Winter Care: ಚಳಿಯಲ್ಲಿ ಒಳ ಉಡುಪಿನ ಬಗ್ಗೆ ಇರಲಿ ಹೆಚ್ಚಿನ ಎಚ್ಚರ

By Suvarna News  |  First Published Dec 15, 2022, 3:16 PM IST

ಯೋನಿ ಆರೋಗ್ಯ ಬಹಳ ಮುಖ್ಯ. ಅನೇಕ ಮಹಿಳೆಯರು ಯೋನಿ ಸಮಸ್ಯೆಯನ್ನು ಮುಚ್ಚಿಟ್ಟು ಸಮಸ್ಯೆ ತಂದುಕೊಳ್ತಾರೆ. ಪ್ಯಾಂಟಿ ಆಯ್ಕೆಯಿಂದ ಹಿಡಿದು ಅದನ್ನು ತೊಳೆದು, ಬಳಸುವವರೆಗೆ ಅನೇಕ ತಪ್ಪುಗಳಾಗಿರುತ್ತವೆ. ಇದ್ರಿಂದ ಯೋನಿ ಬ್ಯಾಕ್ಟೀರಿಯಾ ಹೆಚ್ಚಾಗುತ್ತದೆ. 
 


ಚಳಿಗಾಲದಲ್ಲಿ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಸಾಮಾನ್ಯ. ತಂಪಾದ ಗಾಳಿ ಮತ್ತು ಶುಷ್ಕತೆಯಿಂದಾಗಿ ಸಮಸ್ಯೆ ಕಾಡುತ್ತದೆ. ಚಳಿಗಾಲದಲ್ಲಿ ಯೋನಿಯ ಶುಷ್ಕತೆ ಸಮಸ್ಯೆ ಕೂಡ ಹೆಚ್ಚಾಗುತ್ತದೆ. ಖಾಸಗಿ ಅಂಗದಲ್ಲಿ ತುರಿಕೆ ಮತ್ತು ಯೋನಿ ಸೋಂಕಿನ ಅಪಾಯ ಕೂಡ ಇರುತ್ತದೆ.

ಯೋನಿ (Vagina ) ಆರೋಗ್ಯ ಕಾಪಾಡಲು ಆರೋಗ್ಯ (Health) ಕರ ಆಹಾರ (Food) ಸೇವನೆ ಜೊತೆಗೆ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಬೇಕೆಂದು ತಜ್ಞರು ಸಲಹೆ ನೀಡ್ತಾರೆ. ಹಾಗೆಯೇ ನಾವು ಬಳಸುವ ಒಳ ಉಡುಪಿನ ಬಗ್ಗೆ ಕೂಡ ಹೆಚ್ಚು ಕಾಳಜಿವಹಿಸಬೇಕಾಗುತ್ತದೆ. ನಾವಿಂದು ಚಳಿಗಾಲದಲ್ಲಿ ನಿಮ್ಮ ಒಳ ಉಡುಪು (Underwear) ಹೇಗಿರಬೇಕು ಎನ್ನುವ ಬಗ್ಗೆ ಮಾಹಿತಿ ನೀಡ್ತೆವೆ.

