
ಮಾನ್ಸೂನ್ ಆರ್ಭಟ ಈ ಬಾರಿ ಜೋರಾಗಿಯೇ ಇದೆ. ಅದರಲ್ಲೂ ಉತ್ತರಭಾರತವಂತೂ ಮಳೆಯ ಅಬ್ಬರಕ್ಕೆ ನಲುಗಿ ಹೋಗಿದೆ. ಧಾರಾಕಾರ ಮಳೆಯಿಂದ ನೆರೆಯ ಪರಿಸ್ಥಿತಿ ನಿರ್ಮಾಣವಾಗಿದೆ. ದೆಹಲಿಯಲ್ಲಿ ಈ ಬಾರಿ ಸುರಿದಿರುವ ಧಾರಾಕಾರ ಮಳೆಗೆ ನದಿಗಳು ಉಕ್ಕುಕ್ಕಿ ಹರಿದಿವೆ. ಹಲವೆಡೆ ಅಪಾಯದ ಮಟ್ಟವನ್ನು ಮೀರಿ ನದಿಗಳು ತುಂಬಿ ತುಳುಕುತ್ತಿವೆ. ಹೀಗಾಗಿಯೇ ಹಲವೆಡೆ ಭೂಕುಸಿತ ಸಹ ಉಂಟಾಗಿದೆ. ಹೀಗಿದ್ದರೂ ವರ್ಷ ಧಾರೆ ಮಕ್ಕಳಿಗೆ ಮಾತ್ರ ಖುಷಿ ತಂದಿದೆ. ಮಕ್ಕಳು ಮಳೆಯಲ್ಲಿ ನೆನೆಯುತ್ತಾ ಆಟವಾಡುವುದು, ತುಂಬಿದ ನೀರಿನಲ್ಲಿ ಬಿದ್ದುಕೊಳ್ಳುವುದು ಮೊದಲಾದ ವಿಡಿಯೋಗಳು ವೈರಲ್ ಆಗಿವೆ.
ಹಾಗೆಯೇ ಇಲ್ಲೊಂದೆಡೆ ಮಹಿಳೆಯ (Woman) ಸಹ ಮಳೆಗೆ ಡೋಂಟ್ ಕೇರ್ ಅಂದಿದ್ದಾರೆ. ಮಹಿಳೆಯರು ಬಿಡದೇ ಸುರೀತಿರೋ ಜಡಿಮಳೆಗೆ ಭರ್ಜರಿಯಾಗಿ ಕುಳಿತು ಪಟ್ಟಾಂಗ ಹೊಡೀತಿದ್ದಾರೆ. ಮಳೆಗೆ ಮಹಿಳೆಯರು ಕುಳಿತು ಮಾತನಾಡ್ತಿರೋ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಅಮ್ಮನೊಂದಿಗೆ ನಿಮ್ಮನ್ನು ಹೋಲಿಕೆ ಮಾಡ್ತಾನಾ ಗಂಡ? ಹಾಗಿದ್ರೆ ಆತ ಅಮ್ಮನ ಮಗ!
