ಭಲೇ ನಾರಿ..ಸೀರೆ ಧರಿಸಿನೂ ಜಿಮ್‌ನಲ್ಲಿ ವರ್ಕೌಟ್ ಮಾಡ್ಬೋದು ನೋಡಿ

By Kannadaprabha NewsFirst Published Nov 23, 2022, 10:46 AM IST
Highlights

ಇತ್ತೀಚಿನ ವರ್ಷಗಳಲ್ಲಿ ವರ್ಕೌಟ್ ಮಾಡೋದು ಜನರ ಸಾಮಾನ್ಯ ದಿನಚರಿಯಲ್ಲಿ ಒಂದಾಗಿದೆ. ಜಿಮ್‌ಗೆ ಹೋಗೋಕೆಂದೇ ವರ್ಕೌಟ್ ಮಾಡುವ ಉಡುಪು, ವಾಟರ್‌ ಬಾಟಲ್‌ಗಳನ್ನು ಖರೀದಿಸ್ತಾರೆ. ಆದ್ರೆ ಚೆನ್ನೈನಲ್ಲಿ ಮಹಿಳೆಯೊಬ್ಬರು ಸೀರೆಯುಟ್ಟುಕೊಂಡೇ ಜಿಮ್‌ನಲ್ಲಿ ವರ್ಕೌಟ್ ಮಾಡ್ತಾರೆ. ಸದ್ಯ ಈ ವೀಡಿಯೋ ಎಲ್ಲೆಡೆ ವೈರಲ್ ಆಗ್ತಿದೆ. 

ಸೀರೆ ಧರಿಸಿ ಯೋಗ ಆಯ್ತು, ಈಗ 56 ವರ್ಷದ ಮಹಿಳೆಯೊಬ್ಬರು ಸೀರೆ (Saree) ಧರಿಸಿ ಜಿಮ್‌ನಲ್ಲಿ ಪವರ್‌ ಲಿಫ್ಟಿಂಗ್‌, ಪುಶ್‌ಅಫ್ಸ್‌ ಮಾಡುತ್ತಿರುವ ವಿಡಿಯೋ ಸಖತ್‌ ವೈರಲ್‌ ಆಗಿದೆ. ನಾಲ್ಕು ವರ್ಷಗಳ ಹಿಂದೆ ಮಹಿಳೆ (Woman)ಯಲ್ಲಿ ಮೊಣಕಾಲು ನೊವು ಸೇರಿದಂತೆ ವಯೋ ಸಹಜ ನೋವುಗಳು (Pain) ಕಾಣಿಸಿಕೊಳ್ಳುತ್ತಿದ್ದವು. ಮಹಿಳೆ ಮಗ ಜಿಮ್‌ನಲ್ಲಿ ಫಿಟ್‌ನೆಸ್‌ ಟ್ರೇನರ್‌ ಆಗಿದ್ದು, ಜಿಮ್‌ ಸೇರಿಕೊಳ್ಳುವಂತೆ ಮಹಿಳೆಗೆ ಸಲಹೆ ನೀಡಿದ್ದಾನೆ. ಮಹಿಳೆ ತನ್ನ ಮಗ ಹಾಗೂ ಸೊಸೆ ಜೊತೆ ಸೇರಿಕೊಂಡು ವರ್ಕ್ ಔಟ್‌ ಮಾಡಲು ಪ್ರಾರಂಭಿಸಿದ್ದಾರೆ. ಹೀಗೆ ಮಹಿಳೆ 56ರ ವಯಸ್ಸಿನಲ್ಲೂ ಸೀರೆ ಧರಿಸಿ ಸಖತ್‌ ವರ್ಕ್ ಔಟ್‌ ಮಾಡುತ್ತಿರುವುದು ನೋಡಿ ಇತರರು ಪ್ರೇರಣೆಗೊಂಡಿದ್ದಾರೆ.