Tap to resize

Latest Videos

ಒಳ ಉಡುಪಿನ ಬಟ್ಟೆ ಆಯ್ಕೆ : ಒಳ ಉಡುಪಿನ ಬಟ್ಟೆ ಆಯ್ಕೆ ಮಾಡುವಾಗ ನೀವು ಜಾಗರೂಕರಾಗಿರಬೇಕು. ಚಳಿಗಾಲದಲ್ಲಿ ಯೋನಿ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುವುದು ಅನಿವಾರ್ಯ. ಪಾಲಿಯೆಸ್ಟರ್ ಬಟ್ಟೆಗಳು ದೇಹವನ್ನು ಬೆಚ್ಚಗಿಡುತ್ತವೆ ಎಂದು ನಾವು ಭಾವಿಸುತ್ತೇವೆ. ಬಿಗಿಯಾದ ಬಟ್ಟೆಗಳನ್ನು ಧರಿಸುವುದ್ರಿಂದ ದೇಹ ಬೆಚ್ಚಗಿರುತ್ತದೆ ಎಂದು ನಾವು ನಂಬ್ತೇವೆ. ಆದ್ರೆ ದೇಹ ಬೆಚ್ಚಗಿರುತ್ತದೆ ಎಂಬ ಕಾರಣ ನೀಡಿ ನೀವು ಬಿಗಿಯಾದ ಒಳ ಉಡುಪು ಧರಿಸುವುದು ಸೂಕ್ತವಲ್ಲ. ಗಾಳಿಯಾಡಲು ಅವಕಾಶ ನೀಡದ ಒಳ ಉಡುಪನ್ನು ಧರಿಸುವುದ್ರಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪ್ರಭಾವ ಉಂಟಾಗುತ್ತದೆ. ಯೋನಿಯು ಉಸಿರಾಡಲು ಕಷ್ಟವಾಗಬಹುದು. ಯೋನಿಯಲ್ಲಿರುವ ತೇವಾಂಶ ಬ್ಯಾಕ್ಟೀರಿಯಾ ಮತ್ತು ಯೀಸ್ಟ್ ಬೆಳೆಯಲು ಸಹಾಯ ಮಾಡುತ್ತದೆ.  ಹಾಗಾಗಿ ನೀವು ಚಳಿಗಾಲದಲ್ಲಿ ಗಾಳಿಯಾಡುವ ಬಟ್ಟೆಯನ್ನು ಆಯ್ಕೆ ಮಾಡಬೇಕು. ರಾತ್ರಿ ಬಿಗಿಯಾದ ಪ್ಯಾಂಟಿ ಧರಿಸಬಾರದು.  

ಮಹಿಳೆಯರಲ್ಲಿ ಹೆಚ್ಚುತ್ತಿದೆ ಬೊಕ್ಕ ತಲೆ, ಕಾರಣಗಳು ಬಿಡಿ ನೂರಾರು!

ಪ್ಯಾಂಟಿ ಇಸ್ತ್ರಿ ಮಾಡಿ : ನಿಯಮಿತವಾಗಿ ಪ್ಯಾಂಟಿಯನ್ನು ನಾವು ತೊಳೆಯುತ್ತೇವೆ. ಆದ್ರೆ ಪ್ಯಾಂಟಿಯಲ್ಲಿರುವ ಬ್ಯಾಕ್ಟೀರಿಯಾ ನಾವು ಬಟ್ಟೆ ತೊಳೆಯುವುದ್ರಿಂದ ಹೋಗುವುದಿಲ್ಲ. ನಿಮ್ಮ ಒಳ ಉಡುಪಿನಲ್ಲಿ ಬ್ಯಾಕ್ಟೀರಿಯಾ ಇರಬಾರದು ಅಂದ್ರೆ ನೀವು ಪ್ಯಾಂಟಿಯನ್ನು ಇಸ್ತ್ರಿ ಮಾಡಬೇಕು. ನಿಮ್ಮ ಪ್ಯಾಂಟಿ ಬೆಚ್ಚಗಿನ ತಾಪಮಾನದಲ್ಲಿ ಇರುವಂತೆ ನೋಡಿಕೊಳ್ಳಿ. ಇಸ್ತ್ರಿ ಮಾಡಿದಾಗ ಪ್ಯಾಂಟಿಯಲ್ಲಿರುವ ಬ್ಯಾಕ್ಟೀರಿಯಾ ಸಾಯುತ್ತದೆ. ಇದ್ರಿಂದ ಸೋಂಕಿನ ಅಪಾಯ ದೂರವಾಗುತ್ತದೆ. ಇಸ್ತ್ರಿ ಮಾಡಲು ಸಾಧ್ಯವಿಲ್ಲ ಎನ್ನುವವರು ಒಂದರಿಂದ ಎರಡು ನಿಮಿಷಗಳ ಕಾಲ ಮೈಕ್ರೋವೇವ್‌ನಲ್ಲಿ ಇಡಬಹುದು. ಮೈಕ್ರೊವೇವ್ ನಲ್ಲಿ ಪ್ಯಾಂಟಿ ಹಾಕುವ ಮೊದಲು ಪ್ಯಾಂಟಿಯಲ್ಲಿ ಕರಗುವ ಲೋಹವಿದೆಯೇ ಎಂಬುದನ್ನು ಪರೀಕ್ಷಿಸಲು ಮರೆಯಬೇಡಿ.  ಹಾಗೆಯೇ ನೀವು ತೊಳೆದ ಪ್ಯಾಂಟಿಯನ್ನು ಧೂಳಿರುವ ಜಾಗದಲ್ಲಿ ಹಾಕಬೇಡಿ. ಇದು ಸೋಂಕನ್ನು ಹೆಚ್ಚಿಸುತ್ತದೆ. ನೀವು ಸಾಧ್ಯವಾದಷ್ಟು ರಾತ್ರಿ ಪ್ಯಾಂಟಿ ತೊಳೆದು ಅದನ್ನು ಮನೆಯೊಳಗೆ ಒಣಗಿಸಿ. ಬಿಸಿಲಿಗೆ ಪ್ಯಾಂಟಿ ಒಣಗಿಸುವುದ್ರಿಂದ ಬಣ್ಣ ಮಾಸುವ ಸಾಧ್ಯತೆಯೂ ಇರುತ್ತದೆ. ಆದ್ರೆ ಡ್ರೈಯರ್ ನಲ್ಲಿ ನೀವು ಪ್ಯಾಂಟಿ ಒಣಗಿಸಬೇಡಿ.

