ಬಿಲಿಯನೇರ್ ಆಗಿದ್ರೂ ಇನ್ಫಿ ಮೂರ್ತಿ ವರಿಸಲು ಸುಧಾಮೂರ್ತಿ ಇಷ್ಟೆಲ್ಲಾ ಕಂಡೀಷನ್ಸ್‌ ಹಾಕಿದ್ರಂತೆ!

By Vinutha PerlaFirst Published Jan 10, 2024, 3:11 PM IST
Highlights

ಇನ್ಫೋಸಿಸ್‌ನ ನಾರಾಯಣ ಮೂರ್ತಿ-ಸುಧಾ ಮೂರ್ತಿ ದಂಪತಿ ಟ್ರೆಂಡಿಂಗ್‌ನಲ್ಲಿದ್ದಾರೆ. ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರನ್ನು ಮದುವೆಯಾಗಲು ತನಗಿದ್ದ ಷರತ್ತುಗಳನ್ನು ಸುಧಾ ಮೂರ್ತಿಯವರು ಬಹಿರಂಗಪಡಿಸಿದ್ದಾರೆ. ಏನು ಆ ಕಂಡೀಷನ್ಸ್ ಅನ್ನೋ ಮಾಹಿತಿ ಇಲ್ಲಿದೆ.

ಸುಧಾ ಮೂರ್ತಿ ಅತ್ಯಂತ ಪ್ರಭಾವಶಾಲಿ ಭಾರತೀಯ ಮಹಿಳೆಯರಲ್ಲಿ ಒಬ್ಬರು. ತಮ್ಮ ಸಮಾಜ ಸೇವೆ, ಪುಸ್ತಕಗಳು ಮತ್ತು ಮೋಟಿವೇಶನಲ್ ಸ್ಫೀಚ್‌ಗಳಿಂದ ಹೆಸರುವಾಸಿಯಾಗಿದ್ದಾರೆ. ಅನೇಕರಿಗೆ ಸ್ಫೂರ್ತಿಯಾಗಿರುವ ಸಕ್ಸಸ್‌ಫುಲ್ ಮಹಿಳೆಯೂ ಹೌದು. ಸುಧಾ ಮೂರ್ತಿ 630000 ಕೋಟಿ ರೂ.ಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ಇನ್ಫೋಸಿಸ್‌ನ ಸಂಸ್ಥಾಪಕ ಬಿಲಿಯನೇರ್ ನಾರಾಯಣ ಮೂರ್ತಿ ಅವರ ಪತ್ನಿ. ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ತಮ್ಮ ವ್ಯವಹಾರ ಸಂಬಂಧಿತ ವಿಷಯಗಳಿಂದಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗಷ್ಟೇ ನಾರಾಯಣ ಮೂರ್ತಿ ವರ್ಕಿಂಗ್ ಅವರ್ಸ್ 70 ಗಂಟೆಗಳ ಕಾಲ ಇರಬೇಕು ಎಂದು ಹೇಳಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದರು. ಈ ಬಗ್ಗೆ ಪರ-ವಿರೋಧದ ಮಾತುಕತೆ ಕೇಳಿ ಬಂದಿತ್ತು.

ಈಗ ಮತ್ತೆ ನಾರಾಯಣ ಮೂರ್ತಿ-ಸುಧಾ ಮೂರ್ತಿ ದಂಪತಿ ಟ್ರೆಂಡಿಂಗ್‌ನಲ್ಲಿದ್ದಾರೆ. ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರನ್ನು ಮದುವೆಯಾಗಲು ತನಗಿದ್ದ ಷರತ್ತುಗಳನ್ನು ಸುಧಾ ಮೂರ್ತಿಯವರು ಬಹಿರಂಗಪಡಿಸಿದ್ದಾರೆ.

Latest Videos

ಕೋಟಿ ಆಸ್ತಿ ಒಡತಿ ಸುಧಾ ಮೂರ್ತಿ ಮದ್ವೆಗೆ ಖರ್ಚಾಗಿದ್ದು ಕೆಲವೇ ನೂರು, ಇಬ್ಬರದ್ದೂ ಶೇರ್ ಅಂತೆ!

