Room Design Tips: ಮಕ್ಕಳು ಸ್ಮಾರ್ಟ್ ಆಗ್ಬೇಕು ಅಂದ್ರೆ ರೂಮ್ ಡಿಸೈನ್‌ ಹೇಗಿದ್ರೆ ಒಳ್ಳೇದು ?

By Vinutha PerlaFirst Published Dec 15, 2022, 3:52 PM IST
Highlights

ಹದಿಹರೆಯದ ಮಕ್ಕಳ ರೂಮ್‌ ಡಿಸೈನ್ ಚೆನ್ನಾಗಿದ್ದರಷ್ಟೇ ಅವರು ಕಲಿಕೆಯಲ್ಲಿ ಬ್ರೈಟ್ ಆಗಿರಲು ಸಾಧ್ಯ. ಮಾತ್ರವಲ್ಲ ಜೀವನದ ಬಗ್ಗೆ ಉತ್ಸಾಹವನ್ನು ಸಹ ಬೆಳೆಸಿಕೊಳ್ಳುತ್ತಾರೆ. ಹಾಗಿದ್ರೆ ಮಕ್ಕಳ ರೂಮ್ ಡಿಸೈನ್ ಹೇಗಿರಬೇಕು ? ಇಲ್ಲಿದೆ ಸಿಂಪಲ್ ಟಿಪ್ಸ್.

ಗೃಹಾಲಂಕಾರ, ಹೆಚ್ಚು ಮುಖ್ಯವಾಗಿ ಕೋಣೆಯ ಅಲಂಕಾರವು (Room decoration) ಅತ್ಯಂತ ವಿಶೇಷ ಮತ್ತು ವೈಯಕ್ತಿಕವಾಗಿದೆ, ಏಕೆಂದರೆ ಇದು ವ್ಯಕ್ತಿತ್ವದ ವಿಸ್ತರಣೆಯಾಗಿದೆ ಮತ್ತು ವ್ಯಕ್ತಿ ದಿನದ ಹೆಚ್ಚಿನ ಸಮಯವನ್ನು ಕಳೆಯುವ ಸ್ಥಳವಾಗಿದೆ. ಅದರಲ್ಲೂ ಹದಿಹರೆಯದ (Teenagers) ಮಕ್ಕಳ ರೂಮನ್ನು ಸಿದ್ಧಗೊಳಿಸುವಾಗ ಹೆಚ್ಚಿನ ಕಾಳಜಿ (Care) ವಹಿಸಬೇಕಾದುದು ಅಗತ್ಯವಾಗಿದೆ. ಯಾಕೆಂದರೆ ಹದಿಹರೆಯದಲ್ಲಿ ಮಕ್ಕಳು ಕೆಟ್ಟ ಹಾದಿಯನ್ನು ಹಿಡಿಯುವ ಸಾಧ್ಯತೆ ಹೆಚ್ಚಿರುತ್ತದೆ. ಸ್ನೇಹಿತರ, ಸಾಮಾಜಿಕ ಜಾಲತಾಣಗಳ (Social media) ಪ್ರಭಾವದಿಂದ ದುಶ್ಚಟಗಳ ದಾಸರಾಗುತ್ತಾರೆ. ಬೊನಿಟೊ ಡಿಸೈನ್ಸ್‌ನ ಮುಖ್ಯಸ್ಥ, ಉತ್ಪನ್ನ ಮತ್ತು ವಿನ್ಯಾಸದ ಅನುಭವವಾಗಿರುವ ಪ್ರಮಿತಾ ರೋಚೆ ಅವರು ಹದಿಹರೆಯದ ಮಕ್ಕಳ ರೂಮನ್ನು ಹೇಗೆ ಸಿದ್ಧಪಡಿಸಬೇಕು ಎಂಬ ಬಗ್ಗೆ ಹೇಳಿರುವ ಕೆಲವು ಆಸಕ್ತಿದಾಯಕ ವಿಚಾರಗಳು ಇಲ್ಲಿವೆ, ಇದು ಅವರ ಮಲಗುವ ಕೋಣೆಯನ್ನು ಅವರ ವ್ಯಕ್ತಿತ್ವ ಅಭಿವೃದ್ಧಿಗೆ ಪೂರಕ ಸ್ಥಳವಾಗಿ ಪರಿವರ್ತಿಸಲು ನಿಮಗೆ ಸಹಾಯ ಮಾಡುತ್ತದೆ.

