ಹೃದಯಾಘಾತದ ಬಗ್ಗೆ ಬೇಡ ಭಯ, ತಿಂಗಳ ಮುಂಚೆಯೇ ಸಿಕ್ಕಿರುತ್ತೆ ಸೂಚನೆ

By Suvarna NewsFirst Published Nov 21, 2022, 2:10 PM IST
Highlights

ಹೃದಯದ ಆರೋಗ್ಯ ನಮ್ಮ ಜೀವನ ಶೈಲಿಯನ್ನು ಅವಲಂಬಿಸಿದೆ. ನಮ್ಮ ಕೆಟ್ಟ ಜೀವನ ಶೈಲಿ ಹೃದಯ ಖಾಯಿಲೆಗೆ ಕಾರಣವಾಗುತ್ತದೆ. ಇನ್ನು ಕೆಲಸ ಸಾಧ್ಯವಾಗ್ತಿಲ್ಲ ಎಂದಾಗ ಹಾರ್ಟ್ ನಮಗೆ ಮುನ್ಸೂಚನೆ ನೀಡುತ್ತದೆ. 
 

ಹೃದಯಾಘಾತ, ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಿವೆ. ಚಿಕ್ಕ ವಯಸ್ಸಿನಲ್ಲಿಯೇ ಜನರು ಹೃದಯಾಘಾತಕ್ಕೆ ಒಳಗಾಗ್ತಿದ್ದಾರೆ. ಈ ಹೃದಯದ ಖಾಯಿಲೆಗೆ ಮುಖ್ಯ ಕಾರಣ ನಮ್ಮ ಕೆಟ್ಟ ಜೀವನಶೈಲಿ. ಹದಗೆಟ್ಟ ಜೀವನಶೈಲಿಯಿಂದ ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಈ ರೋಗಗಳು ನೇರವಾಗಿ ಹೃದಯಕ್ಕೆ ಸಂಬಂಧ ಹೊಂದಿವೆ. ಹೃದಯಾಘಾತಕ್ಕೆ ಇವು ಮುಖ್ಯ ಕಾರಣವಾಗುತ್ತವೆ. ಯಾವುದೇ ಖಾಯಿಲೆಯಾದ್ರೂ ಅದಕ್ಕೆ ಕೆಲವೊಂದು ಲಕ್ಷಣವಿರುತ್ತದೆ. ಹಾಗೆಯೇ ಹೃದಯಾಘಾತಕ್ಕೆ ಮೊದಲೂ ನಮ್ಮ ದೇಹ ಕೆಲ ಸೂಚನೆಗಳನ್ನು ನೀಡುತ್ತದೆ. ಮಹಿಳೆಯರು ಹೃದಯಾಘಾತಕ್ಕೆ ಒಂದು ತಿಂಗಳ ಮೊದಲೇ ಕೆಲ ಸಮಸ್ಯೆ ಎದುರಿಸುತ್ತಾರೆ. ಅದನ್ನು ಗುರುತಿಸಿ, ಸರಿಯಾದ ಚಿಕಿತ್ಸೆ ಪಡೆದಲ್ಲಿ ಅವರು ಈ ಅಪಾಯದಿಂದ ಹೊರಗೆ ಬರಬಹುದು.  

ಮಹಿಳೆಯರ ಹೃದಯಾಘಾತ (Heart Attack) ಕ್ಕೆ ಸಂಬಂಧಿಸಿದಂತೆ ಅನೇಕ ಸಂಶೋಧನೆ (Research) ಗಳು ನಡೆದಿವೆ. ಈಗ ಸರ್ಕ್ಯುಲೇಷನ್ ಜರ್ನಲ್‌ ಒಂದು ವರದಿಯನ್ನು ಪ್ರಕಟಿಸಿದೆ. ಹೃದಯಾಘಾತಕ್ಕೂ ಮುನ್ನ ಹಲವು ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂಬುದು ಅಧ್ಯಯನದಲ್ಲಿ ಬಹಿರಂಗವಾಗಿದೆ. ಸಂಶೋಧನೆಯಲ್ಲಿ 500 ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು ಎನ್ನಲಾಗಿದೆ. ಅವರಿಗೆ ಹೃದಯಾಘಾತವಾಗುವ ಸಾಧ್ಯತೆ ಇತ್ತಂತೆ. ಆದರೆ ಆರಂಭದಲ್ಲಿಯೇ ಅವರು ವೈದ್ಯ (Doctor) ರನ್ನು ಭೇಟಿಯಾದ ಕಾರಣ, ರೋಗಲಕ್ಷಣಗಳನ್ನು ನೋಡಿದ ತಜ್ಞರು ಚಿಕಿತ್ಸೆಯನ್ನು ಪ್ರಾರಂಭಿಸಿದ್ದರು. ಹಾಗಾಗಿ ಅವರು ಬದುಕುಳಿದರು ಎಂದು ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ. ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 95 ರಷ್ಟು ಮಹಿಳೆಯರು ಹೃದಯಾಘಾತವಾಗುವ ಒಂದು ತಿಂಗಳ ಮೊದಲು ಕೆಲ ಸಮಸ್ಯೆ ಎದುರಿಸಿದ್ದರು.

ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 71 ರಷ್ಟು ಮಹಿಳೆಯರಿಗೆ ಕಾಣಿಸಿಕೊಂಡ ಮುಖ್ಯ ಲಕ್ಷಣ ಆಯಾಸ (Tiredness). ಶೇಕಡಾ 48 ರಷ್ಟು ಮಹಿಳೆಯರಿಗೆ ನಿದ್ರೆ ಮಾಡಲು ಸಮಸ್ಯೆಯಾಗುತ್ತಿತ್ತಂತೆ. ಇನ್ನು ಕೆಲ ಮಹಿಳೆಯರಿಗೆ ಎದೆ ನೋವು ಪ್ರಾರಂಭವಾಗಿತ್ತಂತೆ. ಎದೆಯಲ್ಲಿ ಒತ್ತಡ, ನೋವು, ಬಿಗಿತದಿಂದ ಅವರು ಬಳಲಿದ್ದರಂತೆ. ಸಂಶೋಧನಾ ವರದಿಯಲ್ಲಿ ಹೃದಯಾಘಾತಕ್ಕೆ ಒಂದು ತಿಂಗಳ ಮೊದಲು ಮಹಿಳೆಯರು ಯಾವೆಲ್ಲ ರೋಗ ಲಕ್ಷಣಗಳನ್ನು ಹೊಂದಿದ್ದರು ಎಂಬುದನ್ನು ಹೇಳಲಾಗಿದೆ.

ಡಿಪೆಂಡ್ ಆಗೋದ ಬಿಟ್ಟು, ಸ್ವತಂತ್ರರಾಗಿ, ಹೆಣ್ಣಿಗೆ ಇದರಿಂದ ಸಿಗೋ ಖುಷಿ ಅಷ್ಟಿಷ್ಟಲ್ಲ!

ಮಹಿಳೆಯರಲ್ಲಿ ಕಾಣಿಸಿಕೊಂಡಿತ್ತು ಈ ಎಲ್ಲ ಸಮಸ್ಯೆ : 
1. ಅಸಾಮಾನ್ಯ ಆಯಾಸ
2. ಮನಸ್ಸಿನಲ್ಲಿ ಅಶಾಂತಿ
3.  ಉಸಿರಾಡಲು ತೊಂದರೆ
4. ಅಜೀರ್ಣ ಸಮಸ್ಯೆ (Digestion Issues)
5. ಅನವಶ್ಯಕ ಆತಂಕ
6. ಹೃದಯ ಬಡಿತದಲ್ಲಿ ಹೆಚ್ಚಳ (Heart Beat)
7. ಶಕ್ತಿ ಕಳೆದುಕೊಂಡ ಕೈಗಳು
8. ಚಿಂತಿಸುವ ವಿಷ್ಯದಲ್ಲಿ ಬದಲಾವಣೆ 
9. ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆ
10. ಹಸಿವಾಗದಿರುವುದು (Hungry)
11. ಜೋಮು ಹಿಡಿಯುವ ಕೈ
12. ರಾತ್ರಿ ಉಸಿರಾಡಲು ಸಮಸ್ಯೆ (Breathing Problem)
ಈ ಎಲ್ಲ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡದೆ ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ಪಡೆಯುವುದು ಸೂಕ್ತ.

Women Right : ಮನೆಯಲ್ಲಿ ಜಗಳವಾದ್ರೆ ಹೆದರ್ಬೇಡಿ, ಪತ್ನಿಗಿದೆ ಈ ಹಕ್ಕು

ಹೃದಯವನ್ನು ಜೋಪಾನ ಮಾಡಿ (Protect your heart) : ಹೃದಯದ ಆರೋಗ್ಯ ಬಹಳ ಮುಖ್ಯ. ಸಣ್ಣ ಸಮಸ್ಯೆ ಎನ್ನಿಸಿದ್ರೂ ನಿರ್ಲಕ್ಷ್ಯ ಸಲ್ಲದು. ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬೇಕು ರಕ್ತದೊತ್ತಡ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಅಧಿಕ ಕೊಲೆಸ್ಟ್ರಾಲ್ ಅಪಾಯಕಾರಿ. ನಿಯಮಿತವಾಗಿ ಪರೀಕ್ಷೆ ಮಾಡಬೇಕು. ಬೊಜ್ಜು, ಧೂಮಪಾನ, ಜಂಕ್ ಫುಡ್, ಮದ್ಯಪಾನದಂತಹ ಅಭ್ಯಾಸಗಳು ಸಹ ಹೃದಯದ ಆರೋಗ್ಯಕ್ಕೆ ಅಪಾಯಕಾರಿ. ಹಾಗಾಗಿ ಈ ಎಲ್ಲದರಿಂದ ದೂರವಿದ್ದು, ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು.

ಭಾರತ ಸೇರಿದಂತೆ ವಿಶ್ವದಾದ್ಯಂತ ಹೃದಯ ರೋಗದಿಂದ ಪ್ರತಿ ವರ್ಷ 1 ಕೋಟಿ 70 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಹೃದಯಾಘಾತ ಹಾಗೂ ಹಾರ್ಟ್ ಸ್ಟ್ರೋಕ್ ನಿಂದ ಸಾಯುವವರ ಸಂಖ್ಯೆ ಹೆಚ್ಚು. ಹೃದಯ ರೋಗವನ್ನು ನಾವು ಸೈಲೆಂಟ್ ಕಿಲ್ಲರ್ ಎನ್ನಬಹುದು. ಯಾವುದೇ ದೊಡ್ಡ ಸೂಚನೆಯಿಲ್ಲದೆ ಅದು ದಾಳಿ ನಡೆಸುತ್ತದೆ.

click me!