
ಜಪಾನ್ ದೇಶದ ಮಹಿಳೆಯೊಬ್ಬರು ಒಬ್ಬಂಟಿ ಆಗಿದ್ದಾಗ ‘ಮಾಡೋಕೆ ಏನು ಕೆಲಸ ಇಲ್ಲ ಬೇಜಾರು ಆಗುತ್ತಿದೆ’ ಎಂದು ಮೂರು ವರ್ಷದಲ್ಲಿ ಬರೋಬ್ಬರಿ 2761 ಬಾರಿ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ಕಾಟ ಕೊಟ್ಟಿದ್ದಾಳೆ. ಈ ಮಹಿಳೆ ಹಿರೋಕು ಹೊಟಗಾಮಿ ಎಂಬ 51 ವರ್ಷದ ಮಹಿಳೆ ಈ ರೀತಿಯ ತಲೆಹರಟೆ ಕೆಲಸ ಮಾಡಿದ್ದಾರೆ. ಆಕೆ ತಮ್ಮ ಮನೆಯಲ್ಲಿ ಏಕಾಂಗಿಯಾಗಿ ಇದ್ದರಂತೆ ಅದಕ್ಕೆ ಮಾಡುವುದಕ್ಕೆ ಬೇರೇನೂ ಕೆಲಸ ಇಲ್ಲದಕ್ಕೆ ನಾವು ಸ್ನೇಹಿತರಿಗೆ ಕರೆ ಮಾಡುವ ರೀತಿ ಈಕೆ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಇದನ್ನು ಗಮನಿಸಿದ ಪೊಲೀಸರು ಆಕೆಯನ್ನು ಬಂಧಿಸಿ ಬಂದೀಖಾನೆಯಲ್ಲಿ ಕೂರಿಸಿದ್ದಾರೆ.
ಮೈನಿಚಿ ಎಂಬ ಸ್ಥಳೀಯ ಮಾಧ್ಯಮವು ಮಾಡಿರುವ ವರದಿಗಳ ಪ್ರಕಾರ, ಮಹಿಳೆ (Woman) 'ನಾನು ಏಕಾಂಗಿತನವನ್ನು ಅನುಭವಿಸುತ್ತಿದ್ದೇನೆ. ನನ್ನ ಮಾತನ್ನು ಯಾರಾದರೂ ಕೇಳಬೇಕು ಹಾಗೂ ಅವರು ನನ್ನ ಕಡೆ ಗಮನ ಕೊಡಬೇಕು ಎಂದು ನಾನು ಬಯಸಿದ್ದೆ ಹೀಗಾಗಿ ಅಗ್ನಿಶಾಮಕದಳಕ್ಕೆ ನಿರಂತರವಾಗಿ ಕರೆ ಮಾಡುತ್ತಿದ್ದೆ' ಎಂದು ಹೇಳಿದ್ದಾಗಿ ತಿಳಿದುಬಂದಿದೆ. 2020ರ ಆಗಸ್ಟ್ 15 ರಿಂದ 2023ರ ಮೇ 25ರವರೆಗೆ ಮಾಟ್ಸುಡೋ ಅಗ್ನಿಶಾಮಕ ದಳ (Fire brigade) ಸಹಾಯವಾಣಿಗೆ 2700ಕ್ಕೂ ಅಧಿಕ ಬಾರಿ ಕರೆ ಮಾಡಿ ತುರ್ತು ಪರಿಸ್ಥಿತಿ (Emergency) ಉಂಟಾಗಿದೆ ಎಂದು ಸುಳ್ಳು ಹೇಳುತ್ತಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಮಹಿಳೆಯರ ಒಳಗೆ ಸೇರಿದ ‘ಗುಂಡು’; ಪೊಲೀಸ್ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ: ವಿಡಿಯೋ ವೈರಲ್
ಮೊದಲ ಈಕೆ ತಾನು ಅಗ್ನಿಶಾಮಕ ದಳಕ್ಕೆ ಸುಖಾ ಸುಮ್ಮನೇ ಕರೆ ಮಾಡಿದ್ದು ನಿಜ ಎಂದು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಆದರೆ ವಿವಿಧ ಕಠಿಣ ಕಾನೂನು ಕ್ರಮಗಳನ್ನು ಜಾರಿ ಮಾಡುವ ಎಚ್ಚರಿಕೆ ನೀಡಿದ ಬಳಿಕ ಈಕೆ ಸತ್ಯ (True) ಬಾಯ್ಬಿಟ್ಟಿದ್ದಾಳೆ. ಜೂನ್ 20ರಂದುಅಧಿಕೃತ ವರದಿ ಸಲ್ಲಿಕೆ ಮಾಡುವವರೆಗೂ ಈಕೆ ಸಹಾಯವಾಣಿಗೆ IHelpline)ಕರೆ ಮಾಡುತ್ತಲೇ ಇದ್ದಳು ಎನ್ನಲಾಗಿದೆ. 2013ರಲ್ಲೂ ಓರ್ವ ಮಹಿಳೆ ಮಾಡೋಕೇನು ಕ್ಯಾಮೆ ಇಲ್ಲದಿದ್ದಾಗೆ 6 ತಿಂಗಳಲ್ಲಿ ಬರೋಬ್ಬರಿ 15,000 ಬಾರಿ ಪೊಲೀಸರಿಗೆ ತುರ್ತು ಕರೆ ಮಾಡಿದ್ದರು.