* ಕಲಿಕೆಗೆ ಪ್ರಾಮುಖ್ಯತೆ ನೀಡುವಂತಿರಲಿ: ಹದಿಹರೆಯದವರು ಸಾಮಾನ್ಯವಾಗಿ ತಮ್ಮ ಕೊಠಡಿಗಳಲ್ಲೇ ಹೆಚ್ಚು ಸಮಯ ಕಳೆಯಲು ಬಯಸುತ್ತಾರೆ. ಹೀಗಾಗಿ ಇದನ್ನು ಮನರಂಜನಾ ಸ್ಥಳಕ್ಕಿಂತ ಹೆಚ್ಚಾಗಿ ಸ್ಟಡಿರೂಮ್‌ನಂತೆ ಸಿದ್ಧಗೊಳಿಸುವುದು ಒಳ್ಳೆಯದು. ಇದು ಕಲಿಕೆಯತ್ತ ಅವರ ಆಸಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಬುಕ್ಸ್‌, ಡಿಕ್ಷನರಿ, ನ್ಯೂಸ್ ಪೇಪರ್‌ಗಳನ್ನು ಹೆಚ್ಚು ಜೋಡಿಸಿಡಿ.

ನಿಮ್ಮ ಮನೆ ಚೆಂದವೂ ಇರಬೇಕು, ಸುಸ್ಥಿರವೂ ಆಗಿರಬೇಕು ಎಂದಾದರೆ ಹೀಗೆ ಮಾಡಿ

* ಸಾಧನೆಗೆ ಉತ್ತೇಜಿಸುವಂತಿರಲಿ: ರೂಮ್‌ನಲ್ಲಿ ಮಕ್ಕಳು ಮಾಡಿರುವ ಸಾಧನೆಗಳು (Achievement) ಬಿಂಬಿಸುವ ಮೆಡಲ್‌, ಪದಕಗಳನ್ನು ಎದುರಿಗೆ ಇಡುವುದು ಮುಖ್ಯವಾಗಿದೆ. ಆಪ್ತರು ಗಿಫ್ಟ್ ನೀಡಿದ ವಸ್ತುಗಳನ್ನು ಪಕ್ಕದಲ್ಲಿ ಜೋಡಿಸಿ ಇರಬಹುದು. ಕ್ಯಾಲೆಂಡರ್‌ಗಳು, ಸ್ಮರಣಿಕೆಗಳನ್ನು ಸಹ ಎದುರಲ್ಲೇ ಇಟ್ಟುಕೊಳ್ಳಬಹುದು. ಇದರಿಂದ ಮಕ್ಕಳು ತಾವು ಮಾಡಿರುವ ಸಾಧನೆಗಳ ಬಗ್ಗೆ ದಿನವೂ ನೋಡುತ್ತಾ ಇನ್ನಷ್ಟು ಅಚೀವ್ ಮಾಡಲು ಉತ್ಸುಕರಾಗುತ್ತಾರೆ.

* ಉತ್ತಮ ಮನಸ್ಥಿತಿಗೆ ಪೂರಕವಾಗಿರಲಿ: ಕೋಣೆಯ ವಿನ್ಯಾಸಕ್ಕೆ ಸೃಜನಶೀಲತೆಯನ್ನು ಅನ್ವಯಿಸುವುದು ಮುಖ್ಯವಾಗಿದೆ. ಇದು  ಹದಿಹರೆಯದವರು ಮತ್ತು ಅವರ ಸುತ್ತಮುತ್ತಲಿನ ನಡುವೆ ಸಂಪರ್ಕವನ್ನು ನಿರ್ಮಿಸಬಹುದು. ಸುಂದರವಾದ ಗೋಡೆಗಳು ಮನಸ್ಥಿತಿಯನ್ನು ಬದಲಾಯಿಸಬಹುದು. ಹೀಗಾಗಿ ಬಣ್ಣಗಳನ್ನು ಸಹ ಆ ಬಗ್ಗೆ ತಿಳಿದುಕೊಂಡು ಆರಿಸುವುದು ಮುಖ್ಯ.

