ನೀರೆಗ್ಯಾರು ಸಾಟಿ..ಸೀರೆಯುಟ್ಟು ಡೆಡ್‌ಲಿಫ್ಟ್‌, ಪುಲ್‌ ಅಪ್ ಮಾಡಿ ಮಹಿಳೆಯ ಕಮಾಲ್‌!

Published : Jul 22, 2023, 01:13 PM ISTUpdated : Jul 22, 2023, 01:16 PM IST
ನೀರೆಗ್ಯಾರು ಸಾಟಿ..ಸೀರೆಯುಟ್ಟು ಡೆಡ್‌ಲಿಫ್ಟ್‌, ಪುಲ್‌ ಅಪ್ ಮಾಡಿ ಮಹಿಳೆಯ ಕಮಾಲ್‌!

ಸಾರಾಂಶ

ಇತ್ತೀಚಿನ ವರ್ಷಗಳಲ್ಲಿ ವರ್ಕೌಟ್ ಮಾಡೋದು ಜನರ ಸಾಮಾನ್ಯ ದಿನಚರಿಯಲ್ಲಿ ಒಂದಾಗಿದೆ. ಜಿಮ್‌ಗೆ ಹೋಗೋಕೆಂದೇ ವರ್ಕೌಟ್ ಮಾಡುವ ಉಡುಪು, ವಾಟರ್‌ ಬಾಟಲ್‌ಗಳನ್ನು ಖರೀದಿಸ್ತಾರೆ. ಆದ್ರೆ ಇಲ್ಲೊಬ್ಬ ಮಹಿಳೆ ಸೀರೆಯುಟ್ಟುಕೊಂಡೇ ಜಿಮ್‌ನಲ್ಲಿ ಡೆಡ್‌ಲಿಫ್ಟ್‌, ಪುಲ್‌ ಅಪ್ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ಸೀರೆಯುಟ್ರೆ ಸಾಕು ಅಯ್ಯೋ ನಡೆಯೋಕಲ್ಲಪ್ಪಾ, ತುಂಬಾ ಕಂಫರ್ಟೆಬಲ್‌ ಆಗ್ತಿದೆ ಅನ್ನೋ ಹುಡುಗೀರೆ ಜಾಸ್ತಿ. ಹಾಗಾಗಿಯೇ ಹೆಚ್ಚು ಜೀನ್ಸ್‌, ಕುರ್ತಾ, ಸ್ಕರ್ಟ್ ಧರಿಸೋಕೆ ಇಷ್ಟಪಡ್ತಾರೆ. ಸೀರೆಯುಟ್ರೆ ಏನು ಕೆಲಸ ಮಾಡೋಕೆ ಆಗಲ್ಲ. ಕೈ ಕಾಲಿಗೆ ಸಿಕ್ಕಿ ಹಾಕಿಕೊಳ್ಳುತ್ತೆ ಓಡಾಡೋದು ಕಷ್ಟ ಅನ್ನೋರ ಮಧ್ಯೆ ಇಲ್ಲೊಬ್ಬ ಮಹಿಳೆ ಜಿಮ್‌ನಲ್ಲಿ ಸೀರೆಯುಟ್ಟುಕೊಂಡೇ ವರ್ಕೌಟ್‌ ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ವರ್ಕೌಟ್ ಮಾಡೋದು ಜನರ ಸಾಮಾನ್ಯ ದಿನಚರಿಯಲ್ಲಿ ಒಂದಾಗಿದೆ. ಜಿಮ್‌ಗೆ ಹೋಗೋಕೆಂದೇ ವರ್ಕೌಟ್ ಮಾಡುವ ಉಡುಪು, ವಾಟರ್‌ ಬಾಟಲ್‌ಗಳನ್ನು ಖರೀದಿಸ್ತಾರೆ. ಆದ್ರೆ ಇಲ್ಲೊಬ್ಬ ಮಹಿಳೆ ಸೀರೆಯುಟ್ಟುಕೊಂಡೇ ಜಿಮ್‌ನಲ್ಲಿ ಡೆಡ್‌ಲಿಫ್ಟ್‌, ಪುಲ್‌ ಅಪ್ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.

