿಗೆಯನ್ನು ಮೊದಲು ಗಮನಿಸಿದರು. ಮುಖದಲ್ಲಿ ಈ ರೀತಿಯ ಕೂದಲ ಬೆಳವಣಿಗೆಯಿಂದ ಅವರು ಅನಾನುಕೂಲತೆಯನ್ನು ಅನುಭವಿಸಿದರು. ಈ ಸಮಸ್ಯೆಯಿಂದ ಹೊರಬರಲಾಗದೆ 10 ವರ್ಷಗಳ ಕಾಲ ಖಿನ್ನತೆಯನ್ನು (Anxiety) ಅನುಭವಿಸಿದರು. ವಾರಕ್ಕೊಮ್ಮೆ ವ್ಯಾಕ್ಸಿಂಗ್ ಅಪಾಯಿಂಟ್‌ಮೆಂಟ್‌ಗಳಿಗೆ ಹೋಗುವುದರಿಂದ ಹಿಡಿದು ದಿನಕ್ಕೆ ಎರಡು ಬಾರಿ ತನ್ನ ಮುಖದ ಕೂದಲನ್ನು ಶೇವ್ ಮಾಡುವವರೆಗೆ, ಡಕೋಟಾ ಸಾಕಷ್ಟು ಅಸ್ವಸ್ಥತೆಯನ್ನು ಅನುಭವಿಸಿದರು.
ಮಕ್ಕಳ ತಲೆಯಲ್ಲಿ ಹೇನಿನ ಕಾಟವೇ, ತೆಲೆ ಕೆಡಿಸಿಕೊಳ್ಳಬೇಡಿ, ಈ ಮನೆ ಮದ್ದು ಟ್ರೈ ಮಾಡಿ
ಶೇವ್ ಮಾಡಲು ಆರಂಭಿಸಿದ ನಂತರ ಹೆಚ್ಚಾಯಿತು ಸಮಸ್ಯೆ
ಆದರೆ, ಕಾಲ ಕ್ರಮೇಣ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತಾ ಹೋಯಿತು. ಮುಖದಲ್ಲಿ ಸಣ್ಣ ಕೂದಲಿನ ಬದಲಿಗೆ ಉದ್ದುದ್ದ ಕೂದಲುಗಳು ಬೆಳೆದವು. ಮಹಿಳೆಯರು (Woman) ಮುಖದ ಕೂದಲನ್ನು ಹೊಂದಿರುವುದು ತುಂಬಾ ಕೆಟ್ಟದ್ದು ಎಂದು ಎಲ್ಲರೂ ಅಂದುಕೊಂಡಿರುವ ಸಮಯದಲ್ಲಿ ಬೆಳೆದಿದ್ದೇನೆ, ಹುಡುಗಿಯರು ಮುಖದ ಕೂದಲನ್ನು ಹೇಗೆ ಬೆಳೆಸಬಾರದು ಎಂದು ಸಲೂನ್‌ನಲ್ಲಿರುವ ಮಹಿಳೆಯರು ನನಗೆ ಹೇಳುತ್ತಿದ್ದರು' ಎಂದು ಡಕೋಟಾ ಕುಕ್ ತಿಳಿಸಿದ್ದಾರೆ. 'ಗಡ್ಡದ ಕೂದಲಿನ ಸಮಸ್ಯೆಯಿಂದ ನಾನು ಸಾಕಷ್ಟು ಕುಗ್ಗಿ ಹೋಗಿದ್ದೇನೆ. ಹಲವಾರು ಬಾರಿ ಅವಮಾನವನ್ನು ಎದುರಿಸಿದ್ದೇನೆ. ನಾನು ನನ್ನ ಮುಖವನ್ನು ಫೋಟೋಗಳಲ್ಲಿ ಮರೆಮಾಡಲು ಪ್ರಯತ್ನಿಸುತ್ತೇನೆ ಮತ್ತು ಪ್ರತಿ ವಾರ ವ್ಯಾಕ್ಸಿಂಗ್ ಸೆಷನ್‌ಗಳಿಗೆ ಹಾಜರಾಗುತ್ತೇನೆ' ಎಂದು ಡೆಕೋಟಾ ಹೇಳಿದ್ದಾರೆ.