*  ಥೀಮ್ ಬಳಸುವುದು: ಹದಿಹರೆಯದವರ ಕೋಣೆಯನ್ನು ಸುಂದರವಾಗಿ ಕಾಣುವಂತೆ ಮರು-ಅಲಂಕರಿಸಲು ಥೀಮ್ ಅನ್ನು ಬಳಸುವುದು ಒಳ್ಳೆಯದು. ಚಲನಚಿತ್ರಗಳು, ನಿರ್ಧಿಷ್ಟ ದೇಶಗಳು, ಅಥವಾ ದೂರದರ್ಶನ ಕಾರ್ಯಕ್ರಮಗಳಂತಹ ಥೀಮ್‌ಗಳನ್ನು ಬಳಸುವುದರಿಂದ ಅವುಗಳನ್ನು ತಮ್ಮದೇ ಆದ ಕಲ್ಪನೆಯ ಪ್ರಪಂಚಕ್ಕೆ ಸಾಗಿಸಬಹುದು. ಮಾತ್ರವಲ್ಲ ಇದು ಮನಸ್ಸನ್ನು ಸಹ ಖುಷಿಯಾಗಿಡುತ್ತದೆ.

Home Cleaning : ಮನೆಯಲ್ಲಿರುವ ಧೂಳು ತೆಗೆಯೋಕೆ ಇಲ್ಲಿದೆ ಸುಲಭ ಉಪಾಯ

* ರೂಮ್‌ ನೀಟಾಗಿ ಇಡಲು ಸಾಧ್ಯವಾಗುವಂತೆ ವ್ಯವಸ್ಥೆ: ಹೆಚ್ಚಿನ ಹದಿಹರೆಯದವರು ರೂಮ್‌ನ್ನು ನೀಟಾಗಿ ಇಡುವುದಿಲ್ಲ. ಬಟ್ಟೆ, ಚಪ್ಪಲಿ ಎಲ್ಲವನ್ನೂ ಎಲ್ಲೆಂದರಲ್ಲಿ ಎಸೆದು ಬಿಡುತ್ತಾರೆ. ಚಾಕ್ಲೇಟ್ ರ್ಯಾಪರ್ಸ್, ಸ್ನ್ಯಾಕ್ಸ್ ಪ್ಯಾಕೆಟ್ಸ್ ಸಹ ಎಲ್ಲೆಂದರಲ್ಲಿ ಬಿದ್ದಿರುತ್ತವೆ. ಹೀಗಾಗದಂತೆ ಇರಲು ಸುಲಭವಾಗಿ ಸಿಗುವ ಜಾಗದಲ್ಲಿ ಡಸ್ಟ್‌ಬಿನ್ ಇಡಬೇಕು. ಬಟ್ಟೆ, ಚಪ್ಪಲಿಗಳನ್ನು ಇಡಲು ಈಝಿ ರ್ಯಾಕ್ ಸಿದ್ಧಪಡಿಸಬೇಕು.

* ನೈಸರ್ಗಿಕ ಬೆಳಕು ಇರಲಿ: ಇವತ್ತಿನ ಕಾಲದಲ್ಲಿ ಮಕ್ಕಳು ಒಂಟಿತನ (Alone), ಖಿನ್ನತೆ, ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತರೆ. ಇದ್ಯಾವುದೂ ಪೋಷಕರ ಗಮನಕ್ಕೆ ಸಹ ಬರುವುದಿಲ್ಲ. ಹೀಗಾಗಿ ಪೋಷಕರು (Parents) ಮಕ್ಕಳ ರೂಮನ್ನು ಉತ್ತಮ ಮನಸ್ಥಿತಿಗೆ ಬೇಕಾದಂತೆ ರೂಪಿಸಿಡಬೇಕು.  ನೈಸರ್ಗಿಕವಾಗಿ ಬೆಳಕು ಬರುವ ಪ್ರದೇಶವನ್ನು ಸಾಧ್ಯವಾದಷ್ಟು ಬಂದ್ ಮಾಡಬೇಡಿ. ಅವುಗಳಿಗೆ ಅಡ್ಡವಾಗಿ ಏನೋ ವಸ್ತುಗಳನ್ನು ಇಡಬೇಡಿ. ನೈಸರ್ಗಿಕ ಬೆಳಕು (Natural light) ಚೆನ್ನಾಗಿರುವುದು ಮುಖ್ಯ. 

click me!