ಆನಂದ್ ಮಹೀಂದ್ರಾ ಅವರು ಮಕ್ಕಳಿಗೆ 'ಸ್ವಚ್ಛತೆ ಮತ್ತು ಅಚ್ಚುಕಟ್ಟುತನ'ವನ್ನು ಕಲಿಸಲು ವಿಶಿಷ್ಟವಾದ ಐಡಿಯಾ ಹೊಂದಿದ ವಿಡಿಯೋ ಹಂಚಿಕೊಂಡಿದ್ದಾರೆ. ಇದು ಸಾಕಷ್ಟು ನೆಟ್ಟಿಗರಿಗೆ ಇಷ್ಟವಾಗಿದೆ.
ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಸಾಮಾಜಿಕ ಮಾಧ್ಯಮಗಳನ್ನು ಅವಿರತವಾಗಿ ಬಳಸುತ್ತಾರೆ. ತಮಗೆ ಉಪಯುಕ್ತವೆನಿಸಿದ ವಿಡಿಯೋ ಶೇರ್ ಮಾಡುತ್ತಿರುತ್ತಾರೆ. ಅಷ್ಟೇ ಅಲ್ಲ, ಯಾರಾದರೂ ಉತ್ತಮ ಕೆಲಸ ಮಾಡುವುದು ಕಂಡು ಬಂದರೆ ಅವರ ಬಗ್ಗೆ ಶೇರ್ ಮಾಡಿ ಪ್ರೋತ್ಸಾಹ ನೀಡುತ್ತಾರೆ. ಇಂಟರ್ನೆಟ್ ಬಳಕೆದಾರರ ಆಸಕ್ತಿಯನ್ನು ಕೆರಳಿಸುವ ಆಕರ್ಷಕ ಪೋಸ್ಟ್‌ಗಳನ್ನು ಅವರು ಆಗಾಗ್ಗೆ ಹಂಚಿಕೊಳ್ಳುತ್ತಾರೆ.
ಈ ಬಾರಿ ಅವರು ಮಕ್ಕಳಲ್ಲಿ ಸ್ವಚ್ಛತೆಯ ಪ್ರಜ್ಞೆ ಬೆಳೆಸಲು ಹೀಗೂ ಮಾಡಬಹುದು ಎಂಬ ಐಡಿಯಾ ನೀಡುವ ವಿಶಿಷ್ಠ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. ಮಹೀಂದ್ರಾ ಅವರ ಈ ಪೋಸ್ಟ್ 616,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 14,000ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ. ಕಾಮೆಂಟ್ ವಿಭಾಗದಲ್ಲಿ, ಅನೇಕ ಬಳಕೆದಾರರು ಈ ಕಲ್ಪನೆಯನ್ನು ಮೆಚ್ಚಿದ್ದಾರೆ.
undefined
ವೀಡಿಯೋದಲ್ಲಿ ಏನಿದೆ?
What an idea…
This is how to embed cleanliness & tidiness & collaboration in our basic nature.
Can we make this practice a standard part of pre and elementary schools?? pic.twitter.com/APeVw4AKWL
ಶಿಕ್ಷಕಿಯು ಖಾಲಿ ಕ್ಲಾಸ್‌ರೂಂ ಕೋಣೆಯಲ್ಲಿ ಚೇರ್‌ಗಳನ್ನು ಬೀಳಿಸಿ, ಆಟಿಕೆಗಳು ಹಾಗೂ ಇತರೆ ಚಟುವಟಿಕೆಯ ವಸ್ತುಗಳನ್ನು ಕೋಣೆ ತುಂಬಾ ಹರಡುತ್ತಾರೆ. ನಂತರ ಕ್ಲಾಸಿಗೆ ಬರುವ ಪುಟ್ಟ ಮಕ್ಕಳೆಲ್ಲ ಒಟ್ಟಾಗಿ ಸೇರಿ ಕೋಣೆಯನ್ನು ಸ್ವಚ್ಛಗೊಳಿಸಬೇಕಿರುತ್ತದೆ.
'ಒಳ್ಳೆ ಐಡಿಯಾ.. ಇದು ನಮ್ಮ ಸ್ವಭಾವದಲ್ಲಿ ಸ್ವಚ್ಛತೆ ಮತ್ತು ಅಚ್ಚುಕಟ್ಟುತನವನ್ನು ಸೇರಿಸುತ್ತದೆ. ನಾವು ಈ ಅಭ್ಯಾಸವನ್ನು ಪೂರ್ವ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ರೂಢಿ ಮಾಡಿಸಬಹುದೇ?' ಎಂದು ಕ್ಲಿಪ್ ಅನ್ನು ಹಂಚಿಕೊಳ್ಳುವಾಗ ಮಹೀಂದ್ರಾ ಬರೆದಿದ್ದಾರೆ.
ವೀಡಿಯೊವನ್ನು ವೀಕ್ಷಿಸಿ:
ಕಾಮೆಂಟ್‌ವಿಭಾಗದಲ್ಲಿ, ಅನೇಕರು ಈ ಕಲ್ಪನೆಯನ್ನು ಮೆಚ್ಚಿದರೆ, ಇತರರು ಚಿಕ್ಕ ವಯಸ್ಸಿನಲ್ಲಿ ಭಾರತೀಯ ಮಕ್ಕಳಲ್ಲಿ ನಾಗರಿಕ ಪ್ರಜ್ಞೆಯನ್ನು ತುಂಬುವ ಅಗತ್ಯವಿದೆ ಎಂದಿದ್ದಾರೆ.