ಸುಧಾ ಮೂರ್ತಿ ತಮ್ಮ ಉಪನಾಮದ ಹಿಂದೆ ಪತಿಯ ಸರಿಯಾದ ಹೆಸರನ್ನು ಏಕೆ ಬರೆದುಕೊಂಡಿಲ್ಲ ಎಂಬುದರ ಕುರಿತು ಹೇಳಿದ್ದಾರೆ. ಸುಧಾಮೂರ್ತಿ ಹೇಳಿದಂತೆ, ಅದರ ಹಿಂದಿನ ಕಾರಣವು ಸಂಸ್ಕೃತ ಸಂಪ್ರದಾಯವಾಗಿದೆ. ಸುಧಾ ಮೂರ್ತಿ, 'ಸಂಸ್ಕೃತವು ಪರಿಪೂರ್ಣ ಭಾಷೆಯಾಗಿದೆ ಮತ್ತು ಪ್ರತಿ ಉಚ್ಚಾರಣೆಗೆ ಒಂದು ಅಕ್ಷರವಿದೆ' ಎಂದು ನಂಬುತ್ತಾರೆ. ಸಂವಾದದ ಸಂದರ್ಭದಲ್ಲಿ ಮಾತನಾಡುತ್ತಾ, ಸುಧಾ ಮೂರ್ತಿ ಅವರು ಕಾಗುಣಿತ ಅಥವಾ ತನ್ನ ಗಂಡನ ಉಪನಾಮ ಮೂರ್ತಿ 'THY' ಸಂಸ್ಕೃತದ ಕಾಗುಣಿತದೊಂದಿಗೆ ಹೊಂದಿಕೆಯಾಗುವುದಿಲ್ಲ. ಹೀಗಾಗಿ 'TY' ಎಂದು ಬಳಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಸಾಂಸ್ಕೃತಿಕ ಮೂಲವನ್ನು ಸಂರಕ್ಷಿಸುವ ಉದ್ದೇಶದಿಂದ, ಸುಧಾ ಮೂರ್ತಿ ಮದುವೆಯ ನಂತರ 'ಮೂರ್ತಿ' ಉಪನಾಮವನ್ನು ಬಳಸಲು ನಿರಾಕರಿಸಿದರು. ಇದು ಅವರ ವಿವಾಹ ಒಪ್ಪಂದದ ನಿರ್ಣಾಯಕ ಅಂಶವಾಗಿತ್ತು. 

ಮದುವೆ ಬೇಗನೆ ಮುರಿದುಬೀಳಲು ಕಾರಣವೇನು? ಸುಧಾ ಮೂರ್ತಿ ಏನ್ ಹೇಳ್ತಾರೆ ಕೇಳಿ…

'ಮದುವೆಯ ಸಮಯದಲ್ಲಿ ನಾನು ಸಂಸ್ಕೃತದ ಕಾಗುಣಿತಕ್ಕೆ ವಿರುದ್ಧವಾಗಿರುವುದರಿಂದ ನಾನು 'THY' ಎಂದು ಬರೆಯುವುದಿಲ್ಲ ಎಂಬ ಷರತ್ತನ್ನು ಹೊಂದಿದ್ದೆ' ಎಂದು ಸುಧಾ ಮೂರ್ತಿ ಹೇಳಿದರು. 'THY' ಬದಲಿಗೆ 'TY' ಎಂಬ ಕಾಗುಣಿತಕ್ಕೆ ಆದ್ಯತೆ ನೀಡಿದರು. ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ಅವರ ಮಕ್ಕಳಾದ ಅಕ್ಷತಾ ಮತ್ತು ರೋಹನ್ ಅವರ ಮಕ್ಕಳು ಸಹ 'murty' ಎಂಬ ಉಪನಾಮವನ್ನು ಬಳಸುತ್ತಾರೆಯೇ ಹೊರತು 'murthy' ಅಲ್ಲ.

click me!