Latest Videos

ದೇಸಿ ಸ್ಟೈಲ್‌ನಲ್ಲಿ ಲುಂಗಿಯುಟ್ಟು ಲಂಡನ್‌ ರಸ್ತೆಯಲ್ಲಿ ಒಡಾಡಿದ ಯುವತಿ!

By Vinutha PerlaFirst Published May 26, 2024, 3:06 PM IST
Highlights

ದಕ್ಷಿಣಭಾರತದಲ್ಲಿ ತುಂಬಾ ಫೇಮಸ್ ಆಗಿರುವ ಬಟ್ಟೆಗಳ ವಿಧದಲ್ಲಿ ಒಂದು ಲುಂಗಿ. ಸಾಮಾನ್ಯವಾಗಿ ಎಲ್ಲಾ ಕಾರ್ಯಕ್ರಮಗಳಲ್ಲೂ ಜನರು ಲುಂಗಿ ಧರಿಸಿರುವುದನ್ನು ನೋಡಬಹುದು. ಆದರೆ ವಿದೇಶಿ ನೆಲದಲ್ಲಿ ಲುಂಗಿ ಉಟ್ಕೊಂಡು ಓಡಾಡಿದ್ರೆ ಹೇಗಿರುತ್ತೆ..ಇಲ್ಲಿದೆ ನೋಡಿ ಜನರ ರಿಯಾಕ್ಷನ್‌.
 

ಜನರು ವಿದೇಶದಲ್ಲಿ ವಾಸಿಸುವಾಗ, ತಮ್ಮ ಸಂಸ್ಕೃತಿಯನ್ನು ತೋರಿಸಿಕೊಳ್ಳಲು ವಿಭಿನ್ನ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಹಾಗೆಯೇ ಇತ್ತೀಚೆಗೆ, ಯುವತಿಯೊಬ್ಬಳು ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾಗಿರುವ ಲುಂಗಿಯಲ್ಲಿ ಲಂಡನ್‌ ಸ್ಟ್ರೀಟ್‌ನಲ್ಲಿ ಉಟ್ಟುಕೊಂಡುಓಡಾಡಿದ್ದಾರೆ. ಈ ಮೂಲಕ ಯುವತಿ ವಿದೇಶಿ ನೆಲದಲ್ಲಿ ತಮ್ಮ ಪರಂಪರೆಯನ್ನು ಪ್ರದರ್ಶಿಸಿದರು. ಇನ್‌ಸ್ಟಾಗ್ರಾಂನಲ್ಲಿ ಈ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ವಿದೇಶಿಗರು ಯುವತಿಯನ್ನು ಲುಂಗಿಯಲ್ಲಿ ನೋಡಿ ಆಶ್ಚರ್ಯ ಚಕಿತರಾದರು.

ದಕ್ಷಿಣಭಾರತದಲ್ಲಿ ತುಂಬಾ ಫೇಮಸ್ ಆಗಿರುವ ಬಟ್ಟೆಗಳ ವಿಧದಲ್ಲಿ ಒಂದು ಲುಂಗಿ. ಸಾಮಾನ್ಯವಾಗಿ ಎಲ್ಲಾ ಕಾರ್ಯಕ್ರಮಗಳಲ್ಲೂ ಜನರು ಲುಂಗಿ ಧರಿಸಿರುವುದನ್ನು ನೋಡಬಹುದು. ಆದರೆ ವಿದೇಶಿ ನೆಲದಲ್ಲಿ ಲುಂಗಿ ಉಟ್ಕೊಂಡು ಓಡಾಡಿದ್ರೆ ಹೇಗಿರುತ್ತೆ. ಅದನ್ನು ನೋಡಲೆಂದೇ ದಕ್ಷಿಣಭಾರತದ ಯುವತಿಯೊಬ್ಬಳು ಲಂಡನ್‌ನ ಬೀದಿಯಲ್ಲಿ ಲುಂಗಿ ಉಟ್ಕೊಂಡು ಓಡಾಡಿದರು.

ಯಪ್ಪಾ..ಲುಂಗಿಯನ್ನು ಹೀಗೆಲ್ಲಾ ಬಳಸ್ಬೋದಾ, ಯುವಕನ ವಿಡಿಯೋ ವೈರಲ್

ಯುವತಿ ಕೌಶಲ್ಯದಿಂದ ತನ್ನ ಸುತ್ತಲೂ ಲುಂಗಿಯನ್ನು ಸುತ್ತಿಕೊಳ್ಳುವುದರೊಂದಿಗೆ ಮತ್ತು ಅದನ್ನು ಬೇಸಿಕ್ ಟಿ-ಶರ್ಟ್‌ನೊಂದಿಗೆ ಧರಿಸುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ವೀಡಿಯೋಗೆ 'ಲಂಡನ್‌ನಲ್ಲಿ ಲುಂಗಿ ಧರಿಸುವುದು' ಎಂದು ಶೀರ್ಷಿಕೆ ನೀಡಲಾಗಿದೆ. ಯುವತಿ ಮೊದಲಿಗೆ ಲುಂಗಿ ಧರಿಸಿ ಮೊದಲಿಗೆ ಶಾಪ್‌ಗೆ ಹೋಗುತ್ತಾಳೆ. ಅಂಗಡಿಯಲ್ಲಿನ ಗ್ರಾಹಕರ ಭಾವನೆಗಳನ್ನು ಸೆರೆಹಿಡಿಯಲು ವೀಡಿಯೊ ನಿಧಾನಗೊಳಿಸಲಾಗುತ್ತದೆ. ಎಲ್ಲಾ ವಯಸ್ಸಿನ ಜನರು ಅವಳ ಅಸಾಮಾನ್ಯ ಶೈಲಿಯಿಂದ ಆಕರ್ಷಿತರಾಗುತ್ತಾರೆ. ಲುಂಗಿಯನ್ನು ನೋಡಿ ಹುಬ್ಬೇರಿಸುತ್ತಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರೋ ಈ ಕ್ಲಿಪ್ ಒಂದು ಮಿಲಿಯನ್ ವೀವ್ಸ್ ಮತ್ತು ಲೈಕ್ಸ್‌ಗಳನ್ನು ಗಳಿಸಿದೆ. ನೆಟ್ಟಿಗರು ಈ ವೀಡಿಯೋಗೆ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ನಾನು ಇದನ್ನು ಬರ್ಮಿಂಗ್ ಹ್ಯಾಮ್‌ನಲ್ಲಿ ಮಾಡಲಿದ್ದೇನೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಇದು ನನ್ನ ಬಕೆಟ್‌ ಲಿಸ್ಟ್‌ನಲ್ಲಿತ್ತು, ಅಕ್ಕ ನನ್ನ ಆಸೆಯನ್ನು ಪೂರೈಸಿದಳು' ಎಂದು ಹೊಗಳಿದ್ದಾರೆ.

'ಲುಂಗಿ, ನೈಟಿ ಧರಿಸುವಂತಿಲ್ಲ..' ನೋಯ್ಡಾ ಅಪಾರ್ಟ್‌ಮೆಂಟ್‌ ಡ್ರೆಸ್‌ಕೋಡ್ ವಿವಾದ

 
 
 
 
 
 
 
 
 
 
 
 
 
 
 

A post shared by valery (@valerydaania)

click me!