ಸೀರೆಯಲ್ಲಿ ಡೆಡ್‌ಲಿಫ್ಟ್ ಮತ್ತು ಪುಲ್-ಅಪ್‌ ಮಾಡಿದ ಮಹಿಳೆ
ಪಿಹು ಪರ್ಮಾರ್ ಎಂದು ಗುರುತಿಸಲಾದ ಮಹಿಳೆ (Woman) ಸೀರೆಯಲ್ಲಿ ಡೆಡ್‌ಲಿಫ್ಟ್ ಮತ್ತು ಪುಲ್-ಅಪ್‌ಗಳನ್ನು ಮಾಡುತ್ತಿರುವ ವೀಡಿಯೊ ಇಂಟರ್ನೆಟ್ ಅನ್ನು ದಿಗ್ಭ್ರಮೆಗೊಳಿಸಿದೆ. ವಿಶೇಷವಾಗಿ ದೈಹಿಕ ಚಟುವಟಿಕೆಗಳ (Exercise) ಸಮಯದಲ್ಲಿ ಸೀರೆಯನ್ನು ನಿರ್ವಹಿಸುವುದು ಸವಾಲಿನ ಸಂಗತಿಯಾಗಿದೆ ಎಂಬುದು ಎಲ್ಲರಿಗೂ ಗೊತ್ತಿರೋ ವಿಷಯ. ಆದರೆ, ಪಿಹು ಅವರು ಫಿಟ್ನೆಸ್ ಮತ್ತು ಫ್ಯಾಶನ್‌ನ್ನು ಮಿಕ್ಸ್ ಮಾಡಬಹುದು ಎಂದು ಸಾಬೀತುಪಡಿಸಿದ್ದಾರೆ. ತನ್ನ ತಾಲೀಮು ವೀಡಿಯೋಗಳ ಮೂಲಕ, ಸೀರೆ (Saree)ಯನ್ನು ಧರಿಸುವುದು ತನಗೆ ಶ್ರಮವಿಲ್ಲದ ಮತ್ತು ಸುಂದರವಾದ ಪ್ರಯತ್ನ ಎಂದು ಪಿಹು ತಿಳಿಸಿಕೊಟ್ಟಿದ್ದಾರೆ. ಆಕೆಯ ಸಾಂಪ್ರದಾಯಿಕ ಉಡುಗೆ ಮತ್ತು ತಾಲೀಮು ವೀಡಿಯೋ ವೀಕ್ಷಕರನ್ನು ಆಕರ್ಷಿಸುತ್ತಿದೆ.

ಕಿಚನ್‌ನಲ್ಲಿ ಮೈ ಚಳಿ ಬಿಟ್ಟು ಡ್ಯಾನ್ಸ್ ಮಾಡಿದ ಗೃಹಿಣಿ, ಸೆರಗು ಮುಚ್ಕೊಳಮ್ಮಾ ಎಂದ ನೆಟ್ಟಿಗರು

30 ಸೆಕೆಂಡ್‌ಗಳ ವೀಡಿಯೊ ಪಿಹು ಎಲ್ಲಾ ರೀತಿಯ ವ್ಯಾಯಾಮಗಳನ್ನು ಹೆಚ್ಚು ಆತ್ಮವಿಶ್ವಾಸ ಮತ್ತು ಸಮಚಿತ್ತದಿಂದ ಮಾಡುವುದನ್ನು ತೋರಿಸುತ್ತದೆ. ವೀಡಿಯೊವನ್ನು ಹೆಚ್ಚು ವಿಶೇಷವಾಗಿಸುವುದು ಪಿಹು ಅವರ ನಿರ್ಭಯತೆ. ಅವರು ಭಾರವಾದ ತೂಕವನ್ನು ಎತ್ತುವ ರೀತಿ, ಕಾರ್ಡಿಯೊದಲ್ಲಿ ತೊಡಗಿಸಿಕೊಳ್ಳುವುದು ಮತ್ತು ವಿವಿಧ ಶಕ್ತಿ ತರಬೇತಿ ವ್ಯಾಯಾಮಗಳನ್ನು ನಿರ್ವಹಿಸುವುದು ಎಲ್ಲವೂ ಬೆರಗುಗೊಳ್ಳುವಂತೆ ಮಾಡುತ್ತದೆ. ಸೋಷಿಯಲ್‌ ಮೀಡಿಯಾದಲ್ಲಿರುವ ವೈರಲ್ ಆಗಿರುವ ಈ ವಿಡಿಯೋ 476K ಲೈಕ್ಸ್‌ ಮತ್ತು ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಸಹ ಮಾಡಿದ್ದಾರೆ.

