ಗರ್ಭಿಣಿಯರಿಗೆ ಭಗವದ್ಗೀತೆ ಪಠಣ: ಆರೆಸ್ಸೆಸ್‌ 'ಗರ್ಭ ಸಂಸ್ಕಾರ' ಅಭಿಯಾನ

By Kannadaprabha News  |  First Published Jun 11, 2023, 7:49 AM IST

ಗರ್ಭಿಣಿಯರು ರಾಮಾಯಣ ಮತ್ತು ಭಗವದ್ಗೀತೆಯಂತಹ ಪವಿತ್ರ ಗ್ರಂಥಗಳನ್ನು ಓದಲು ಪ್ರೇರಿಸುವ ಸಲುವಾಗಿ ಭಾನು​ವಾ​ರ​ದಿಂದ ‘ಗರ್ಭ ಸಂಸ್ಕಾರ’ ಎಂಬ ಅಭಿಯಾನ ಪ್ರಾರಂಭಿಸುವುದಾಗಿ ಆರ್‌ಎಸ್‌ಎಸ್‌ನ ಅಂಗಸಂಸ್ಥೆ ‘ಸಂವರ್ಧಿನಿ ನ್ಯಾಸ್‌’ ತಿಳಿಸಿದೆ.


ನವದೆಹಲಿ: ಗರ್ಭಿಣಿಯರು ರಾಮಾಯಣ ಮತ್ತು ಭಗವದ್ಗೀತೆಯಂತಹ ಪವಿತ್ರ ಗ್ರಂಥಗಳನ್ನು ಓದಲು ಪ್ರೇರಿಸುವ ಸಲುವಾಗಿ ಭಾನು​ವಾ​ರ​ದಿಂದ ‘ಗರ್ಭ ಸಂಸ್ಕಾರ’ ಎಂಬ ಅಭಿಯಾನ ಪ್ರಾರಂಭಿಸುವುದಾಗಿ ಆರ್‌ಎಸ್‌ಎಸ್‌ನ ಅಂಗಸಂಸ್ಥೆ ‘ಸಂವರ್ಧಿನಿ ನ್ಯಾಸ್‌’ ತಿಳಿಸಿದೆ.

ಗರ್ಭ ಸಂಸ್ಕಾರ (Garbha Sanskara) ಅಭಿಯಾನವನ್ನು ಸಮಗ್ರ ವೈಜ್ಞಾನಿಕ ವಿಧಾನದೊಂದಿಗೆ ಅಭಿವೃದ್ಧಿಪಡಿಸಲಾಗಿದ್ದು ಗರ್ಭಿಣಿಯರು ಪವಿತ್ರ ಗ್ರಂಥಗಳನ್ನು ಓದುವುದು, ಸಂಸ್ಕೃತ ಮಂತ್ರಗಳನ್ನು ಪಠಿಸುವುದು (chant Sanskrit mantras) ಹಾಗೂ ಯೋಗವನ್ನು ಅಭ್ಯಾಸ ಮಾಡುವುದರಿಂದ ಶಿಶುಗಳು ಗರ್ಭಾವಸ್ಥೆಯಲ್ಲೇ ‘ಸಂಸ್ಕಾರ ಮತ್ತು ಮೌಲ್ಯ’ಗಳನ್ನು ಕಲಿಯುತ್ತವೆ. ಅಲ್ಲದೇ ಮಕ್ಕಳು ಹುಟ್ಟುತ್ತಲೇ ‘ಸಂಸ್ಕಾರವಂತ ಮತ್ತು ದೇಶಭಕ್ತರಾಗಿ ಹುಟ್ಟುತ್ತಾರೆ’ ಎಂದು ಆರ್‌ಎಸೆಎಸ್‌ನ ಮಹಿಳಾ ಸಂಘಟನೆಯಾದ ರಾಷ್ಟ್ರೀಯ ಸೇವಿಕಾ ಸಮಿತಿಯ ವಿಭಾಗವಾದ ಸಂವರ್ಧಿನಿಯ (Samvardhini Nyas) ಪ್ರಮುಖರೊಬ್ಬರು ತಿಳಿಸಿದ್ದಾರೆ.