ಫರ್ಫ್ಯೂಮ್ ಇರುವ ಉತ್ಪನ್ನದಿಂದ ಪ್ಯಾಂಟಿ ತೊಳೆಯಬೇಡಿ : ಪರಿಮಳಯುಕ್ತ ಉತ್ಪನ್ನಗಳನ್ನು ಬಳಸಿ ನೀವು ಪ್ಯಾಂಟಿಯನ್ನು ಸ್ವಚ್ಛಗೊಳಿಸಬಾರದು. ಇದು ಯೋನಿಯ ಪಿಎಚ್ ಮಟ್ಟಕ್ಕೆ ತೊಂದರೆಯನ್ನುಂಟು ಮಾಡುತ್ತದೆ. ಇದ್ರಿಂದ ಯೋನಿಯಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ನೀವು ಎಸೆನ್ಶಿಯಲ್ ಆಯಿಲ್ ಬಳಸಬಹುದು. ಒಂದು ಹನಿ ಆಯಿಲ್ ಹಾಕಿ ಸ್ವಚ್ಛಗೊಳಿಸಬಹುದು. ಆದ್ರೆ ಯೋನಿಯನ್ನು ಎಸೆನ್ಶಿಯಲ್ ಆಯಿಲ್ ಮೂಲಕ ಸ್ವಚ್ಛಗೊಳಿಸಬಾರದು. 

Women's Health: ಸಿಸೇರಿಯನ್ ಆಗಿ ಥಟ್ಟಂತ ಚೇತರಿಸಿಕೊಳ್ಳಲು ಈ ಮನೆಮದ್ದು ಮಾಡಿ

ಹಣ್ಣಿನ ರಸ ಸೇವನೆ : ಋತುಮಾನದ ಹಣ್ಣಿನ ರಸ ಸೇವನೆ ಮಾಡುವುದು ಯೋನಿಯ ಆರೋಗ್ಯವನ್ನು ಸುಧಾರಿಸುತ್ತದೆ. ಚಳಿಗಾಲದಲ್ಲಿ ಕಿತ್ತಳೆ, ಸೇಬು, ದಾಳಿಂಬೆ ಮುಂತಾದ ಹಣ್ಣುಗಳ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣಿನ ರಸವು ಎಲ್ಲಾ ರೀತಿಯ ಯೋನಿ ಸಮಸ್ಯೆಗೆ ಒಳ್ಳೆಯದು. ಹಾಗಾಗಿ ನೀವು ಚಳಿಗಾಲದಲ್ಲಿ ಹೆಚ್ಚೆಚ್ಚು ಹಣ್ಣಿನ ರಸ ಸೇವನೆ ಮಾಡಿ. ಆದ್ರೆ ಮಾರುಕಟ್ಟೆಯಲ್ಲಿ ಸಿಗುವ ಜ್ಯೂಸ್ ಬದಲು ಮನೆಯಲ್ಲಿ ತಯಾರಿಸಿದ ತಾಜಾ ಹಣ್ಣಿನ ಜ್ಯೂಸ್ ಕುಡಿಯಲು ಮರೆಯಬೇಡಿ.
 

click me!