ಅಮ್ಮನ ತ್ಯಾಗಕ್ಕೆ ಸಾಟಿಯುಂಟೇ..ತಾಯಿಯ ನೆನಪಿಗಾಗಿ ಮಿನಿ ತಾಜ್‌ಮಹಲ್ ಕಟ್ಟಿಸಿದ ಮಗ

By Vinutha PerlaFirst Published Jun 11, 2023, 1:15 PM IST
Highlights

ಪ್ರೀತಿಸೌಧವೆಂದರೆ ಅಂದು ದಂಪತಿಗಳ ನಡುವಿನ ಪ್ರೀತಿಯೇ ಆಗಿರಬೇಕೆಂದಿಲ್ಲ. ತಾಯಿ-ಮಕ್ಕಳ ಪ್ರೀತಿಗೂ ಬೆಲೆ ಕಟ್ಟಲಾಗದು. ತಾಯಿಯ ತ್ಯಾಗವನ್ನು ಬೇರೆ ಯಾವುದರಿಂದಲೂ ಸರಿದೂಗಿಸಲಾಗದು. ಹೀಗಿರುವಾಗ ತಮಿಳುನಾಡಿನಲ್ಲೊಬ್ಬ ಉದ್ಯಮಿ ತನ್ನ ಪ್ರೀತಿಯ ತಾಯಿಗಾಗಿ ಮಿನಿ ತಾಜ್‌ಮಹಲ್ ನಿರ್ಮಿಸಿದ್ದಾರೆ.

ತಾಜ್ ಮಹಲ್, ಜಗತ್ತಿನ ಅದ್ಬುತಗಳಲ್ಲಿ ಒಂದು ಎಂಬ ಹೆಮ್ಮೆಗೆ ಪಾತ್ರವಾಗಿದೆ. ಪ್ರೇಮಿಗಳು ಇದನ್ನು ಪ್ರೇಮ ಸೌಧ ಎನ್ನುತ್ತಾರೆ. ಇದರ ಸೊಬಗಿಗೆ ಮಾರು ಹೋಗದವರಿಲ್ಲ. ಪ್ರೀತಿ ಮತ್ತು ತ್ಯಾಗದ ಸಂಕೇತವಾದ ತಾಜ್ ಮಹಲ್ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ತಾಜ್ ಮಹಲ್ ನೋಡಲು ದೇಶ ಮತ್ತು ವಿಶ್ವದಾದ್ಯಂತದ ಪ್ರವಾಸಿಗರು ಆಗ್ರಾಕ್ಕೆ ಬರುತ್ತಾರೆ. ಯಮುನಾ ನದಿಯ ದಡದಲ್ಲಿರುವ ದಂತ-ಬಿಳಿ ಅಮೃತಶಿಲೆಯ ಸಮಾಧಿ,  ಶಹಜಹಾನ್ ಮತ್ತು  ಮಮ್ತಾಜ್‌ ಪ್ರೀತಿಯ ಸಂಕೇತವಾಗಿದೆ. ಶಹಜಹಾನ್ ತನ್ನ ಬೇಗಂನ ನೆನಪಿಗಾಗಿ ಈ ಪ್ರೇಮಸೌಧವನ್ನು ನಿರ್ಮಿಸಿದನು. ಹೀಗಾಗಿಯೇ ಇದನ್ನು ಪ್ರೀತಿಯ ಸಂಕೇತವೆಂಬಂತೆ ನೋಡಲಾಗುತ್ತದೆ. ಆದರೆ, ತನ್ನ ಮೃತ ಪತ್ನಿಯ ಮೇಲಿನ ಪ್ರೇಮವನ್ನು ಸಾರಲು ತಾಜ್‌ಮಹಲ್ ಕಟ್ಟಿಸುವ ಸಾಮರ್ಥ್ಯ ಕೇವಲ ಶಹಜಹಾನ್‌ದಲ್ಲ. ತಮಿಳುನಾಡಿನಲ್ಲಿ ಉದ್ಯಮಿಯೊಬ್ಬರು ತಮ್ಮ ತಾಯಿಯ ನೆನಪಲ್ಲಿ ಮಿನಿ ತಾಜ್‌ಮಜಲ್ ನಿರ್ಮಿಸಿದ್ದಾರೆ.

