
ನವದೆಹಲಿ: ಭಾರತದಲ್ಲಿ ಸಂಬಂಧಗಳಿಗೆ ಹೆಚ್ಚಿನ ಪ್ರಾಧಾನ್ಯತೆಯಿದೆ. ತಂದೆ-ತಾಯಿ, ಅಣ್ಣ-ತಂಗಿ, ಅಕ್ಕ-ತಮ್ಮ ಹೀಗೆ ಎಲ್ಲಾ ಸಂಬಂಧಗಳು ಅರ್ಥಪೂರ್ಣವಾಗಿದೆ. ಒಡಹುಟ್ಟಿದವರು ಮಾತ್ರವಲ್ಲದೆ ಮನೆಯಿಂದ ಹೊರಗೆ ಸಿಗುವವರನ್ನು ಗೌರವಯುತವಾಗಿ ಅಕ್ಕ, ಅಣ್ಣ, ತಂಗಿ ಎಂದು ಸಂಭೋದಿಸುತ್ತಾರೆ. ಆದರೆ ಇಲ್ಲೊಬ್ಬ ಯುವತಿ ಹೀಗೆ ಅಣ್ಣಾ ಎಂದು ಕರೆಯುತ್ತಿದ್ದ ವ್ಯಕ್ತಿಯನ್ನೇ ಮದುವೆಯಾಗಿದ್ದಾಳೆ. ಬರೋಬ್ಬರಿ 8 ವರ್ಷಗಳವರೆಗೆ ಭಯ್ಯಾ ಎಂದು ಕರೆಯುತ್ತಿದ್ದ ವ್ಯಕ್ತಿಯನ್ನೇ ಮದುವೆಯಾಗಿ ಮಗುವನ್ನು ಪಡೆದಿರುವ ಯುವತಿಯ ಕತೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಭಾರತದಲ್ಲಿ ತಮಗಿಂತ ಹಿರಿಯ ವ್ಯಕ್ತಿಯನ್ನು ಅಣ್ಣಾ ಅಥವಾ ಅಕ್ಕಾ ಎಂದು ಕರೆಯುವುದು ಸಾಮಾನ್ಯವಾಗಿದೆ. ಆದರೆ ಹೀಗೆ ವರ್ಷಾನುಗಟ್ಟಲೆ ಒಬ್ಬರನ್ನು ಅಣ್ಣಾ ಎಂದು ಕರೆದು ಮತ್ತೆ ಅವರನ್ನೇ ಮದುವೆ (Marriage)ಯಾದರೆ ಹೇಗಿರಬೇಡ. ಇಲ್ಲಾಗಿದ್ದು ಅದೇ. ಯುವತಿಯ ಹೆಸರು ವಿನಿ. ಇವರು 8 ವರ್ಷಗಳವರೆಗೆ ಭಯ್ಯಾ (Brother) ಎಂದು ಕರೆಯುತ್ತಿದ್ದ ವ್ಯಕ್ತಿಯನ್ನೇ ಮದುವೆಯಾಗಿದ್ದಾರೆ. ತನ್ನ ಕತೆಯನ್ನು ತಾನೇ ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಅವರಿಬ್ಬರು ಸಂಬಂಧಿಕರು ಎಂಬುದನ್ನೂ ಬಹಿರಂಗಪಡಿಸಿದ್ದಾರೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) 5 ಮಿಲಿಯನ್ಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದ್ದು, ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ.
ಭಾವನ ಜೊತೆ ಸಂಬಂಧ ಇಟ್ಕೊಂಡಿದ್ದ ವಧು, ಮಂಟಪದಲ್ಲೇ ವರ ಮಾಡಿದ್ದೇನು ನೋಡಿ..ಸ
ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್
ಈಗ ವೈರಲ್ ಆಗಿರುವ ವಿಡಿಯೋವನ್ನು ವಿನಿ ಮತ್ತು ಜೈ ಅವರ ಪೇಜ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕ್ಲಿಪ್‌ನಲ್ಲಿ, ದಂಪತಿಗಳು (Couples) ಚಿಕ್ಕವರಿದ್ದಾಗ ಒಟ್ಟಿಗೆ ಪೋಸ್ ನೀಡುವುದನ್ನು ಕಾಣಬಹುದು. ವಿನಿ ಅವರು ಜೈ ಅವರನ್ನು ಮದುವೆಯಾಗಿದ್ದಾರೆ ಮತ್ತು ಅವರಿಬ್ಬರಿಗೂ ಈಗ ಮಗು ಕೂಡ ಇದೆ ಎಂದು ತಿಳಿಸಿದ್ದಾರೆ. ಮಗುವಿನ ಕೆಲವು ಚಿತ್ರಗಳು (Photos) ಸಹ ರೀಲ್‌ನಲ್ಲಿ ಗೋಚರಿಸುತ್ತವೆ.
'ನಾವು ಸಂಬಂಧಿಕರಾಗಿದ್ದೇವೆ ಮತ್ತು ನಮ್ಮ ವಯಸ್ಸಿನ ಅಂತರದಿಂದಾಗಿ ನಾನು ಅವರನ್ನು ಹಲವು ವರ್ಷಗಳಿಂದ ಭಯ್ಯಾ ಎಂದು ಕರೆಯುತ್ತಿದ್ದೆ. ಈಗ ಗಂಡ ಎಂದು ಕರೆಯುತ್ತಿದ್ದೇನೆ' ಎಂದು ಈ ವೀಡಿಯೋಗೆ ಶೀರ್ಷಿಗೆ ನೀಡಲಾಗಿದೆ.
ನಿಮ್ಮ ವೈವಾಹಿಕ ಜೀವನದಲ್ಲೂ ಹೀಗಾಗ್ತಾ ಇದ್ಯಾ? ಅಂತಹ ಸಂಬಂಧ ಬೇಡವೇ ಬೇಡ…
ವೈರಲ್ ವೀಡಿಯೊವನ್ನು ಇಲ್ಲಿ ನೋಡಿ:
ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊ ಸುಮಾರು 5 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೋಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವೊಬ್ಬರು ಸುಂದರವಾದ ಜೋಡಿ ಎಂದರೆ, ಇನ್ನು ಕೆಲವರು ಹೀಗೆ ಮದುವೆಯಾಗಲು ಸಹ ಸಾಧ್ಯವೇ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿ 'ಭಯ್ಯಾ ಎಂದು ಕರೆಯುವುದು ಸಂಬಂಧವಲ್ಲ.ನಿಮಗಿಂತ ಹಿರಿಯರನ್ನು ಭಯ್ಯಾ ಎಂದು ಕರೆಯಬಹುದು. ಹೀಗಾಗಿ ಇವರನ್ನು ಮದುವೆಯಾಗುವುದು ತಪ್ಪಲ್ಲ' ಎಂದಿದ್ದಾರೆ.
ಮದುವೆ ಖುಷಿಗೆ ಗಾಳೀಲಿ ಗುಂಡು ಹಾರಿಸಿ ಪರಾರಿಯಾದ ವಧು, ಕಕ್ಕಾಬಿಕ್ಕಿಯಾದ ವರ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.