ಒಬ್ಬ ಬಳಕೆದಾರರು, 'ಮಹಿಳೆ ಏನನ್ನೂ ಮಾಡಬಲ್ಲಳು ಅನ್ನೋದು ಸುಮ್ನೆ ಅಲ್ಲ' ಎಂದು ಕಮೆಂಟಿಸಿದ್ದಾರೆ. ಇನ್ನೊಬ್ಬ ಬಳಕೆದಾರರು, 'ಇದು ಸಂಪೂರ್ಣವಾಗಿ ನಂಬಲಾಗದು' ಎಂದು ಬರೆದರೆ, ಮೂರನೇ ವ್ಯಕ್ತಿ 'ಇವರು ಭಾರತದ ಹೆಮ್ಮೆ' ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಕೆಲವೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರ ವಿಭಾಗವು ತೀವ್ರವಾದ ವ್ಯಾಯಾಮದ ಸಮಯದಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರಿಯಾದ ಜಿಮ್ ಉಡುಪನ್ನು ಧರಿಸಲು ಸಲಹೆ ನೀಡಿದೆ.

ಭಲೇ ನಾರಿ..ಯುಕೆ ಮ್ಯಾರಥಾನ್‌ನಲ್ಲಿ ಸೀರೆಯುಟ್ಟು ಒಡಿದ ಒಡಿಯಾ ಮಹಿಳೆ!

ಸೊಸೆಯೊಂದಿಗೆ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಅತ್ತೆ
ಈ ಹಿಂದೆ 56 ವರ್ಷದ ಚೆನ್ನೈ ಮಹಿಳೆಯೊಬ್ಬರು ಸೀರೆ ಉಟ್ಟುಕೊಂಡು ವರ್ಕೌಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social meddia) ವೈರಲ್ ಆಗಿತ್ತು. ಈ ವಿಡಿಯೋವನ್ನು ಹ್ಯೂಮನ್ಸ್ ಆಫ್ ಮದ್ರಾಸ್ ಮತ್ತು ಮದ್ರಾಸ್ ಬಾರ್ಬೆಲ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಮಹಿಳೆ ಭಾರವಾದ ತೂಕ (Weight) ಮತ್ತು ಡಂಬ್ಬೆಲ್ಸ್ ಮತ್ತು ಇತರ ಜಿಮ್ ಉಪಕರಣಗಳನ್ನು ಎತ್ತುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿತ್ತು. ಅವರು ತನ್ನ ಸೊಸೆಯೊಂದಿಗೆ ವರ್ಕೌಟ್ ಮಾಡುತ್ತಾರೆ. ಆಂಟಿ ಸೀರೆಯುಟ್ಟು ಡಂಬಲ್ಸ್‌ ಹಾಗೂ ಜಿಮ್‌ ಸಲಕರಣಿಗಳನ್ನು ಎತ್ತಿ ವರ್ಕೌಟ್‌ ಮಾಡಿದ್ದಕ್ಕೆಜಿಮ್ ಸಿಬ್ಬಂದಿ ಅವರನ್ನು ಸನ್ಮಾನಿಸಿದ್ದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಟಿಹಾರ್ ಜಂಕ್ಷನ್‌ನಲ್ಲಿ ಮಹಿಳೆಯ ಭಯಾನಕ ಅನುಭವ: 30-40 ಪುರುಷರು ನುಗ್ಗಲು ಯತ್ನ, ಶೌಚಾಲಯದಲ್ಲಿ ಸಿಲುಕಿದ ಮಹಿಳೆ!
ಈಕೆಯ ಮನೆ ಮುಖೇಶ್‌ ಅಂಬಾನಿ ಮನೆಗಿಂತ 62 ಪಟ್ಟು ದೊಡ್ಡದು! ಆದ್ರೂ ಬಸ್‌ನಲ್ಲಿ ಓಡಾಟ!