ಹೌದು, ಪ್ರೀತಿಸೌಧವೆಂದರೆ ಅಂದು ದಂಪತಿಗಳ (Couple) ನಡುವಿನ ಪ್ರೀತಿಯೇ ಆಗಿರಬೇಕೆಂದಿಲ್ಲ. ತಾಯಿ-ಮಕ್ಕಳ ಪ್ರೀತಿಗೂ (Love) ಬೆಲೆ ಕಟ್ಟಲಾಗದು. ತಾಯಿಯ ತ್ಯಾಗವನ್ನು ಬೇರೆ ಯಾವುದರಿಂದಲೂ ಸರಿದೂಗಿಸಲಾಗದು. ಹೀಗಿರುವಾಗ ತಮಿಳುನಾಡಿನಲ್ಲೊಬ್ಬ ಉದ್ಯಮಿ (Businessman) ತನ್ನ ಪ್ರೀತಿಯ ತಾಯಿ (Mother)ಗಾಗಿ ಮಿನಿ ತಾಜ್‌ಮಹಲ್ ನಿರ್ಮಿಸಿದ್ದಾರೆ.

ತಾಜ್ ಮಹಲ್ ಪ್ರೇಮಕಥೆಯಿಂದ ಪ್ರೇರಿತ; ಆಗ್ರಾದಲ್ಲಿ ಮದುವೆಯಾದ ಮೆಕ್ಸಿಕನ್ ಜೋಡಿ

5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಮಿನಿ ತಾಜ್ ಮಹಲ್
ತಮಿಳುನಾಡಿನ ತಿರುವಾರೂರಿನಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಮಿನಿ ತಾಜ್ ಮಹಲ್ ರಾಜ್ಯಾದ್ಯಂತ ಜನರನ್ನು ಸೆಳೆಯುತ್ತಿದೆ. ಅಮೃತೀನ್ ಶೇಕ್ ದಾವೂದ್ ಸಾಹಿಬ್ ಎಂಬವರು ಈ ತಾಜ್‌ಮಹಲ್ ಕಟ್ಟಿದ್ದಾರೆ. ಇವರು  ಚೆನ್ನೈನಲ್ಲಿ ಹಾರ್ಡ್‌ವೇರ್ ಉದ್ಯಮಿಯಾಗಿದ್ದಾರೆ. ಇವರ ತಂದೆ  ಅಬ್ದುಲ್ ಖಾದರ್ ಶೇಕ್ ದಾವೂದ್ ಚೆನ್ನೈನಲ್ಲಿ ಉದ್ಯಮಿಯಾಗಿದ್ದು, ಚರ್ಮದ ಸರಕುಗಳನ್ನು ವ್ಯವಹರಿಸುತ್ತಿದ್ದರು. ಆದರೆ, ಅಬ್ದುಲ್ ಖಾದರ್ ಶೇಕ್ ಅವರ ಮಕ್ಕಳು ಚಿಕ್ಕವರಿದ್ದಾಗ ನಿಧನರಾದರು. ಆ ನಂತರ ಜೈಲಾನಿ ಬೀವಿ ಮಕ್ಕಳನ್ನು ಕಷ್ಟಪಟ್ಟು ಸಾಕಿ ಬೆಳೆಸಿದರು. 