ಡಕೋಟಾ ಹಲವಾರು ಬಾರಿ ಪರೀಕ್ಷೆಗಳಿಗೆ ಒಳಗಾದರು. ಆದರೆ ವೈದ್ಯರಿಗೆ ಅವರ ಮುಖದ ಮೇಲೆ ಕೂದಲು ಬೆಳೆಯುತ್ತಿರುವುದಕ್ಕೆ ಕಾರಣವನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಆಕೆಯ ಮೂತ್ರಜನಕಾಂಗದ ಗ್ರಂಥಿಗಳು ಎತ್ತರದ ಟೆಸ್ಟೋಸ್ಟೆರಾನ್ ಅನ್ನು ಉತ್ಪಾದಿಸುವ ಕಾರಣದಿಂದಾಗಿರಬಹುದು ಎಂದು ವೈದ್ಯರು ತಿಳಿಸುತ್ತಾರೆ. ಆಗಾಗ ಶೇವಿಂಗ್ ಮಾಡುವುದರಿಂದ ಮಹಿಳೆಯ ಚರ್ಮವು (Skin) ಮತ್ತು ದದ್ದುಗಳು ಕೂಡಿದೆ. ಅವರು ಇದನ್ನು ಮೇಕಪ್‌ನಿಂದ ಮುಚ್ಚಿದ್ದಾರೆ ಎಂದಿದ್ದಾರೆ.
ಕೇರಳದ ಒಂದು ಮೊಟ್ಟೆಯ ಕಥೆ: ಕೂದಲು ಬರಲಿಲ್ಲವೆಂದು ವೈದ್ಯನ ಹೆಸರು ಬರೆದಿಟ್ಟು ಸೂಸೈಡ್..!
ಸರ್ಕಸ್‌ನಲ್ಲಿ ಗಡ್ಡದ ಮಹಿಳೆ ಫೇಮಸ್
2015ರಲ್ಲಿ, ಡಕೋಟಾದ ಸ್ನೇಹಿತರೊಬ್ಬರು ಸರ್ಕಸ್ ಪ್ರದರ್ಶನದಲ್ಲಿ ಭಾಗವಹಿಸುವಂತೆ ಕೇಳಿಕೊಂಡರು. ಅವರು ಪ್ರದರ್ಶನದಲ್ಲಿ ಗಡ್ಡದ ಮಹಿಳೆ ಎಂಬ ಕಲ್ಪನೆಯನ್ನು ಇಷ್ಟಪಟ್ಟರು ಮತ್ತು ರೇಜರ್ ಮತ್ತು ವ್ಯಾಕ್ಸಿಂಗ್ ಅನ್ನು ಹೊರಹಾಕಿದರು. ಆದರೆ, ಪರಿವರ್ತನೆ ಅಷ್ಟು ಸುಲಭವಾಗಿರಲಿಲ್ಲ. ಅವಳ ಗಡ್ಡವನ್ನು ಬೆಳೆಸುವುದು ಅಹಿತಕರವಾಗಿತ್ತು. ಅಂತಿಮವಾಗಿ, ಅವಳು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ನಿಲ್ಲಿಸಿದ ಸಮಯ ಬಂದಿತು. ನನ್ನ ಸ್ವ-ಸ್ವೀಕಾರದ ಪ್ರಯಾಣದ ಉದ್ದಕ್ಕೂ ನನ್ನ ಕುಟುಂಬ ಮತ್ತು ಸ್ನೇಹಿತರು ಉತ್ತಮ ಬೆಂಬಲವನ್ನು ನೀಡಿದ್ದಾರೆ. ನಾನು ಈಗ ನನ್ನ ಗಡ್ಡವನ್ನು ಬಹಳವಾಗಿ ಪ್ರೀತಿಸುತ್ತೇನೆ' ಎಂದು ಮಹಿಳೆ ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.