ಜಡಿ ಮಳೆಯಲ್ಲಿ ಮಹಿಳಾಮಣಿಗಳ ಫುಲ್ ಟಾಕಿಂಗ್
ಗಾಸಿಪ್ ಮತ್ತು ಮಹಿಳೆಯರಿಗೆ ಬಿಟ್ಟೂ ಬಿಡಲಾಗದ ನಂಟು. ಅದು ಅಕ್ಷರಶಃ ನಿಜವೆಂಬುದು ಇಲ್ಲಿ ಸಾಬೀತಾಗಿದೆ. ದೆಹಲಿಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ಮೂವರು ಮಹಿಳೆಯರು ಕುರಿತು ಮೈ ಮರೆತು ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಜೋರು ಮಳೆ (Rain) ಸುರಿಯುವುದನ್ನೂ ಲೆಕ್ಕಿಸದೆ ಮಹಿಳೆಯರು ಮಾತನಾಡುತ್ತಿದ್ದಾರೆ. ಪುಟ್ಟ ಮಗುವೊಂದು ಅವರ ಬಳಿಯೇ ಕುಳಿತು ನೀರಿನಲ್ಲಿ ಜಿಗಿದು ಜಿಗಿದು ಆಟವಾಡುತ್ತಿದೆ. ಬಾಲ್ಕನಿಯಿಂದ ವ್ಯಕ್ತಿಯೊಬ್ಬರು ಮಹಿಳೆಯರ ಈ ಮಾತುಕತೆಯನ್ನು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಟ್ವಿಟರ್‌ನಲ್ಲಿ ಸ್ವಾಟ್‌ಕ್ಯಾಟ್ ಎಂಬ ಬಳಕೆದಾರರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ವೈರಲ್ ಆಗಿರುವ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ತಮಾಷೆಯಾಗಿರುವ (Funny) ಶೀರ್ಷಿಕೆಯನ್ನೂ ನೀಡಿದ್ದಾರೆ. ಮಹಿಳೆಯರ ಪೋಟೋ ಶೇರ್ ಮಾಡಿ, 'ಎಂಥಾ ಭೀಕರ ಮಳೆಯೂ ಈ ರೀತಿಯ ಡಾಟಾ ಟ್ರಾನ್ಸ್‌ಫರ್‌ನ್ನು ನಿಲ್ಲಿಸಲು ಸಾಧ್ಯವಿಲ್ಲ' ಎಂದು ಹೆಡ್ಡಿಂಗ್ ಕೊಟ್ಟಿರೋದು ನೆಟ್ಟಿಗರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ. ವೈರಲ್ ಆಗಿರುವ ಕ್ಲಿಪ್‌ನ್ನು 486ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 8600ಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.
ವಿವಾಹಿತ ಮಹಿಳೆಯರಿಗೆ ಕಿವಿ ಮಾತೊಂದು ಹೇಳಿದ್ದಾರೆ ಸುಧಾ ಮೂರ್ತಿ… ಏನದು ಕೇಳಿ!
'ಆಂಟಿ ನೆಟ್‌ವರ್ಕ್' 'ಡಾಟಾ ಟ್ರಾನ್ಸ್‌ಪರ್' ಎಂದು ಟೀಕಿಸಿದ ನೆಟ್ಟಿಗರು
ವೈರಲ್ ಆಗಿರೋ ವಿಡಿಯೋಗೆ ಜನರು 'ಆಂಟಿ ನೆಟ್‌ವರ್ಕ್' 'ಡಾಟಾ ಟ್ರಾನ್ಸ್‌ಪರ್' ಮೊದಲಾದ ರೀತಿಯಲ್ಲಿ ಹೇಳಿ ಟೀಕಿಸಿದ್ದಾರೆ. 'ಉಳಿದ ದಿನಗಳಲ್ಲಿ ಸಾಮಾನ್ಯ ನೆಟ್‌ವರ್ಕ್ ಹೇಗಿರುತ್ತೆ ಮತ್ತು ಮಳೆಗಾಲದಲ್ಲಿ (Monsoon) ಆಂಟಿ ನೆಟ್‌ವರ್ಕ್ ಹೇಗಿರುತ್ತದೆ' ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು (User), 'ಮಹಿಳೆ, ದೇಶದ ಅತಿ ದೊಡ್ಡ ನೆಟ್‌ವರ್ಕ್' ಎಂದು ಕಮೆಂಟಿಸಿದ್ದಾರೆ'. ಇನ್ನೊಬ್ಬ ಬಳಕೆದಾರರು, 'ಆರೆಂಜ್ ಅಲರ್ಟ್ ನೀಡಿದ ಐಎಂಡಿ ಪರಿಸ್ಥಿತಿ ಹೇಗಾಗಿರಬೇಡ' ಎಂದು ತಮಾಷೆಯಾಗಿ ಹೇಳಿದ್ದಾರೆ. ಮತ್ತೆ ಕೆಲವರು, 'ಮಹಿಳೆಯರ ಮಾತಿಗೆ ಮಳೆಯಲ್ಲ, ಚಂಡಮಾತರುತ ಬಂದರೂ ಬ್ರೇಕ್ ಹಾಕಲು ಸಾಧ್ಯವಿಲ್ಲ' ಎಂದು ಟೀಕಿಸಿದ್ದಾರೆ. ಒಟ್ನಲ್ಲಿ ಮಹಿಳೆಯರು ಮಾತಿನ ಮಲ್ಲಿಯರು ಅನ್ನೋದು ಈ ವಿಡಿಯೋದಿಂದ ಸಾಬೀತಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.