ಜೈಲಾನಿ ಬೀವಿ ಅವರು ಸುಲಭವಾಗಿ ಸೋಲೊಪ್ಪಿಕೊಳ್ಳದ ವ್ಯಕ್ತಿಯಾಗಿದ್ದು, ವ್ಯಾಪಾರ ನಡೆಸಲು ಮತ್ತು ನಾಲ್ವರು ಹುಡುಗಿಯರು ಸೇರಿದಂತೆ ಐದು ಮಕ್ಕಳನ್ನು ಬೆಳೆಸಲು ಕಷ್ಟಪಟ್ಟರು. ಮಕ್ಕಳೆಲ್ಲ ಬೆಳೆದು ನಾಲ್ವರು ಸಹೋದರಿಯರ  (Sisters) ಮದುವೆಯಾದ ನಂತರ ಅಮೃತೀನ್ ಶೇಕ್ ಕೂಡ ಮದುವೆಯಾದರು.2020 ರಲ್ಲಿ ತಾಯಿ ಜೈಲಾನಿ ಬೀವಿ ನಿಧನರಾದರು (Death). ಇದು ಅಮರುದ್ದೀನ್‌ಗೆ ದೊಡ್ಡ ಆಘಾತವಾಯಿತು. ಅವರ ಪಾಲಿಗೆ ತಾಯಿ ಎಲ್ಲವೂ ಆಗಿದ್ದರು. ಹೀಗಾಗಿ ಜೈಲಾನಿ ಬೀವಿ, ಪ್ರತಿ ವರ್ಷವೂ ತಾಯಿ ನಿಧನರಾದ ದಿನ 1,000 ಜನರಿಗೆ ಬಿರಿಯಾನಿಯ ಔತಣ ನೀಡಲು ನಿರ್ಧರಿಸಿದರು. 

Elon Musk: ತಾಜಮಹಲ್ ಸೊಬಗಿಗೆ ಬೆರಗಾಗಿದ್ದ ಎಲಾನ್ ಮಸ್ಕ್

ಎಲ್ಲಾ ಧರ್ಮದ ಜನರಿಗಾಗಿ ಧ್ಯಾನ ಕೇಂದ್ರ
ಆದರೂ ತೃಪ್ತಿ ಸಿಗಲ್ಲಿಲ್ಲ. ಹೀಗಾಗಿ ಇದು ಸಾಕಾಗುವುದಿಲ್ಲ ಎಂದು ಯೋಚಿಸಿದ ಅಮರುದ್ದೀನ್, ನಂತರ ತನ್ನ ತಾಯಿಗಾಗಿ ಮಿನಿ ತಾಜ್ ಮಹಲ್ ನಿರ್ಮಿಸುವ ಆಲೋಚನೆಗೆ ಬಂದರು. ಅವರು ತಮ್ಮ ಪೂರ್ವಜರ ಹಳ್ಳಿಯಾದ ಅಮ್ಮಯ್ಯಪ್ಪನ್‌ನಲ್ಲಿ ಒಂದು ಎಕರೆ ಭೂಮಿಯನ್ನು ಖರೀದಿಸಿದರು ಮತ್ತು ಬಿಲ್ಡರ್ ಸ್ನೇಹಿತನ ಬೆಂಬಲದೊಂದಿಗೆ ಸ್ಮಾರಕವನ್ನು ನಿರ್ಮಿಸಲು ಪ್ರಾರಂಭಿಸಿದರು. 

ಈ ಮಿನಿ ತಾಜ್‌ಮಹಲ್‌ಗಾಗಿ ರಾಜಸ್ಥಾನದಿಂದ ಅಮೃತಶಿಲೆಯನ್ನು ಖರೀದಿಸಿದರು ಮತ್ತು ಆಗ್ರಾದ ತಾಜ್ ಮಹಲ್‌ನಲ್ಲಿರುವಂತೆಯೇ ಸ್ಮಾರಕದ ಸುತ್ತಲೂ ಮಾರ್ಗಗಳು ಮತ್ತು ಕಾಲುದಾರಿಗಳನ್ನು ಮಾಡಿದರು. ಜೂನ್ 2ರಂದು ಸ್ಮಾರಕವನ್ನು ಸಾರ್ವಜನಿಕರಿಗಾಗಿ ತೆರೆಯಲಾಯಿತು. ಇದು ಎಲ್ಲಾ ಧರ್ಮದ ಜನರು ಧ್ಯಾನ ಮಾಡಬಹುದಾದ ಧ್ಯಾನ ಕೇಂದ್ರಗಳನ್ನು ಹೊಂದಿದೆ ಮತ್ತು ಪ್ರಸ್ತುತ 10 ವಿದ್ಯಾರ್ಥಿಗಳು ಉಳಿದುಕೊಂಡಿರುವ ಮದ್ರಸಾವನ್ನು ಹೊಂದಿದೆ.

click me!