56 ವರ್ಷದ ಚೆನ್ನೈ ಮಹಿಳೆಯೊಬ್ಬರು ಸೀರೆ ಉಟ್ಟುಕೊಂಡು ವರ್ಕೌಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social meddia) ವೈರಲ್ ಆಗಿದೆ. ಈ ವಿಡಿಯೋವನ್ನು ಹ್ಯೂಮನ್ಸ್ ಆಫ್ ಮದ್ರಾಸ್ ಮತ್ತು ಮದ್ರಾಸ್ ಬಾರ್ಬೆಲ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಹಿಳೆ ಜಿಮ್‌ನಲ್ಲಿ ಕೆಲಸ ಮಾಡುತ್ತಿರುವುದನ್ನು ಕ್ಲಿಪ್ ತೋರಿಸುತ್ತದೆ. ಅವಳು ಭಾರವಾದ ತೂಕ (Weight) ಮತ್ತು ಡಂಬ್ಬೆಲ್ಸ್ ಮತ್ತು ಇತರ ಜಿಮ್ ಉಪಕರಣಗಳನ್ನು ಎತ್ತುತ್ತಿರುವುದನ್ನು ಕಾಣಬಹುದು. ಅವರು ತನ್ನ ಸೊಸೆಯೊಂದಿಗೆ ವರ್ಕೌಟ್ ಮಾಡುತ್ತಾರೆ. ಆಂಟಿ ಸೀರೆಯುಟ್ಟು ಡಂಬಲ್ಸ್‌ ಹಾಗೂ ಜಿಮ್‌ ಸಲಕರಣಿಗಳನ್ನು ಎತ್ತಿ ವರ್ಕೌಟ್‌ ಮಾಡಿದ್ದಾರೆ. ಜಿಮ್ ಸಿಬ್ಬಂದಿ ಅವರನ್ನು ಸನ್ಮಾನಿಸಿದರು.

ವಿಚಿತ್ರ ಕಾಯಿಲೆಯಿಂದ ಬಳಲ್ತಿರೋ ಮಹಿಳೆ, ಬಿಸ್ಕೆಟ್ ಬಿಟ್ಟು ಬೇರೇನೂ ತಿನ್ನೋ ಹಾಗಿಲ್ಲ..!

ಸೊಸೆಯೊಂದಿಗೆ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಅತ್ತೆ
ನಾನು ನನ್ನ ಸೊಸೆ ನಿಯಮಿತವಾಗಿ ವ್ಯಾಯಾಮ ಮಾಡುತ್ತೇವೆ ಎಂದು ಮಹಿಳೆ ವಿಡಿಯೋದಲ್ಲಿ ಹೇಳಿದ್ದಾರೆ. ' ನನಗೆ 52 ನೇ ವಯಸ್ಸಿನಲ್ಲಿ ತೀವ್ರವಾದ ಮೊಣಕಾಲು ಮತ್ತು ಕಾಲು ನೋವು ಇರುವುದು ಪತ್ತೆಯಾಯಿತು. ಆಗ ಮಗ ವ್ಯಾಯಾಮ ಮಾಡಲು ಪ್ರಾರಂಭಿಸಲು ಸೂಚಿಸಿದನು.ನನ್ನ ಮಗ ಚಿಕಿತ್ಸೆಯ (Treatmennt[) ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿದ್ದಾನೆ ಮತ್ತು ವ್ಯಾಯಾಮ ಮಾಡಲು ಪ್ರಾರಂಭಿಸಲು ನನಗೆ ಸೂಚಿಸಿದನು. ಅವನು ಮದ್ರಾಸ್ ಬಾರ್ಬೆಲ್ ಜಿಮ್ ಅನ್ನು ಹೊಂದಿದ್ದಾನೆ. ನಾನು ನನ್ನ ಸೊಸೆಯೊಂದಿಗೆ ಪವರ್ಲಿಫ್ಟಿಂಗ್, ಸ್ಕ್ವಾಟ್‌ಗಳು ಇತ್ಯಾದಿಗಳನ್ನು ಮಾಡುತ್ತೇನೆ. ಹೌದು, ಅದು ನನ್ನ ನೋವನ್ನು ಗುಣಪಡಿಸಿತು. . ನಾವು, ಒಂದು ಕುಟುಂಬವಾಗಿ, ನಮ್ಮ ದೇಹ (Body)ವನ್ನು ಸದೃಢವಾಗಿ ಮತ್ತು ಆರೋಗ್ಯಕರವಾಗಿರಿಸಿಕೊಳ್ಳುತ್ತೇವೆ' ಎಂದು ಮಹಿಳೆ ತಿಳಿಸಿದ್ದಾರೆ.