ಈಕೆಯ ಎದೆಹಾಲು ಬತ್ತೋದೆ ಇಲ್ಲ, 10350 ಲೀ. ಬ್ರೆಸ್ಟ್‌ಮಿಲ್ಕ್ ದಾನ ಮಾಡಿ ಮಹಿಳೆಯ ಗಿನ್ನಿಸ್ ದಾಖಲೆ
ಒಂಟಿಯಾಗಿರೋದು 15 ಸಿಗರೇಟ್ ಸೇದಿದ್ದಕ್ಕೆ ಸಮವಂತೆ
ಒಂಟಿತನ (Loneliness) ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಈ ಮಾತನ್ನು ಮಾನಸಿಕ ತಜ್ಞರು ಒಪ್ಪಿಕೊಳ್ತಾರೆ. ಒಂಟಿಯಾಗಿರುವ ಜನರು ಖಿನ್ನತೆ, ಆತಂಕ ಮತ್ತು ಮಾನಸಿಕ ಕಾಯಿಲೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಒಳಗಾಗ್ತಾರೆ. ಆದ್ರೆ ಇತ್ತೀಚಿನ ಅಧ್ಯಯನ (Study)ವೊಂದರಿಂದ ಇದಕ್ಕಿಂತಲೂ ಆತಂಕಕಾರಿ ಮಾಹಿತಿಯೊಂದು ಬಯಲಾಗಿದೆ. ಇದರ ಪ್ರಕಾರ, ಒಂಟಿಯಾಗಿರೋದು 15 ಸಿಗರೇಟ್ ಸೇದಿದ್ದಕ್ಕೆ ಸಮವಂತೆ. ಯುಎಸ್ ಸರ್ಜನ್ ಜನರಲ್, ವಿವೇಕ್ ಮೂರ್ತಿ, ಇತ್ತೀಚೆಗೆ 'ಸಾಮಾಜಿಕವಾಗಿ ಸಂಪರ್ಕ ಕಡಿತಗೊಂಡಿರುವುದು' ದಿನಕ್ಕೆ 15 ಸಿಗರೇಟ್ ಸೇದುವಂತೆಯೇ ಮರಣದ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ್ದಾರೆ. ಈ ಹೇಳಿಕೆಯು ವಾಷಿಂಗ್ಟನ್ ಪೋಸ್ಟ್, ಟೈಮ್ಸ್ ಮತ್ತು ಡೈಲಿ ಮೇಲ್ ಸೇರಿದಂತೆ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿದೆ.
ಡಾ.ಮೂರ್ತಿಯವರು 2010ರಲ್ಲಿ ಪ್ರಕಟವಾದ ಸಾಮಾಜಿಕ ಸಂಬಂಧಗಳು ಮತ್ತು ಮರಣ ಪ್ರಮಾಣವನ್ನು (Death rate) ಪರಿಶೋಧಿಸಿದ ಅಧ್ಯಯನವನ್ನು ಉಲ್ಲೇಖಿಸಿದ್ದಾರೆ. ಸಂಶೋಧಕರು ತಮ್ಮ ಪ್ರಶ್ನೆಗಳಿಗೆ ಹೆಚ್ಚು ದೃಢವಾದ ಅಂಕಿಅಂಶಗಳ ಉತ್ತರವನ್ನು ತಲುಪಲು 'ಮೆಟಾ-ವಿಶ್ಲೇಷಣೆ' ಎಂದು ಕರೆಯಲ್ಪಡುವ ವಿಷಯದ ಕುರಿತು 148 ಅಧ್ಯಯನಗಳ ಡೇಟಾವನ್ನು ಸಂಯೋಜಿಸಿದ್ದಾರೆ. ಮೆಟಾ-ವಿಶ್ಲೇಷಣೆಯು ಸರಾಸರಿ ಏಳೂವರೆ ವರ್ಷಗಳ ಕಾಲ ಅಧ್ಯಯನ ಮಾಡಿದ 300,000 ಭಾಗವಹಿಸುವವರ ಡೇಟಾವನ್ನು ಒಳಗೊಂಡಿದೆ. ಸಾಮಾಜಿಕ ಸಂಬಂಧಗಳು ಅಕಾಲಿಕ ಮರಣದ (Death) ಅಪಾಯವನ್ನು ಎಷ್ಟರ ಮಟ್ಟಿಗೆ ಪ್ರಭಾವಿಸಬಲ್ಲವು ಎಂಬುದನ್ನು ಸಂಶೋಧಕರು ಪರಿಶೋಧಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.