ಬಳಕೆದಾರರೊಬ್ಬರು ಕಾಮೆಂಟ್ ಮಾಡಿ 'ಇದು ತುರ್ತಾಗಿ ಅಗತ್ಯವಿದೆ ಮತ್ತು ಇದು ಖಂಡಿತವಾಗಿಯೂ ಭವಿಷ್ಯದ ಪೀಳಿಗೆಯಲ್ಲಿ ಅವರ ಸುತ್ತಮುತ್ತಲಿನ ಬಗ್ಗೆ ಜವಾಬ್ದಾರಿಯ ಪ್ರಜ್ಞೆಯನ್ನು ನಿರ್ಮಿಸುತ್ತದೆ. ಮನೆ ಅಥವಾ ಸಾರ್ವಜನಿಕ ಸ್ಥಳವಾಗಿರಬಹುದು. ಅದನ್ನು ಸ್ವಚ್ಛವಾಗಿರಿಸುವುದು ತಮ್ಮ ಜವಾಬ್ದಾರಿ ಎಂದು ಮಕ್ಕಳು ಅರಿಯಬೇಕು. ವಿಪರ್ಯಾಸವೆಂದರೆ ಸಾರ್ವಜನಿಕ ಸ್ಥಳಗಳ ಜವಾಬ್ದಾರಿಯ ಪ್ರಜ್ಞೆಯು ಪ್ರಸ್ತುತ ಪೀಳಿಗೆಯಲ್ಲಿ ಕಾಣೆಯಾಗಿದೆ' ಎಂದು ಬರೆದಿದ್ದಾರೆ. \
ಮತ್ತೊಬ್ಬರು, 'ಐಡಿಯಾ ಅದ್ಭುತವಾಗಿದೆ, ಆದರೆ ಶಾಲೆಗಳಿಗಿಂತ ನಾವು ಈ ವಿಷಯಗಳನ್ನು ಮೊದಲು ಮನೆಯಲ್ಲಿ ಪ್ರಾರಂಭಿಸಬೇಕು' ಎಂದು ಹೇಳಿದ್ದಾರೆ.
'ಇದು ಮನೆಯಿಂದ ಪ್ರಾರಂಭವಾಗಬೇಕು. ನಾವು ನಮ್ಮ ಮಕ್ಕಳಿಗೆ ಆಟ ಮತ್ತು ಆಹಾರದ ನಂತರ ಸ್ವಚ್ಛಗೊಳಿಸುವ ಅಭ್ಯಾಸವನ್ನು ಮಾಡಿಸಬೇಕು. ಈಗ ಪರಿಸ್ಥಿತಿ ಹೇಗಿದೆ ಎಂದರೆ ನಾನು ಹೊದಿಕೆಯನ್ನು ಎಸೆದರೆ ಅದನ್ನು ಕಸದ ಬುಟ್ಟಿಗೆ ಎಸೆಯಲು ನನ್ನ 3 ವರ್ಷದ ಮಗಳು ನನ್ನನ್ನೇ ಗದರಿಸುತ್ತಾಳೆ' ಎಂದು ಮಗದೊಬ್ಬರು ಹೇಳಿದ್ದಾರೆ.
ಸೀರೆ ಮಾರಿ ಹಣ ಗಳಿಸ್ತಿದ್ದಾಕೆ ಈಗ ಬೃಹತ್ ಫ್ಯಾಷನ್ ಬ್ರ್ಯಾಂಡ್ ಒಡತಿ, ತಿಂಗಳ ಆದಾಯವೇ ಕೋಟಿ ಮೀರುತ್ತೆ!
ಆದಾಗ್ಯೂ ಕೆಲವು ಬಳಕೆದಾರರು ಈ ಕಲ್ಪನೆ ಪ್ರಾಯೋಗಿಕವಲ್ಲ ಎಂದಿದ್ದಾರೆ. 'ಶಾಲೆಯಲ್ಲಿ ಎಷ್ಟೇ ಕಲಿಸಿದರೂ ಅದನ್ನು ನಿಜವಾಗಿ ಅಭ್ಯಾಸ ಮಾಡದ ಹೊರತು ಅದು ಸ್ವಭಾವದಲ್ಲಿ ಸೇರುವುದಿಲ್ಲ. ನಮಗೆ ರಸ್ತೆಯ ಎಡಭಾಗದಲ್ಲಿ ನಡೆಯಲು ಕಲಿಸಲಾಗುತ್ತದೆ. ಆದರೆ ಒಂದು ಮಗು ರಸ್ತೆಗಳನ್ನು ನೋಡಿದಾಗ ಜನ ಎಲ್ಲಾ ಕಡೆ ನಡೆಯುತ್ತಿರುತ್ತಾರೆ. ಜಪಾನ್‌ನಲ್ಲಿ ಹಾಗಲ್ಲ, ಜಪಾನೀಸ್ ಮಕ್ಕಳು ಶಾಲೆಯಲ್ಲಿ ಏನು ಕಲಿಯುತ್ತಾರೋ ಹೊರಗೆ ದೊಡ್ಡವರಿಂದ ಅದೇ ಅಭ್ಯಾಸವನ್ನು ನೋಡುತ್ತಾರೆ' ಎಂದು ಬಳಕೆದಾರರು ಬರೆದಿದ್ದಾರೆ.