ವೈರಲ್ ಆಗಿರೋ ವೀಡಿಯೋ ಯಾವುದೇ ಕೆಲಸ ಮಾಡಲು ಉಡುಪು ಅಡ್ಡಿಯಾಗುವುದಿಲ್ಲ ಎಂಬುದನ್ನು ಸೂಚಿಸುತ್ತದೆ. ವೀಡಿಯೋಗೆ ಅದ್ಭುತವಾದ ಶೀರ್ಷಿಕೆಯನ್ನು ಸಹ ನೀಡಲಾಗಿದೆ 'ಆಕೆಗೆ 56 ವರ್ಷ. ಅವಳು ಸೀರೆಯನ್ನು ಧರಿಸುತ್ತಾಳೆ. ಪವರ್‌ಲಿಫ್ಟಿಂಗ್ ಮತ್ತು ಪುಷ್‌ಅಪ್‌ಗಳನ್ನು ಮಾಡುತ್ತಾಳೆ.  ವಯಸ್ಸು ಕೇವಲ ಒಂದು ಸಂಖ್ಯೆ, ಅಡ್ಡಿಯಲ್ಲ. ಮನಸ್ಸಿದ್ದರೆ ಏನನ್ನಾದರೂ ಸಾಧಿಸಬಹುದು. ಅತ್ತೆಯೊಂದಿಗೆ ಬೆಂಬಲ ನೀಡುವ ಸೊಸೆ ನಿಯಮಿತವಾಗಿ ವರ್ಕೌಟ್ ಮಾಡುತ್ತಾರೆ. ಪರಸ್ಪರ ಬೆಳೆಯುವುದು ಎಂದರೆ ಇದಲ್ಲವೇ' ಎಂದು ಹೇಳಲಾಗಿದೆ. 

ಅಯ್ಯೋ ನೋವು ಅಂದ್ರೂ ಬಿಡ್ಲಿಲ್ಲ, ಅನಸ್ತೇಶಿಯಾ ಬಳಸದೆ 23 ಮಹಿಳೆಯರಿಗೆ ಸರ್ಜರಿ !

ವೈರಲ್ ವೀಡಿಯೋಗೆ ನೆಟ್ಟಿಗರಿಂದ ಕಮೆಂಟ್
ಈ ಪೋಸ್ಟ್‌ಗೆ ನೆಟ್ಟಿಗರು ಹಲವರು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರ 'ಇದು ನಾನು ಸದ್ಯಕ್ಕೆ ಕೇಳಿದ ಅತ್ಯುತ್ತಮ ಘಟನೆಯಾಗಿದೆ. ಇನ್ನೂ ಅನೇಕ ಮಹಿಳೆಯರು ಈ ಪೋಸ್ಟ್‌ನಿಂದ ಸ್ಫೂರ್ತಿ ಪಡೆಯುತ್ತಾರೆ ಮತ್ತು ಅವರ ಆರೋಗ್ಯ ಮತ್ತು ದೈಹಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ. ಮತ್ತೊಬ್ಬರು 'ಇದನ್ನು ಪ್ರಗತಿಪರ ಎಂದು ಕರೆಯಲಾಗುತ್ತದೆ..ಮನೆಯಲ್ಲಿದ್ದು ಅಡುಗೆ ಮಾಡುವ ಬದಲು ಅತ್ತೆ-ಸೊಸೆ ಆರೋಗ್ಯಕರವಾಗಿ ಏನನ್ನೋ ಮಾಡುತ್ತಿದ್ದಾರೆ. ನಾವು ಅವರಿಂದ ಹಲವು ವಿಷಯಗಳನ್ನು ಕಲಿಯಬೇಕಿದೆ' ಎಂದಿದ್ದಾರೆ.

click me!