Tap to resize

Latest Videos

ಗರ್ಭ ಸಂಸ್ಕಾರ: ಗರ್ಭಧಾರಣೆಯ ಪ್ರಾಚೀನ ವೈದಿಕ ವಿಜ್ಞಾನದ ಬಗ್ಗೆ ಗೊತ್ತು ಮಾಡ್ಕೊಳ್ಳಿ!

ಅಭಿಯಾನದ ವರ್ಚುವಲ್‌ ಉದ್ಘಾಟನೆಯಲ್ಲಿ ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್‌ (Telangana Governor Tamilisai Soundararajan) ಸೇರಿ ಹಲವರು ಗಣ್ಯರು ಭಾಗಿಯಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಅಭಿ​ಯಾನ ಹೇಗೆ?:

‘ಅಲ್ಲದೇ ಅಭಿಯಾನ ಅನುಷ್ಠಾನಕ್ಕಾಗಿ ಸಂವರ್ಧಿನಿಯ 8 ಸದಸ್ಯರನ್ನೊಳಗೊಂಡ ತಂಡಗಳನ್ನು ರಚಿಸಲಾಗಿದ್ದು ಇದರಲ್ಲಿ ಆಯುರ್ವೇದ (Ayurveda), ಹೋಮಿಯೋಪತಿ (Homeopathy), ಅಲೋಪತಿ ವೈದ್ಯರು (Allopathy doctors)ಮತ್ತು ವಿಷಯ ತಜ್ಞರು ಇರುತ್ತಾರೆ. ಅಭಿಯಾನಕ್ಕಾಗಿ ದೇಶವನ್ನು 5 ಪ್ರದೇಶಗಳನ್ನಾಗಿ ವಿಂಗಡಿಸಲಾಗಿದ್ದು ಪ್ರತಿಯೊಂದು ಪ್ರದೇಶಕ್ಕೂ 10 ವೈದ್ಯರ ತಂಡಗಳನ್ನು ನೇಮಿಸಲಾಗುತ್ತದೆ. ಈ ಪ್ರತಿಯೊಬ್ಬ ವೈದ್ಯರು 20 ಮಂದಿ ಗರ್ಭಿಣಿಯರಿಗೆ ವೈಜ್ಞಾನಿಕವಾಗಿ ಅಭಿಯಾನದ ಬಗ್ಗೆ ತಿಳಿಸಿ ಗ್ರಂಥಗಳನ್ನು ಪಠಿಸಲು ತಿಳಿಸುತ್ತಾರೆ’ ಎಂದ ನ್ಯಾಸ್‌ ಹೇಳಿದೆ.

ಗರ್ಭಿಣಿ, ಭ್ರೂಣ ಕಾಳಜಿಯ ಹೊಸ ಕೋರ್ಸ್ ಗರ್ಭ ಸಂಸ್ಕಾರ

ಯೋಗಾಭ್ಯಾಸವು ಸಹಜ ಹೆರಿಗೆಯಾಗಲು ಗರ್ಭಿಣಿಯರಿಗೆ ಸಹಾಯವಾಗುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ. ಇಂಥ ಅಭ್ಯಾಸಗಳು ಶಿಶುಗಳ ಮೆದುಳಿನ ಮೇಲೆ ಆಳವಾದ ಧನಾತ್ಮಕ ಪರಿಣಾಮ ಬೀರುತ್ತವೆ. ನಾಲ್ಕು ತಿಂಗಳ ಗರ್ಭದಲ್ಲಿರುವ ಮಗು ಕೇಳಲು ಪ್ರಾರಂಭಿಸುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಹೀಗಾಗಿ ಪೋಷಕರು ಭಾರತ, ರಾಜ್ಯ, ಕುಟುಂಬ ಸದಸ್ಯರು ಹಾಗೂ ಭಾರತದ ಮಹಾನ್‌ ಪುರುಷರ ಕಥೆಗಳನ್ನು ಓದುತ್ತಾರೆ ಎಂದು ನ್ಯಾಸ್‌ ತಿಳಿ​ಸಿ​ದೆ.

click me!